ರೋಟರಿ ಕನ್ನಡ ರಾಜ್ಯೋತ್ಸವ ಪ್ರಶಸ್ತಿ ಪ್ರದಾನ
ಮೈಸೂರು

ರೋಟರಿ ಕನ್ನಡ ರಾಜ್ಯೋತ್ಸವ ಪ್ರಶಸ್ತಿ ಪ್ರದಾನ

November 10, 2018

ಮೈಸೂರು: ರೋಟರಿ ಮೈಸೂರು ಉತ್ತರದ ವತಿಯಿಂದ `ರೋಟರಿ ಕನ್ನಡ ರಾಜ್ಯೋತ್ಸವ ಪ್ರಶಸ್ತಿ’ಯನ್ನು ಮೂವರು ಕನ್ನಡ ಪರ ಹೋರಾಟ ಗಾರರಿಗೆ ನೀಡಿ, ಗೌರವಿಸಲಾಯಿತು.

ಜೆಎಲ್‍ಬಿ ರಸ್ತೆಯ ಐಡಿಯಲ್ ಜಾವಾ ರೋಟರಿ ಸಭಾಂಗಣದಲ್ಲಿ ರೋಟರಿ ಮೈಸೂರು ಉತ್ತರದ ವತಿ ಯಿಂದ ನಡೆದ ಕನ್ನಡ ರಾಜ್ಯೋತ್ಸವ ಅಂಗವಾಗಿ ಕನ್ನಡ ಪರ ಹೋರಾಟಗಾರರಾದ ಕಸಾಪ ಮಾಜಿ ಅಧ್ಯಕ್ಷ ಎಂ. ಚಂದ್ರಶೇಖರ್, ಮೂಗೂರು ನಂಜುಂಡಸ್ವಾಮಿ, ಮೈಸೂರು ನಗರ ಸಾರಿಗೆ ಘಟಕದ ನಿರ್ವಾಹಕ ಕೆ.ಎಸ್. ತ್ಯಾಗ ರಾವ್ ಅವರಿಗೆ ಈ ಸಾಲಿನ `ರೋಟರಿ ಕನ್ನಡ ರಾಜ್ಯೋ ತ್ಸವ ಪ್ರಶಸ್ತಿಯನ್ನು ನೀಡಿ, ಶುಕ್ರವಾರ ಗೌರವಿಸಲಾಯಿತು.

ನಂತರ ಸನ್ಮಾನಿತರ ಪರವಾಗಿ ಮಾತನಾಡಿದ ಎಂ.ಚಂದ್ರ ಶೇಖರ್, ಕರ್ನಾಟಕ ರಾಜಧಾನಿ ಬೆಂಗಳೂರಿನಲ್ಲಿ ಅನ್ಯ ಭಾಷಿಕರು ಶೇ.70ರಷ್ಟು ಮಂದಿ ನೆಲೆ ಕಂಡುಕೊಂಡಿ ದ್ದಾರೆ. ಇದರಿಂದ ಕನ್ನಡಿಗರ ಸಂಖ್ಯೆ ಕುಸಿದಿದೆ. ಅಲ್ಲದೆ, ರಾಜ್ಯದ ಇತರೆ ಗ್ರಾಮೀಣ ಪ್ರದೇಶದಲ್ಲೂ ಆಂಗ್ಲ ಮಾಧ್ಯಮ ಶಾಲೆಗಳು ಗಟ್ಟಿಗೊಳ್ಳುತ್ತಿರುವುದರಿಂದ ಕನ್ನಡದ ವಿದ್ಯಾರ್ಥಿ ಗಳೂ ಇದರತ್ತ ವಾಲುತ್ತಿದ್ದಾರೆ. ಇದರಿಂದ ನಗರ ಮತ್ತು ಗ್ರಾಮೀಣ ಪ್ರದೇಶದಲ್ಲೂ ಕನ್ನಡ ಭಾಷೆಗೆ ಕುತ್ತು ಬಂದಿದೆ ಎಂದು ವಿಷಾದಿಸಿದರು. ವೇದಿಕೆಯಲ್ಲಿ ರೋಟರಿ ಮೈಸೂರು ಉತ್ತರ ಅಧ್ಯಕ್ಷ ರೊ.ಎಂ.ಕೆ.ನಂಜಯ್ಯ, ಕಾರ್ಯದರ್ಶಿ ರೊ.ಎಸ್.ಎಚ್.ಜಗದೀಶ್, ರೊ. ವಿರೂಪಾಕ್ಷ, ಕಸಾಪ ಮಾಜಿ ಅಧ್ಯಕ್ಷ ಮಡ್ಡಿಕೆರೆ ಗೋಪಾಲ್, ರೊ.ಎಂ.ರಾಜು, ರೊ.ರಾಜಶೇಖರ್ ಕದಂಬ, ರೊ.ಲೋಕನಾಥ್, ರೊ. ಯಶವಂತ್ ಉಪಸ್ಥಿತರಿದ್ದರು.

Translate »