ಸಿಎನ್‍ಸಿಯ ಪಂಪೂಹಾರ್ ಜಾಥಾ ಯಶಸ್ವಿ: ಕಾವೇರಿ ನದಿಗೆ ಜೀವಂತ ವ್ಯಕ್ತಿ ಸ್ಥಾನಮಾನಕ್ಕೆ ಒತ್ತಾಯ
ಕೊಡಗು

ಸಿಎನ್‍ಸಿಯ ಪಂಪೂಹಾರ್ ಜಾಥಾ ಯಶಸ್ವಿ: ಕಾವೇರಿ ನದಿಗೆ ಜೀವಂತ ವ್ಯಕ್ತಿ ಸ್ಥಾನಮಾನಕ್ಕೆ ಒತ್ತಾಯ

June 3, 2018

ಮಡಿಕೇರಿ:  ಜೀವನದಿ ಕಾವೇ ರಿಗೆ ಜೀವಂತ ವ್ಯಕ್ತಿಯ ಶಾಸನಬದ್ಧ ಸ್ಥಾನ ಮಾನ ನೀಡಬೇಕೆಂದು ಒತ್ತಾಯಿಸಿ ಕೊಡವ ನ್ಯಾಷನಲ್ ಕೌನ್ಸಿಲ್ ಸಂಘಟನೆ ವತಿ ಯಿಂದ ಕಾವೇರಿ ಮತ್ತು ಬಂಗಾಳಕೊಲ್ಲಿ ಸಂಗಮಿಸುವ ಪೂಂಪ್‍ಹಾರ್ ವರೆಗೆ ಹಮ್ಮಿಕೊಳ್ಳಲಾಗಿದ್ದ ವಾಹನ ಜಾಥಾ ಯಶಸ್ವಿಯಾಗಿದ್ದು, ಕಾವೇರಿ ನದಿಯ ಮಹತ್ವದ ಬಗ್ಗೆ ಜನರಲ್ಲಿ ಜಾಗೃತಿ ಮೂಡಿ ಸುವಲ್ಲಿ ಸಂಘಟನೆ ಸಫಲವಾಗಿದೆ ಎಂದು ಸಿಎನ್‍ಸಿ ಅಧ್ಯಕ್ಷರಾದ ಎನ್.ಯು. ನಾಚಪ್ಪ ತಿಳಿಸಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಮೇ 24ರಂದು ತಲಕಾವೇರಿ ಯಿಂದ ಆರಂಭಗೊಂಡ ಜಾಥಾ ಜಲಾ ನಯನ ಪ್ರದೇಶದ ಜಿಲ್ಲೆಗಳಾದ ಕೊಡಗು, ಮೈಸೂರು, ಮಂಡ್ಯ, ಧರ್ಮಪುರಿ, ಸೇಲಂ, ಈರೋಡ್, ತಿರುಚರಾಪಳ್ಳಿ, ತಂಜಾವೂರು, ಶ್ರೀರಂಗಂ ಮೂಲಕ ಹಾದು ಅಂತಿಮ ವಾಗಿ ಕಾವೇರಿ ಮತ್ತು ಬಂಗಾಳಕೊಲ್ಲಿ ಸಂಗಮಿಸುವ ಪೂಂಪ್‍ಹಾರ್‍ನಲ್ಲಿ ಸಮಾ ರೋಪಗೊಂಡಿತು ಎಂದರು. ಕಾವೇರಿ ನದಿ ಹರಿಯುವ ಜಿಲ್ಲೆಗಳಲ್ಲಿ ಸಾರ್ವಜನಿಕ ಸಭೆಗಳನ್ನು ನಡೆಸುವುದರೊಂದಿಗೆ ಪುರಾತನ ದೇವಾಲಯಗಳಲ್ಲಿ ತಂಗುವ ಮೂಲಕ ಕಾವೇರಿ ಜಲಾನಯನ ಪ್ರದೇ ಶದ ಜನರಲ್ಲಿ ಕಾವೇರಿ ನದಿಯ ಬಗ್ಗೆ ಧರ್ಮಪ್ರಜ್ಞೆಯ ಜಾಗೃತಿ ಮೂಡಿಸ ಲಾಗಿದೆ ಎಂದು ನಾಚಪ್ಪ ತಿಳಿಸಿದರು.

ಕಾವೇರಿ ನದಿ ವೇದ ಕಾಲದ ಏಳು ಪವಿತ್ರ ಜೀವನದಿಗಳಲ್ಲಿ ಒಂದಾಗಿದ್ದು, ವೇದ ಕಾಲದ ಸಪ್ತ ನದಿಗಳ ಕುರಿ ತಾಗಿರುವ ಸಂಸ್ಕøತ ಶ್ಲೋಕದಲ್ಲಿ ಇದನ್ನು ಪ್ರಸ್ತಾಪಿಸಲಾಗಿದೆ. ಭಾರತದಲ್ಲೂ ಹಿಂದೂ ದೇವತೆಗಳಿಗೆ ನೀಡಿರುವ ಜೀವಂತ ವ್ಯಕ್ತಿಯ ಶಾಸನಬದ್ಧ ಸ್ಥಾನಮಾನವನ್ನು ಗಂಗಾ, ಯಮುನಾ ನದಿಗಳಿಗೆ ಉತ್ತರಾಖಂಡ ಸರಕಾರ ಹಾಗೂ ನರ್ಮದೆಗೆ ಮಧ್ಯ ಪ್ರದೇಶ ಸರಕಾರಗಳು ನೀಡಿದೆ. ಎಲ್ಲಾ ನದಿಗಳಿಗೆ ತನ್ನದೇ ಆದ ಧರ್ಮಪ್ರಜ್ಞೆ ಮತ್ತು ಮಹತ್ವವಿದ್ದು, ಕರ್ನಾಟಕ ರಾಜ್ಯ ದಲ್ಲಿ ಕಾವೇರಿ ನದಿಯನ್ನು ಮಾತೃಸ್ಥಾನದಲ್ಲಿ ಡುವ ಕಾರ್ಯ ನಡೆದಿಲ್ಲವೆಂದು ನಾಚಪ್ಪ ಬೇಸರ ವ್ಯಕ್ತಪಡಿಸಿದರು.

ಇತರ ರಾಜ್ಯಗಳಲ್ಲಿ ನದಿಮೂಲಗಳ ಬಗ್ಗೆ ರಾಜಕೀಯ ಬದ್ಧತೆಯನ್ನು ಪ್ರದ ರ್ಶಿಸಲಾಗುತ್ತಿದೆ. ಆದರೆ ನಮ್ಮ ರಾಜ್ಯದಲ್ಲಿ ಆ ರೀತಿಯ ಪೂರಕ ವಾತಾವರಣಗಳು ಸೃಷ್ಟಿಯಾಗುತ್ತಿಲ್ಲ. ಇದೇ ಕಾರಣಕ್ಕೆ ಕಾವೇರಿ ನದಿಗೂ ಶಾಸನ ಬದ್ಧ ಸ್ಥಾನಮಾನ ನೀಡಬೇಕೆಂದು ಒತ್ತಾಯಿಸುತ್ತಿರುವುದಾಗಿ ಅವರು ಸ್ಪಷ್ಟಪಡಿಸಿದರು.

ವಿಶ್ವಸಂಸ್ಥೆಯ ನದಿ ನೀರು ಹಂಚಿಕೆ ನ್ಯಾಯಮಂಡಳಿಯಿಂದ ಹಿಡಿದು ರಾಷ್ಟ್ರಪತಿ, ಪ್ರಧಾನಮಂತ್ರಿ, ಕೇಂದ್ರ ಗೃಹಸಚಿವರು ಮತ್ತು ಕೇಂದ್ರ ಜಲಸಂಪನ್ಮೂಲ ಸಚಿವರಿಗೆ ಜ್ಞಾಪನಾಪತ್ರ ರವಾನಿಸಿದ್ದು, ಇದೀಗ ಅದನ್ನು ತಾರ್ಕಿಕ ಅಂತ್ಯಕ್ಕೆ ಕೊಂಡೊಯ್ಯುವ ನಿಟ್ಟಿ ನಲ್ಲಿ ಕಾವೇರಿಯ ಉಗಮಸ್ಥಾನವಾದ ತಲ ಕಾವೇರಿಯಿಂದ ಸಮುದ್ರ ಸೇರುವ ಪೂಂಪ್ ಹಾರ್‍ವರೆಗೆ ವಾಹನ ಜಾಥಾ ಆಯೋಜಿಸಿ ಯಶಸ್ವಿಯಾಗಿದ್ದೇವೆ. ತಮಿಳುನಾಡಿನ ವಿವಿಧೆಡೆ ಜಾಥಾ ತೆರಳಿದಾಗ ಅಲ್ಲಿನ ಜನ ಅತಿ ಗೌರವದಿಂದ ನಮ್ಮನ್ನು ಬರಮಾಡಿ ಕೊಂಡಿದ್ದಾರೆ. ಕಾವೇರಿ ಮಾತೆಯ ಬಗ್ಗೆ ಭಕ್ತಿಭಾವವನ್ನು ಪ್ರದರ್ಶಿಸಿದ್ದಾರೆ ಎಂದು ಹೆಮ್ಮೆ ವ್ಯಕ್ತಪಡಿಸಿದ ನಾಚಪ್ಪ ಜೀವ ನದಿಯ ಬಗ್ಗೆ ಜಾಗೃತಿ ಕಾರ್ಯಕ್ರಮಗಳು ನಿರಂತರವಾಗಿ ನಡೆಯಲಿದೆ ಎಂದರು.

ಪೂಂಪ್‍ಹಾರ್‍ವರೆಗೆ ನಡೆದ ಜಾಗೃತಿ ಜಾಥಾ ದಲ್ಲಿ ಪ್ರಮುಖ ಮೂರು ನಿರ್ಣ ಯಗಳನ್ನು ಕೈಗೊಳ್ಳಲಾಗಿದೆ ಎಂದು ಅವರು ವಿವರಿಸಿದರು.

ನಿರ್ಣಯಗಳು

  • ಜೀವನದಿ ಕಾವೇರಿಗೆ ಗಂಗೆ, ಯಮುನೆ& ನರ್ಮದೆಯ ಮಾದರಿಯಲ್ಲೆ ಕಾವೇರಿಗೆ ಜೀವಂತ ವ್ಯಕ್ತಿಯ ಶಾಸನ ಬದ್ದ ಸ್ಥಾನಮಾನ (ಲಿವಿಂಗ್ ಎಂಟಿಟಿ ವಿಥ್ ಲೀಗಲ್ ಪರ್ಸನ್ ಸ್ಟೇಟಸ್)ಕಲ್ಪಿಸಬೇಕು.
  • ಕಾವೇರಿಯ ಜನ್ಮಸ್ಥಳ ಕಾವೇರಿಯ ಸಂತತಿಯಾದ ಆದಿಮಸಂಜಾತಕ್ಷಾತ್ರ ಕೊಡವ ಬುಡಕಟ್ಟು ಲೋಕದ ನಾಗರಿಕತೆ ಆವೀರ್ಭವಿಸಿದ ಕೊಡಗು @ ಕೊಡವ ಲ್ಯಾಂಡ್ 1956 ರ ವರೆಗೆ ಹೊಂದಿದ್ದ ಭೂ ರಾಜಕೀಯ ನೆಲೆಗೆ ಸ್ವಾಯತ್ತತೆಯನ್ನು ಕಲ್ಪಿಸುವುದರ ಮೂಲಕ ಕಾವೇರಿ ಜಲಮೂಲ ಸಂಗ್ರಹಿಸುವ ಕೊಡಗಿನ ರಾಜಕೀಯ ಸ್ಥಿರತೆಯೊಂದಿಗೆ ಕಾವೇರಿ ನದಿ ನೀರನ್ನು ಹರಿವು ಲೋಕ ಕಲ್ಯಾಣಕ್ಕಾಗಿ ತಾರತಮ್ಯವಿಲ್ಲದೇ ನಿರಂತರವಾಗಬೇಕು.
  • ಕಾವೇರಿ ಹುಟ್ಟುವ ಪವಿತ್ರ ತಲಕಾವೇರಿ ಮತ್ತು ಅದು ಹರಿದು ಬಂಗಾಳ ಕೊಲ್ಲಿ ಸಂಗಮಿಸುವ ಪವಿತ್ರ ಪೂಂಪುಹಾರ್‍ಗಳನ್ನು ಪರಮ ಪವಿತ್ರ ತೀರ್ಥ ಕ್ಷೇತ್ರವೆಂದು ಇಸ್ಲಾಂ ಧರ್ಮದ ಮೆಕ್ಕಾ-ಮದಿನ, ಕ್ರೈಸ್ತರ ವ್ಯಾಟಿಕನ್ ಮತ್ತು ಯೆಹೂದಿಗಳ ಜೆರುಸಲೇಂ ಟೇಂಪಲ್ ಮೌಂಟ್ ಮೊರೆಯ ಮಾದರಿಯಲ್ಲೇ ಪವಿತ್ರ ತೀರ್ಥ ಕ್ಷೇತ್ರವೆಂದು ಘೋಷಿಸಿ ಪರಿಗಣ ಸಬೇಕು.

Translate »