ನಿವೃತ್ತ ರಾಜ್ಯ ಸರ್ಕಾರಿ ನೌಕರರಿಗೂ ಉಚಿತ `ಆರೋಗ್ಯ ಭಾಗ್ಯ’ ಯೋಜನೆ ವಿಸ್ತರಿಸಲು ಆಗ್ರಹ
ಹಾಸನ

ನಿವೃತ್ತ ರಾಜ್ಯ ಸರ್ಕಾರಿ ನೌಕರರಿಗೂ ಉಚಿತ `ಆರೋಗ್ಯ ಭಾಗ್ಯ’ ಯೋಜನೆ ವಿಸ್ತರಿಸಲು ಆಗ್ರಹ

July 18, 2019

ಮೈಸೂರು, ಜು.17(ಆರ್‍ಕೆಬಿ)- ರಾಜ್ಯ ಸರ್ಕಾರಿ ನೌಕರರಿಗೆ ನೀಡುತ್ತಿರುವ ಜ್ಯೋತಿ ಸಂಜೀವಿನಿ ಆರೋಗ್ಯ ಭಾಗ್ಯವನ್ನು ನಿವೃತ್ತ ನೌಕರರು ಮತ್ತು ಅವರ ಕುಟುಂಬ ದವರಿಗೂ ವಿಸ್ತರಿಸಬೇಕು ಎಂದು ರಾಜ್ಯ ಸರ್ಕಾರಿ ನಿವೃತ್ತ ನೌಕರರ ಸಂಘದ ಅಧ್ಯಕ್ಷ ಡಾ.ಎಲ್.ಭೈರಪ್ಪ ಇಂದಿಲ್ಲಿ ರಾಜ್ಯ ಸರ್ಕಾರವನ್ನು ಆಗ್ರಹಿಸಿದರು.

ಮೈಸೂರಿನ ಕಲಾಮಂದಿರದಲ್ಲಿ ಕರ್ನಾ ಟಕ ರಾಜ್ಯ ಸರ್ಕಾರಿ ವಿಶ್ರಾಂತ ಉದ್ಯೋಗಿ ಗಳ ಸಂಘದ ಸರ್ವ ಸದಸ್ಯರ ಮಹಾಸಭೆ ಯನ್ನು ಉದ್ಘಾಟಿಸಿ ಮಾತನಾಡಿದ ಅವರು, ನಿವೃತ್ತ ನೌಕರರಿಗೂ ಹಣರಹಿತ ಚಿಕಿತ್ಸೆ ನೀಡಬೇಕು ಎಂಬುದು ನಮ್ಮ ಪ್ರಮುಖ ಹೋರಾಟವಾಗಿದೆ. ಇದನ್ನು ಸರ್ಕಾರ ಮನಗಂಡು ಜ್ಯೋತಿ ಸಂಜೀವಿನಿ ಆರೋಗ್ಯ ಯೋಜನೆಯನ್ನು ರಾಜ್ಯದ 4.20 ಲಕ್ಷ ನಿವೃತ್ತ ಸರ್ಕಾರಿ ನೌಕರರಿಗೂ ವಿಸ್ತರಿಸ ಬೇಕು ಎಂದು ಒತ್ತಾಯಿಸಿದರು.

ಸದಾ ಒತ್ತಡದ ನಡುವೆ ಸರ್ಕಾರಿ ಕೆಲಸ ನಿರ್ವಹಿಸಿ, ಈಗ ನಿವೃತ್ತ ಜೀವನ ನಡೆಸುತ್ತಿ ರುವ ಶೇ.90ರಷ್ಟು ನಿವೃತ್ತ ಸರ್ಕಾರಿ ನೌಕ ರರು ಹೃದಯ, ಕಿಡ್ನಿ, ಕ್ಷಯ ರೋಗ ಸೇರಿ ದಂತೆ ನಾನಾ ಕಾಯಿಲೆಗಳಿಗೆ ಸಂಬಂಧಿಸಿ ದಂತೆ ಚಿಕಿತ್ಸಾ ವೆಚ್ಚ ಭರಿಸಲಾಗುತ್ತಿಲ್ಲ. ನಿವೃತ್ತ ನೌಕರರಿಗೂ ನಮಗೂ ಸಂಬಂಧ ವಿಲ್ಲ ಎಂಬಂತೆ ಸರ್ಕಾರ ನಡೆದುಕೊಳ್ಳ ಬಾರದು. ನಮಗೆ ನಮ್ಮ ಕುಟುಂಬಕ್ಕೆ ಆರೋಗ್ಯ ನೀಡುವುದು ಸರ್ಕಾರದ ಕರ್ತವ್ಯ ಎಂದು ಅಭಿಪ್ರಾಯಪಟ್ಟರು.

ಮೈಸೂರಿನಲ್ಲಿ ನಿವೃತ್ತ ನೌಕರರ ಭಾರೀ ಸಮಾವೇಶ ನಡೆದ ಸಂದರ್ಭದಲ್ಲಿ ಅಂದು ಮುಖ್ಯಮಂತ್ರಿಯಾಗಿದ್ದ ಸಿದ್ದರಾಮಯ್ಯ, ಹಾಲಿ ಸರ್ಕಾರಿ ನೌಕರರಿಗೆ ನೀಡುತ್ತಿರುವ ಆರೋಗ್ಯ ಯೋಜನೆಯನ್ನು ನಿವೃತ್ತ ನೌಕರ ರಿಗೂ ನೀಡುವುದಾಗಿ ಸಮಾವೇಶದಲ್ಲಿ ಘೋಷಣೆ ಮಾಡಿದ್ದರು. ಆದರೆ ಅದು ಜಾರಿ ಯಾಗಿಲ್ಲ. ಆರ್ಥಿಕ ಇಲಾಖೆಯ ಐಎಎಸ್ ಅಧಿಕಾರಿಗಳು ಇಲಾಖೆಗೆ ಹೆಚ್ಚು ವೆಚ್ಚ ಬೀಳು ತ್ತದೆ ಎಂದು ಇದನ್ನು ಜಾರಿಗೊಳಿಸಲು ಅವಕಾಶ ನೀಡಿಲ್ಲ ಎಂದು ದೂರಿದರು.

ಇಡೀ ಕಲಾಮಂದಿರದ ಆಸನಗಳು ನಿವೃತ್ತ ಸರ್ಕಾರಿ ನೌಕರರಿಂದ ಭರ್ತಿಯಾಗಿತ್ತು. ಕರ್ನಾಟಕ ರಾಜ್ಯ ಸರ್ಕಾರಿ ವಿಶ್ರಾಂತ ಉದ್ಯೋಗಿಗಳ ಸಂಘದ ಅಧ್ಯಕ್ಷ ಎನ್. ಓಬಯ್ಯ ಅಧ್ಯಕ್ಷತೆ ವಹಿಸಿದ್ದರು. ರಾಜ್ಯ ಸರ್ಕಾರಿ ನಿವೃತ್ತ ನೌಕರರ ಸಂಘದ ಮೈಸೂರು ವಲಯ ಉಪಾಧ್ಯಕ್ಷ ಅಪ್ಪಾಜಿ, ಪದಾಧಿಕಾರಿ ಗಳಾದ ಆನಂದಪ್ಪ, ಎನ್.ನಂಜಪ್ಪ, ಎಂ. ಕುಮಾರ್, ಜಯರಾಮೇಗೌಡ, ಹಾಸನ ಜಿಲ್ಲಾಧ್ಯಕ್ಷ ಅನಂತರಾಮ್, ಚಾಮರಾಜನಗರ ಜಿಲ್ಲಾಧ್ಯಕ್ಷ ನಾಗೇಶ್, ಮಂಡ್ಯ ಅಧ್ಯಕ್ಷ ಸಿದ್ದಯ್ಯ, ಸಂಘದ ಪ್ರಧಾನ ಕಾರ್ಯದರ್ಶಿ ಬಿ.ಆರ್. ಉಮಾಕಾಂತ್, ಕೆ.ಟಿ.ವೀರಪ್ಪ, ನರಸಿಂಹಯ್ಯ ಇನ್ನಿತರರು ಉಪಸ್ಥಿತರಿದ್ದರು.