ಸೆ.23ರಂದು ರಾಜಶೇಖರ ಕೋಟಿಯವರ ನೆನಪಿನಲಿ ಸಂವಾದ ಕಾರ್ಯಕ್ರಮ
ಮೈಸೂರು

ಸೆ.23ರಂದು ರಾಜಶೇಖರ ಕೋಟಿಯವರ ನೆನಪಿನಲಿ ಸಂವಾದ ಕಾರ್ಯಕ್ರಮ

September 21, 2018

ಮೈಸೂರು: ಮೈಸೂರಿನ ದೇಸಿರಂಗ ಸಾಂಸ್ಕøತಿಕ ಸಂಸ್ಥೆ ವತಿಯಿಂದ ಸೆ.23ರಂದು ಬೆಳಿಗ್ಗೆ 11 ಗಂಟೆಗೆ ಕಲಾಮಂದಿರದ ಮನೆ ಯಂಗಳ ವೇದಿಕೆಯಲ್ಲಿ ಹಿರಿಯ ಪತ್ರಕರ್ತ, ಸಮಾಜವಾದಿ ಚಿಂತಕರೂ ಆದ ರಾಜಶೇಖರ ಕೋಟಿಯವರ ನೆನಪಿನಲಿ… ಒಂದು ದಿನದ ಅಧ್ಯಯನ ಶಿಬಿರ ಹಾಗೂ ಸಂವಾದ ಕಾರ್ಯ ಕ್ರಮವನ್ನು ಏರ್ಪಡಿಸಲಾಗಿದೆ. `ಪತ್ರಿಕೋದ್ಯಮದಲ್ಲಿ ಸಾಮಾ ಜಿಕ ಬದ್ಧತೆ ಮತ್ತು ಕಳಕಳಿ’ ವಿಚಾರ ಕುರಿತು ಅಧ್ಯಯನ ಶಿಬಿರವಿದ್ದು, ಶಿಬಿರವನ್ನು ಹಿರಿಯ ಪತ್ರಕರ್ತ ಹಾಗೂ ಔಟ್‍ಲುಕ್ ಪತ್ರಿಕೆಯ ಮಾಜಿ ಪ್ರಧಾನ ಸಂಪಾದಕ ಕೃಷ್ಣಪ್ರಸಾದ್ ಉದ್ಘಾಟಿಸಲಿದ್ದಾರೆ. ಸಂಪನ್ಮೂಲ ವ್ಯಕ್ತಿಗಳಾಗಿ ಹಿರಿಯ ಪತ್ರಕರ್ತರಾದ ಅಂಶಿಪ್ರಸನ್ನಕುಮಾರ್, ಮರಿಯಪ್ಪ, ವಡ್ಡಗೆರೆ ಚಿನ್ನಸ್ವಾಮಿ ಭಾಗವಹಿಸಲಿದ್ದಾರೆ. ಸಂವಾದ ಕಾರ್ಯಕ್ರಮದಲ್ಲಿ ಒಡನಾಡಿ ಸೇವಾ ಸಂಸ್ಥೆಯ ಸ್ಟ್ಯಾನ್ಲಿ, ಪತ್ರಕರ್ತೆ ಪ್ರೀತಿ ನಾಗರಾಜ್, ವಕೀಲರಾದ ಪಿ.ಪಿ. ಬಾಬುರಾಜ್, ಆಂದೋಲನ ದಿನಪತ್ರಿಕೆ ಮುಖ್ಯಸ್ಥ ರವಿಕೋಟಿ ಭಾಗವಹಿಸಲಿದ್ದಾರೆ. ಹೆಚ್ಚಿನ ಮಾಹಿತಿಗೆ ಮೊ. 9844427129 ಅನ್ನು ಸಂಪರ್ಕಿಸಬಹುದು.

Translate »