ಶಿಕ್ಷಕರು ಮಕ್ಕಳ ಮಟ್ಟಕ್ಕಿಳಿದು ಬೋಧನೆ ಮಾಡಬೇಕು
ಮೈಸೂರು

ಶಿಕ್ಷಕರು ಮಕ್ಕಳ ಮಟ್ಟಕ್ಕಿಳಿದು ಬೋಧನೆ ಮಾಡಬೇಕು

September 21, 2018

ಮೈಸೂರು: ಶಿಕ್ಷಕರು ಆಧುನಿಕ ತಂತ್ರಜ್ಞಾನಕ್ಕೆ ತಮ್ಮನ್ನು ಅರ್ಪಿಸಿ ಕೊಂಡು ಮಕ್ಕಳ ಮನೋಸ್ಥಿತಿಗೆ ತಕ್ಕಂತೆ ಬೋಧನೆ ಮಾಡಬೇಕು ಎಂದು ಮೈಸೂರು ಉತ್ತರ ವಲಯ ಬಿಇಒ ಎಂ.ಆರ್. ಶಿವರಾಮ್ ಇಂದಿಲ್ಲಿ ಹೇಳಿದರು.

ನಗರದ ಮೈಸೂರು-ಬೆಂಗಳೂರು ರಸ್ತೆ ಯಲ್ಲಿರುವ ಸೆಂಟ್ ಫಿಲೋಮಿನಾ ಶಾಲೆ ಯಲ್ಲಿ ಇನ್ನರ್ ವಿಲ್ಸ್ ಆಫ್ ಸೌತ್ ಈಸ್ಟ್ ವತಿಯಿಂದ ನಡೆದ ಶಿಕ್ಷಕರಿಗೆ ಒಂದು ದಿನದ ಕಾರ್ಯಾಗಾರ ಮತ್ತು ಸನ್ಮಾನ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಆಧುನಿಕ ಜಗತ್ತಿನಲ್ಲಿ ಶಿಕ್ಷಕರ ಮೇಲೆ ಒತ್ತಡ ಹೆಚ್ಚಾಗಿದ್ದು, ಎಲ್ಲಾ ರೀತಿಯ ಒತ್ತಡಗಳನ್ನು ನಿವಾರಿಸಿಕೊಂಡು ಶಿಕ್ಷಕರು ಕೆಲಸ ಮಾಡಬೇ ಕಿದೆ. ಮಕ್ಕಳ ಮಟ್ಟಕ್ಕೆ ಇಳಿದು ಬೋಧನೆ ಮಾಡಬೇಕಾದರೆ ಹೊಸ ಹೊಸ ಬೋಧನಾ ವಿಧಾನಗಳನ್ನು ಅಳವಡಿಸಿಕೊಳ್ಳ ಬೇಕಾಗು ತ್ತದೆ. ಮಕ್ಕಳಲ್ಲಿರುವ ಸುಪ್ತ ಪ್ರತಿಭೆ ಯನ್ನು ಹೊರತರಬೇಕಾದರೆ ಶಿಕ್ಷಕರು ಸಹ ವಿಶೇಷ ಕೌಶಲ್ಯಗಳನ್ನು ಹೊಂದಿರಬೇಕು. ಈ ನಿಟ್ಟಿನಲ್ಲಿ ಶಿಕ್ಷಕರು ತಮ್ಮ ವೃತ್ತಿ ಪರತೆಯನ್ನು ಹೆಚ್ಚಿಸಿ ಕೊಳ್ಳಲು ಇಂತಹ ಕಾರ್ಯಾಗಾರಗಳು ನಿರಂತರವಾಗಿ ನಡೆಯುತ್ತಿರಬೇಕು ಎಂದರು.

ನಿವೃತ್ತ ಪ್ರಾಧ್ಯಾಪಕಿ ಸುಧಾ ಪ್ರಕಾಶ್ ಮಾತನಾಡಿ, ಬರೀ ಅಂಕಗಳಿಂದ ಬೆಳೆ ಯಲು ಸಾಧ್ಯವಿಲ್ಲ ಎಂಬುದನ್ನು ಶಿಕ್ಷಕರು ವಿದ್ಯಾರ್ಥಿಗಳಿಗೆ ಮನದಟ್ಟು ಮಾಡಬೇಕು. ವಿದ್ಯಾರ್ಥಿಗಳೊಂದಿಗೆ ಶಿಕ್ಷಕರು ಸಂಯಮ ದಿಂದ ನಡೆದುಕೊಳ್ಳಬೇಕು ಹಾಗೂ ಅವರಿಗೆ ಕಾಲಾವಕಾಶ ನೀಡಬೇಕು.

ಮಕ್ಕಳೊಂದಿಗೆ ಶಿಕ್ಷಕರು ಸಭ್ಯತೆಯಿಂದ ನಡೆದುಕೊಳ್ಳಬೇಕು. ಅವರೊಂದಿಗೆ ಫೇಸ್ ಬುಕ್, ವಾಟ್ಸಾಪ್‍ಗಳನ್ನು ಬಳಕೆ ಮಾಡಬಾ ರದು. 40 ನಿಮಿಷದ ತರಗತಿಯಲ್ಲಿ ಐದ ರಿಂದ ಹತ್ತು ನಿಮಿಷ ವಿದ್ಯಾರ್ಥಿಗಳಿಗೆ ವಿಶ್ರಾಂತಿಯ ಜತೆಗೆ ಮನೋವಿಕಾಸಕ್ಕೆ ಬೇಕಾದ ವಿಚಾರ ತಿಳಿಸಬೇಕು ಎಂದರು.

ಕಾರ್ಯಾಗಾರದಲ್ಲಿ ಮೈಸೂರು ಉತ್ತರ ವಲಯ ಸಂಪನ್ಮೂಲ ಸಮನ್ವಯಾಧಿಕಾರಿ ಎ.ಜೆ.ಸೋಮಶೇಖರ್, ಇನ್ನರ್‍ವ್ಹೀಲ್ಸ್ ಆಫ್ ಸೌತ್ ಈಸ್ಟ್ ಅಧ್ಯಕ್ಷೆ ಲಲಿತಾ ರಂಗನಾಥ್, ಕಾರ್ಯದರ್ಶಿ ವೀಣಾ ರವಿಂದ್ರ, ಪ್ರಾಥ ಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ನಾಗಣ್ಣ, ಕುಮಾರಸ್ವಾಮಿ, ಶಂಕರ್, ನಾಗೇಂದ್ರ, ಡಾ.ಸಾರಿಕಾ ಪ್ರಸಾದ್ ಉಪಸ್ಥಿತರಿದ್ದರು.

Translate »