ಗಿಡ ನೆಟ್ಟು ಪೋಷಿಸಲು ರೈತರಿಗೆ 100 ರೂ.
ಹಾಸನ

ಗಿಡ ನೆಟ್ಟು ಪೋಷಿಸಲು ರೈತರಿಗೆ 100 ರೂ.

July 15, 2019

* ಶಾಲಾ-ಕಾಲೇಜು, ಸ್ವಂತ ಜಮೀನು, ನಾಲೆಗಳ ಎರಡೂ ಬದಿ ಗಿಡ ನೆಡಿ
* ರೈತರು ತಮ್ಮ ಜಮೀನಿನ ಪಕ್ಕದ ಸರ್ಕಾರಿ ಜಾಗದಲ್ಲಿಯೂ ಗಿಡ ನೆಡಲಿ
* ಕೋಟವಾಳು ಶಾಲೆಯಲ್ಲಿ ಗಿಡ ನೆಟ್ಟ ಶಾಸಕ ಎ.ಟಿ.ರಾಮಸ್ವಾಮಿ ಕರೆ
ರಾಮನಾಥಪುರ, ಜು.14- ಶಾಲಾ-ಕಾಲೇಜು, ಸ್ವಂತ ಜಮೀನು ಮತ್ತು ನಾಲೆಗಳ ಎರಡೂ ಬದಿಯ ಅಕ್ಕ ಪಕ್ಕ ಭೂಮಿ ಹೊಂದಿರುವ ರೈತರು ಅಲ್ಲಿನ ಸರ್ಕಾರಿ ಜಾಗದಲ್ಲಿ ಗಿಡ ನೆಟ್ಟು ಪೆÇೀಷಿಸ ಬೇಕು ಎಂದು ಶಾಸಕ ಎ.ಟಿ.ರಾಮಸ್ವಾಮಿ ಕರೆ ನೀಡಿದರು.

ರಾಮನಾಥಪುರ ಗ್ರಾಪಂ ವ್ಯಾಪ್ತಿಯ ಕೋಟವಾಳು ವಿದ್ಯಾನಿಕೇತನ ಶಾಲೆ ಅವರಣದಲ್ಲಿ ವಿವಿಧ ರೀತಿಯ ಸಸಿಗಳನ್ನು ನೆಟ್ಟು ಪರಿಸರ ಉಳಿಸುವ ನಿಟ್ಟಿನಲ್ಲಿ ಶಾಲೆ ಬಳಿ ಗಿಡ ನೆಡುವ ಕಾರ್ಯಕ್ಕೆ ಚಾಲನೆ ನೀಡಿದ ಅವರು, ತಾಲೂಕಿನಲ್ಲಿ ಅರಣ್ಯ ಉಳಿಸುವ ನಿಟ್ಟಿನಲ್ಲಿ ಗಿಡ ನೆಡುವ ಕಾರ್ಯ ಕ್ರಮವನ್ನು ಅರಣ್ಯ ಇಲಾಖೆ ಜತೆಗೂಡಿ ವಿಶೇಷ ಯೋಜನೆ ರೂಪಿಸಲಾಗಿದೆ. ಹಾರಂಗಿ ಎಡದಂಡೆ ನಾಲೆ 59 ಕಿ.ಮೀ. ಉದ್ದವಿದೆ. ಅದರ ಎರಡೂ ಬದಿಯಲ್ಲಿ ಅರಣ್ಯ ಇಲಾಖೆಯವರೇ ಗಿಡ ನೆಡುತ್ತಾರೆ. ನೀರಾವರಿ ಇಲಾಖೆಯವರೂ ಸಹಕಾರ ನೀಡುತ್ತಾರೆ. ಈ ಗಿಡಗಳ ಪೆÇೀಷಣೆಗಾಗಿ ಪಕ್ಕದ ಜಮೀನಿನ ರೈತರಿಗೆ 100 ರೂ. ನೀಡಲಾಗುತ್ತಿದೆ. ರೈತರು ಬಯಸುವಂತೆಯೇ ಮಾವು, ಹಲಸು, ನೇರಲೆ, ತೇಗ, ಸಿಲ್ವರ್, ಕೂಳಿ ಮೊದಲಾದ ಪ್ರಯೋಜನಕಾರಿ ಗಿಡ ಗಳನ್ನು ರೈತರಿಗೂ ನೀಡಲಾಗಿದೆ ಎಂದರು.

ಗ್ರಾಪಂ ಅಧ್ಯಕ್ಷ ಕಾಳೇಗೌಡ, ಸದಸ್ಯ ದಿವಾಕರ್, ಮಾಜಿ ಉಪಾಧ್ಯಕ್ಷ ಕೃಷ್ಣಮೂರ್ತಿ, ದ್ಯಾವಯ್ಯ, ಮಾಜಿ ಸದಸ್ಯ ರಾದ ರಾಮೇ ಗೌಡ, ಮುಖಂಡರಾದ ಉಪ್ಪಾರಿಕೇಗೌಡ, ಗೋವಿಂದರಾಜು, ಹನ್ಯಾಳು ಮಂಜು, ಕೃಷ್ಣೇಗೌಡ, ವಿದ್ಯಾ ನಿಕೇತನ ಸಮಿತಿ ಅಧ್ಯಕ್ಷ ವಿರೂಪಾಕ್ಷ ಮತ್ತಿತರರಿದ್ದರು.

ಹಾರಂಗಿ ಎಡದಂಡೆ ನಾಲೆ 59 ಕಿ.ಮೀ. ಉದ್ದವಿದೆ. ಅದರ ಎರಡೂ ಬದಿಯಲ್ಲಿ ಅರಣ್ಯ ಇಲಾಖೆಯವರೇ ಗಿಡ ನೆಡುತ್ತಾರೆ. ನೀರಾವರಿ ಇಲಾಖೆಯವರೂ ಸಹಕಾರ ನೀಡುತ್ತಾರೆ. ಈ ಗಿಡಗಳ ಪೆÇೀಷಣೆಗಾಗಿ ಪಕ್ಕದ ಜಮೀನಿನ ರೈತರಿಗೆ 100 ರೂ. ನೀಡಲಾಗುತ್ತಿದೆ.
– ಎ.ಟಿ.ರಾಮಸ್ವಾಮಿ, ಶಾಸಕ

Translate »