ವಿ.ಪೇಟೆ ಕೆಎಸ್ಆರ್ ಟಿಸಿ ಬಸ್ ನಿಲ್ದಾಣದ ಶೌಚಾಲಯ ಬಂದ್
ಕೊಡಗು

ವಿ.ಪೇಟೆ ಕೆಎಸ್ಆರ್ ಟಿಸಿ ಬಸ್ ನಿಲ್ದಾಣದ ಶೌಚಾಲಯ ಬಂದ್

June 3, 2018

ವಿರಾಜಪೇಟೆ:  ನೀರಿಲ್ಲದೆ ಕಳೆದ ಎರಡು ದಿನಗಳಿಂದ ಇಲ್ಲಿನ ಕೆಎಸ್ಆರ್ ಟಿಸಿ ಬಸ್ ನಿಲ್ದಾಣದಲ್ಲಿರುವ ಶೌಚಾಲಯಕ್ಕೆ ಬೀಗ ಜಡಿಯಲಾಗಿದ್ದು, ಪ್ರಯಾಣ ಕರು ಪರದಾಡುವಂತಾಗಿದೆ.

ತಾಲೂಕು ಕೇಂದ್ರವಾದ ವಿರಾಜಪೇಟೆ ಬಸ್ ನಿಲ್ದಾಣಕ್ಕೆ 150ಕ್ಕೂ ಹೆಚ್ಚು ಕೆಎಸ್ಆರ್ ಟಿಸಿ ಬಸ್‍ಗಳು ಬಂದು ಹೋಗುತ್ತದೆ. ರಾತ್ರಿ ವೇಳೆ ಸುಮಾರು 15 ಬಸ್‍ಗಳು ನಿಲ್ದಾಣದಲ್ಲಿ ನಿಲ್ಲುತ್ತವೆ. ಅಲ್ಲದೆ, ಮೈಸೂರಿನಿಂದ ಕೇರಳಾಗೆ ತೆರಳುವ ಬಸ್‍ಗಳೂ ಸಹ ಈ ನಿಲ್ದಾಣಕ್ಕೆ ಬರುವುದರಿಂದ ದಿನಂಪ್ರತಿ ಸಾವಿರಾರು ಪ್ರಯಾಣ ಕರು ಈ ನಿಲ್ದಾಣಕ್ಕೆ ಬರುತ್ತಾರೆ.

ಈ ಸಂಬಂಧ ಬಸ್ ನಿಲ್ದಾಣದ ಸಂಚಾರ ನಿಯಂತ್ರಣಾಧಿಕಾರಿಗಳನ್ನು ‘ಮೈಸೂರು ಮಿತ್ರ’ ಸಂಪರ್ಕಿಸಿದಾಗ ಅವರು, ‘ಎರಡು ದಿನಗಳ ಹಿಂದೆ ನೀರಿನ ಮೋಟಾರ್ ಕೆಟ್ಟು ಹೋಗಿದ್ದು, ಅದನ್ನು ರಿಪೇರಿಗಾಗಿ ಕುಶಾಲನಗರಕ್ಕೆ ಕೊಂಡೊಯ್ಯಲಾಗದೆ. ಭಾನುವಾರ ಮೋಟಾರ್ ವಾಪಸ್ ತರುವ ಸಾಧ್ಯತೆ ಇದ್ದು, ಆನಂತರ ಶೌಚಾಲಯ ಪ್ರಯಾಣ ಕರ ಉಪಯೋಗಕ್ಕೆ ಲಭ್ಯವಾಗ ಲಿದೆ ಎಂದರು. ಈ ವಿಷಯವನ್ನು ಮಡಿಕೇರಿಯಲ್ಲಿರುವ ಹಿರಿಯ ಅಧಿಕಾರಿಗಳ ಗಮನಕ್ಕೂ ತರಲಾಗಿದೆ ಎಂದ ಅವರು, ಬಸ್ ನಿಲ್ದಾಣದ ಭದ್ರತೆಗಾಗಿ ಈ ಹಿಂದೆ ಹೋಂ ಗಾರ್ಡ್ ಗಳನ್ನು ನಿಯೋಜಿಸಲಾಗಿತ್ತು. ಆದರೆ ಈಗ ಅವರು ಬರುತ್ತಿಲ್ಲ. ರಾತ್ರಿ ವೇಳೆ ಕುಡುಕರು ಬಂದು ಬಸ್ ನಿಲ್ದಾಣದಲ್ಲಿ ಮಲಗುತ್ತಾರೆ. ಅವರನ್ನು ಮಾತನಾಡಿಸಲಾಗುತ್ತಿಲ್ಲ. ಆದ್ದ ರಿಂದ ದಿನಕ್ಕೆ ಎರಡು ಬಾರಿ ಪೊಲೀಸರು ಗಸ್ತು ಬರುವುದು ಸೂಕ್ತ ಎಂದರು.

ಮೋಟಾರ್ ರಿಪೇರಿಯಾದರೆ ಬದಲಿ ಮೋಟಾರ್ ವ್ಯವಸ್ಥೆ ಮಾಡಬೇಕಾಗಿತ್ತು. ಸಾವಿರಾರು ಪ್ರಯಾಣ ಕರು ಬಂದು ಹೋಗುವ ಬಸ್ ನಿಲ್ದಾಣದಲ್ಲಿ ಶೌಚಾಲಯವನ್ನು ಮುಚ್ಚಿದರೆ ಶೌಚ್ಯತೆ ಕಾಪಾಡುವುದು ಹೇಗೆ ಸಾಧ್ಯ? ಎಂಬುದು ಸಾರ್ವಜನಿಕರ ಪ್ರಶ್ನೆಯಾಗಿದೆ.

Translate »