ವಿವೇಕಾನಂದರ ಆದರ್ಶ ನನ್ನ ಬದುಕೇ ಬದಲಿಸಿತು
ಮೈಸೂರು

ವಿವೇಕಾನಂದರ ಆದರ್ಶ ನನ್ನ ಬದುಕೇ ಬದಲಿಸಿತು

September 21, 2018

ಮೈಸೂರು: ಸ್ವಾಮಿ ವಿವೇಕಾನಂದರ ಆದರ್ಶಗಳು ನನ್ನ ಬದು ಕಿನ ದಿಕ್ಕನ್ನೇ ಬದಲಿಸಿತು ಎಂದು ವಿಶ್ವ ಸಂಸ್ಥೆಯ ಬ್ರೌನ್ ಯುವ ಸಾಧಕ ಪ್ರಶಸ್ತಿ ಪುರ ಸ್ಕøತೆ ಹಾಗೂ ಬೆಳಕು ಅಕಾಡೆಮಿ ಸಂಸ್ಥಾ ಪಕಿ ಅಶ್ವಿನಿ ಅಂಗಡಿ ಅಭಿಪ್ರಾಯಪಟ್ಟರು.

ಜೆಎಲ್‍ಬಿ ರಸ್ತೆಯ ನಾದಬ್ರಹ್ಮ ಸಂಗೀತಾ ಸಭಾ ಭವನದಲ್ಲಿ ಯುವ ಬ್ರಿಗೇಡ್ ಮೈಸೂರು ಘಟಕದ ವತಿಯಿಂದ ಆಯೋ ಜಿಸಿದ್ದ ಸ್ವಾಮಿ ವಿವೇಕಾನಂದರ ಚಿಕಾಗೋ ಭಾಷಣಕ್ಕೆ 125 ವರ್ಷ ತುಂಬಿದ ಸ್ಮರಣಾ ರ್ಥವಾಗಿ `ಮತ್ತೊಮ್ಮೆ ದಿಗ್ವಿಜಯ ರಥ ಯಾತ್ರೆ’ಯ ವೇದಿಕೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.

ಕಳೆದ ಕೆಲವು ವರ್ಷಗಳ ಹಿಂದೆ ನಾನು ಎಂಎನ್‍ಸಿ ಕಂಪನಿಯೊಂದರಲ್ಲಿ ವಾರ್ಷಿಕ ಲಕ್ಷಾಂತರ ಸಂಬಳ ಬರುವ ಕೆಲಸದಲ್ಲಿದ್ದೆ. ಆದರೆ, ವಿವೇಕಾನಂದರ ಚಿಂತನೆಗಳನ್ನು ಅಧ್ಯಯನ ಮಾಡಿದ್ದರಿಂದ ನನಗೆ, ದೇಶದ ನಾನಾ ಭಾಗದಲ್ಲಿ ವಾಸಿಸುತ್ತಿರುವ ದಿವ್ಯಾಂ ಗರ ಏಳಿಗೆಗೆ ಶ್ರಮಿಸುವ ಪ್ರೇರಣೆಯಾದ ಹಿನ್ನೆಲೆಯಲ್ಲಿ ಮುಂಬೈನ ದಾದರ್ ಪ್ರದೇಶ ದಲ್ಲಿ ನೆಲೆಸಿದ್ದ ನೂರಾರು ದಿವ್ಯಾಂಗರ ರಕ್ಷ ಣೆಗೆ ಮುಂದಾದೆ. ಇದಕ್ಕೆ ಸಮಾಜದಿಂ ದಲೂ ಉತ್ತಮ ಸ್ಪಂದನೆ ದೊರಕಿತು ಎಂದರು.

ಇದರಿಂದ ಮತ್ತಷ್ಟು ಉತ್ತೇಜನಗೊಂಡು ಹರಿಯಾಣ, ದೆಹಲಿ, ರಾಜಸ್ಥಾನ್, ಕರ್ನಾ ಟಕ ಸೇರಿದಂತೆ ಅನೇಕ ರಾಜ್ಯಗಳಲ್ಲಿ ದಿವ್ಯಾಂಗರ ಏಳಿಗೆಗೆ ಶ್ರಮಿಸಲು ವಿವೇಕಾ ನಂದರ ಪ್ರೇರಣೆಯಾಗಿದ್ದು, ಇದರಿಂದ ದಿವ್ಯಾಂಗರ ಬಗ್ಗೆ ಸಮಾಜದಲ್ಲಿ ಉತ್ತಮ ಭಾವನೆಯಿದೆ. ಅದನ್ನು ನಾವು ಸರಿ ಯಾಗಿ ಬಳಸಿಕೊಳ್ಳಬೇಕು ಎಂದರಲ್ಲದೆ, ನನ್ನ ಸಮಾಜ ಸೇವೆಯನ್ನು ಗುರುತಿಸಿದ ವಿಶ್ವ ಸಂಸ್ಥೆ, ಬ್ರೌನ್ ಯುವ ಸಾಧಕ ಪ್ರಶಸ್ತಿ ನೀಡಿ, ದಿವ್ಯಾಂಗರ ಸೇವೆಯಲ್ಲಿ ನನ್ನ ಜವಾಬ್ದಾರಿಯನ್ನು ಮತ್ತಷ್ಟು ಹೆಚ್ಚುವಂತೆ ಮಾಡಿದೆ ಎಂದರು.

ವಿವೇಕ ಶಿಕ್ಷಣ ವಾಹಿನಿಯ ಸಂಸ್ಥಾಪಕ ನಿತ್ಯಾನಂದ ವಿವೇಕಾವಂಶಿ ಮಾತನಾಡಿ, ಸ್ವಾಮಿ ವಿವೇಕಾನಂದರು ಅಮೇರಿಕಾದ ಚಿಕಾಗೋ ನಗರ(1893ರ ಸೆ.11) ಸರ್ವ ಧರ್ಮ ಸಮ್ಮೇಳನದಲ್ಲಿ ಮಾಡಿದ ಭಾಷಣ ದಿಂದ ವಿದೇಶಿ ವಿದ್ವಾಂಸರು, ಅಂದಿನಿಂದ ಭಾರತ ನೋಡುವ ದೃಷ್ಟಿಕೋನವೇ ಬದಲಾಯಿತು ಎಂದರು.

ಸರ್ವಧರ್ಮ ಸಮ್ಮೇಳನದಲ್ಲಿ ಸ್ವಾಮಿ ವಿವೇಕಾನಂದರು ಮಾಡಿದ ಭಾಷಣಕ್ಕೆ 125 ವರ್ಷ ತುಂಬಿದೆ. ವಿವೇಕಾನಂದರು ಅಂದು ಅಮೇರಿಕರನ್ನುದ್ದೇಶಿಸಿ ಆಡಿದ ಮೊದಲ ಮಾತು `ಅಮೇರಿಕಾ ಸಹೋ ದರ, ಸಹೋದರಿಯರೆ’ ಪದಗಳಿಗೆ ಸುಮಾರು ಎರಡು ನಿಮಿಷ ಸಭಿಕರಿಂದ ಬಾರೀ ಚಪ್ಪಾಳೆ ಕೇಳಿಬಂದಿತ್ತು ಎಂದರು.

ಇದಕ್ಕೂ ಮೊದಲು ಸ್ವಾಮಿ ವಿವೇಕಾ ನಂದರ ಚಿಕಾಗೋ ಭಾಷಣಕ್ಕೆ 125 ವರ್ಷ ತುಂಬಿದ ಸ್ಮರಣಾರ್ಥವಾಗಿ `ಮತ್ತೊಮ್ಮೆ ದಿಗ್ವಿಜಯ ರಥಯಾತ್ರೆ’ಯು ಮೈಸೂರಿನ ಜೆಎಸ್‍ಎಸ್ ಮಹಾವಿದ್ಯಾಪೀಠದಿಂದ ಆರಂಭಗೊಂಡು, ಚಾಮರಾಜ ಜೋಡಿ ರಸ್ತೆ, ರಾಮಸ್ವಾಮಿ ವೃತ್ತದ ಮೂಲಕ ಜೆಎಲ್‍ಬಿ ರಸ್ತೆಯಲ್ಲಿ ಸಾಗಿ ನಾದಬ್ರಹ್ಮ ಸಂಗೀತಾ ಸಭಾದವರೆಗೆ ಮೆರವಣಿಗೆಯಲ್ಲಿ ವಿವಿಧ ಜಾನಪದ ಕಲಾತಂಡದೊಂದಿಗೆ ಸಾಗಿ, ಮುಕ್ತಾಯಗೊಂಡಿತು. ವೇದಿಕೆಯಲ್ಲಿ ಶ್ರೀ ರಾಮಕೃಷ್ಣ ವಿದ್ಯಾಶಾಲೆ ಸಂಚಾಲಕ ಸ್ವಾಮಿ ಯುಕ್ತೇಶಾನಂದ ಮಹಾರಾಜ್, ಯುವ ಬ್ರಿಗೇಡ್‍ನ ಸುನಿಲ್ ಇನ್ನಿತರರಿದ್ದರು.

Translate »