ವೈಭವದ ರಾಮೇಶ್ವರಸ್ವಾಮಿ ರಥೋತ್ಸವ
ಹಾಸನ

ವೈಭವದ ರಾಮೇಶ್ವರಸ್ವಾಮಿ ರಥೋತ್ಸವ

May 7, 2019

ರಾಮನಾಥಪುರ: ದಕ್ಷಿಣ ಕಾಶಿ ಎಂದೇ ಪ್ರಸಿದ್ಧವಾಗಿರುವ ರಾಮನಾಥಪುರ ದಲ್ಲಿ ಮಂಗಳವಾರ ಚತುರ್ಯುಗ ಮೂರ್ತಿ ರಾಮೇಶ್ವರಸ್ವಾಮಿ ರಥೋತ್ಸವ ಸಹಸ್ರಾರು ಭಕ್ತರ ಸಮ್ಮುಖದಲ್ಲಿ ವಿಜೃಂಭಣೆಯಿಂದ ನಡೆಯಿತು.

ಮಹಾ ದಿವ್ಯರಥೋತ್ಸವಕ್ಕೆ ರಾಮನಾಥ ಪುರ ನಾಡಕಚೇರಿ ಉಪ ತಹಸೀಲ್ದಾರ್ ಜಿ.ಸಿ.ಚಂದ್ರ ಚಾಲನೆ ನೀಡಿದರು.

ರಾಜ ಬೀದಿಯಲ್ಲಿ ಚಲಿಸಿದ ತೇರು ಪುನಃ ಅದೇ ಮಾರ್ಗವಾಗಿ ಸೂಸುತ್ರವಾಗಿ ಸಾಗಿ ಸ್ವಸ್ಥಾನಕ್ಕೆ ಮರಳಿತು. ರಥಕ್ಕೆ ಭಕ್ತರು ಈಡು ಗಾಯಿ ಒಡೆದು ತೇರಿತನತ್ತ ಹಣ್ಣು ಧವನ ಎಸೆದು ಭಕ್ತಿ ಸಮರ್ಪಿಸಿದರು.

ರಾಮನಾಥಪುರದ ಕಾವೇರಿದಂಡೆ ಯಲ್ಲಿರುವ ಚತುರ್ಯುಗ ಮೂರ್ತಿ ಶ್ರೀ ರಾಮೇಶ್ವರಸ್ವಾಮಿ ದೇವಸ್ಥಾನದಲ್ಲಿ ತದಿಗೆ ಪ್ರಯುಕ್ತ ಶ್ರೀರಾಮೇಶ್ವರಸ್ವಾಮಿ ದಿವ್ಯ ರಥೋತ್ಸವವು ನೆರವೇರಿತು.

ದೇವಸ್ಥಾನದಲ್ಲಿ ರಥೋತ್ಸವ ಪ್ರಯುಕ್ತ ರಾಮೇಶ್ವರಸ್ವಾಮಿ ಉತ್ಸವ, ಶಾಂತ್ಯೋ ತ್ಸವ, ವಸಂತ ಸೇವೆಗಳು ನಡೆದವು. ಉತ್ಸವದ ಅಂಗವಾಗಿ ಬೆಳಿಗ್ಗೆಯಿಂದಲೇ ಗಣಪತಿ ಪೂಜೆ, ಅಂಕುರಾರ್ಪಣ, ಧ್ವಜಾ ರೋಹಣ, ರುದ್ರಾಭಿಷೇಕ ಹಾಗೂ ವಿಶೇಷ ಪೂಜಾ ಕೈಂಕರ್ಯಗಳನ್ನು ದೇವಸ್ಥಾನದ ಅರ್ಚಕರು ನೆರವೇರಿಸಿದರು.

ಶುಭ ಕುಳಿರ ಲಗ್ನದಲ್ಲಿ ಮಧ್ಯಾಹ್ನ 12ಕ್ಕೆ ಉತ್ಸವ ಮೂರ್ತಿಯನ್ನು ಅಡ್ಡಪಲ್ಲಕ್ಕಿ ಸಮೇತ ಮೂರು ಸುತ್ತು ದೇವಸ್ಥಾನದ ಪ್ರದಕ್ಷಿಣೆ ಹಾಕಿಸಿ ನಂತರ ಹೂವುಗಳಿಂದ ಅಲಂಕೃತಗೊಂಡಿದ್ದ ಪುಷ್ಪಾಲಂಕೃತ ರಥ ದಲ್ಲಿ ಕುಳ್ಳಿರಿಸಿ ಪೂಜಾ ಕೈಂಕರ್ಯ ನೆರ ವೇರಿಸಿದರು. ಮಹಾಮಂಗಳಾರತಿ ಆದ ತಕ್ಷಣ ಭಕ್ತರು ಹರ್ಷೋದ್ಘಾರದಿಂದ ರಥ ವನ್ನು ಎಳೆಯುವ ಮೂಲಕ ಪುನೀತರಾದರು.

ಈ ಸಂದರ್ಭದಲ್ಲಿ ರಾಜಸ್ವ ನಿರೀಕ್ಷಕ ಸಿ.ಸ್ವಾಮಿ, ದೇವಸ್ಥಾನದ ಅಭಿವೃದ್ಧಿ ಸಮಿ ತಿಯ ಜಯಲಕ್ಷ್ಮಿ, ರಘು, ಕುಮಾರಸ್ವಾಮಿ ರಾವ್, ಸಿದ್ದರಾಜು, ಅನಂತಸ್ವಾಮಿ ರಾವ್, ಎಂ.ಎನ್.ಕುಮಾರಸ್ವಾಮಿ, ಉಮೇಶ್, ಶ್ರೀ ಕಾಂತ್, ಮುಖಂಡರಾದ ಆರ್.ವಿ.ಗೋವಿಂದ ರಾಜು, ಕಾಳಬೋಯಿ, ಕೇಶವ, ಮಂಜು, ಹರೀಶ್, ಕೃಷ್ಣಶೆಟ್ಟಿ, ಶ್ರೀನಿವಾಸ್, ನಂಜುಂಡಿ ಮುಂತಾದವರು ಹಾಜರಿದ್ದರು. ಬೆಟ್ಟದಪುರದ ಹೆಚ್.ಆರ್.ಸತೀಶ್‍ಕಶ್ಯಪ್ ಹಾಗೂ ದೇವಾಲ ಯದ ಮುಖ್ಯ ಅರ್ಚಕ ಶ್ರೀನಿವಾಸಯ್ಯ, ಮುಂತಾ ದವರು ಪೂಜಾ ಕೈಂಕರ್ಯ ನಡೆಸಿಕೊಟ್ಟರು.

Translate »