ಮೀಸಲಾತಿ ಅನೇಕರ ಹೋರಾಟದ ಫಲ
ಮೈಸೂರು

ಮೀಸಲಾತಿ ಅನೇಕರ ಹೋರಾಟದ ಫಲ

September 26, 2019

ಮೈಸೂರು: ಮೀಸ ಲಾತಿಯ ಅನುಕೂಲ ಪಡೆಯುತ್ತಿರುವ ಎಲ್ಲರಿಗೂ ಇದು ಇದ್ದಕ್ಕಿದ್ದಂತೆ ಬಂದ ಉಡು ಗೊರೆಯಲ್ಲ ಎನ್ನುವುದು ಸ್ಪಷ್ಟವಾಗ ಬೇಕಿದೆ ಎಂದು ಹಿಂದುಳಿದ ವರ್ಗಗಳು ಮತ್ತು ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ ಜಿಲ್ಲಾ ಅಧಿಕಾರಿ ಜಿ.ಎಸ್.ಸೋಮ ಶೇಖರ್ ಅಭಿಪ್ರಾಯಪಟ್ಟರು.

ಮೈಸೂರು ವಿವಿ ಅರ್ಥಶಾಸ್ತ್ರ ಮತ್ತು ಸಹಕಾರ ಅಧ್ಯಯನ ವಿಭಾಗದ ಯೋಜನಾ ವೇದಿಕೆ ಪ್ರಾರಂಭೋತ್ಸವದ ಅಂಗವಾಗಿ ಮಾನಸಗಂಗೋತ್ರಿಯ ವಿಜ್ಞಾನ ಭವನ ದಲ್ಲಿ ಏರ್ಪಡಿಸಿದ್ದ `ಕರ್ನಾಟಕದಲ್ಲಿ ಮೀಸ ಲಾತಿ ನೀತಿಯ ಪ್ರಯಾಣ’ ಕುರಿತು ಅವರು ವಿಶೇಷ ಉಪನ್ಯಾಸ ನೀಡಿದರು.

ಮೀಸಲಾತಿಗೆ ನೂರಾರು ವರ್ಷಗಳ ಹೋರಾಟದ ಹಿನ್ನೆಲೆ ಇದೆ. ಸ್ವಾತಂತ್ರ್ಯ ಪೂರ್ವದಲ್ಲಿದ್ದ ಸಾಮಾಜಿಕ ಮತ್ತು ಆರ್ಥಿಕ ಅಸಮಾನತೆ, ಕೆಳವರ್ಗದ ಜನರಿಗೆ ಶಿಕ್ಷಣ ನೀಡದ ಪದ್ಧತಿಗಳು. ಜಾತಿ, ಧರ್ಮಗಳ ವಿಂಗಡಣೆ ಕಾರಣದಿಂದ ದುರ್ಬಲ ವರ್ಗ ಹೈರಾಣವಾಗಿತ್ತು. ಇದನ್ನು ಆಳವಾಗಿ ಅಭ್ಯ ಸಿಸಿದ ಡಾ.ಬಿ.ಆರ್.ಅಂಬೇಡ್ಕರ್ ಅವರು ದುರ್ಬಲ ವರ್ಗದವರಿಗೆ ಸಂವಿಧಾನದಲ್ಲಿ ಮೀಸಲು ಒದಗಿಸಿದರು ಎಂದರು.

ಅಂಬೇಡ್ಕರ್‍ಗೂ ಮೊದಲೇ ಶಾಹು ಮಹಾರಾಜರು ತಮ್ಮ ಸಂಸ್ಥಾನದಲ್ಲಿ ಮೀಸಲು ಪದ್ಧತಿ ಜಾರಿಗೊಳಿಸಿದ್ದರೂ ಅದು ಅವರ ಆಡಳಿತಾಧಿಕಾರಿಗಳ ನಿರ್ಲಕ್ಷ್ಯದಿಂದ ಪರಿ ಣಾಮಕಾರಿಯಾಗಿ ಜಾರಿಯಾಗಿರಲಿಲ್ಲ. ಮೈಸೂರು ಸಂಸ್ಥಾನದಲ್ಲಿ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರೂ ತಮ್ಮ ದಿವಾನ ರಾಗಿದ್ದ ಸರ್ ಎಂ.ವಿಶ್ವೇಶ್ವರಯ್ಯ ಅವರ ವಿರೋಧವನ್ನು ಲೆಕ್ಕಿಸದೆ ಮೀಸಲು ಪದ್ಧತಿ ಯನ್ನು ಪರಿಣಾಮಕಾರಿಯಾಗಿ ಜಾರಿಗೊಳಿ ಸಿದ್ದರು ಎಂದು ಅವರು ಮೀಸಲು ಪದ್ಧತಿ ಬೆಳೆದು ಬಂದ ಹಾದಿಯನ್ನು ವಿದ್ಯಾರ್ಥಿ ಗಳಿಗೆ ಮನದಟ್ಟಾಗುವಂತೆ ತಿಳಿಸಿದರು.

ದುರ್ಬಲ ವರ್ಗದ ಜನರಿಗೆ ಶಿಕ್ಷಣ ಮತ್ತು ಉದ್ಯೋಗದಲ್ಲಿ ಮೀಸಲು ಪಡೆ ಯಲು ಸಾವಿರಾರು ಮಂದಿ ಪ್ರಾಣತ್ಯಾಗ ಮಾಡಿದ್ದನ್ನು ವಿವರಿಸಿದ ಅವರು, ಇಂದು ಅದರ ಪ್ರಯೋಜನ ಪಡೆಯುತ್ತಿರುವವರು ಇದು ಇದ್ದಕ್ಕಿದ್ದಂತೆ ಬಂದ ಉಡುಗೊರೆ ಯಲ್ಲ ಎಂಬುದನ್ನು ಅರಿತುಕೊಳ್ಳಬೇಕಿದೆ ಎಂದರು. ಅರ್ಥಶಾಸ್ತ್ರ ವಿಭಾಗದ ಮುಖ್ಯಸ್ಥೆ ಪ್ರೊ.ಎಂ.ಇಂದಿರಾ ಮಾತನಾಡಿ, ದೇಶ ದಲ್ಲಿ ಪಿಡುಗಾಗಿ ಪರಿಣಮಿಸಿರುವ ಸಾಮಾ ಜಿಕ ಅಸಮಾನತೆಯನ್ನು ಬದಲಾಯಿಸಲು ಯಾರಾದರೂ ಬರುತ್ತಾರೆ ಎಂದು ನಿರೀಕ್ಷಿ ಸದೆ, ಯುವಕರು ಬದಲಾವಣೆಯನ್ನು ತಾವೇ ಮಾಡಿಕೊಳ್ಳಬೇಕು ಎಂದು ವಿದ್ಯಾರ್ಥಿಗಳಿಗೆ ಸಲಹೆ ನೀಡಿದರು. ಯೋಜನಾ ವೇದಿಕೆ ಸಂಚಾಲಕಿ ಡಾ. ನವಿತಾ ತಿಮ್ಮಯ್ಯ ಉಪಸ್ಥಿತರಿದ್ದರು.

Translate »