ನಿವೃತ್ತ ಮುಖ್ಯ ಶಿಕ್ಷಕ ದೊಡ್ಡಯ್ಯ ಅವರಿಗೆ ಸನ್ಮಾನ
ಮೈಸೂರು

ನಿವೃತ್ತ ಮುಖ್ಯ ಶಿಕ್ಷಕ ದೊಡ್ಡಯ್ಯ ಅವರಿಗೆ ಸನ್ಮಾನ

June 2, 2018

ಮೈಸೂರು: ಮೈಸೂರಿನ ಶ್ರೀ ಸ್ಥಾನಿಕವಾಸಿ ಜೈನ್ ಯುವ ಸಂಘಟನೆಯು ದತ್ತು ತೆಗೆದುಕೊಂಡು ನಡೆಸುತ್ತಿರುವ ಗೀತಾ ಮಂದಿರದ ರಸ್ತೆಯಲ್ಲಿರುವ ಸರ್ಕಾರಿ ಶಾಲೆ ಆವರಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ನಿವೃತ್ತ ಮುಖ್ಯ ಶಿಕ್ಷಕ ದೊಡ್ಡಯ್ಯ ಅವರನ್ನು ಸನ್ಮಾನಿಸಲಾಯಿತು.

ಸಂಘಟನೆ ಅಧ್ಯಕ್ಷ ರಾಜನ್ ಬಾಗ್‍ಮಾರ್ ಸ್ವಾಗತಿಸಿದರು. ದೀಪಕ್ ಬೋಹ್ರಾ ಅವರು ದೊಡ್ಡಯ್ಯ ಅವರ 35 ವರ್ಷಗಳ ಸುದೀರ್ಘ ಶಿಕ್ಷಕ ವೃತ್ತಿಯನ್ನು ಕುರಿತು ಮಾತನಾಡಿದರು. ಯುವ ಸಂಘಟನೆಯ ಪರವಾಗಿ ಉಪಾಧ್ಯಕ್ಷ ಮನೋಹರ್ ಸಂಕ್ಲಾ ಅವರು ಮುಖ್ಯ ಶಿಕ್ಷಕ ದೊಡ್ಡಯ್ಯ ಅವರನ್ನು ಸನ್ಮಾನಿಸಿದರು. ಸನ್ಮಾನ ಸ್ವೀಕರಿಸಿದ ದೊಡ್ಡಯ್ಯ ಅವರು, ಸಂಘಟನೆಯ ಸದಸ್ಯರ ಬೆಂಬಲ ಮತ್ತು ಸಹಕಾರಕ್ಕೆ ಕೃತಜ್ಞತೆ ಸಲ್ಲಿಸಿದರು. ಜಂಟಿ ಕಾರ್ಯದರ್ಶಿ ರಾಜೇಂದ್ರ ದೇಸರಾಲ ಅವರು ಸಂಘಟನೆಯ ಕಾರ್ಯ ಚಟುವಟಿಕೆಗಳನ್ನು ಕುರಿತು ಮಾತನಾಡಿದರು. ಈ ಸಂದರ್ಭದಲ್ಲಿ ಶಾಲಾ ಸಮಿತಿ ಅಧ್ಯಕ್ಷ ಜನಕ್ ನಂಗವಾತ್, ಕಮಲ್ ಕಿಶೋರ್ ಲೋದಾ, ಪ್ರಕಾಶ್ ಗಾಂಧಿ ಮತ್ತಿತರರು ಹಾಜರಿದ್ದರು.

Translate »