ಎಸ್‍ಸಿ, ಎಸ್‍ಟಿ ವಿದ್ಯಾರ್ಥಿಗಳ ಸಮಸ್ಯೆ ಪರಿಹಾರಕ್ಕೆ ಆಗ್ರಹ
ಹಾಸನ

ಎಸ್‍ಸಿ, ಎಸ್‍ಟಿ ವಿದ್ಯಾರ್ಥಿಗಳ ಸಮಸ್ಯೆ ಪರಿಹಾರಕ್ಕೆ ಆಗ್ರಹ

July 23, 2019

ಹಾಸನ, ಜು.22- ಪರಿಶಿಷ್ಟ ಜಾತಿ ಮತ್ತು ಪಂಗಡ ವಿದ್ಯಾರ್ಥಿಗಳ ಮೂಲ ಸಮಸ್ಯೆ ಗಳ ಪರಿಹಾರಕ್ಕೆ ಸರ್ಕಾರವನ್ನು ಒತ್ತಾಯಿಸಿ ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿ ಕರ್ನಾಟಕ ದಲಿತ ಸಂಘರ್ಷ ಸಮಿತಿಯಿಂದ ಸಾಂಕೇತಿಕ ಧರಣಿ ನಡೆಸಿ ಮನವಿ ಸಲ್ಲಿಸಲಾಯಿತು.

ದಸಂಸ ಬಾಬಾ ಸಾಹೇಬ ಅಂಬೇಡ್ಕರ್ ಆಶಯದಂತೆ ಶಿಕ್ಷಣ, ಸಂಘಟನೆ ಹಾಗೂ ಹೋರಾಟ ಈ ಮೂರು ಸೂತ್ರಗಳೊಂದಿಗೆ ನಾಡಿನಾದ್ಯಂತ ದಲಿತ ಸಮುದಾಯಕ್ಕೆ ಶಿಕ್ಷಣ ಕೊಡಿಸಲು ಹಲವು ಹೋರಾಟಗಳನ್ನು ರೂಪಿಸಿದ ಫಲವಾಗಿ ಜಿಲ್ಲಾ, ತಾಲೂಕು, ಹೋಬಳಿ ಕೇಂದ್ರಗಳಲ್ಲಿ ಅತೀ ಹೆಚ್ಚು ವಸತಿ ಶಾಲೆಗಳನ್ನು ತೆರೆಯಲಾಗಿದೆ ಎಂದರು.

ಇತ್ತೀಚೆಗೆ ಜಿಲ್ಲೆಯ ಹಾಸ್ಟೆಲ್‍ಗಳು ಅವ್ಯವ ಸ್ಥೆಯ ಆಗರವಾಗಿದೆ. ಸರ್ಕಾರದ ಹಣ ಈ ಸಮುದಾಯದ ಹೆಸರಲ್ಲಿ ನೀರಿನಂತೆ ಹರಿದು ಹೋಗುತ್ತಿದೆ. ಗುಣಮಟ್ಟದ ಶಿಕ್ಷಣ ನೀಡುವಲ್ಲಿ ವಿಫಲರಾದ ಅಧಿಕಾರಿ ಶಾಹಿಗಳು, ಟೆಂಡರ್ ಹಾಗೂ ಕಮಿಷನ್ ಹೆಸರಿನಲ್ಲಿ ನುಂಗಿ ನೀರು ಕುಡಿಯುತ್ತಿ ದ್ದಾರೆ ಎಂದು ದೂರಿದರು.

ಇತರೆ ಹಾಸ್ಟೆಲ್ ವಿದ್ಯಾರ್ಥಿಗಳಿಗೆ ನೀಡು ತ್ತಿರುವ ಶೇ. 40 ರಷ್ಟುನ್ನು ದಲಿತ ವಿದ್ಯಾರ್ಥಿ ಗಳಿಗೆ ನೀಡುತ್ತಿಲ್ಲ. ರಾಜ್ಯಾದ್ಯಂತ ಕೆಲವೇ ಕೆಲವು ಹಾಸ್ಟೆಲ್‍ಗಳು ಸ್ವಂತ ಕಟ್ಟಡಗಳಲ್ಲಿ ಮೂಲ ಸೌಕರ್ಯಗಳಿಲ್ಲದೆ. ಕೊಂಪೆಗ ಳಂತೆ ನಡೆಯುತ್ತಿವೆ. ಅದರಲ್ಲಿ ಬಹಳಷ್ಷು ಹಾಸ್ಟೆಲ್‍ಗಳು 30-40 ವರ್ಷಗಳ ಹಿಂದಿ ನವುಗಳಾಗಿದ್ದು, ಶೀತಲ ವ್ಯವಸ್ಥೆಯಲ್ಲಿದೆ. ದಲಿತ ವಿದ್ಯಾರ್ಥಿಗಳ ಸಂಖ್ಯೆ ವರ್ಷ ದಿಂದ ವರ್ಷಕ್ಕೆ ದ್ವಿಗುಣಗೊಳ್ಳುತ್ತಿದ್ದು, ಇವರ ವಸತಿಗಾಗಿ ಅವ್ಯವಸ್ಥೆಯಿಂದ ಕೂಡಿದ ಬಾಡಿಗೆ ಕಟ್ಟಡಗಳಿಗೆ ಕೋಟ್ಯಾಂ ತರ ಹಣ ಸುರಿದರೂ ಮೂಲ ಸೌಕರ್ಯ ಗಳಿಲ್ಲದೆ ದಲಿತ ವಿದ್ಯಾರ್ಥಿಗಳು ಸೊರಗು ತ್ತಿದ್ದಾರೆ ಎಂದು ದೂರಿದರು.

ರಾಜ್ಯಾದ್ಯಂತ ಸುಮಾರು 60ರಷ್ಟು ಹಾಸ್ಟೆಲ್‍ಗಳಿಗೆ ಮೇಲ್ವಿಚಾರಕರೇ ಇಲ್ಲದೇ ಹಾಲಿ ಇರುವ ಒಬ್ಬ ಮೇಲ್ವಿಚಾರಕನಿಗೆ 3-4 ಹಾಸ್ಟೆಲ್‍ಗಳ ಜವಾಬ್ದಾರಿ ನೀಡಿ ವಿದ್ಯಾರ್ಥಿಗಳ ಯೋಗಕ್ಷೇಮ, ವಿದ್ಯಾಭ್ಯಾಸದ ಗಮನ ಹರಿಸುವಂತೆ ಮಾಡಿ ಹಾಸ್ಟೆಲ್ ವಿದ್ಯಾರ್ಥಿಗಳನ್ನು ಆನಾಥರನ್ನಾಗಿ ಮಾಡಿದ್ದಾರೆ. ಹಾಸ್ಟೆಲ್ ಮೇಲ್ವಿಚಾರಕರ ಹುದ್ದೆಯನ್ನು ನಿರ್ವಹಿಸಲು ಕನಿಷ್ಠ ಪದವಿ ಯೊಂದಿಗೆ ಬಿಇಡಿ, ಪದವಿ ಕಡ್ಡಾಯ ವಾಗಿದೆ. ಎಲ್ಲಾ ನಿಯಮವನ್ನು ಸಮಾಜ ಕಲ್ಯಾಣ ಇಲಾಖೆಯ ಅಧಿಕಾರಿಗಳು ಗಾಳಿಗೆ ತೂರಿ, ಅದೇ ಹಾಸ್ಟೆಲ್‍ನಲ್ಲಿ ಅಡುಗೆ ಕೆಲಸ ಮಾಡುತ್ತಿರುವ ಸೇವಾ ಹಿರಿತನ ಪರಿಗಣಿಸಿ ಮೇಲ್ವಿಚಾರಕರ ಹುದ್ದೆಯ ನಿಯಮವನ್ನೇ ಉಲ್ಲಂಘಿಸಿ ಹೆಚ್ಚು ಅವ್ಯವಹಾರ ನಡೆಸಿರು ವುದಾಗಿ ಆಕ್ರೋಶ ವ್ಯಕ್ತಪಡಿಸಿದರು. ಅಡುಗೆ ಯವರನ್ನೇ ಜೂನಿಯರ್ ವಾರ್ಡನ್‍ಗ ಳೆಂದು ಪರಿಗಣಿಸಿ 2-3 ಹಾಸ್ಟೆಲ್‍ಗಳ ಜವಾ ಬ್ದಾರಿ ನೀಡಿ ದಲಿತ ವಿದ್ಯಾರ್ಥಿಗಳಿಗೆ ದ್ರೋಹ ಮಾಡಲಾಗಿದೆ ಎಂದು ಆರೋಪಿಸಿದರು.

ಸಮಾಜ ಕಲ್ಯಾಣ ಇಲಾಖೆಯಿಂದ ನೀಡುತ್ತಿರುವ ವಿದ್ಯಾರ್ಥಿ ವೇತನವನ್ನು ಸಕಾಲದಲ್ಲಿ ನೀಡುತ್ತಿಲ್ಲ. ಕಳೆದ ಮೂರು ವರ್ಷಗಳಿಂದಲೂ ಅರ್ಜಿ ಕರೆಯುತ್ತಿ ದ್ದಾರೆ. ಆದರೆ, ಇನ್ನು ವಿದ್ಯಾರ್ಥಿಗಳಿಗೆ ಹಣ ನೀಡಿರುವುದಿಲ್ಲ. ವಿವಿಧ ಪದವಿ ಗಳ್ನು ಖಾಸಗಿ ಕಾಲೇಜುಗಳಲ್ಲಿ ಅಭ್ಯಾಸ ಮಾಡುತ್ತಿರುವ ವಿದ್ಯಾರ್ಥಿಗಳಿಗೆ ಕಾಲೇಜಿನ ಆರಂಭದಲ್ಲಿ ಶುಲ್ಕವನ್ನು ಪಾವತಿಸಿಕೊಂಡಿ ದ್ದರೂ ಸಮಾಜ ಕಲ್ಯಾಣ ಇಲಾಖೆಯಿಂದ ನೀಡುತ್ತಿರುವ ವಿದ್ಯಾರ್ಥಿ ವೇತನವನ್ನು ಖಾಸಗಿ ಶಾಲೆಯ ಮುಖ್ಯಸ್ಥರ ಖಾತೆಗೆ ಜಮಾ ಮಾಡುತ್ತಿರುವುದರಿಂದ ಇಂಟರ್ ನಲ್ ಅಂಕದ ಭಯ ಹುಟ್ಟಿಸಿ ವಿದ್ಯಾ ರ್ಥಿಯ ವೇತನವನ್ನು ಖಾಸಗಿ ಸಂಸ್ಥೆಯ ವರು ಇಲ್ಲಸಲ್ಲದ ಶುಲ್ಕದ ನೆಪ ಹೇಳಿ ಕೊಡದೇ ವಂಚನೆ ಮಾಡುತ್ತಿರುವುದಾಗಿ ಆರೋಪಿಸಿದರು.

ಪ್ರತಿಭಟನೆಯಲ್ಲಿ ಕರ್ನಾಟಕ ದಲಿತ ಸಂಘರ್ಷ ಸಮಿತಿ ಜಿಲ್ಲಾ ಸಂಚಾಲಕ ಗೋವಿಂದರಾಜ ದಿಂಡಗೂರು, ತಾಲೂಕು ಸಂಚಾಲಕ ಲಕ್ಷ್ಮಯ್ಯ, ಸಂಘ ಟನಾ ಸಂಚಾಲಕ ರಮೇಶ್ ಉಳ್ಳಾತಳ್ಳಿ, ಸಿ.ಎನ್.ಮಂಜುನಾಥ್, ರವಿಕುಮಾರ್, ಬಸವರಾಜು, ರಾಮಚಂದ್ರ ಇತರರು ಪಾಲ್ಗೊಂಡಿದ್ದರು.

Translate »