ಹಿಂದೂ ದೇವತೆಗಳ ಅಪಮಾನ ತಡೆಗೆ ಮನವಿ
ಕೊಡಗು

ಹಿಂದೂ ದೇವತೆಗಳ ಅಪಮಾನ ತಡೆಗೆ ಮನವಿ

June 3, 2018

ಸೋಮವಾರಪೇಟೆ:  ಹಿಂದೂ ದೇವತೆಗಳ ಹಾಗೂ ಹಿಂದೂ ನೇತಾರರನ್ನು ಚಲನಚಿತ್ರ ಹಾಗೂ ಧಾರವಾಹಿಗಳಲ್ಲಿ ಅಪಮಾನ ಮಾಡುತ್ತಿರುವ ಸನ್ನಿ ವೇಶಗಳನ್ನು ತಡೆಗಟ್ಟಲು ಮಸೂದೆ ಜಾರಿಗೆ ತರ ಬೇಕೆಂದು ಆಗ್ರಹಿಸಿ ಹಿಂದೂ ಜನಜಾಗೃತಿ ಸಮಿತಿ ತಹ ಶೀಲ್ದಾರ್‍ಗೆ ಶನಿವಾರ ಮನವಿ ಸಲ್ಲಿಸಿತು.

ತಕ್ಷಣವೇ ಇದರ ಬಗ್ಗೆ ಸೂಕ್ತ ತೀರ್ಮಾನ ಕೈಗೊಳ್ಳ ಬೇಕೆಂದು ಭಾರತದ ಪ್ರಧಾನಮಂತ್ರಿ ಹಾಗೂ ರಾಜ್ಯದ ಗೃಹ ಮಂತ್ರಿಗಳಿಗೆ ಮನವಿ ಮಾಡಲಾಯಿತು.

ಈ ಸಂದರ್ಭ ಸಮಿತಿಯ ಪದಾಧಿಕಾರಿಗಳಾದ ಪಿ. ಮಧು, ಕಿಬ್ಬೆಟ್ಟ ಆನಂದ್, ದೀಪಕ್, ಎಸ್.ಎಲ್ ಸೀತಾರಾಮ್, ಮಸಗೋಡು ಲೋಕೇಶ್, ಲಕ್ಷ್ಮೀಕಾಂತ, ಸೋಮೇಶ್, ರತ್ನಕುಮಾರ್, ಅಭಿಷೇಕ್ ಹಾಗೂ ಚರಣ್ ಉಪಸ್ಥಿತರಿದ್ದರು.

Translate »