ರಾಮದಾಸ್ ಪಾದಯಾತ್ರೆ ಮೂಲಕ ಮತ ಯಾಚನೆ
ಮೈಸೂರು

ರಾಮದಾಸ್ ಪಾದಯಾತ್ರೆ ಮೂಲಕ ಮತ ಯಾಚನೆ

April 26, 2018

ಮೈಸೂರು: ಮೈಸೂರಿನ ಕೆ.ಆರ್.ವಿಧಾನಸಭಾ ಕ್ಷೇತ್ರ ಬಿಜೆಪಿ ಅಭ್ಯರ್ಥಿ ಎಸ್.ಎ.ರಾಮದಾಸ್ ಅವರು ತಮ್ಮ ಬೆಂಬಲಿಗರೊಂದಿಗೆ ಬುಧ ವಾರ ಪಾಲಿಕೆಯ 13ನೇ ವಾರ್ಡ್ ವ್ಯಾಪ್ತಿಯ ದೇವಯ್ಯನಹುಂಡಿ ಹಾಗೂ ಶ್ರೀರಾಂಪುರದಲ್ಲಿ ಪಾದಯಾತ್ರೆ ಮೂಲಕ ಮತಯಾಚಿಸಿದರು.

ಇಂದು ಬೆಳಿಗ್ಗೆ ದೇವಯ್ಯನಹುಂಡಿಗೆ ಆಗಮಿಸಿದ ಎಸ್.ಎ.ರಾಮದಾಸ್, ಈ ಬಾರಿ ಚುನಾವಣೆಯಲ್ಲಿ ತಮ್ಮನ್ನು ಬೆಂಬಲಿಸುವಂತೆ ಕೋರಿದರು. ರಾಮ ದಾಸ್ ಅವರಿಗೆ ಸ್ಥಳೀಯರು ಆರತಿ ಎತ್ತುವ ಮೂಲಕ ಆತ್ಮೀಯವಾಗಿ ಬರಮಾಡಿ ಕೊಂಡರು. ಸ್ಥಳೀಯ ನಿವಾಸಿಗಳು ಈ ಹಿಂದೆ ಆಸರೆ ಟ್ರಸ್ಟ್ ವತಿಯಿಂದ ಎಸ್‍ಎಸ್‍ಎಲ್‍ಸಿ ಮತ್ತು ಪಿಯುಸಿ ವಿದ್ಯಾರ್ಥಿಗಳಿಗೆ ನೀಡಲಾಗುತ್ತಿದ್ದ ಗೈಡ್ ಗಳನ್ನು ಮತ್ತೆ ನೀಡುವಂತೆ ಮನವಿ ಮಾಡಿ ದರು. ಅಲ್ಲದೆ ಕಳೆದ ಹಲವು ವರ್ಷ ಗಳಿಂದಲೂ ಬಾಡಿಗೆ ಮನೆಯಲ್ಲಿ ವಾಸಿ ಸುತ್ತಿರುವವರಿಗೆ ಮನೆ ಮಂಜೂರು ಮಾಡಿಸಿಕೊಡುವಂತೆ ಮನವಿ ಸಲ್ಲಿಸಿ ದರು. ಜೊತೆಗೆ ಕುಡಿಯುವ ನೀರು ಪೂರೈಕೆ ಪುನರಾರಂಭಿಸುವಂತೆಯೂ ಕೋರಿದರು.

ಈ ವೇಳೆ ಮಾತನಾಡಿದ ಎಸ್.ಎ. ರಾಮದಾಸ್, ಈ ಹಿಂದೆ ಬಿಜೆಪಿ ಸರ್ಕಾರ ವಿದ್ದಾಗ ಮುಖ್ಯಮಂತ್ರಿಯಾಗಿದ್ದ ಬಿ.ಎಸ್. ಯಡಿಯೂರಪ್ಪ ಅವರು ಕೆ.ಆರ್.ಕ್ಷೇತ್ರಕ್ಕೆ ಹಲವಾರು ಯೋಜನೆಗಳನ್ನು ಕೊಡುಗೆ ಯಾಗಿ ನೀಡಿದ್ದರು. ಅಲ್ಲದೆ ವಸತಿಹೀನ ರಿಗೆ ಆಶ್ರಯ ಯೋಜನೆಯಡಿ ಮನೆ ವಿತರಿಸಲಾಗಿತ್ತು. ಇದೀಗ ಕೇಂದ್ರ ಸರ್ಕಾ ರದ ಪ್ರಧಾನ ಮಂತ್ರಿಗಳ ವಸತಿ ಯೋಜ ನೆಯ ಅಡಿಯಲ್ಲಿಯೂ ಮನೆ ನಿರ್ಮಿಸಿ ಕೊಡುವುದಕ್ಕೆ ಕ್ರಮ ಕೈಗೊಳ್ಳಲಾಗಿದೆ. ಶಿಥಿಲಾವಸ್ಥೆಯಲ್ಲಿರುವ ಮನೆಗಳಲ್ಲಿ ವಾಸಿ ಸುವವರಿಗೂ ಸುಸಜ್ಜಿತ ಮನೆ ನಿರ್ಮಿಸಿ ಕೊಳ್ಳಲು ಕೇಂದ್ರ ಸರ್ಕಾರ ಆರ್ಥಿಕ ನೆರವು ನೀಡುತ್ತಿದೆ. ಕೃಷ್ಣರಾಜ ಕ್ಷೇತ್ರದ ವ್ಯಾಪ್ತಿಯಲ್ಲಿ ಇರುವ ಒಟ್ಟು 56 ಸಾವಿರ ಮನೆಗಳಿದ್ದು, ಎಲ್ಲಾ ಮನೆಗಳಿಗೆ ಖುದ್ದಾಗಿ ಮತಯಾಚಿಸಲು ಸಮಯದ ಅಭಾವ ವಿದೆ. ಈ ಹಿನ್ನೆಲೆಯಲ್ಲಿ ಮೇ12ರಂದು ನಡೆಯುವ ಚುನಾವಣೆಯಲ್ಲಿ ಬಿಜೆಪಿಗೆ ಮತ ಹಾಕುವಂತೆ ಕೋರಿದರು.

ಬಳಿಕ ಶ್ರೀರಾಮಪುರಕ್ಕೆ ತೆರಳಿದ ರಾಮದಾಸ್ ಅವರು ರಸ್ತೆ ಬದಿ ವ್ಯಾಪಾರಿಗಳು, ತಳ್ಳುವ ಗಾಡಿಗಳಲ್ಲಿ ವ್ಯಾಪಾರ ಮಾಡುವವರನ್ನು, ಆಟೋ ರಿಕ್ಷಾ ಚಾಲಕರು ಸೇರಿದಂತೆ ಅಸಂಘಟಿತ ಕಾರ್ಮಿಕರನ್ನು ಬೇಟಿ ಮಾಡಿ ಮತ ಯಾಚಿಸಿದರಲ್ಲದೆ, ಕೇಂದ್ರ ಸರ್ಕಾರ ಅಸಂಘಟಿತ ಕಾರ್ಮಿಕರ ಏಳಿಗೆ ಗಾಗಿ ಅನುಷ್ಠಾನಗೊಳಿಸಿರುವ ಯೋಜನೆಗಳ ಬಗ್ಗೆ ಮಾಹಿತಿ ನೀಡಿ, ಬಿಜೆಪಿಯನ್ನು ಬೆಂಬಲಿಸುವಂತೆ ಕೋರಿದರು.

ಮೈಸೂರಿನ ಶ್ರೀರಾಂಪುರದಲ್ಲಿ ಮಾಜಿ ಸಚಿವ, ಕೆ.ಆರ್.ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಎಸ್.ಎ.ರಾಮದಾಸ್ ಬುಧವಾರ ಮತ ಯಾಚಿಸಿದರು.

Translate »