ಕಾಲುಬಾಯಿ ಜ್ವರ ಲಸಿಕೆ ಹಾಕಿಸಿ ಜಾನುವಾರು ರಕ್ಷಿಸಿ
ಮಂಡ್ಯ

ಕಾಲುಬಾಯಿ ಜ್ವರ ಲಸಿಕೆ ಹಾಕಿಸಿ ಜಾನುವಾರು ರಕ್ಷಿಸಿ

June 3, 2018

ಕೆ.ಆರ್.ಪೇಟೆ:  ರೈತರು ತಮ್ಮ ಜಾನುವಾರುಗಳಿಗೆ ಕಡ್ಡಾಯವಾಗಿ ಕಾಲು ಬಾಯಿ ಜ್ವರದ ಲಸಿಕೆಯನ್ನು ಹಾಕಿಸುವ ಮೂಲಕ ಮಾರಕ ಕಾಯಿಲೆಯಿಂದ ಜಾನುವಾರುಗಳನ್ನು ರಕ್ಷಿಸಬೇಕು ಎಂದು ಮನ್‍ಮುಲ್ ನಿರ್ದೇಶಕ ಎಸ್.ಅಂಬ ರೀಶ್ ಮನವಿ ಮಾಡಿದರು.

ತಾಲೂಕಿನ ವಳಗೆರೆಮೆಣಸ ಗ್ರಾಮದ ಡೈರಿ ಆವರಣದಲ್ಲಿ ಪಶು ಸಂಗೋಪನಾ ಇಲಾಖೆ ಹಾಗೂ ಮನ್‍ಮುಲ್ ಸಹ ಯೋಗದೊಂದಿಗೆ ಹಮ್ಮಿಕೊಂಡಿದ್ದ 14ನೇ ಸುತ್ತಿನ ಪಲ್ಸ್ ಪೋಲಿಯೋ ಮಾದರಿಯ ಕಾಲುಬಾಯಿ ಜ್ವರದ ಲಸಿಕೆ ಹಾಕುವ ಕಾರ್ಯಕ್ರಮವನ್ನು ರಾಸು ಗಳಿಗೆ ಲಸಿಕೆ ಹಾಕುವ ಮೂಲಕ ಉದ್ಘಾಟಿಸಿ ಅವರು ಮಾತನಾಡಿದರು.

ರೈತನ ಅಭಿವೃದ್ಧಿಯಲ್ಲಿ ಜಾನುವಾರು ಗಳ ಪಾತ್ರ ಅಪಾರ. ರೈತರು ಬೇಸಾಯ ಮಾಡಲು, ಹಾಲು ಉತ್ಪಾದಿಸಲು, ಭೂಮಿ ಉಳುಮೆ ಮಾಡಲು, ಕೊಟ್ಟಿಗೆ ಗೊಬ್ಬರಕ್ಕಾಗಿ ಜಾನುವಾರುಗಳು ಅವಶ್ಯಕ. ಹೀಗಾಗಿ ಈ ರಾಸುಗಳನ್ನು ರಕ್ಷಿಸಬೇಕಾದುದು ರೈತರ ಕರ್ತವ್ಯ. ಹಸು, ಎತ್ತು, ಎಮ್ಮೆ, ಕೋಣ, ಹಂದಿ ಸಾಕು ಪ್ರಾಣ ಗಳು ರೈತನಿಗೆ ಆದಾಯ ತಂದು ಕೊಡುತ್ತವೆ. ರೈತನ ಅಭಿವೃದ್ಧಿಗೆ ಕಾರಣವಾಗಿರುವ ಈ ರಾಸುಗಳನ್ನು ಕಾಡುವ ಕಾಲುಬಾಯಿ ಜ್ವರವನ್ನು ನಿಯಂತ್ರಿಸ ಬೇಕಾದರೆ ಎಲ್ಲಾ ರೈತರು ಕಡ್ಡಾಯವಾಗಿ ಇದೇ ಜೂ.1ರಿಂದ 20ವರೆಗೆ ಉಚಿತ ವಾಗಿ ಹಾಕಲಾಗುತ್ತಿರುವ ಕಾಲುಬಾಯಿ ಜ್ವರದ ಲಸಿಕೆಯನ್ನು ಹಾಕಿಸುವ ಮೂಲಕ ಈ ಮಾರಕ ಕಾಯಿಲೆಯನ್ನು ಹೋಗ ಲಾಡಿಸಿ ರಾಸುಗಳನ್ನು ರಕ್ಷಿಸಬೇಕು ಎಂದು ಮನವಿ ಮಾಡಿದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತ ನಾಡಿದ ಮನ್‍ಮುಲ್ ನಿರ್ದೇಶಕ ಡಾಲು ರವಿ, ರಾಸುಗಳ ರಕ್ಷಣೆಗೆ ರೈತರು ಮುಂದಾಗ ಬೇಕು. ಜಾನುವಾರುಗಳನ್ನು ರೈತರು ಕಾಪಾಡುವುದರಿಂದ ಹೆಚ್ಚು ಲಾಭ ಪಡೆಯಬಹುದು. ಆಕಸ್ಮಿಕವಾಗಿ ಜಾನು ವಾರುಗಳು ಮೃತಪಟ್ಟರೆ ರೈತರಿಗೆ ಸಾಕಷ್ಟು ನಷ್ಟವಾಗುತ್ತದೆ. ಹೀಗಾಗಿ ರೈತರು ತಮ್ಮ ಜಾನುವಾರುಗಳ ರಕ್ಷಣೆಗೆ ಹೆಚ್ಚು ಕಾಳಜಿ ವಹಿಸಬೇಕು ಎಂದು ಮನವಿ ಮಾಡಿದರು.

ತಾಲೂಕು ಪಶುಸಂಗೋಪನಾ ಇಲಾಖೆಯ ಸಹಾಯಕ ನಿರ್ದೇಶಕ ಡಾ. ಹೆಚ್.ಎಸ್. ದೇವರಾಜು, ಮನ್‍ಮುಲ್ ಉಪ ವ್ಯವಸ್ಥಾಪಕ ಮರಿರಾಚಯ್ಯ, ಜಾನು ವಾರು ಅಭಿವೃದ್ಧಿ ಅಧಿಕಾರಿ ಎಚ್.ಆರ್. ಶಂಕರ್, ಮಾರ್ಗದ ವಿಸ್ತರಣಾಧಿಕಾರಿ ರಮೇಶ್ ಕುಮಾರ್, ವಳಗೆರೆಮೆಣಸ ಹಾಲು ಉತ್ಪಾದಕರ ಸಹಕಾರ ಸಂಘದ ಅಧ್ಯಕ್ಷ ಮಂಜೇಗೌಡ, ಕಾರ್ಯದರ್ಶಿ ಪುಟ್ಟಸ್ವಾಮಿ, ನಿರ್ದೇಶಕರಾದ ರವೀಂದ್ರ, ಸುರೇಶ್, ಜವರೇಗೌಡ, ವಿ.ಡಿ.ಜಯಪ್ರಕಾಶ್, ಅಗ್ರಹಾರಬಾಚಹಳ್ಳಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಬ್ಯಾಂಕ್ ಅಧ್ಯಕ್ಷ ವಿ.ಆರ್.ಕುಮಾರ್, ಪಶು ಸಹಾಯಕ ರಾದ ಧನಂಜಯ, ಜಯರಾಂ ಮತ್ತಿತ ರರು ಕಾರ್ಯಕ್ರಮದಲ್ಲಿದ್ದರು.

Translate »