ಬೇಲೂರು: ತಾಲೂಕಿನ ಬಿಕ್ಕೋಡಿ ನಲ್ಲಿ ಕಾರ್ಯಾ ಆರಂಭಿಸಬೇಕಿದ್ದ ವಿದ್ಯುತ್ ಪ್ರಸರಣ ಉಪಕೇಂದ್ರ ಸ್ಥಾಪನೆಗೆ ಇನ್ನೂ ಕಾಲ ಕೂಡಿಬಾರದಾಗಿದ್ದು, 65 ಗ್ರಾಮ ಗಳಲ್ಲಿ ವಿದ್ಯುತ್ ಸಮಸ್ಯೆ ಮಿತಿಮೀರಿದೆ.
ವೋಟಿಗಾಗಿ ಮನೆ ಬಾಗಿಲಿಗೆ ಬಂದು ಭರವಸೆ ನೀಡುವ ಜನಪ್ರತಿನಿಧಿಗಳು ಈ ಭಾಗದ ವಿದ್ಯುತ್ ಸಮಸ್ಯೆ ನೀಗಿಸಲು ಪ್ರಮಾ ಣಿಕ ಪ್ರಯತ್ನ ಮಾಡುವಲ್ಲಿ ವಿಫಲವಾಗಿ ದ್ದಾರೆ ಎನ್ನುವುದಕ್ಕೆ ಎರಡು ವರ್ಷದಿಂದ ನೆನೆಗುದಿಗೆ ಬಿದ್ದಿರುವ ಈ ಉಪಕೇಂದ್ರ ಸ್ಥಾಪನೆ ಯೋಜನೆಯೇ ಸಾಕ್ಷಿಯಾಗಿದೆ.
ತಾಲೂಕಿನ ಅರೇಹಳ್ಳಿ, ಹಗರೆ, ಹಳೇ ಬೀಡು, ಗೆಂಡೇಹಳ್ಳಿ ಸೇರಿದಂತೆ ಅತೀ ಚಿಕ್ಕ ಗ್ರಾಮವಾದ ಗಂಗೂರಿನಲ್ಲೂ ವಿದ್ಯುತ್ ಪ್ರಸರಣ ಉಪಕೇಂದ್ರವಿದೆ. ಆದರೆ ಸುಮಾರು 65 ಹಳ್ಳಿಗಳನ್ನು ಹೊಂದಿರುವ ಬಿಕ್ಕೋಡು ಹೋಬಳಿ ವಿದ್ಯುತ್ ಸಮಸ್ಯೆ ಬಗೆಹರಿಸುವ ನಿಟ್ಟಿನಲ್ಲಿ ತೆರೆಯಲು ನಿರ್ಧರಿ ಸಿರುವ ಈ ಉಪಕೇಂದ್ರ ಸ್ಥಾಪನೆಯಾಗದೇ ಜನತೆ ಸಾಕಷ್ಟು ಸಮಸ್ಯೆ ಎದುರಿಸುವಂತಾಗಿದೆ.
2016ರಲ್ಲಿ ಡಿ.ಕೆ.ಶಿವಕುಮಾರ್ ಅವರು ಇಂಧನ ಸಚಿವರಾಗಿದ್ದಾಗ ಬಿಕ್ಕೋಡಿನಲ್ಲಿ ಸರ್ಕಾರಿ ಭೂಮಿ ಇರುವುದರಿಂದ ಸುಲಭ ವಾಗಿ ವಿದ್ಯುತ್ ಪ್ರಸರಣ ಉಪಕೇಂದ್ರ ಸ್ಥಾಪನೆ ಮಾಡಬಹುದೆಂಬ ಉದ್ದೇಶದಿಂದ ಅಂದಿನ ಶಾಸಕ ವೈ.ಎನ್.ರುದ್ರೇಶಗೌಡ ಅವರು ಆಸಕ್ತಿ ವಹಿಸಿ 8 ಕೋಟಿ ರೂ. ಮಂಜೂರು ಮಾಡಿದ್ದರು. ಭೂಮಿಯ ಸರ್ವೇ ಕಾರ್ಯವೂ ಪೂರ್ಣಗೊಂಡಿತ್ತು. ಆದರೆ ಆನಂತರದಲ್ಲಿ ವಿದ್ಯುತ್ ನಿಗಮಕ್ಕೆ ಭೂಮಿ ವರ್ಗಾವಣೆ ಮಾಡಿಕೊಡುವಲ್ಲಿ ಅಂದಿನ ಕಂದಾಯ ಇಲಾಖೆ ಅಧಿಕಾರಿಗಳು ನಿರ್ಲಕ್ಷ್ಯ ತೋರಿದ ಪರಿಣಾಮ, ಸೂಕ್ತ ಸ್ಥಳ ಇಲ್ಲ ವೆಂಬ ಕಾರಣಕ್ಕೆ ಅನುದಾನ ವಾಪಸ್ಸಾಯಿತು.
ಶಾಸಕರ ಮುತುವರ್ಜಿ: ಸದ್ಯ ಕಳೆದ ಆಗಸ್ಟ್ ನಲ್ಲಿ ಬಿಕ್ಕೋಡಿನಲ್ಲಿ ನಡೆದ ಗ್ರಾಮಸಭೆಯಲ್ಲಿ ವಿದ್ಯುತ್ ಪ್ರಸರಣ ಉಪಕೇಂದ್ರ ಸ್ಥಾಪನೆ ಬಗ್ಗೆ ಸಾರ್ವಜನಿಕರಿಂದ ಬಂದ ದೂರನ್ನು ಗಂಭೀರ ವಾಗಿ ಪರಿಗಣಿಸಿದ ಶಾಸಕ ಕೆ.ಎಸ್.ಲಿಂಗೇಶ್, ವಿದ್ಯುತ್ ಪ್ರಸರಣ ಉಪಕೇಂದ್ರ ಸ್ಥಾಪನೆ ಹಾಗೂ ಕಸವಿಲೇವಾರಿ ಘಟಕದ ಸ್ಥಾಪನೆಗೆ ಭೂಮಿ ಒದಗಿಸುವಲ್ಲಿ ಕಾರ್ಯೋನ್ಮುಖ ರಾಗಿರುವುದರಿಂದ ಅಧಿಕಾರಿಗಳು ಚುರು ಕುಗೊಂಡಿದ್ದು, ಭೂಮಿ ವರ್ಗಾವಣೆಗೆ ಅನುಮೋದನೆ ನೀಡುವಂತೆ ಕಡತವನ್ನು ಜಿಲ್ಲಾಧಿಕಾರಿಗಳಿಗೆ ರವಾನಿಸಲಾಗಿದೆ.
ಭೂಮಿ ಗುರುತು: ವಿದ್ಯುತ್ ಪ್ರಸರಣ ಉಪಕೇಂದ್ರ ಸ್ಥಾಪನೆಗೆ ಅಗತ್ಯ ಭೂಮಿ ಯನ್ನು ಬಿಕ್ಕೋಡು ಹೋಬಳಿ ಚಳ್ಳೇನ ಹಳ್ಳಿ ಗ್ರಾಮದ ಸರ್ವೇ ನಂ.22ರಲ್ಲಿ ಗುರು ತಿಸಲಾಗಿದ್ದು, ಭೂಮಿ ಮಂಜೂರು ಮಾಡು ವಂತೆ ಬೇಲೂರು ತಹಶೀಲ್ದಾರ್ ಮನವಿ ಮೇರೆಗೆ ಸಕಲೇಶಪುರ ಉಪವಿಭಾಗಾಧಿ ಕಾರಿಗಳು ಜಿಲ್ಲಾಧಿಕಾರಿಗಳಿಗೆ ವರದಿ ನೀಡಿ ದ್ದಾರೆ. ಸದ್ಯ ವಿದ್ಯುತ್ ಪ್ರಸರಣ ಉಪಕೇಂದ್ರ ಸ್ಥಾಪನೆಗೆ ಸರ್ವೇ ನಂ.22ರಲ್ಲಿನ 8 ಎಕರೆ ಯಲ್ಲಿ 3.8 ಎಕರೆ ಭೂಮಿಯನ್ನು ವಿವಿಧ ಉದ್ದೇಶಕ್ಕೆ ವಿಲೇವಾರಿಯಾಗಿದ್ದು ಸದ್ಯ 4.33 ಎಕರೆ ಭೂಮಿ ಉಳಿದಿದೆ. ಇದರಲ್ಲಿ ವಿದ್ಯುತ್ ಪ್ರಸರಣ ಉಪ ಕೇಂದ್ರ ಸ್ಥಾಪನೆಗೆ 2.20 ಎಕರೆ ಪ್ರದೇಶ ಬಳಸಿಕೊಳ್ಳಬಹುದು ಎಂದು ತಹಶೀಲ್ದಾರ್ ಪತ್ರ ಉಲ್ಲೇಖಿಸಿ ಉಪ ವಿಭಾಗಾಧಿಕಾರಿಗಳು ಜಿಲ್ಲಾಧಿಕಾರಿಗಳಿಗೆ ಸಲ್ಲಿಸಿರುವ ವರದಿಯಲ್ಲಿ ತಿಳಿಸಿದ್ದು, 1.20 ಎಕರೆ ಭೂಮಿಯನ್ನು ಕಸ ವಿಲೇವಾರಿ ಘಟಕ ಸ್ಥಾಪನೆಗೆ ಮಂಜೂರು ಮಾಡು ವಂತೆ ಕೋರಲಾಗಿದೆ. ಇದಕ್ಕೆ ಅನುಮೋದನೆ ದೊರೆತರೆ ಬಿಕ್ಕೋಡು ಹೋಬಳಿಯ ಬಹುಮುಖ್ಯ ಸಮಸ್ಯೆಗಳೆರಡು ಬಗೆಹರಿಯವ ವಿಶ್ವಾಸ ಮೂಡಿದೆ.
ಬಿಕ್ಕೋಡು ಹೋಬಳಿಯಲ್ಲಿ ವಿದ್ಯುತ್ ಪ್ರಸರಣ ಉಪಕೇಂದ್ರ ಇಲ್ಲಿವರೆಗೂ ಸ್ಥಾಪನೆ ಯಾಗದ ಕಾರಣ ಈ ಹಿಂದಿನ ಜನ ಪ್ರತಿನಿಧಿಗಳ ಇಚ್ಛಾಸಕ್ತಿ ಕೊರತೆಯೋ ಅಥವಾ ವೋಟಿನ ರಾಜಕಾರಣವೋ ಎನ್ನುವ ಪ್ರಶ್ನೆ ಉದ್ಭವಿಸುತ್ತಿದ್ದು, ಸದ್ಯ ಶಾಸಕ ಕೆ.ಎಸ್. ಲಿಂಗೇಶ್ ಅವರ ನಡೆ ಜನತೆಯಲ್ಲಿ ಆಶಾಭಾವನೆ ಮೂಡಿಸಿದೆ.