ವಿವೇಕಾನಂದರ ಸಂದೇಶಗಳು ಮನುಕುಲದ ಒಳಿತು ಬಯಸುತ್ತವೆ
ಮೈಸೂರು

ವಿವೇಕಾನಂದರ ಸಂದೇಶಗಳು ಮನುಕುಲದ ಒಳಿತು ಬಯಸುತ್ತವೆ

September 19, 2018

ಮೈಸೂರು: ಸ್ವಾಮಿ ವಿವೇಕಾನಂದರ ಸಂದೇಶಗಳು ಮನುಕುಲದ ಒಳಿತನ್ನು ಬಯಸುತ್ತವೆ. ಇಂದಿನ ಪೀಳಿಗೆಗೆ ವಿವೇಕಾನಂದರ ಬದುಕಿನ ಆದರ್ಶಗಳನ್ನು ಅಳವಡಿಸಿಕೊಳ್ಳಲು ಪ್ರಯತ್ನಿಸಬೇಕು ಎಂದು ರಾಮಕೃಷ್ಣಾ ಶ್ರಮ ವಿದ್ಯಾಶಾಲೆ ಮುಖ್ಯಸ್ಥರಾದ ಸ್ವಾಮಿ ಯುಕ್ತೇಶಾನಂದಜೀ ಮಹಾರಾಜ್ ಅಭಿಪ್ರಾಯಪಟ್ಟರು. ಮೈಸೂರು ವಿವಿ ಮಾನಸಗಂಗೋತ್ರಿ ಆವರಣದ ಇಎಂ ಎಂಆರ್‍ಸಿ ಸಭಾಂಗಣದಲ್ಲಿ ತತ್ವಶಾಸ್ತ್ರ ಅಧ್ಯಯನ ವಿಭಾಗ ಹಾಗೂ ಸ್ವಾಮಿ ವಿವೇಕಾನಂದ ಅಧ್ಯಯನ ಪೀಠ ಸಹಯೋಗ ದೊಂದಿಗೆ ಎರಡು ದಿನಗಳ `ಸ್ವಾಮಿ ವಿವೇಕಾ ನಂದರ ಮಾನವತಾವಾದ ಒಂದು ಲೋಕ ಸಂಗ್ರಹ ದೃಷ್ಟಿ’ ವಿಚಾರ ಸಂಕಿರಣದ ಮುಕ್ತಾಯ ಸಮಾರಂಭದಲ್ಲಿ ಮಾತನಾಡಿ ದರು. ಸ್ವಾಮಿ ವಿವೇಕಾನಂದರು 1893 ರಲ್ಲಿ ಷಿಕಾಗೋದ ಸರ್ವಧರ್ಮ ಸಮ್ಮೇಳನ ದಲ್ಲಿ ಭಾಗವಹಿಸಿ, ಭಾರತದ ಮಾನವತ ವಾದವನ್ನು ಜಗತ್ತಿಗೆ ಪರಿಚಯಿಸಿಕೊಟ್ಟರು. ಅಂದಿನಿಂದ ಯುರೋಪ್ ದೇಶಗಳಲ್ಲಿ ಭಾರತ ಬಗೆಗಿನ ಆಧ್ಯಾತ್ಮ ಆಲೋಚನಾ ದೃಷ್ಟಿಗಳೇ ಬದಲಾದವು. ಇದು ಎಲ್ಲ ರಿಂದಲೂ ಸಾಧ್ಯವಿಲ್ಲ. ಅದು ವಿವೇಕಾ ನಂದರಂಥ ಮಹಾನ್ ಸಾಧಕರಿಂದ ಮಾತ್ರ ಸಾಧ್ಯ ಎಂದರು.

ನಾವು ಏನೇ ಸಾಧಿಸಬೇಕಾದರೂ ಗುರಿ, ಸಮಾಜದ ಅಧ್ಯಯನ ಎರಡೂ ಮುಖ್ಯ. ಆದ್ದರಿಂದ ವಿವಿಗಳಲ್ಲಿ ಅಧ್ಯಯನ ಮಾಡುತ್ತಿರುವ ಯುವಕರು ಸ್ವಾಮೀ ವಿವೇಕಾನಂದರ ಚಿಂತನೆಗಳನ್ನು ಅಳವಡಿಸಿ ಕೊಂಡರೆ, ದೇಶದ ಪ್ರಗತಿಗೆ ನಾಂದಿ ಎಂದರಲ್ಲದೆ, ಪ್ರತಿಯೊಬ್ಬರು ಪ್ರಾಣಿಗಳ ಸೇವೆ ಮಾಡಬೇಕೆಂದು ರಾಮಕೃಷ್ಣ ಪರಮಹಂಸರು ಪ್ರತಿಪಾದಿಸಿದ್ದರು. ಇದನ್ನೇ ಜೀವಿಗಳಿಗೆ ದಯೆ ತೋರಿಸುತ್ತಿದ್ದೀ ವೆಂದು ಎಲ್ಲೂ ಹೇಳಬಾರದು ಎಂದಿದ್ದರು.

ಇದೇ ಸಂದರ್ಭದಲ್ಲಿ ಕುಲಸಚಿವ (ಪರೀಕ್ಷಾಂಗ) ಪ್ರೊ.ಜಿ.ಸೋಮಶೇಖರ್, ತತ್ವಶಾಸ್ತ್ರ ವಿಭಾಗದ ಮುಖ್ಯಸ್ಥ ಡಾ.ಎಸ್. ವೆಂಕಟೇಶ್, ಸಂದರ್ಶಕ ಪ್ಯಾಧ್ಯಾಪಕ ಪ್ರೊ.ಶೇಷಗಿರಿ ರಾವ್, ಮೈಸೂರು ವಿವಿ ಸ್ವಾಮಿ ವಿವೇಕಾನಂದ ಪೀಠದ ಮುಖ್ಯಸ್ಥ ಡಾ.ಎಂ.ಡ್ಯಾನಿಯಲ್ ಉಪಸ್ಥಿತರಿದ್ದರು.

Translate »