ಅಥ್ಲೆಟಿಕ್‍ನಲ್ಲಿ ರಾಷ್ಟ್ರ ಮಟ್ಟಕ್ಕೆ ಆಯ್ಕೆ
ಚಾಮರಾಜನಗರ

ಅಥ್ಲೆಟಿಕ್‍ನಲ್ಲಿ ರಾಷ್ಟ್ರ ಮಟ್ಟಕ್ಕೆ ಆಯ್ಕೆ

October 5, 2018

ಚಾಮರಾಜನಗರ: ಇಲ್ಲಿನ ಸೇವಾಭಾರತಿ ಶಿಕ್ಷಣ ಸಂಸ್ಥೆ ವಿದ್ಯಾರ್ಥಿಗಳು ಹೈದರಾಬಾದ್‍ನಲ್ಲಿ ಇತ್ತೀ ಚಿಗೆ ನಡೆದ ರಾಜ್ಯಮಟ್ಟದ ಅಥ್ಲೆಟಿಕ್ ಕ್ರೀಡಾಕೂಟದಲ್ಲಿ ವಿಜೇತರಾಗಿ ರಾಷ್ಟ್ರ ಮಟ್ಟಕ್ಕೆ ಆಯ್ಕೆಯಾಗಿದ್ದಾರೆ.

ಸೇವಾಭಾರತಿ ಪ್ರೌಢ ಶಾಲೆ ವಿದ್ಯಾರ್ಥಿಗಳಾದ ಅವಿನಾಶ್, ಯಶವಂತ್ ಕೆ.ಎಮ್, ಲಿಖಿತ ಎಂ.ಜಿ ಅಥ್ಲೆ ಟಿಕ್ ಕ್ರೀಡಾಕೂಟದಲ್ಲಿ ರಾಷ್ಟ್ರಮಟ್ಟಕ್ಕೆ ಆಯ್ಕೆ ಯಾಗಿದ್ದಾರೆ. ಉತ್ತರ ಪದ್ರೇ ಶದ ಲಕ್ನೋವಿನಲ್ಲಿ ನಡೆ ಯಲಿರುವ ಕ್ರೀಡಾಕೂಟದಲ್ಲಿ ಭಾಗವಹಿಸುವ ಈ ವಿದ್ಯಾರ್ಥಿಗಳಿಗೆ ಸೇವಾಭಾರತಿ ಶಾಲೆಯ ಆಡಳಿತಾಧಿಕಾರಿ ರಮೇಶ್, ಕಾರ್ಯದರ್ಶಿ ವಾಸುದೇವರಾವ್, ವಿದ್ಯಾಭಾರತಿ ಜಿಲ್ಲಾಧ್ಯಕ್ಷ ಹೇಮಂತ್, ಮುಖ್ಯೋಪಾಧ್ಯಾಯ ರವಿಪ್ರಸಾದ್, ದೈಹಿಕ ಶಿಕ್ಷಕ ಬಾಲಕೃಷ್ಣ, ಶಿಕ್ಷಕರ ವೃಂದ ಮತ್ತು ಸಂಸ್ಥೆಯ ಸದಸ್ಯರು ಅಭಿನಂದಿಸಿದ್ದಾರೆ.

Translate »