ಸಫಾಯಿ ಕರ್ಮಚಾರಿಗಳ ಹಿತರಕ್ಷಣೆ ಎಲ್ಲರ ಹೊಣೆ
ಹಾಸನ

ಸಫಾಯಿ ಕರ್ಮಚಾರಿಗಳ ಹಿತರಕ್ಷಣೆ ಎಲ್ಲರ ಹೊಣೆ

October 30, 2018

ಹಾಸನ: ಸಫಾಯಿ ಕರ್ಮಚಾರಿ ಗಳ ಜೀವನ ಮಟ್ಟ ಸುಧಾರಣೆಗೆ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ರೂಪಿ ಸಿರುವ ಯೋಜನೆಗಳನ್ನು ಸಮರ್ಪಕ ವಾಗಿ ಅನುಷ್ಠಾನಗೊಳಿಸಬೇಕಿದ್ದು, ಅವರ ಹಿತರಕ್ಷಣೆ ಎಲ್ಲಾ ಇಲಾಖೆಗಳ ಹೊಣೆ ಎಂದು ರಾಷ್ಟ್ರೀಯ ಸಫಾಯಿ ಕರ್ಮ ಚಾರಿಗಳ ಆಯೋಗದ ಸದಸ್ಯ ಜಗದೀಶ್ ಹಿರೇಮನಿ ಅಧಿಕಾರಿಗಳಿಗೆ ಸೂಚಿಸಿದರು.

ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂ ಗಣದಲ್ಲಿಂದು ಮ್ಯಾನ್ಯುಯಲ್ ಸ್ಕ್ಯಾವೆಂ ಜರ್‍ಗಳ ಪದ್ಧತಿ ನಿಷೇಧ ಮತ್ತು ಅವರ ಪುನರ್‍ವಸತಿ ಅಧಿನಿಯ 2013ರ ಕಾಯ್ದೆ ಅನುಷ್ಠಾನದ ಕುರಿತು ನಡೆದ ವಿವಿಧ ಇಲಾಖಾಧಿಕಾರಿಗಳೊಂದಿಗೆ ಪ್ರಗತಿ ಪರಿಶೀಲನಾ ಸಭೆ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಸ್ವಚ್ಛತಾ ಸೇವೆ ಅಮೂಲ್ಯವಾದದ್ದು, ಅದರಲ್ಲಿ ತೊಡಗಿರುವ ಸಿಬ್ಬಂದಿಗೆ ಮೂಲ ಸೌಕರ್ಯವನ್ನು ನ್ಯಾಯಯುತ ವಾಗಿ ಒದಗಿಸಿ. ವಸತಿ ಸೌಕರ್ಯ, ಕಾಲ ಕಾಲಕ್ಕೆ ಆರೋಗ್ಯ ತಪಾಸಣೆ, ಸುರಕ್ಷಿತಾ ಸಾಧನಾ ಸಲಕರಣೆಗಳ ವಿತರಣೆ ಸೇರಿ ದಂತೆ ಅವರ ಮಕ್ಕಳಿಗೆ ಉತ್ತಮ ಶಿಕ್ಷಣ ಕಲ್ಪಿಸಿ. ರಾಜ್ಯ ಹಾಗೂ ಕೇಂದ್ರ ಸರ್ಕಾರದ ವಿವಿಧ ಯೋಜನೆಗಳಡಿ ಲಭ್ಯವಿರುವ ಯೋಜನೆಗಳ ಬಗ್ಗೆ ಅರಿವು ಮೂಡಿಸಿ ಎಂದು ತಿಳಿಸಿದರು.

ರಾಜ್ಯದಲ್ಲಿ ದೈಹಿಕವಾಗಿ ಶೌಚ್ಯ ವಿಲೇವಾರಿ ಮಾಡುವ ಪದ್ಧತಿ ರದ್ದಾಗಿದೆ. ಆದರೆ ಈ ಹಿಂದೆ ಇಂತಹ ಕೆಲಸಗಳಲ್ಲಿ ತೊಡಗಿದ್ದ ವರಿಗೆ ಸೂಕ್ತ ಪುನರ್‍ವಸತಿ ದೊರೆಯ ಬೇಕು. ಸ್ವಚ್ಛತಾ ಕಾರ್ಯದ ವೇಳೆ ಅಸುನೀಗಿ ದವರಿಗೆ ಸೂಕ್ತ ಪರಿಹಾರ ದೊರೆಯಬೇಕು. ಈ ಬಗ್ಗೆ ಜಿಲ್ಲಾಡಳಿತ ಮತ್ತು ನಗರಾಭಿ ವೃದ್ಧಿ ಇಲಾಖೆ ಗಮನ ಹರಿಸಬೇಕು ಎಂದರು.

ಎಲ್ಲಾ ಸಫಾಯಿ ಕರ್ಮಚಾರಿಗಳಿಗೆ ಕಡ್ಡಾಯವಾಗಿ ಪಿಎಫ್ ಮತ್ತು ಇಎಸ್‍ಐ ಸೌಲಭ್ಯ ದೊರೆಯಬೇಕು. ಈ ಹಿಂದೆ ಹೊರಗುತ್ತಿಗೆ ಸೇವೆ ಒದಗಿಸಿದ ಸಂಘ ಗಳಿಗೆ ನೋಟೀಸ್ ಜಾರಿಗೊಳಿಸಿ, ಕಳೆದ 5 ವರ್ಷಗಳ ಪಿಎಫ್ ಹಣ ಜಮಾ ಮಾಡಿರುವುದನ್ನು ಖಾತರಿಪಡಿಸಿಕೊಳ್ಳಿ. ಇಲ್ಲದಿದ್ದರೆ ವಸೂಲಿ ಮಾಡಿ ಸಂಬಂಧ ಪಟ್ಟವರ ಖಾತೆಗೆ ಜಮೆ ಮಾಡಿ ಎಂದು ನಿರ್ದೇಶನ ನೀಡಿದ ಹಿರೇಮನಿ ಅವರು, ವಿವಿಧ ನಗರ ಸ್ಥಳೀಯ ಸಂಸ್ಥೆಗಳ ವ್ಯಾಪ್ತಿ ಯಲ್ಲಿ ಸಫಾಯಿ ಕರ್ಮಚಾರಿಗಳಿಗೆ ನೀಡಲಾಗುತ್ತಿರುವ ಸೌಲಭ್ಯಗಳ ಕುರಿತು ಅಧಿಕಾರಿಗಳಿಂದ ಮಾಹಿತಿ ಪಡೆದರು. ಅಲ್ಲದೆ, ಜಿಲ್ಲಾ ಮಟ್ಟದ ಸಮಿತಿ ಸದಸ್ಯ ರಿಂದಲೂ ಅಹವಾಲು ಆಲಿಸಿದರು. ಹಾಸನ ನಗರ ಸಭೆಯಲ್ಲಿ ಐವರು ಸಫಾಯಿ ಕರ್ಮ ಚಾರಿಗಳ ಸೇವೆ ಖಾಯಂಗೊಳಿಸುವ ಕುರಿತು ರಾಜ್ಯ ಸರ್ಕಾರದೊಂದಿಗೆ ಪತ್ರ ವ್ಯವ ಹಾರ ನಡೆಸುವುದಾಗಿ ಇದೇ ವೇಳೆ ತಿಳಿಸಿದರು.

ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ, ಜಿಲ್ಲಾ ಪೆÇಲೀಸ್ ವರಿಷ್ಠಾಧಿಕಾರಿ ಡಾ. ಪ್ರಕಾಶ್‍ಗೌಡ, ಉಪವಿಭಾಗಾಧಿಕಾರಿ ಗಳಾದ ಡಾ.ನಾಗರಾಜ್ ಹಾಗೂ ಲಕ್ಷ್ಮಿ ಕಾಂತರೆಡ್ಡಿ ಸಭೆಯಲ್ಲಿ ಹಾಜರಿದ್ದು, ಚರ್ಚೆಯಲ್ಲಿ ಪಾಲ್ಗೊಂಡರು. ನಗರ ಸಭೆ ಆಯುಕ್ತ ಪರಮೇಶ್, ಮುಖ್ಯ ಯೋಜ ನಾಧಿಕಾರಿ ಪರಪ್ಪಸ್ವಾಮಿ, ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕ ಕೃಷ್ಣ ಮೂರ್ತಿ, ಜಿಲ್ಲಾ ಸಮಾಜ ಕಲ್ಯಾಣಾಧಿಕಾರಿ ಶ್ರೀಧರ್, ವಿವಿಧ ನಗರ ಸ್ಥಳೀಯ ಸಂಸ್ಥೆ ಗಳ ಆಯುಕ್ತರು, ಮುಖ್ಯಾಧಿಕಾರಿಗಳು ಸಭೆಯಲ್ಲಿದ್ದರು.

 

Translate »