ಮೈಸೂರು ಬಳಿಯ ಅರಸನಕೆರೆ ಜೋಡಿ ನಂದಿ ವಿಗ್ರಹ ರಕ್ಷಣೆಗೆ ಗ್ರಾಮಸ್ಥರ ಆಗ್ರಹ
ಮೈಸೂರು

ಮೈಸೂರು ಬಳಿಯ ಅರಸನಕೆರೆ ಜೋಡಿ ನಂದಿ ವಿಗ್ರಹ ರಕ್ಷಣೆಗೆ ಗ್ರಾಮಸ್ಥರ ಆಗ್ರಹ

July 15, 2019

ಮೈಸೂರು,ಜು.14(ಎಸ್‍ಬಿಡಿ)- ಮೈಸೂರಿಗೆ ಸಮೀಪದಲ್ಲಿರುವ ಅರಸನಕೆರೆ ಗ್ರಾಮದ ಜೋಡಿ ನಂದಿ ವಿಗ್ರಹಗಳ ಸಂರಕ್ಷಣೆಗೆ ಗ್ರಾಮಸ್ಥರು ಆಗ್ರಹಿಸಿದ್ದಾರೆ.

ಗ್ರಾಮದ ಹಳ್ಳವೊಂದರಲ್ಲಿ ನಾಲ್ಕು ದಶಕಗಳ ಹಿಂದೆ ಕಾಣಿಸಿಕೊಂಡ ಜೋಡಿ ನಂದಿ ವಿಗ್ರಹಗಳಿಗೆ ಅಂದಿನಿಂದಲೂ ಗ್ರಾಮ ಸ್ಥರು ಪೂಜೆ ಸಲ್ಲಿಸಿಕೊಂಡು ಬಂದಿ ದ್ದಾರೆ. ಹತ್ತಾರು ಅಡಿ ಆಳದಲ್ಲಿ ಹೂತಿದ್ದ ವಿಗ್ರಹಗಳ ಮುಖಭಾಗ ಮಾತ್ರ ಕಾಣಿಸಿ ಕೊಂಡಿತ್ತು. ಅಂದಿನಿಂದಲೂ ಪೂರ್ಣ ವಾಗಿ ವಿಗ್ರಹವನ್ನು ಮಣ್ಣಿನಿಂದ ಹೊರ ತೆಗೆಯುವ ಪ್ರಯತ್ನ ನಡೆದಿತ್ತು. ಆದರೆ ಹಲವು ಕಾರಣಗಳಿಂದಾಗಿ ಸಾಧ್ಯವಾಗಿರ ಲಿಲ್ಲ. ಇದೀಗ 4 ದಿನಗಳಿಂದ ಯಂತ್ರೋ ಪಕರಣಗಳ ಸಹಾಯದೊಂದಿಗೆ ಗ್ರಾಮ ಸ್ಥರು ಅವಿರತವಾಗಿ ಶ್ರಮಿಸಿ, ವಿಗ್ರಹ ಗಳನ್ನು ಮಣ್ಣಿನಿಂದ ಬಿಡಿಸುತ್ತಿದ್ದಾರೆ. ಮುಖಾಮುಖಿಯಾಗಿ ಪ್ರತಿಷ್ಠಾಪಿಸಿರುವ ನಂದಿ ವಿಗ್ರಹಗಳ ಬಗ್ಗೆ ಕುತೂಹಲ ಹೆಚ್ಚಾಗಿದೆ. ಸುತ್ತಮುತ್ತಲ ಗ್ರಾಮಸ್ಥರು ಜೋಡಿ ನಂದಿ ವಿಗ್ರಹಗಳನ್ನು ನೋಡಲು ನೂರಾರು ಸಂಖ್ಯೆಯಲ್ಲಿ ಧಾವಿಸುತ್ತಿದ್ದಾರೆ.

ನಾಲ್ಕು ದಶಕಗಳ ಹಿಂದೆ ನಂದಿ ವಿಗ್ರಹ ಗಳ ಮುಖಭಾಗ ಮಾತ್ರ ಗೋಚರ ವಾಗಿತ್ತು. ಹಳ್ಳದಲ್ಲಿರುವುದರಿಂದ ಬಂಡೆ ಗಳೂ ವಿಗ್ರಹಗಳನ್ನು ಆವರಿಸಿದ್ದವು. ಹಳ್ಳ ದಲ್ಲಿ ನೀರು ತುಂಬಿರುವುದರಿಂದ ವಿಗ್ರಹ ಗಳನ್ನು ಹೊರತೆಗೆಯಲು ಗ್ರಾಮಸ್ಥರು ಹೆಣಗಾಡಿದ್ದರು. ಕಡೆಗೂ ಭಗೀರಥ ಪ್ರಯತ್ನದೊಂದಿಗೆ ಕಲ್ಲು-ಮಣ್ಣುಗಳಿಂದ ವಿಗ್ರಹಗಳನ್ನು ಬಹುತೇಕ ಬಿಡಿಸಿದ್ದಾರೆ. ಇದೇ ಸ್ಥಳದಲ್ಲಿ ಈ ಹಿಂದೆಯೇ ಹತ್ತಕ್ಕೂ ಹೆಚ್ಚು ವಿವಿಧ ದೇವರ ವಿಗ್ರಹಗಳೂ ಸಿಕ್ಕಿವೆ. ಆದರೆ ಈ ವಿಗ್ರಹಗಳ ಬಗ್ಗೆ ಗ್ರಾಮಸ್ಥರಿಗೆ ನಿಖರ ಮಾಹಿತಿ ತಿಳಿದಿಲ್ಲ. ಮಹಾರಾಜರ ಕಾಲದಲ್ಲಿ ಪ್ರತಿಷ್ಠಾಪಿಸಿರ ಬಹುದು ಎಂದು ಹೇಳಲಾಗು ತ್ತಿದೆಯಾದರೂ ಅದೂ ಸ್ಪಷ್ಟತೆಯಿಲ್ಲ. ಹಾಗಾಗಿ ಪುರಾತತ್ವ ಇಲಾಖೆಯವರು ಎಲ್ಲೋ ದೂರದಲ್ಲಿ ಹೋಗಿ ಉತ್ಖನನ ಮಾಡುತ್ತಾರೆ. ಆದರೆ ಮೈಸೂರಿನಿಂದ ಕೇವಲ 15 ಕಿ.ಮೀ ದೂರದಲ್ಲಿರುವ ಅರ ಸನಕೆರೆ ಗ್ರಾಮಕ್ಕೆ ಭೇಟಿ ನೀಡಿ, ಜೋಡಿ ನಂದಿ ವಿಗ್ರಹಗಳ ಬಗ್ಗೆ ಸಂಶೋಧಿಸಲು ಸಾಧ್ಯವಾಗಿಲ್ಲ ಎಂದು ಗ್ರಾಮಸ್ಥರು ಬೇಸರ ವ್ಯಕ್ತಪಡಿಸಿದ್ದಾರೆ.

ಮಹಾರಾಜರು ಭೇಟಿ ನೀಡಿದ್ದರಂತೆ: ಯಾರೋ ಮಹಾತ್ಮರು ಗ್ರಾಮಕ್ಕೆ ಬಂದು ಈ ಸ್ಥಳದಲ್ಲಿ ಶಿವ, ಎರಡು ನಂದಿ ವಿಗ್ರಹ ಗಳು ಹಾಗೂ ಕಂಚಿನ ರಥವಿದೆ ಎಂದು ಹೇಳಿದ್ದರಂತೆ. ಅವರು ಹೇಳಿದಂತೆ ಸುಮಾರು 15 ವಿಗ್ರಹಗಳು ಸಿಕ್ಕಿವೆ. ಹಾಗೆಯೇ ಸುಮಾರು 40 ವರ್ಷಗಳ ಹಿಂದೆ ಜೋಡಿ ನಂದಿ ವಿಗ್ರಹಗಳಿರು ವುದು ಗೋಚರವಾಯಿತು. ಮಣ್ಣಿನಲ್ಲಿ ಹೂತಿದ್ದ ವಿಗ್ರಹಗಳ ಮುಖಭಾಗಕ್ಕೇ ಪೂಜೆ ಸಲ್ಲಿಸಿಕೊಂಡು ಬಂದಿದ್ದೇವೆ. ಈ ಜಾಗದ ಬಗ್ಗೆ ತಿಳಿದು ಚಾಮರಾಜ ಒಡೆ ಯರ್ ಅವರೂ ಭೇಟಿ ನೀಡಿ, ಪರಿಶೀಲಿಸಿ ದ್ದರು. ನಂದಿ ವಿಗ್ರಹ ಗೋಚರವಾಗದ ಕಾರಣ ಅರಮನೆಗೆ ಮರಳಿ, ಅಲ್ಲಿಂದ ಜನರನ್ನು ಕಳುಹಿಸಿ, ವಿಗ್ರಹ ಹೊರ ತೆಗೆಯಲು ಪ್ರಯತ್ನಿಸಿದ್ದರು. ಹಳ್ಳದಲ್ಲಿ ತುಂಬಿದ್ದ ನೀರನ್ನು ಹೊರಹಾಕುವುದೇ ಕಷ್ಟವಾಗಿತ್ತು. ಎಷ್ಟೇ ಪ್ರಯತ್ನಿಸಿದರೂ ವಿಗ್ರಹಗಳನ್ನು ಹೊರತೆಗೆಯಲಾಗಲಿಲ್ಲ. ಕಡೆಗೆ ಈ ಸ್ಥಳದಲ್ಲಿ ಪೂಜೆ ಸಲ್ಲಿಸಿ, ವಾಪಸ್ಸಾದರು ಎಂದು ಗ್ರಾಮದ ಹಿರಿಯರ ಮಾತು.

ಪುರಾತತ್ವ ಇಲಾಖೆಯವರು ಈ ಬಗ್ಗೆ ಸಂಶೋಧನೆ ನಡೆಸಿ, ಸ್ಪಷ್ಟ ಮಾಹಿತಿ ಕಲೆ ಹಾಕಬೇಕು. ಜಿಲ್ಲಾಡಳಿತ ಹಾಗೂ ಯುವರಾಜ ಯದುವೀರ್ ಅವರು ಈ ಬಗ್ಗೆ ಆಸಕ್ತಿ ವಹಿಸಿ, ಜೋಡಿ ನಂದಿ ವಿಗ್ರಹಗಳನ್ನು ಸಂರಕ್ಷಿಸಿ, ಜೀರ್ಣೋದ್ಧಾರಗೊಳಿಸಿ, ಪುನರ್ ಪ್ರತಿಷ್ಠಾಪಿ ಸಬೇಕೆಂದು ಗ್ರಾಮಸ್ಥರು ಒತ್ತಾಯಿಸಿದ್ದಾರೆ.