ಕ್ಷತ್ರಿಯ ಸಮುದಾಯಗಳು ಗುಲಾಮಗಿರಿಯಿಂದ ಹೊರಬರಬೇಕಿದೆ
ಮೈಸೂರು

ಕ್ಷತ್ರಿಯ ಸಮುದಾಯಗಳು ಗುಲಾಮಗಿರಿಯಿಂದ ಹೊರಬರಬೇಕಿದೆ

July 15, 2019

ಮೈಸೂರು,ಜು.14(ಆರ್‍ಕೆಬಿ)-ಗತ ವೈಭವ ಸಾರಿದ ಎಲ್ಲಾ ಕ್ಷತ್ರಿಯ ಸಮಾಜ ಗಳನ್ನು ಸಂಘಟಿಸುವ ನಿಟ್ಟಿನಲ್ಲಿ 12ಕ್ಕೂ ಹೆಚ್ಚು ಕ್ಷತ್ರಿಯ ಸಮುದಾಯಗಳ ಮುಖಂ ಡರ ಸಭೆ ಮೈಸೂರಿನ ರಾಜೇಂದ್ರ ಸಭಾಂಗಣ ದಲ್ಲಿ ನಡೆದು, ಪ್ರಜಾಪ್ರಭುತ್ವದಲ್ಲಿ ನಮಗೆ ಬೆಲೆ ಸಿಗಬೇಕಾದರೆ ಸಂಖ್ಯಾ ಬಲ ಪ್ರದರ್ಶನವೇ ಮುಖ್ಯ ಎಂಬ ಸಂದೇಶ ರವಾನಿಸಿದರು.

ಸರ್ಕಾರಗಳ ನಿರ್ಲಕ್ಷ್ಯದಿಂದಾಗಿ ಕ್ಷತ್ರಿಯ ಸಮಾಜಗಳು ಇಂದು ಹೀನಾಯ ಸ್ಥಿತಿಗೆ ತಲುಪಿವೆ. ನಾವು ಹಿಂದುಳಿದಿದ್ದೇವೆ ಎಂದರೆ ಅದಕ್ಕೆ ನಮ್ಮಲ್ಲಿನ ಸಂಘಟನೆಯ ಕೊರತೆಯೇ ಕಾರಣ. ನಮ್ಮ ಪೂರ್ವಿಕರ ತ್ಯಾಗ, ಬಲಿದಾನ ದಿಂದ ದೇಶ, ಸಂಸ್ಕøತಿ ಕಟ್ಟಿದ ನಮ್ಮ ಪೂರ್ವಿ ಕರು ಅದ್ಭುತ ಪರಂಪರೆಯನ್ನು ಬಿಟ್ಟು ಹೋದರು. ಆದರೆ ಅವರಿಗೆ ನಾವೇನು ಕೊಡುಗೆ ಕೊಟ್ಟಿದ್ದೇವೆ ಎಂಬುದನ್ನು ನಾವು ಒಮ್ಮೆ ಆಲೋಚಿಸ ಬೇಕಿದೆ ಎಂದು ಹೇಳಿದರು.

ನಮ್ಮ ಮತ್ತು ನಮ್ಮ ಮಕ್ಕಳ ಭವಿಷ್ಯ ವನ್ನು ನಾವೇ ಹಾಳು ಮಾಡುತ್ತಿದ್ದೇವೆ. ನಾವಿಂದು ವಿವಿಧ ಪಕ್ಷಗಳ ಆಸೆ, ಆಮಿಷ ಗಳಿಗೆ ಒಳಗಾಗಿ ನಮ್ಮತನವನ್ನು ಕಳೆದು ಕೊಂಡು ಗುಲಾಮಗಿರಿಗೆ ಒಳಗಾಗಿದ್ದೇವೆ. ಹೀಗಾಗಿ ಕ್ಷತ್ರಿಯ ಸಮುದಾಯಗಳು ಸಂಘ ಟಿತರಾಗಿ ಸದೃಢ ಸಮಾಜ ಕಟ್ಟದಿದ್ದರೆ ಮುಂದಿನ ಪೀಳಿಗೆ ನಮ್ಮನ್ನು ದೂಷಿಸು ತ್ತದೆ. ಅವರ ಶಾಪಕ್ಕೆ ಗುರಿಯಾಗುತ್ತೇವೆ ಎಂದು ಆಭಿಪ್ರಾಯಪಟ್ಟರು.

ರಾಜ್ಯದಲ್ಲಿ 39ಕ್ಕೂ ಹೆಚ್ಚು ಕ್ಷತ್ರಿಯ ಸಮು ದಾಯಗಳಿವೆ. ರಾಜ್ಯದ ಜನಸಂಖ್ಯೆಯಲ್ಲಿ 1.20 ಕೋಟಿ ಇದ್ದೇವೆ. ಕ್ಷತ್ರಿಯ ಮರಾಠ, ಭಾವಸಾರ ಕ್ಷತ್ರಿಯ, ರಾಜು ಕ್ಷತ್ರಿಯ, ಸೋಮವಂಶ ಕ್ಷತ್ರಿಯ, ನಾಮದೇವ ಸಿಂಪಿ, ಅರಸು ಸಮಾಜ, ತಿಗಳಶೆಟ್ಟಿ ಸಮಾಜ, ರಜಪೂತ ಸಮಾಜ ಸೇರಿದಂತೆ 39ಕ್ಕೂ ಹೆಚ್ಚು ಕ್ಷತ್ರಿಯ ಸಮುದಾಯಗಳಿವೆ. ನಾವೆಲ್ಲರೂ ನಮ್ಮ ಒಗ್ಗಟ್ಟು ಪ್ರದರ್ಶಿಸುವ ಕಾಲ ಬಂದಿದೆ. ಈಗ ಎಚ್ಚೆತ್ತು ನಾವೆ ಲ್ಲರೂ ಸಂಘಟಿತರಾಗುವ ಅನಿವಾ ರ್ಯತೆ ಒದಗಿದೆ. ಎಲ್ಲಾ ಪಕ್ಷಗಳಿಗೆ, ರಾಜ ಕಾರಣಿಗಳಿಗೆ ತಕ್ಕ ಪಾಠ ಕಲಿಸಬೇಕಾಗಿದೆ. ಆ ನಿಟ್ಟಿನಲ್ಲಿ ರಾಜ್ಯಾದ್ಯಂತ ಕ್ಷತ್ರಿಯ ಸಮಾಜಗಳನ್ನು ಸಂಘಟಿಸಲಾಗುತ್ತಿದೆ. ಈಗಾಗಲೇ ಬೀದರ್ ಮತ್ತು ಹುಬ್ಬಳ್ಳಿ ಯಲ್ಲಿ ಬೃಹತ್ ಸಮಾವೇಶಗಳನ್ನು ನಡೆಸಿ ಸರ್ಕಾರಕ್ಕೆ ಎಚ್ಚರಿಕೆಯ ಸಂದೇಶ ನೀಡಿ ದ್ದೇವೆ. ಅಂತೆಯೇ ಮೈಸೂರಿನಲ್ಲಿಯೂ ವಿಭಾಗ ಮಟ್ಟದ ಕ್ಷತ್ರಿಯ ಸಮುದಾಯ ಗಳ ಸಮಾವೇಶದ ಮೂಲಕ ನಮ್ಮ ಒಗ್ಗಟ್ಟು ಪ್ರದರ್ಶಿಸಬೇಕಿದೆ ಎಂದು ಹೇಳಿದರು.

ಈ ಸಂದರ್ಭದಲ್ಲಿ ಮಾತನಾಡಿದ ಮಾಜಿ ಶಾಸಕ ಮಾರುತಿರಾವ್ ಪವಾರ್, ಕ್ಷತ್ರಿಯ ಸಮಾಜಗಳೆಲ್ಲವೂ ಒಗ್ಗಟ್ಟು ಪ್ರದರ್ಶಿಸಿ ಮೂರನೇ ಶಕ್ತಿಯಾಗಿ ರೂಪುಗೊಳ್ಳ ಬೇಕಿದೆ. ಕ್ಷತ್ರಿಯ ಸಮಾಜಗಳಿಗೆ ರಾಜ ಕೀಯ ಹಾಗೂ ಸಾಮಾಜಿಕ ನ್ಯಾಯ ಸಿಗಬೇಕು. ಎಲ್ಲಾ ಸೌಲತ್ತುಗಳು ಸಿಗ ಬೇಕು. ಮುಂದಿನ ಪೀಳಿಗೆಗಾಗಿ ಪ್ರಬಲ ಸಂಘಟನೆ ಅಗತ್ಯವಿದೆ. ರಾಜ್ಯದಲ್ಲಿ ನಾವೆಲ್ಲ ಕ್ಷತ್ರಿಯರೂ ಒಂದಾದರೆ ಮಾತ್ರ ಕ್ಷತ್ರಿಯ ಸಮಾಜ ಉಳಿಯಲು ಸಾಧ್ಯ ಎಂದು ಹೇಳಿದರು.

ಸಭೆಯಲ್ಲಿ ಹಿರಿಯ ಪತ್ರಕರ್ತ ಜಿ.ಕೆ.ಸತ್ಯ, ಕರ್ನಾಟಕ ಕ್ಷತ್ರಿಯ ಒಕ್ಕೂಟದ ಉಪಾಧ್ಯಕ್ಷ ಸುರೇಶ್ ಸಾಠೆ ಹಾಗೂ ವಿವಿಧ ಕ್ಷತ್ರಿಯ ಸಮಾಜಗಳ ಮುಖಂಡರಾದ ಕೃಷ್ಣಾಶಾ ಧನಪತ್, ನಂದೀಶ್ ಅರಸು, ವಿಠಲರಾವ್ ರಂಪೂರೆ, ಆನಂದ, ಲಕ್ಷ್ಮೀ ಕಾಂತರಾಜೇ ಅರಸ್, ಗೋಪಾಲಕೃಷ್ಣ, ಪಾಲಿಕೆ ಸದಸ್ಯೆ ಶೋಭಾ, ಸುನೀಲ್, ಸತೀಶ್‍ರಾಜ್, ಹನು ಮಾನ್‍ಸಿಂಗ್, ಕೇಶವನಾಥ್, ಪ್ರಕಾಶ್‍ರಾವ್, ಬದರಿನಾಥ ಪ್ರಸಾದ್, ದತ್ತಾತ್ರೇಯ ಶಿಂಧೆ, ಕೃಷ್ಣಾಜಿ ರಾವ್ ಗಾರ್ಗೆ ಇನ್ನಿತರರು ಉಪಸ್ಥಿತರಿದ್ದರು.

Translate »