ಸಲಿಂಗಕಾಮ ಅಪರಾಧವಲ್ಲ: ಸುಪ್ರೀಂ ತೀರ್ಪು
ಮೈಸೂರು

ಸಲಿಂಗಕಾಮ ಅಪರಾಧವಲ್ಲ: ಸುಪ್ರೀಂ ತೀರ್ಪು

September 7, 2018

ನವದೆಹಲಿ: ಸಲಿಂಗಕಾಮ ಅಪರಾಧ ಎನ್ನುವ ಐಪಿಸಿ ಸೆಕ್ಷನ್ 377 ಅನ್ನು ರದ್ದುಗೊಳಿಸಿ ಸುಪ್ರೀಂ ಕೋರ್ಟ್ ಇಂದು (ಗುರುವಾರ) ಐತಿಹಾಸಿಕ ತೀರ್ಪು ಪ್ರಕಟಿಸಿದೆ.

ಭಾರತದ ಮುಖ್ಯ ನ್ಯಾಯಮೂರ್ತಿ ದೀಪಕ್ ಮಿಶ್ರಾ ನೇತೃತ್ವದ ಪೀಠ ಈ ತೀರ್ಪು ನೀಡಿದೆ. ಭಾರತೀಯ ದಂಡ ಸಂಹಿತೆಯ ಸೆಕ್ಷನ್ 377 ರ ವಿರುದ್ಧ ಹೋರಾಟ ಬಹಳ ಹಿಂದಿನಿಂದ ನಡೆದು ಬಂದಿತ್ತು. 1861ರಲ್ಲೇ ಪ್ರಕೃತಿಯ ವಿರುದ್ಧದ ಲೈಂಗಿಕತೆಯನ್ನು ಕಾನೂನು ಪ್ರಕಾರ ಅಪರಾಧ ಎನ್ನುವ ನಿಯಮ ಜಾರಿಯಲ್ಲಿತ್ತು. ಇಂದು ಸುಪ್ರೀಂ ತೀರ್ಪು ನೀಡುವುದರೊಡನೆ ಜಾಗತಿಕವಾಗಿ ಸಲಿಂಗ ಕಾಮವನ್ನು ಒಪ್ಪಿಕೊಂಡಿರುವ 25 ರಾಷ್ಟ್ರಗಳ ಸಾಲಿಗೆ ಭಾರತ ಸೇರ್ಪಡೆಯಾಗುತ್ತಿದೆ.

ನೆದರ್ಲ್ಯಾಂಡ್ಸ್: ಸಲಿಂಗ ವಿವಾಹವನ್ನು ಕಾನೂನುಬದ್ಧಗೊಳಿಸಿದ ಮೊದಲ ದೇಶ ನೆದರ್ಲ್ಯಾಂಡ್ಸ್‍ನಲ್ಲಿ ಏಪ್ರಿಲ್ 1, 2001ರಿಂದ ಸಲಿಂಗ ಕಾಮ ಕಾನೂನುಬದ್ಧವೆನ್ನುವ ನೀತಿ ಜಾರಿಗೆ ಬಂದಿದೆ. ಬೆಲ್ಜಿಯಂ: ಜೂನ್ 1, 2003 ರಂದು ಸಲಿಂಗ ಮದುವೆಗೆ ಬೆಲ್ಜಿಯಂ ರಾಷ್ಟ್ರ ಕಾನೂನಿನ ಮಾನ್ಯತೆ ನೀಡಿದೆ. ಮೆಕ್ಸಿಕೋನಲ್ಲಿ ಸಲಿಂಗಕಾಮವನ್ನು ರಾಷ್ಟ್ರ ಕೆಲವು ವ್ಯಾಪ್ತಿಯಲ್ಲಿ ಕಾನೂನುಬದ್ಧಗೊಳಿಸಿ 2009ಕ್ಕೆ ಕಾನೂನು ಜಾರಿಗೊಳಿಸಲಾಗಿದೆ.

ಐಸ್ಲ್ಯಾಂಡ್ (2010), ಅರ್ಜೆಂಟೀನಾ (2010), ನ್ಯೂಜಿಲೆಂಡ್ (2013), ಫಿನ್ಲ್ಯಾಂಡ್ (2015), ಯುನೈಟೆಡ್ ಸ್ಟೇಟ್ಸ್ (2015), ಕೆನಡಾ (2005),ಸ್ಪೇನ್ (2005),ದಕ್ಷಿಣ ಆಫ್ರಿಕಾ (2006),ನಾರ್ವೆ (2008), ಪೋರ್ಚುಗಲ್ (2010),ಸ್ವೀಡನ್ (2009), ಡೆನ್ಮಾರ್ಕ್ (2011), ಉರುಗ್ವೆ (2013), ಫ್ರಾನ್ಸ್ (2013), ಬ್ರೆಜಿಲ್ (2013), ಯುನೈಟೆಡ್ ಕಿಂಗ್ಡಮ್ (2013), ಲಕ್ಸೆಂಬರ್ಗ್ (2014), ಐರ್ಲೆಂಡ್ (2015), ಕೊಲಂಬಿಯಾ (2016), ಜರ್ಮನಿ (2017), ಮಾಲ್ಟಾ (2017), ಆಸ್ಟ್ರೇಲಿಯಾ (2017). ಇದರಲ್ಲಿ ಡೆನ್ಮಾರ್ಕ್ ತನ್ನ ಸ್ವಾಯತ್ತ ಪ್ರದೇಶ ಗ್ರೀನ್ ಲ್ಯಾಂಡ್‍ನಲ್ಲಿ ಕಾನೂನಿನ ಮಾನ್ಯತೆ ನಿಡಲಾಗಿದೆ. ಇಷ್ಟಲ್ಲದೆ ಇಂಗ್ಲೆಂಡ್ ಮತ್ತು ವೇಲ್ಸ್ 2013ರಲ್ಲಿ, ಸ್ಕಾಟ್ಲೆಂಡ್ ನಲ್ಲಿ 2014ರಲ್ಲಿ ಸಲಿಂಗ ವಿವಾಹಕ್ಕೆ ಕಾನೂನಿನ ಒಪ್ಪಿಗೆ ಸೂಚಿಸಲಾಗಿದೆ.

Translate »