ಮಹದೇಶ್ವರ ಜಾತ್ರಾ ಮಹೋತ್ಸವಕ್ಕೆ ತೆರೆ
ಹಾಸನ

ಮಹದೇಶ್ವರ ಜಾತ್ರಾ ಮಹೋತ್ಸವಕ್ಕೆ ತೆರೆ

March 28, 2019

ಅರಸೀಕೆರೆ: ತಾಲೂಕಿನ ಸುಕ್ಷೇತ್ರ ಹಾರನಹಳ್ಳಿ ಕೋಡಿಮಠದಲ್ಲಿ ಕಳೆದ ಮೂರು ದಿನಗಳಿಂದ ನಡೆಯುತ್ತಿದ್ದ ಮಹ ದೇಶ್ವರ ಜಾತ್ರಾ ಮಹೋತ್ಸವಕ್ಕೆ ತೆರೆ ಬಿದ್ದಿದ್ದು, ಈ ಧಾರ್ಮಿಕ ಉತ್ಸವದಲ್ಲಿ ನಾಡಿನ ನಾನಾ ಭಾಗಗಳಿಂದ ಆಗಮಿಸಿ ಶ್ರೀ ಬೆಟ್ಟದ ಸೇವಾ ಕಾರ್ಯದಲ್ಲಿ ಪಾಲ್ಗೊಂಡಿದ್ದ ಭಕ್ತರು ಹಾಗೂ ಪೀಠಾಭಿಮಾನಿಗಳಿಗೆ ಪೀಠಾಧ್ಯಕ್ಷರಾದ ಡಾ. ಶಿವಾನಂದ ಶಿವಯೋಗಿ ರಾಜೇಂದ್ರ ಸ್ವಾಮೀಜಿ ಆಶೀರ್ವದಿಸಿ, ಬೀಳ್ಕೊಟ್ಟರು.

ಭಕ್ತರು ಹಾಗೂ ಪೀಠಾಭಿಮಾನಿಗಳಿಗೆ ಬೀಳ್ಕೊಡುವ ಮುನ್ನ ಡಾ ಶಿವಾನಂದ ಶಿವಯೋಗಿ ರಾಜೇಂದ್ರ ಸ್ವಾಮೀಜಿ ಮಾತ ನಾಡಿ, ಮಠಕ್ಕೆ ಭಕ್ತರೇ ಆಸ್ತಿ, ಭಕ್ತರಿಗೆ ಮಠವೇ ಆಸ್ತಿ. ಗುರು ಹಾಗೂ ಶಿಷÀ್ಯರ ನಡುವಿನ ಸಂಬಂಧ ಗೌರವ ಹಾಗೂ ಪ್ರೀತಿಯ ಸಂಕೋಲೆಯಾಗಿದೆ. ಹರ ಮುನಿದರು ಗುರು ಕಾಯುವನು ಎಂಬ ಅಗಾಧ ನಂಬಿಕೆ ನಮ್ಮ ಸಂಸ್ಕøತಿಯ ಪ್ರತೀಕವಾಗಿದೆ. ಶಿಷ್ಯರಲ್ಲಿ ಭೇದವೆಣಿಸದೆ ತಪ್ಪನ್ನು ತಿದ್ದುವ ಒಳ್ಳೆಯ ಉದ್ದೇಶಕ್ಕೆ ಮಾರ್ಗದರ್ಶನ ನೀಡುವ ಗುರುವಿಗೆ ಮಾತ್ರ ಭಕ್ತ ತನ್ನ ಹೃದಯದಲ್ಲಿ ಭಗವಂತನ ಸ್ಥಾನವನ್ನು ನೀಡುತ್ತಾನೆ. ಮಠದ ಸೇವೆಗೆ ಎಂದು ಆಗಮಿಸಿದ್ದ ಎಲ್ಲ ಭಕ್ತ ವೃಂದದ ಜೀವನ ಹಸನಾಗಲಿ ಎಂದು ಶುಭ ಹಾರೈಸಿದರು.

ಮಹದೇಶ್ವರ ಜಾತ್ರೆಗೆ ಸುದೀರ್ಘ ಇತಿ ಹಾಸ ಇರುವುದರಿಂದ ಈ ಜಾತ್ರಾ ಮಹೋ ತ್ಸವದಲ್ಲಿ ರಾಜ್ಯದ ನಾನಾ ಭಾಗಗಳಿಂದ ಹಾಗೂ ಹೊರ ರಾಜ್ಯಗಳಿಂದಲೂ ಭಕ್ತರು ತಂಡೋಪ ತಂಡವಾಗಿ ಆಗಮಿಸಿ ತಮ್ಮ ತನು ಮನದ ಜೊತೆಗೆ ಶ್ರದ್ಧಾಭಕ್ತಿಯಿಂದ ಸೇವಾ ಕಾರ್ಯವನ್ನು ಸಮರ್ಪಿಸಿ ಕ್ಷೇತ್ರ ದೇವತೆಗಳು ಹಾಗೂ ಗುರುವಿನ ಒಲುಮೆಗೆ ಪಾತ್ರರಾಗುತ್ತಾರೆ ಹಾಗಾಗಿ ಮಾದೇಶ್ವರ ಜಾತ್ರೆ ಗುರು ಮತ್ತು ಭಕ್ತರ ಸಮಾಗಮಕ್ಕೆ ಸಾಕ್ಷಿ ಯಾಗುವುದು ಈ ಜಾತ್ರೆಯ ವಿಶೇಷ.

ನಿರಂತರವಾಗಿ ಮೂರು ದಿನಗಳ ಮಹದೇಶ್ವರ ಜಾತ್ರೆಯು ನಾನಾ ಧಾರ್ಮಿಕ ಆಚರಣೆಗಳು ಹಾಗೂ ಉತ್ಸವ ದಿಂದ ಕೂಡಿರುತ್ತದೆ. ಪ್ರತಿಯೊಂದು ಉತ್ಸವವು ಒಂದೊಂದು ಮನೆತನ ಹಾಗೂ ಊರಿನ ಭಕ್ತ ಸಮೂಹವೆಲ್ಲಾ ಸೇರಿ ನಡೆಸಿಕೊಡುತ್ತಾರೆ. ಹಾಗಾಗಿ ಪ್ರತಿ ಯೊಂದು ಉತ್ಸವ ಮತ್ತು ಪೂಜಾ ಕೈಂಕರ್ಯಗಳು ವಿಶೇಷವಾಗಿ ಕೂಡಿ ರುತ್ತದೆ. ಇದನ್ನು ಕಣ್ಣು ತುಂಬಿಕೊಳ್ಳಲು ನೂರಾರು ಸಂಖ್ಯೆಯಲ್ಲಿ ಭಕ್ತರು ಸಹ ಪಾಲ್ಗೊಳ್ಳುವುದನ್ನು ಕಾಣಬಹುದು.

Translate »