ನೌಕರರಿಂದ ಗ್ರಾಪಂಗೆ ಬೀಗ ಜಡಿದು ಪ್ರತಿಭಟನೆ
ಮಂಡ್ಯ

ನೌಕರರಿಂದ ಗ್ರಾಪಂಗೆ ಬೀಗ ಜಡಿದು ಪ್ರತಿಭಟನೆ

June 3, 2018

ನಾಗಮಂಗಲ: ಸರ್ಕಾರದ ಆದೇಶದಂತೆ ನೇರ ವೇತನ ಮತ್ತು ಸೇವೆ ಖಾಯಂ ಅನುಮೋದನೆಗೆ ಪಿಡಿಓ ಮತ್ತು ಇಓ ನಿರ್ಲಕ್ಷ್ಯ ಖಂಡಿಸಿ ಹರದನಹಳ್ಳಿ ಗ್ರಾಪಂ ನೌಕರರು ಪಂಚಾಯಿತಿ ಕಚೇರಿಗೆ ಬೀಗ ಜಡಿದು ಪ್ರತಿಭಟನೆ ನಡೆಸಿದರು.

ಗ್ರಾಪಂಗೆ ಒಳಪಡುವ ವಾಟರ್‍ಮನ್, ಬಿಲ್ ಕಲೆಕ್ಟರ್, ಕಂಪ್ಯೂಟರ್ ಆಪರೇಟರ್, ಸ್ವೀಪರ್‍ಗಳು ಸೇರಿದಂತೆ 20ಕ್ಕೂ ಹೆಚ್ಚು ನೌಕರರು ತಮ್ಮ ಕೆಲಸ ಸ್ಥಗಿತಗೊಳಿಸಿ ಬೆಳಿಗ್ಗೆಯಿಂದಲೇ ಗ್ರಾಪಂಗೆ ಆಗಮಿಸಿ ಬೀಗ ಜಡಿದು ಪ್ರತಿಭಟನೆ ನಡೆಸಿದರು. ಕಳೆದ 20 ವರ್ಷಗಳಿಂದಲೂ ಕೇವಲ 1500 ರೂ.ಗಳಿಗೆ ನಾವು ಪಂಚಾಯಿತಿ ಕೆಲಸ ಗಳನ್ನು ಮಾಡಿಕೊಂಡೇ ಬಂದಿದ್ದೇವೆ. ಸರ್ಕಾರ ನಮ್ಮ ಹೋರಾಟವನ್ನು ಪರಿ ಗಣ ಸಿ ಸಮಾನ ಕೆಲಸಕ್ಕೆ ಸಮಾನ ವೇತನ ನೀಡಲು ನೇರ ವೇತನ ಜಾರಿ ಮಾಡಿದೆ. ಅದಕ್ಕಾಗಿ ನೌಕರರ ಸೇವೆಗೆ ಅನು ಮೋದನೆ ನೀಡಿ ಅಗತ್ಯ ದಾಖಲಾತಿ ಗಳನ್ನು ಸಲ್ಲಿಸುವಂತೆ ಪಿಡಿಓಗೆ ಸರ್ಕಾರ ಆದೇಶಿಸಿದೆ. ಆದರೆ ಈ ಕೆಲಸವನ್ನು ಮಾಡಲು ಪಿಡಿಓ ಬಸವರಾಜು ಮತ್ತು ಇಓ ನಿರ್ಲಕ್ಷ್ಯ ವಹಿಸಿದ್ದಾರೆ ಎಂದು ಪ್ರತಿ ಭಟನಾಕಾರರು ಆಕ್ರೋಶ ವ್ಯಕ್ತಪಡಿಸಿ ದರು. ನೌಕರರ ಸೇವೆ ಅನುಮೋದನೆಗೆ ಜೂ.10 ಕಡೇ ದಿನವಾಗಿದ್ದು, ಪಂಚಾಯಿತಿ ಯಲ್ಲಿ ಕೆಲವೇ ನೌಕರರ ಸೇವೆಗೆ ಮಾತ್ರ ಅನುಮೋದನೆ ನೀಡಿ ಉಳಿದವರನ್ನು ವಂಚಿಸುವ ಹುನ್ನಾರ ನಡೆಸಲಾಗುತ್ತಿದೆ ಎಂದು ಅವರು ಆರೋಪಿಸಿದರು.

ಪಿಡಿಓ ಭರವಸೆ: ನೌಕರರ ಪ್ರತಿಭಟನೆ ವಿಷಯ ತಿಳಿದು ಗ್ರಾಪಂಗೆ ಆಗಮಿಸಿದ ಪಿಡಿಓ ಬಸವರಾಜ್, ನಿಮ್ಮ ಸೇವೆ ಮತ್ತು ವೇತನಕ್ಕೆ ಸಂಬಂಧಿಸಿದಂತೆ ಈಗಾಗಲೇ ಎಲ್ಲಾ ದಾಖಲಾತಿಗಳನ್ನು ಆನ್‍ಲೈನ್‍ನಲ್ಲಿ ಇಲಾಖೆ ವೆಬ್‍ಗೆ ಅಪ್‍ಲೋಡ್ ಮಾಡಿ ದ್ದೇವೆ. ಆ ಬಗ್ಗೆ ನಿಮಗೆ ಆತಂಕ ಬೇಡ ಮತ್ತು ಸಂಬಂಧಿಸಿದ ಕಡತಗಳನ್ನೂ ಸೋಮವಾರ ತಾಪಂ ಇಓಗೆ ಸಲ್ಲಿಸಿ ಅವರ ಹೆಬ್ಬೆಟ್ಟು ಅನುಮೋದನೆಯನ್ನೂ ಪಡೆಯುತ್ತೇವೆ ಎಂದು ಪ್ರತಿಭಟನಾ ನಿರತ ನೌಕರರಿಗೆ ಭರವಸೆ ನೀಡಿದರು. ನಂತರ ನೌಕರರು ಪ್ರತಿಭಟನೆ ವಾಪಸ್ ಪಡೆದು ಕೆಲಸಕ್ಕೆ ತೆರಳಲು ಅನುವಾದರು.

ಪ್ರತಿಭಟನೆಯಲ್ಲಿ ನೌಕರರಾದ ಜವರಯ್ಯ, ಪುಟ್ಟಲಿಂಗು, ಮಹೇಶ, ರಮೇಶ, ಶಿವರಾಜು, ಶಿವಕುಮಾರ್, ಕೋಮಲ, ಚನ್ನಮ್ಮ ಇತರರಿದ್ದರು.

Translate »