ಅಪೌಷ್ಟಿಕತೆ ಹೋಗಲಾಡಿಸುವುದು ಪ್ರತಿಯೊಬ್ಬರ ಕರ್ತವ್ಯ
ಹಾಸನ

ಅಪೌಷ್ಟಿಕತೆ ಹೋಗಲಾಡಿಸುವುದು ಪ್ರತಿಯೊಬ್ಬರ ಕರ್ತವ್ಯ

March 28, 2019

ಹಾಸನ: ಅಪೌಷ್ಟಿಕತೆ ಎಂಬುದು ನಮ್ಮ ದೇಶಕ್ಕೆ ದೊಡ್ಡ ಸವಾಲು, ಇದನ್ನು ಹೋಗಲಾಡಿಸುವುದು ಪ್ರತಿ ಮನೆ, ಕುಟುಂಬ ಮತ್ತು ಸಮಾಜದ ಕರ್ತವ್ಯ ಎಂದು ತಾಲೂಕು ಆರೋಗ್ಯ ಶಿಕ್ಷಣಾಧಿ ಕಾರಿ ಅನಿತಾ ತಿಳಿಸಿದರು.

ಚನ್ನರಾಯಪಟ್ಟಣ ತಾಲೂಕಿನ ಅಣ್ಣೆನ ಹಳ್ಳಿ ಗ್ರಾಮದಲ್ಲಿ ಜರುಗಿದ ಪೋಷಣ ಪಕ್ವಾರ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿ, ಅಪೌಷ್ಟಿಕತೆಯನ್ನು ಹೋಗ ಲಾಡಿಸುವ ನಿಟ್ಟಿನಲ್ಲಿ ನಾವೆಲ್ಲಾ ಮುಂದಾಗ ಬೇಕು ಎಂದು ತಿಳಿಸಿದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿ ಸಿದ್ದ ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯ ರಾಷ್ಟ್ರೀಯ ಸೇವಾ ಯೋಜನೆಯ ಕಾರ್ಯ ಕ್ರಮಾಧಿಕಾರಿಗಳಾದ ನಿಚಿತಾ ಕುಮಾರಿ ಮಾತನಾಡಿ, ಗರ್ಭಿಣಿ ಮತ್ತು ಬಾಣಂತಿ ಮಹಿಳೆ ಹಾಗೂ ಮಕ್ಕಳನ್ನು ವಿಶೇಷವಾಗಿ ಕಾಡುತ್ತಿರುವ ಅಪೌಷ್ಟಿಕತೆಯಿಂದ ಸಾಮಾ ಜಿಕ ಮತ್ತು ಶೈಕ್ಷಣಿಕ ಬೆಳವಣಿಗೆ ಕುಂಠಿತ ವಾಗುತ್ತಿದೆ. ಇದನ್ನು ನಾವೆಲ್ಲರೂ ನಿರ್ಮೂ ಲನೆ ಮಾಡಿ, ಆರೋಗ್ಯಯುತ ಸಮಾಜ ವನ್ನು ನಿರ್ಮಾಣ ಮಾಡಲು ಪಣತೊಡ ಬೇಕು ಎಂದು ತಿಳಿಸಿದರು.

ಸರ್ಕಾರಿ ಪ್ರಾಥಮಿಕ ಶಾಲೆ ಮುಖ್ಯೋ ಪಾಧ್ಯಾಯರಾದ ನಂಜೇಗೌಡ, ಅಣ್ಣೇನ ಹಳ್ಳಿ ಮಂಜು, ಹೇಮಲತಾ, ಭಾನುಮತಿ, ಸಮುದಾಯ ಆರೋಗ್ಯ ಕೇಂದ್ರದ ಹಿರಿಯ ಸಹಾಯಕರಾದ ಅನಿತಾ, ಆಶಾ ಕಾರ್ಯಕರ್ತೆಯರು ಉಪಸ್ಥಿತರಿದ್ದರು.

ಕಾರ್ಯಕ್ರಮದ ಪ್ರಾರಂಭದಲ್ಲಿ ಹಿಮ್ಸ್‍ನ ಆರೋಗ್ಯ ನಿರೀಕ್ಷಕ ವಿದ್ಯಾರ್ಥಿಗಳು, ಶಾಲಾ ವಿದ್ಯಾರ್ಥಿಗಳು ಹಾಗೂ ಆರೋಗ್ಯ ಕೇಂದ್ರದ ಸಿಬ್ಬಂದಿಗಳು ಅಪೌಷ್ಟಿಕತೆಯನ್ನು ಹೋಗ ಲಾಡಿಸುವ ಸಲುವಾಗಿ ಘೋಷಣೆಗಳನ್ನು ಕೂಗಿ ಜಾಥಾ ಕಾರ್ಯಕ್ರಮವನ್ನು ನಡೆಸಿದರು.
ಕಾರ್ಯಕ್ರಮದ ಕೊನೆಯಲ್ಲಿ ಹಿಮ್ಸ್‍ನ ಆರೋಗ್ಯ ನಿರೀಕ್ಷಕ ವಿದ್ಯಾರ್ಥಿಗಳು ಪೌಷ್ಟಿಕ ಆಹಾರ ಸೇವನೆಯ ಮಹತ್ವ ಮೂಡಿಸುವ ಕುರಿತಾಗಿ ಬೀದಿ ನಾಟಕ ಪ್ರದರ್ಶಿಸಿದರು.

Translate »