ರಾಜಕೀಯ ಹಿನ್ನೆಲೆ ಇಲ್ಲದ ಸ್ವಯಂ ಸೇವಕರ ನೇಮಿಸಿ: ಡಿಸಿ
ಮೈಸೂರು, ಹಾಸನ

ರಾಜಕೀಯ ಹಿನ್ನೆಲೆ ಇಲ್ಲದ ಸ್ವಯಂ ಸೇವಕರ ನೇಮಿಸಿ: ಡಿಸಿ

April 9, 2019

ಹಾಸನ: ಲೋಕಸಭಾ ಚುನಾ ವಣೆ ಮತದಾನದ ದಿನದಂದು ತೀವ್ರ ದೈಹಿಕ ನ್ಯೂನ್ಯತೆಯಿಂದ ಬಳಲುತ್ತಿರು ವವರ ನೆರವಿಗೆ ಸ್ವಯಂ ಸೇವಕರನ್ನು ನೇಮಿಸಬೇಕು ಎಂದು ಜಿಲ್ಲಾ ಚುನಾ ವಣಾಧಿಕಾರಿ ಹಾಗೂ ಜಿಲ್ಲಾಧಿಕಾರಿ ಪ್ರಿಯಾಂಕ ಮೇರಿ ಫ್ರಾನ್ಸಿಸ್ ಹೇಳಿದರು.

ನಗರದ ಜಿಲ್ಲಾ ಪಂಚಾಯಿತಿ ಕಚೇರಿ ಯಲ್ಲಿ ಸೋಮವಾರ ವಿಡಿಯೋ ಸಂವಾದ ನಡೆಸಿದ ಅವರು, ಜಿಲ್ಲೆಯಲ್ಲಿ ವಿಕಲ ಚೇತನರಿಂದ ಶೇ. 100ರಷ್ಟು ಮತದಾನ ವಾಗಬೇಕಿದ್ದು, ಸ್ವಯಂ ಸೇವಕರನ್ನು ಆರಿಸಲಾಗಿದೆ. ಈ ಸ್ವಯಂ ಸೇವಕರು ಯಾವುದೇ ರೀತಿಯ ರಾಜಕೀಯದ ಹಿನ್ನೆಲೆ, ರಾಜಕೀಯ ವಿಷಯಕ್ಕೆ ಸಂಬಂಧ ಪಟ್ಟವರಾಗಿರದೆ, ರಾಜಕೀಯ ವಿಚಾರ ವನ್ನು ಪ್ರಸ್ತಾಪಿಸದೆ ಸಹಕರಿಸಬೇಕು ಎಂದು ತಿಳಿಸಿದರು.

ಈಗಾಗಲೇ ವಿಶೇಷಚೇತನರನ್ನು ಕರೆ ತರಲು ವಾಹನದ ವ್ಯವಸ್ಥೆ ಮಾಡಲಾ ಗಿದ್ದು, ಚುನಾವಣಾ ನಿಮಿತ್ತ ಕಾರ್ಯ ನಿರ್ವಹಿಸುವ ಯಾವುದೇ ವಾಹನದಲ್ಲಿ ವಿವಿಧ ಪಕ್ಷಗಳ ನಾಯಕರ ಹೆಸರು, ಫೋಟೋ, ಪೋಸ್ಟರ್, ಧ್ವಜ, ಚಿಹ್ನೆಗಳನ್ನು ಅಳವಡಿಸುವುದನ್ನು ನಿಷೇಧಿಸಲಾಗಿದೆ. ಪ್ರತ್ಯೇಕವಾಗಿ ಅಥವಾ ಪರೋಕ್ಷವಾಗಿ ಒಂದು ಪಕ್ಷದ ಪರವಾಗಿರುವಂತದ್ದಾಗಿರ ಬಾರದು. ನಿಷ್ಪಕ್ಷಪಾತದಿಂದ ಕಾರ್ಯ ನಿರ್ವಹಿಸಿ ಕೇವಲ ವಿಶೇಷಚೇತನರು ಹಾಗೂ ಹಿರಿಯ ನಾಗರಿಕರನ್ನು ಮಾತ್ರವೇ ಕರೆತರ ಬೇಕು ಎಂದು ತಿಳಿಸಿದರು.

ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಹಾಗೂ ಜಿಲ್ಲಾ ಸ್ವೀಪ್ ಸಮಿತಿ ಅಧ್ಯಕ್ಷ ಡಾ.ಕೆ.ಎನ್. ವಿಜಯ್ ಪ್ರಕಾಶ್ ಮಾತನಾಡಿ, ಈಗಾ ಗಲೇ 18 ವರ್ಷದೊಳಗಿನ ದೈಹಿಕವಾಗಿ ಸದೃಢÀವಾಗಿರುವವರನ್ನು ಸ್ವಯಂ ಸೇವಕ ರಾಗಿ ಬಳಸಲು ಚುನಾವಣಾ ಆಯೋಗ ತಿಳಿಸಿದೆ. ರಾಜ್ಯದಲ್ಲಿಯೇ ಹೆಚ್ಚಿನ ವಿಶೇಷ ಚೇತನರು ಮತದಾನ ಮಾಡಿದ್ದಾರೆ ಎಂಬ ಕೀರ್ತಿ ಹಾಸನ ಜಿಲ್ಲೆಗೆ ಬರಬೇಕು. ಆ ರೀತಿ ಯಲ್ಲಿ ಶ್ರಮಿಸಬೇಕು ಎಂದು ತಿಳಿಸಿದರು.

ಮತಗಟ್ಟೆಯಲ್ಲಿ ಎಷ್ಟು ಜನ ವಿಶೇಷ ಚೇತನರು ಬಂದು ಮತ ಚಲಾಯಿಸು ತ್ತಾರೆ ಎಂಬೆಲ್ಲಾ ಮಾಹಿತಿಯ ವರದಿ ಯನ್ನು ಸಲ್ಲಿಸಬೇಕು. ಮತಗಟ್ಟೆ ಕೇಂದ್ರ ವಾಗಿರುವಂತಹ ಶಾಲೆಗಳಲ್ಲಿ ಶಿಲಾನ್ಯಾಸ ಗಳಂತಹುಗಳ ಮೇಲೆ ರಾಜಕಾರಣಿಗಳ ಹೆಸರಿದ್ದಲ್ಲಿ ಅದನ್ನು ಸಂಪೂರ್ಣವಾಗಿ ತೆಗೆದಿರಬೇಕು. ಅದನ್ನು ಮರೆಮಾಚಿಡ ಬೇಕು ಎಂದರಲ್ಲದೇ, ಮಳೆ ಉಂಟಾದರೆ ಆ ಸಂದರ್ಭದಲ್ಲಿ ಮುನ್ನೆಚ್ಚರಿಕೆ ಕ್ರಮ ಗಳನ್ನು ಕೈಗೊಂಡಿರಬೇಕು. ಯಾವುದೇ ತುರ್ತು ಪರಿಸ್ಥಿತಿಗಳನ್ನು ನಿರ್ವಹಿಸಬೇಕು ಎಂದರು. ಸಭೆಯಲ್ಲಿ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯದರ್ಶಿ ಪುಟ್ಟಸ್ವಾಮಿ, ಡಿಡಿಪಿಐ ಮಂಜುನಾಥ್ ಇದ್ದರು.

ಕಿವುಡು, ಅಂಧ ಮತದಾರರಿಗೆ ತರಬೇತಿ ನೀಡಿ: ಜಿಲ್ಲಾಧಿಕಾರಿ
ಹಾಸನ: ಲೋಕಸಭಾ ಚುನಾವಣಾ ಹಿನ್ನೆಲೆಯಲ್ಲಿ ಶ್ರವಣದೋಷ ಹಾಗೂ ಅಂಧ ಮತದಾರರು ಯಾವ ರೀತಿ ಮತದಾನದ ಹಕ್ಕು ಚಲಾಯಿಸಬೇಕು ಎಂಬ ತರಬೇತಿಯನ್ನು ಸಂಪೂರ್ಣವಾಗಿ ನೀಡಬೇಕು ಎಂದು ಜಿಲ್ಲಾ ಚುನಾವಣಾಧಿಕಾರಿ ಹಾಗೂ ಜಿಲ್ಲಾಧಿಕಾರಿ ಪ್ರಿಯಾಂಕ ಮೇರಿ ಫ್ರಾನ್ಸಿಸ್ ತಿಳಿಸಿದರು.

ನಗರದಲ್ಲಿ ಸೋಮವಾರ ಜಿಲ್ಲಾಡಳಿತ, ಜಿಲ್ಲಾ ಸ್ವೀಪ್ ಸಮಿತಿಯ ಸಹಯೋಗದಲ್ಲಿ ಲೋಕಸಭಾ ಚುನಾವಣೆ ಹಿನ್ನೆಲೆ ವಿಶೇಷ ಚೇತನರಿಗೆ ಚುನಾವಣಾ ಸಂಬಂಧ ಶ್ರವಣದೋಷ ಹಾಗೂ ವಿಶೇಷಚೇತನ ಮತದಾರರು ಮತದಾನ ಯಂತ್ರದಲ್ಲಿ ಮತದಾನ ಮಾಡುವ ಸಾಂಕೇತ ಭಾಷೆಯ ಪ್ರಾತ್ಯಕ್ಷಿಕ ಸಂಪನ್ಮೂಲ ವ್ಯಕ್ತಿಯ ಕಾರ್ಯಾಗಾರದಲ್ಲಿ ಮಾತನಾಡಿದ ಅವರು, ಇವಿಎಂ ಹಾಗೂ ವಿವಿಪ್ಯಾಟ್‍ಗಳ ತರಬೇತಿಯನ್ನು ನೀಡುವುದರ ಜೊತೆಗೆ ಅರ್ಥ ಪೂರ್ಣವಾಗಿ ತಿಳಿಸಬೇಕು ಎಂದರು.

ಮತಗಟ್ಟೆಗಳಲ್ಲಿ ಯಾವ ರೀತಿ ಪ್ರಕ್ರಿಯೆ ಜರುಗುವುದು ಎಂಬು ದನ್ನು ಸಾಂಕೇತ ಭಾಷೆಗಳಲ್ಲಿಯೇ ಮತದಾನದ ಅರಿವು ಮೂಡಿಸಬೇಕು ಎಂದು ತಿಳಿಸಿದರು.

ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಹಾಗೂ ಜಿಲ್ಲಾ ಸ್ವೀಪ್ ಸಮಿತಿ ಅಧ್ಯಕ್ಷ ಡಾ.ಕೆ.ಎನ್.ವಿಜಯ್ ಪ್ರಕಾಶ್ ಮಾತನಾಡಿ, ಮತದಾನದಂತಹ ಪವಿತ್ರವಾದ ಕಾರ್ಯ ದಲ್ಲಿ ಪ್ರತಿಯೊಬ್ಬರೂ ತಪ್ಪದೇ ಪಾಲ್ಗೊಳ್ಳಬೇಕು. 38 ಹೋಬಳಿ ಗಳಲ್ಲಿ ಇದೇ ರೀತಿಯ ತರಬೇತಿಗೆ ಈಗಾಗಲೇ ಸಿದ್ಧತೆಗಳು ನಡೆಯುತ್ತಿವೆ. ಚುನಾವಣಾ ಕೆಲಸ ನಿರ್ವಹಿಸುತ್ತಿರುವ ಯಾವುದೇ ಸಿಬ್ಬಂದಿಗಳು ತಮ್ಮ ಗುರುತಿನ ಚೀಟಿಗಳ ವಿತರಣೆಗೆ ಸ್ಥಳೀಯ ಸಹಾಯಕ ಚುನಾವಣಾಧಿಕಾರಿಗಳನ್ನು ಸಂಪರ್ಕಿಸಬಹುದಾಗಿದ್ದು, ಯಾವ ಪಕ್ಷದ ಪರವಾಗಿ ಕಾರ್ಯ ನಿರ್ವಹಿಸದಂತೆ ಪಕ್ಷಪಾತ ವಾಗಿ ಕೆಲಸ ಮಾಡಬೇಕು ಎಂದು ತಿಳಿಸಿದರು.

ವಿಶೇಷ ಚೇತನ ಮತದಾರರಿಗೆ ತರಬೇತಿದಾರರು ಯಾವ ರೀತಿ ತರಬೇತಿ ನೀಡಬೇಕು ಎಂದು ತರಬೇತಿ ನೀಡಲಾಯಿತು. ಕಾರ್ಯಾಗಾರದಲ್ಲಿ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯ ದರ್ಶಿ ಪುಟ್ಟಸ್ವಾಮಿ, ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪ ನಿರ್ದೇಶಕ ಮಂಜುನಾಥ್, ಪ್ರಭಾರ ಯೋಜನಾ ನಿರ್ದೇಶಕಿ ಲಕ್ಷ್ಮಿ.ಪಿ ಮತ್ತಿತರರು ಹಾಜರಿದ್ದರು.

Translate »