ಬದನಗುಪ್ಪೆ- ಕೆಲ್ಲಂಬಳ್ಳಿ ಕೈಗಾರಿಕಾ ಪ್ರದೇಶಕ್ಕೆ ಸಚಿವ ಕೆ.ಜೆ. ಜಾರ್ಜ್ ಭೇಟಿ
ಚಾಮರಾಜನಗರ

ಬದನಗುಪ್ಪೆ- ಕೆಲ್ಲಂಬಳ್ಳಿ ಕೈಗಾರಿಕಾ ಪ್ರದೇಶಕ್ಕೆ ಸಚಿವ ಕೆ.ಜೆ. ಜಾರ್ಜ್ ಭೇಟಿ

July 24, 2018
  • ಕೈಗಾರಿಕಾ ಘಟಕ ಸ್ಥಾಪನೆಗೆ ಉದ್ಯಮಿಗಳ ಆಕರ್ಷಿಸಿ
  • ಫುಡ್ ಪಾರ್ಕ್, ಅರಿಶಿಣ ಸಂಸ್ಕರಣಾ ಘಟಕ ಸ್ಥಾಪಿಸಲು ಸಲಹೆ
  • ನೀರು, ವಿದ್ಯುತ್ ಪೂರೈಸುವ ಶಾಶ್ವತ ಯೋಜನೆ ಪೂರ್ಣಗೊಳಿಸಲು ಸೂಚನೆ

ಚಾಮರಾಜನಗರ: ‘ತಾಲೂಕಿನ ಬದನಗುಪ್ಪೆ-ಕೆಲ್ಲಂಬಳ್ಳಿ ಗ್ರಾಮದಲ್ಲಿ ಅಭಿವೃದ್ಧಿಪಡಿಸಿರುವ ಕೈಗಾರಿಕಾ ಪ್ರದೇಶ ದಲ್ಲಿ ಕೈಗಾರಿಕಾ ಘಟಕಗಳ ಸ್ಥಾಪನೆಗಾಗಿ ಉದ್ಯಮಿಗಳನ್ನು ಆಕರ್ಷಿಸಲು ಅಧಿಕಾರಿ ಗಳ ಅಗತ್ಯ ಪ್ರಕ್ರಿಯೆ ಕೈಗೊಳ್ಳಬೇಕು’ ಎಂದು ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವ ಕೆ.ಜೆ.ಜಾರ್ಜ್ ಸೂಚನೆ ನೀಡಿದರು.

ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಸೋಮವಾರ ಜಿಲ್ಲೆಯ ಕೈಗಾರಿಕಾ ಪ್ರದೇಶ ಹಾಗೂ ಇತರೆ ಉದ್ಯಮ ಘಟಕಗಳಿಗೆ ಸಂಬಂಧಿಸಿದ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತ ನಾಡಿದರು. ಬದನಗುಪ್ಪೆ – ಕೆಲ್ಲಂಬಳ್ಳಿ ಕೈಗಾರಿಕಾ ಪ್ರದೇಶದಲ್ಲಿ ಮೂಲ ಸೌಕರ್ಯ ಅಭಿವೃದ್ಧಿಪಡಿಸಲಾಗಿದೆ. ಸದ್ಯಕ್ಕೆ ಉದ್ಯಮಗಳು ಆರಂಭವಾಗಲು ಅಗತ್ಯವಿರುವ ನೀರು, ವಿದ್ಯುತ್ ನೀಡಲು ಸಹ ತಾತ್ಕಾಲಿಕವಾಗಿ ವ್ಯವಸ್ಥೆ ಇದೆ. ಉದ್ಯಮಿಗಳು ಕೈಗಾರಿಕಾ ಘಟಕಗಳನ್ನು ಸ್ಥಾಪಿಸಲು ಮುಂದೆ ಬರು ವಂತೆ ಉತ್ತೇಜಿಸಲು ಅಧಿಕಾರಿಗಳು ಕೂಡ ಇಲಾಖಾ ಮಟ್ಟದಲ್ಲಿ ಶ್ರಮವಹಿಸಿ ಕಾರ್ಯ ನಿರ್ವಹಿಸಬೇಕು ಎಂದು ತಿಳಿಸಿದರು.

ಉದ್ಯಮ ಆರಂಭ ಬಯಸಿ ಬರುವವರಿಗೆ ಕೈಗಾರಿಕಾ ಪ್ರದೇಶದಲ್ಲಿ ಲಭ್ಯವಿರುವ ಸೌಕರ್ಯಗಳ ಬಗ್ಗೆ ಮನವರಿಕೆ ಮಾಡಿ ಕೊಡಬೇಕು. ಉದ್ಯಮ ಸ್ಥಾಪನೆಗೆ ಪರಿಸರ ಇಲಾಖೆ ಇತರೆ ಅಗತ್ಯ ಅನುಮತಿ ಪ್ರಕ್ರಿಯೆ ಯನ್ನು ಕೈಗೊಂಡ ಕೂಡಲೇ ಕ್ರಮ ವಹಿಸ ಬೇಕು. ಸ್ಥಳೀಯ ಹಂತದಲ್ಲಿ ಯಾವುದೇ ಸಮಸ್ಯೆಗಳಿದ್ದರೂ ಪರಿಹರಿಸಬೇಕು. ಉನ್ನತ ಮಟ್ಟದಲ್ಲಿ ಪರಿಹಾರ ಸಾಧ್ಯವಾಗಲಿದೆ ಎಂಬುದು ಕಂಡುಬಂದರೆ ಕೂಡಲೇ ಗಮನಕ್ಕೆ ತರಬೇಕು. ಸರ್ಕಾರದ ಮಟ್ಟದಲ್ಲಿ ಸೂಕ್ತ ನೀತಿ ರೂಪಿಸಿ ನಿಯಮಾನುಸಾರ ಉದ್ಯಮ ದಾರರಿಗೆ ಕೈಗಾರಿಕಾ ಘಟಕ ಆರಂಭಿಸಲು ನೆರವು ನೀಡಲಾಗುತ್ತದೆ ಎಂದರು.

ಕಬಿನಿ ನದಿಯಿಂದ ಕೈಗಾರಿಕಾ ಪ್ರದೇಶಕ್ಕೆ ಶಾಶ್ವತವಾಗಿ ನೀರು ಒದಗಿಸುವ ಯೋಜನೆ ಕಾರ್ಯವನ್ನು ಪರಿಶೀಲಿಸಲಾಗಿದೆ. ನಂಜನಗೂಡು ಬಳಿ ಜಾಕ್‍ವೆಲ್ ನಿರ್ಮಾಣಕ್ಕೆ ಅಗತ್ಯವಾದ ಭೂಮಿ ಮಾಲೀಕರಿಗೆ ಪರಿ ಹಾರ ನೀಡಲು ಮುಂದಿನ ಮಂಡಳಿ ಸಭೆಯಲ್ಲಿ ನಿರ್ಧಾರ ಕೈಗೊಳ್ಳಲಾಗುತ್ತದೆ. ರಾಷ್ಟ್ರೀಯ ಹೆದ್ದಾರಿಯಲ್ಲಿ ಹಾದುಹೋಗ ಲಿರುವ ಪೈಪ್‍ಲೈನ್ ಕಾಮಗಾರಿಗೂ ಪರಿಹಾರ ಸೂಚಿಸಲಾಗಿದೆ. ವಿಳಂಬ ಮಾಡದೆ ನೀರು ಹಾಗೂ ವಿದ್ಯುತ್ ಅನ್ನು ಶಾಶ್ವತವಾಗಿ ಪೂರೈಸುವ ಯೋಜನೆ ಪೂರ್ಣಗೊಳಿಸಬೇಕೆಂದು ನಿರ್ದೇಶನ ನೀಡಿದರು.

ಜಿಲ್ಲೆಯಲ್ಲಿ ಗ್ರಾನೈಟ್ ಉದ್ಯಮವು ಪ್ರಮುಖವಾಗಿದೆ. ಹೀಗಾಗಿ, ಗ್ರಾನೈಟ್ ಸಂಬಂಧಿತ ಕೈಗಾರಿಕಾ ಘಟಕಗಳನ್ನು ದೊಡ್ಡ ಪ್ರಮಾಣದಲ್ಲಿ ಆರಂಭಿಸಲು ಅವಕಾಶ ವಿದೆ. ಜೊತೆಗೆ, ಫುಡ್‍ಪಾರ್ಕ್ ಸ್ಥಾಪನೆ ಯಿಂದಲೂ ಹೆಚ್ಚಿನ ಉದ್ಯಮಿಗಳನ್ನು ಆಕರ್ಷಿಸಬಹುದು. ಅಲ್ಲದೆ ಅರಿಶಿನ ಬೆಳೆಯೂ ಸಹ ಜಿಲ್ಲೆಯಲ್ಲಿ ಪ್ರಮುಖ ವಾಗಿ ಇರುವುದರಿಂದ ಸಂಸ್ಕರಣೆಯಂತಹ ಘಟಕಗಳನ್ನು ಆಧುನಿಕ ತಂತ್ರಜ್ಞಾನ ಬಳಸಿ ಕೊಂಡು ಕೈಗಾರಿಕಾ ಪ್ರದೇಶದಲ್ಲಿಯೇ ಸ್ಥಾಪಿಸಬಹುದು. ಈ ಎಲ್ಲ ಅವಶ್ಯಕತೆಗಳಿಗೆ ಪೂರಕವಾಗಿ ಸ್ಥಳೀಯವಾಗಿ ಜನಪ್ರತಿನಿಧಿ ಗಳು ಹಾಗೂ ಅಧಿಕಾರಿಗಳ ಸಮ್ಮುಖದಲ್ಲಿ ಪ್ರತ್ಯೇಕ ಸಭೆ ನಡೆಸಬೇಕು. ಕೈಗಾರಿಕಾ ಘಟಕ ಗಳಿಗೆ ಯಾವ ಬಗೆಯ ಸೌಕರ್ಯಗಳು ನೆರವು ಬೇಕಿದೆ ಎಂಬುದನ್ನು ಗಮನಕ್ಕೆ ತಂದಲ್ಲಿ ಉನ್ನತ ಹಂತದಲ್ಲಿ ಮಂಜೂರಾತಿಗೆ ಕ್ರಮ ತೆಗೆದುಕೊಳ್ಳಲಾಗುತ್ತದೆ ಎಂದರು.

ಆರಂಭದಲ್ಲಿ ಒಂದಷ್ಟು ಕೈಗಾರಿಕೆ ಉದ್ಯಮಿಗಳನ್ನು ಆರಂಭಿಸಿ ಪೂರಕ ಸೌಲಭ್ಯಗಳನ್ನು ಸಮರ್ಪಕವಾಗಿ ಒದಗಿಸುವ ಕಾರ್ಯ ನಡೆದರೆ ಇನ್ನಷ್ಟು ಉದ್ಯಮಿಗಳು ಕೈಗಾರಿಕಾ ಘಟಕಗಳ ಸ್ಥಾಪನೆಗೆ ಮುಂದೆ ಬರಲಿದ್ದಾರೆ. ಹೀಗಾಗಿ, ಪ್ರತಿ ಇಲಾಖೆ ಗಳು ಮುತುವರ್ಜಿಯಿಂದ ಕೆಲಸ ಮಾಡ ಬೇಕು. ಕೈಗಾರಿಕಾ ಪ್ರದೇಶ ಸದುಪ ಯೋಗವಾಗಬೇಕು. ಇದರಿಂದ ಉದ್ಯೋಗ ಅವಕಾಶಗಳು ಹೆಚ್ಚಲಿವೆ. ಜಿಲ್ಲೆಯ ಅಭಿ ವೃದ್ಧಿಯೂ ಸಹಾಯಕವಾಗಲಿದೆ. ಒಟ್ಟಾರೆ ಕೈಗಾರಿಕಾ ಪ್ರದೇಶ ಪ್ರಗತಿಗೆ ತಾವು ಸಂಪೂರ್ಣ ಬದ್ಧರಾಗಿದ್ದು ಎಲ್ಲಾ ಹಂತದಲ್ಲೂ ನೆರವು ನೀಡಲು ಸಿದ್ಧರಿದ್ದೇವೆ ಎಂದು ತಿಳಿಸಿದರು.

ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಸಚಿವ ಸಿ.ಪುಟ್ಟರಂಗಶೆಟ್ಟಿ ಮಾತನಾಡಿ, ಕೈಗಾರಿಕಾ ಪ್ರದೇಶದಲ್ಲಿ ತಾತ್ಕಾಲಿಕವಾಗಿ ವಿದ್ಯುತ್, ನೀರು ಪೂರೈಸಲು ಯಾವುದೇ ತೊಂದರೆಯಿಲ್ಲ. ಶಾಶ್ವತವಾಗಿ ಯೋಜನೆಗಳು ಪೂರ್ಣವಾಗಬೇಕಿದೆ. ಉದ್ಯೋಗ ಅವ ಕಾಶ ಹಾಗೂ ಅಭಿವೃದ್ಧಿಯ ನಿರೀಕ್ಷೆಯಿಂದ ಆರಂಭಿಸಲಾದ ಕೈಗಾರಿಕಾ ಪ್ರದೇಶಕ್ಕೆ ಎಲ್ಲ ಬಗೆಯ ಮೂಲ ಸೌಕರ್ಯಗಳು ಲಭಿಸಿ ಕೈಗಾರಿಕಾ ಘಟಕಗಳು ಪ್ರಾರಂಭ ವಾಗಬೇಕಿದೆ ಎಂದರು.

ಸಭೆಯಲ್ಲಿ ಶಾಸಕರಾದ ಆರ್.ನರೇಂದ್ರ, ಆರ್.ಧರ್ಮಸೇನ, ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ಶಿವಮ್ಮ ಕೃಷ್ಣ, ನಗರಸಭೆ ಅಧ್ಯಕ್ಷೆ  ಶೋಭ ಪುಟ್ಟಸ್ವಾಮಿ, ಕೈಗಾರಿಕೆ ಮತ್ತು ವಾಣಿಜ್ಯ ಸಂಘದ ರಾಜ್ಯ ಅಧ್ಯಕ್ಷ ಶಿವ ಕುಮಾರ್, ಕರ್ನಾಟಕ ಕೈಗಾರಿಕಾ ಪ್ರದೇಶ ಅಭಿವೃದ್ಧಿ ಮಂಡಳಿಯ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಜಯರಾಮ್, ಜಿಲ್ಲಾಧಿಕಾರಿ ಬಿ.ಬಿ.ಕಾವೇರಿ, ಜಿಪಂ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ.ಕೆ.ಹರೀಶ್‍ಕುಮಾರ್, ಹೆಚ್ಚುವರಿ ಜಿಲ್ಲಾಧಿಕಾರಿ ಕೆ.ಎಂ.ಗಾಯತ್ರಿ, ಜಿಲ್ಲಾ ಕೈಗಾರಿಕಾ ಕೇಂದ್ರದ ಜಂಟಿ ನಿರ್ದೇಶಕ ಎಂ.ಎನ್.ಮರುಳೇಶ್ ಹಾಜರಿದ್ದರು.

ಸಭೆಗೂ ಮೊದಲು ಸಚಿವರು ಬದನ ಗುಪ್ಪೆ-ಕೆಲ್ಲಂಬಳ್ಳಿ ಕೈಗಾರಿಕಾ ಪ್ರದೇಶ, ನಂಜನಗೂಡಿನಲ್ಲಿ ನಿರ್ಮಾಣ ಹಂತದಲ್ಲಿ ರುವ ಕಬಿನಿ ನದಿಯಿಂದ ನೀರು ಪೂರೈಸುವ ಜಾಕ್‍ವೆಲ್ ಪ್ರದೇಶಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.

ಜಿಲ್ಲೆಯ ಉದ್ಯಮಿಗಳೊಂದಿಗೂ ಸಭೆ ನಡೆಸಿದ ಸಚಿವರು ಕೈಗಾರಿಕಾ ಬೆಳ ವಣಿಗೆ ಸಂಬಂಧ ವಿಸ್ತೃತವಾಗಿ ಸಮಾಲೋಚಿಸಿದರು.

ಕೈಗಾರಿಕಾ ಉದ್ಯಮಗಳ ಕುರಿತು ಅಹವಾಲುಗಳನ್ನು ಆಲಿಸಿ ಅಗತ್ಯ ಪರಿಹಾರಕ್ಕೆ ನೀಡಲು ಕ್ರಮವಹಿಸಲಾಗುವುದು ಎಂದು ಭರವಸೆ ನೀಡಿದರು.

ಕೈಗಾರಿಕಾ ಪ್ರದೇಶದ ಪರಿಶೀಲನೆ 6 ನಿಮಿಷಕ್ಕೇ ಸೀಮಿತ

ತಾಲೂಕಿನ ಬದನಗುಪ್ಪೆ-ಕೆಲ್ಲಂಬಳ್ಳಿ ಕೈಗಾರಿಕಾ ಪ್ರದೇಶಕ್ಕೆ ಸೋಮವಾರ ಭೇಟಿ ನೀಡಿದ್ದ ಬೃಹತ್ ಹಾಗೂ ಮಧ್ಯಮ ಕೈಗಾರಿಕಾ ಸಚಿವ ಕೆ.ಜೆ. ಜಾರ್ಜ್ ಅವರ ಪರಿಶೀಲನೆ ಕೇವಲ 6 ನಿಮಿಷಕ್ಕೇ ಮುಕ್ತಾಯವಾಯಿತು.

ಬೆಳಿಗ್ಗೆ 11.05ಕ್ಕೆ ಕೈಗಾರಿಕಾ ಪ್ರದೇಶದ ಮುಖ್ಯದ್ವಾರಕ್ಕೆ ಆಗಮಿಸಿದ ಸಚಿವರನ್ನು ಸಚಿವ ಸಿ.ಪುಟ್ಟರಂಗಶೆಟ್ಟಿ, ಶಾಸಕ ಆರ್.ನರೇಂದ್ರ, ಜಿಪಂ ಅಧ್ಯಕ್ಷೆ ಶಿವಮ್ಮ, ಜಿಲ್ಲಾಧಿಕಾರಿ ಬಿ.ಬಿ.ಕಾವೇರಿ, ಜಿಪಂ ಸಿಇಓ ಡಾ.ಕೆ.ಹರೀಶ್‍ಕುಮಾರ್ ಸೇರಿ ದಂತೆ ಇತರರು ಹೂಗುಚ್ಛ ನೀಡಿ ಸ್ವಾಗತಿ ಸಿದರು. ನಂತರ ಸ್ಥಳದಲ್ಲಿ ಇದ್ದ ಕೆಲ ರೈತರು ತಮಗೆ ಇನ್ನೂ ಪರಿಹಾರದ ಹಣ ಬಂದಿಲ್ಲ ಎಂದು ಸಚಿವರಿಗೆ ಮನವಿ ಪತ್ರ ಸಲ್ಲಿಸಿದರು. ತದನಂತರ ಸಚಿವ ಕೆ.ಜೆ.ಜಾರ್ಜ್ ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳೊಂದಿಗೆ ಸ್ವಲ್ವ ದೂರ ನಡೆ ದರು. ಬಳಿಕ, ಅವರಿಗೆ ಏನೂ ಅನ್ನಿಸಿತೋ ಅಥವಾ ಏನು ತೋಚಿತೋ ತಿಳಿಯದು, ಕಾರನ್ನು ಹತ್ತಿ ನಗರಕ್ಕೆ ತೆರಳಿದರು. ಕೈಗಾರಿಕಾ ಪ್ರದೇಶದಲ್ಲಿ ಕೆ.ಜೆ. ಜಾರ್ಜ್ ಕೇವಲ ಆರೇಳು ನಿಮಿಷ ಮಾತ್ರ ಇದ್ದರು.

ಕೈಗಾರಿಕಾ ಪ್ರದೇಶಕ್ಕೆ ಭೇಟಿ ನೀಡಿದ್ದ ಕೆ.ಜೆ.ಜಾರ್ಜ್ ಭೇಟಿ ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳಿಂದ ಹೂಗುಚ್ಚ ಸ್ವೀಕರಿಸುವುದಕ್ಕಷ್ಟೇ ಸೀಮಿತವಾಯಿತಾ. ಇಷ್ಟಕ್ಕೆ ಏಕೆ ಬರಬೇಕಿತ್ತು? ಎಂಬ ಮಾತು ಗಳು ಸ್ಥಳದಲ್ಲಿದ್ದವರಿಂದ ಕೇಳಿಬಂತು.

ಈ ಬಗ್ಗೆ ಸುದ್ದಿಗೋಷ್ಠಿಯಲ್ಲಿ ಪ್ರಶ್ನೆ ವೊಂದಕ್ಕೆ ಉತ್ತರಿಸಿದ ಸಚಿವ ಜಾರ್ಜ್ ಕಾಟಾಚಾರಕ್ಕೆ ಇಲ್ಲಿಗೆ ಬರುವ ಆಗಿದ್ದರೆ ನಾನು ಇಲ್ಲಿಗೆ ಬರುತ್ತಲೇ ಇರಲಿಲ್ಲ. ಕಾಟಾಚಾರ ಎಂಬ ಪದ ನನ್ನ ಡಿಕ್ಷನರಿಯಲ್ಲಿಯೇ ಇಲ್ಲ ಎಂದರು. ಕೈಗಾರಿಕಾ ಪ್ರದೇಶದಲ್ಲಿ ಕುಡಿಯುವ ನೀರು ಹಾಗೂ ವಿದ್ಯುತ್ ಪೂರೈಸುವ ಕಾಮಗಾರಿ ಪ್ರಗತಿಯಲ್ಲಿ ಇರುವುದು ತಿಳಿಯಿತು. ಇಷ್ಟಾದ ಮೇಲೂ ಪರಿಶೀಲಿಸಿದರೆ ಏನೂ ಪ್ರಯೋಜನ ಎಂದು ತಿಳಿದು ಅಧಿಕಾರಿ ಸಭೆ ನಡೆಸಲು ಬಂದೆ. ನಾನು ಆ ಪ್ರದೇಶವನ್ನು ನೋಡಿದರೆ ಅಭಿವೃದ್ಧಿ ಆಗುತ್ತದೆ ಎಂದು ನೀವು ಭಾವಿಸಿದರೆ ನಾನು ಆ ಪ್ರದೇಶದಲ್ಲಿ ಮೂರು ಗಂಟೆಗಳ ಕಾಲ ಪರಿಶೀಲಿಸಲು ಸಿದ್ಧನಿದ್ದೇನೆ ಎಂದರು.

Translate »