ಹಾಸನ: ತಾಲ್ಲೂಕಿನ ಸಾವಂಕನ ಹಳ್ಳಿ ಜೀತ ಪ್ರಕರಣ ಅಚ್ಚರಿ ತಂದಿದೆ. ಇದೊಂದು ಅಪರೂಪದ ಪ್ರಕರಣವಾಗಿದ್ದು ರಾಷ್ಟ್ರೀಯ ಮಹಿಳಾ ಆಯೋಗ ಸ್ವಯಂ ಪ್ರೇರಿತ ದೂರು ದಾಖಲಿಸಿಕೊಂಡು ವಿಚಾರಣೆ ನಡೆಸುತ್ತಿದೆ ಎಂದು ರಾಷ್ಟ್ರೀಯ ಮಹಿಳಾ ಆಯೋಗದ ಅಧ್ಯಕ್ಷೆ ರೇಖಾ ಶರ್ಮಾ ತಿಳಿಸಿದ್ದಾರೆ.
ಜಿಲ್ಲಾಧಿಕಾರಿ ಕಚೇರಿ ಸಭಾಂಗಣದ ಲ್ಲಿಂದು ಸಾವಂಕನಹಳ್ಳಿ ಜೀತ ಸಂತ್ರಸ್ತರಿಂದ ಹಾಗೂ ಅಧಿಕಾರಿಗಳಿಂದ ಮಾಹಿತಿ ಪಡೆದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಾಳೆ ಬೆಂಗಳೂರಿನಲ್ಲಿ ಸರ್ಕಾರದ ಪ್ರಧಾನ ಕಾರ್ಯದರ್ಶಿ ಹಾಗೂ ಡಿ.ಐ.ಜಿ ಜೊತೆ ಚರ್ಚಿಸಿ ನಂತರ ತಾವು ಸರ್ಕಾರಕ್ಕೆ ವರದಿ ಸಲ್ಲಿಸುವುದಾಗಿ ಹೇಳಿದರು.
ಸಾವಂಕನಹಳ್ಳಿಯ 17 ಮಹಿಳೆಯರು ಹಾಗೂ ಮಕ್ಕಳನ್ನು ಜೀತದಾಳುವಾಗಿ ದುಡಿಸಿ ದ್ದಾರೆ. ಅವರೆಲ್ಲರಿಗೂ ಸೂಕ್ತ ಪುನರ್ ವಸತಿ ಹಾಗೂ ಪರಿಹಾರ ಒದಗಿಸಬೇಕಿದೆ. ಸಾವಂಕನಹಳ್ಳಿ ಜೀತ ಸಂತ್ರಸ್ತರ ಪತ್ತೆ ಹಾಗೂ ವಿಮುಕ್ತಿ ವೇಳೆ ಅನುಸರಿಸಲಾದ ಕ್ರಮಗಳ ಬಗ್ಗೆ ಹಾಗೂ ಸಂತ್ರಸ್ತರ ಅಭಿಪ್ರಾಯ ಗಳ ಬಗ್ಗೆ ವಿವರಣೆ ಪಡೆಯಲಾಗಿದೆ.
ಆದಷ್ಟು ಶೀಘ್ರವಾಗಿ ಕೇಂದ್ರ ಸರ್ಕಾರಕ್ಕೆ ವರದಿ ಸಲ್ಲಿಸಿ ಸೂಕ್ತ ಪರಿಹಾರ ಒದಗಿಸುವ ನಿಟ್ಟಿನಲ್ಲಿ ಪ್ರಯತ್ನಿಸಲಾಗುವುದು ಎಂದು ಅವರು ಹೇಳಿದರು. ವ್ಯವಸ್ಥಿತವಾಗಿ ಯೋಜಿಸಿ ಅಮಾಯಕರನ್ನು ಜೀತದಾಳುವಾಗಿ ದುಡಿಸಿ ಕೊಳ್ಳಲಾಗಿದೆ. ಜಾಲವನ್ನು ಸಂಪೂರ್ಣ ವಾಗಿ ಬೇಧಿಸಿ. ಎಲ್ಲಾ ತಪ್ಪಿತಸ್ತರಿಗೆ ಶಿಕ್ಷೆಯಾಗು ವಂತಾಗಬೇಕು. ಆ ಬಗ್ಗೆ ಪೊಲೀಸ್ ಇಲಾಖೆ ಶ್ರಮಿಸಬೇಕಿದೆ ಎಂದು ಹೇಳಿದರು.
ಸಾವಂಕನಹಳ್ಳಿಯಲ್ಲಿ ಬಂಧನ ಮತ್ತು ಭಯದ ವಾತಾವರಣದಲ್ಲಿದ್ದವರನ್ನು ದುಡಿಸಿಕೊಳ್ಳುತ್ತಿದ್ದವರು ಹೇಗೆ ಕಾರ್ಮಿಕರ ವೇತನ ಪಾವತಿ ಮಾಡಿದ್ದಾರೆ. ಕೆಲಸ ನೀಡಿ ದವರು ಏನಾದರೂ ಈ ಪ್ರಕರಣದಲ್ಲಿ ಶಾಮಿಲಾಗಿದ್ದಾರೆಯೋ ಎಂಬುದೆಲ್ಲವನ್ನು ಸಮಗ್ರವಾಗಿ ತನಿಖೆ ಮಾಡಬೇಕಾಗುತ್ತದೆ ಎಂದು ರೇಖಾ ಶರ್ಮ ತಿಳಿಸಿದರು.
ರಾಜ್ಯ ಮಹಿಳಾ ಆಯೋಗದ ಕಾರ್ಯ ದರ್ಶಿಗಳಾದ ವನಶ್ರೀ ವಿಪಿನ್‍ಸಿಂಗ್, ಜಿಲ್ಲಾಧಿ ಕಾರಿ ರೋಹಿಣಿ ಸಿಂದೂರಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ಎ.ಎನ್. ಪ್ರಕಾಶ್‍ಗೌಡ, ಜಿಲ್ಲಾ ಅಪರ ಜಿಲ್ಲಾಧಿಕಾರಿ ಗಳಾದ ಎಂ.ಎಲ್. ವೈಶಾಲಿ, ಡಾ. ಹೆಚ್.ಎಲ್. ನಾಗರಾಜ್, ಹೆಚ್ಚುವರಿ ಪೊಲೀಸ್ ವರಿಷ್ಠಾ ಧಿಕಾರಿ ನಂದಿನಿ, ಜಿಲ್ಲಾ ಸಮಾಜ ಕಲ್ಯಾಣ ಅಧಿಕಾರಿ ವೆಂಕಟರಮಣ ರೆಡ್ಡಿ ಹಾಗೂ ವಿವಿಧ ಇಲಾಖಾ ಅಧಿಕಾರಿಗಳು ಹಾಜರಿದ್ದರು.