ಹದಗೆಟ್ಟ ರಸ್ತೆ ಸರಿಪಡಿಸಲು ಒತ್ತಾಯಿಸಿ ದಸಂಸ ರಸ್ತೆ ತಡೆ
ಮೈಸೂರು

ಹದಗೆಟ್ಟ ರಸ್ತೆ ಸರಿಪಡಿಸಲು ಒತ್ತಾಯಿಸಿ ದಸಂಸ ರಸ್ತೆ ತಡೆ

July 24, 2018

ಹೆಚ್.ಡಿ.ಕೋಟೆ:  ಹದಗೆಟ್ಟಿರುವ ರಸ್ತೆಗಳನ್ನು ಸರಿ ಪಡಿಸು ವಂತೆ ಒತ್ತಾಯಿಸಿ ದಲಿತ ಸಂರ್ಘಷ ಸಮಿತಿ (ಅಂಬೇಡ್ಕರ್ ವಾದ) ಮತ್ತು ಸ್ಥಳೀಯ ಗ್ರಾಮಸ್ಥರ ಸಹಯೋಗದೊಂದಿಗೆ ಸೋಮ ವಾರ ರಸ್ತೆಯಲ್ಲಿ ಶಾಮಿಯಾನ ಹಾಕಿ ಪ್ರತಿಭಟನೆ ಧರಣಿ ನಡೆಸಿದರು.

ತಾಲೂಕಿನ ನಾಗನಹಳ್ಳಿ ಮತ್ತು ಹೆಗ್ಗಡ ಪುರ ನಡುವೆ ಇರುವ ರಸ್ತೆಯಲ್ಲಿ 200ಕ್ಕೂ ಹೆಚ್ಚು ಜನರು ಜಮಾಯಿಸಿ ಮಧ್ಯಾಹ್ನ 12 ಗಂಟೆಯಿಂದ ಸಂಜೆ 5 ಗಂಟೆ ವರೆಗೆ ರಸ್ತೆ ತಡೆ ಮಾಡಿದರು.

ತಾಲೂಕಿನಲ್ಲಿ ರಸ್ತೆಗಳ ಸ್ಥಿತಿ ಅಧೋಗತಿ ಯಲ್ಲಿದ್ದು, ರಸ್ತೆ ನಿರ್ಮಾಣ ಮಾಡುವಂತೆ ಹಲವಾರು ಬಾರಿ ಮುಖ್ಯಮಂತ್ರಿಗಳಿಗೆ, ಸಚಿವರಿಗೆ, ಸಂಸದರಿಗೆ ಹಾಗೂ ಶಾಸಕರಿಗೆ ಮನವಿ ಸಲ್ಲಿಸಿದ್ದರೂ ಸಹ ರಸ್ತೆಗಳಿಗೆ ರಿಪೇರಿ ಭಾಗ್ಯ ಬಂದಿಲ್ಲ. ತಾರಕ ಜಲಾ ಶಯಕ್ಕೆ ಹೋಗುವ ರಸ್ತೆ ತುಂಬಾ ಹದ ಗೆಟ್ಟಿದ್ದು ರಸ್ತೆ ಅಭಿವೃದ್ದಿ ಪಡಿಸುವಂತೆ ಈ ಭಾಗದ ಜನರು ರಸ್ತೆಯಲ್ಲಿ ನಾಟಿ ಹಾಕಿ ಪ್ರತಿಭಟನೆ ನಡೆಸಿ, ರಸ್ತೆ ತಡೆ ನಡೆಸಿ ಚಳುವಳಿ ಮಾಡಿ ಹಲವು ಬಾರಿ ಸರ್ಕಾರಕ್ಕೆ ಮನವಿ ಮಾಡಿದ್ದರೂ ಸಹ ಯಾವುದೇ ಫಲ ಕಂಡಿಲ್ಲ ಎಂದು ಪ್ರತಿಭಟನಾಕಾರರು ಆರೋಪಿಸಿದ್ದಾರೆ. ಈ ಹಿಂದೆ ಶಾಸಕರಾ ಗಿದ್ದ ದಿವಂಗತ ಎಸ್.ಚಿಕ್ಕಮಾದು ಹಾಗೂ ಸಂಸದ ಆರ್.ಧೃವನಾರಯಣ್ ಸರ್ಕಾರದಿಂದ 10 ಕಿ.ಮೀ ರಸ್ತೆಗೆ 10.5 ಕೋಟಿ ಹಣ ಬಿಡುಗಡೆಯಾಗಿದೆ ಎಂದು ತಾರಕ ರಸ್ತೆಗೆ ಗುದ್ದಲಿ ಪೂಜೆ ಮಾಡಿದ್ದರು. ಗುದ್ದಲಿ ಪೂಜೆ ಮಾಡಿ ಒಂದು ವರ್ಷ ಕಳೆದರೂ ಕಾಮಗಾರಿ ಮಾತ್ರ ಪ್ರಾರಂಭ ವಾಗಿಲ್ಲ ಎಂದು ಆರೋಪಿಸಿದರು.

ಲೋಕೋಪಯೋಗಿ ಇಲಾಖೆ ಮತ್ತು ನೀರಾವರಿ ಇಲಾಖೆಗಳು ಒಬ್ಬೊರಿಗೊಬ್ಬರು ಎಚ್.ಡಿ.ಕೋಟೆ ತಾರಕ ರಸ್ತೆಯು ನಮ್ಮ ವ್ಯಾಪ್ತಿಗೆ ಬರುವುದಿಲ್ಲವೆಂದು ಜನರ ಜೊತೆ ಚಲ್ಲಾಟ ಆಡುತ್ತಿದ್ದಾರೆ. ಎಂದು ಆರೋಪಿಸಿದ ಪ್ರತಿಭಟನಕಾರರು,
ಎಂ.ಎಂ.ರಸ್ತೆಯಿಂದ ಕಬಿನಿ ಮುಖಾಂತರ ಗಂಡತ್ತೂರುವರೆಗೆ ಹೋಗುವ ರಸ್ತೆ, ಸತ್ತಿಗೆ ಹುಂಡಿ ರಸ್ತೆ, ತಾರಕ ರಸ್ತೆಯಿಂದ ಕಟ್ಟೆ ಮನುಗನಹಳ್ಳಿಗೆ ಹೋಗುವ ರಸ್ತೆ, ಮೊತ್ತ ರಸ್ತೆ, ಹರಳಹಳ್ಳಿಯಿಂದ ಚನ್ನಗುಂಡಿ ಹಾಡಿಯವರೆಗಿನ ರಸ್ತೆ, ಮುತ್ತಿಗೆಹುಂಡಿ ಸರ್ಕಲ್‍ನಿಂದ ಚಿಕ್ಕಬರಗಿಯವರೆಗಿನ ರಸ್ತೆ, ಭೋಗೇಶ್ವರ ಕಾಲೋನಿಯಿಂದ ಚಿಕ್ಕಕೆರೆಯೂರು ರಸ್ತೆ, ಕಬಿನಿಗೆ ಹಾದು ಹೋಗುವ ಗಣೇಶನ ಗುಡಿಯಿಂದ ಮಾಗುಡಿಲುವರೆಗಿನ ರಸ್ತೆ, ಎಂ.ಕನ್ನೇನ ಹಳ್ಳಿಯಿಂದ ಎಂ.ಮಲ್ಲಹಳ್ಳಿ ರಸ್ತೆ ಹಾಗೂ ಕಸಬಾ ಹೋಬಳಿ ಇಂದಿರಾನಗರ ಗ್ರಾಮ ರಸ್ತೆಗಳನ್ನು ಅಭಿವೃದ್ದಿ ಪಡಿಸಬೇಕು ಎಂಬ ಒತ್ತಾಯಿಸಿದರು.

ಸ್ಥಳಕ್ಕೆ ಗ್ರೇಡ್ 2 ತಹಸೀಲ್ದಾರ್ ಆನಂದ ಮತ್ತು ತಾರಕ ನೀರವರಿ ಇಲಾಖೆಯ ಎಇಇ ನಾಗರಾಜು ಆಗಮಿಸಿ ಎಚ್.ಡಿ.ಕೋಟೆ ಮತ್ತು ತಾರಕ ರಸ್ತೆಯ ಕಾಮಗಾರಿಯನ್ನು ಸರ್ಕಾರದ ನಿರ್ದೇಶನದ ಮೇಲೆ ಕೈಗೊಳ್ಳ ಲಾಗುವುದು ಎಂದು ಹೇಳಿ ಪ್ರತಿಭಟನೆ ಕೈ ಬಿಡುವಂತೆ ಮನವೊಲಿಸಲು ಮುಂದಾದರು. ಆದರೆ ಪ್ರತಿಭಟನಕಾರರು ಸಮಸ್ಯೆ ಬಗೆಹರಿ ಸುವ ಭರವಸೆ ನೀಡುವವರೆಗೆ ಸ್ಥಳದಿಂದ ಕದಲುವುದಿಲ್ಲ ಎಂದು ಪ್ರತಿ ಭಟನೆಯನ್ನು 2ನೇ ದಿನಕ್ಕೆ ಮುಂದು ವರೆಸಿದರು.

ಪ್ರತಿಭಟನೆಯಲ್ಲಿ ದಸಂಸ ಜಿಲ್ಲಾ ಸಂಘಟನಾ ಸಂಚಾಲಕ ದೊಡ್ಡಸಿದ್ದು ಹಾದನೂರು, ತಾಲೂಕು ಸಂಚಾಲಕ ಚಾ. ಶಿವಕುಮಾರ್, ಕಲಾ ಮಂಡಳಿ ಸಂಚಾಲಕ ಸಣ್ಣಕುಮಾರ್, ಪಟ್ಟಣ ಸಂಚಾಲಕ ಸೋಮಣ್ಣ (ಚನ್ನ), ಸಂಘಟನ ಸಂಚಾಲಕ ರಾದ ಆನಂದ, ಮಹದೇವಸ್ವಾಮಿ, ಹೆಗ್ಗಡ ಪುರ ಸುರೇಶ್, ನಾಗನಹಳ್ಳಿ ಗ್ರಾಮದ ಅಲ್ಪಾನ್ಸ್, ಬಾಲರಾಜ್, ಪೇದರೂರು, ಡ್ಯಾನಿ, ಉಪಕಾರಿ, ಅಂಕನಾಥಪುರ ಭಾಸ್ಕರ್, ಕರಿಗೌಡ ಹೆಗ್ಗಡಪುರ, ಹಿರೆಹಳ್ಳಿ ನಜುಂಡ ರಾಜ್, ದಯಾನಂದ, ಪುಟ್ಟಸ್ವಾಮಿ, ಹೆಗ್ಗಡಪುರ ರವಿ, ಶಿವಶಂಕರ್, ವಾಹನ ಚಾಲಕರ ಸಂಘದ ರವಿ, ರಷೀದ್, ಮಂಜು ಇದ್ದರು.

Translate »