ನೆಪಮಾತ್ರದ ಬಜೆಟ್ ಪೂರ್ವಭಾವಿ ಸಭೆ; ಸಂಘ-ಸಂಸ್ಥೆಗಳ ಆಕ್ರೋಶ
ಹಾಸನ

ನೆಪಮಾತ್ರದ ಬಜೆಟ್ ಪೂರ್ವಭಾವಿ ಸಭೆ; ಸಂಘ-ಸಂಸ್ಥೆಗಳ ಆಕ್ರೋಶ

January 4, 2019

ಬೇಲೂರು: ಪ್ರತಿ ಭಾರಿ ನಡೆಯುವ ಬಜೆಟ್ ಪೂರ್ವಭಾವಿ ಸಭೆಗಳಲ್ಲಿ ನೆಪ ಮಾತ್ರಕ್ಕೆ ಸಾರ್ವಜನಿಕ ರಿಂದ ಸಲಹೆ ಕೇಳುತ್ತಾರೆ, ಇಲ್ಲಿಯತನಕ ಸಾರ್ವಜನಿಕರು ನೀಡಿದ ಸಲಹೆಗಳು ಕಾರ್ಯಗತವಾಗಿಲ್ಲ, ಈ ಪುರುಷಾರ್ಥಕ್ಕೆ ಬಜೆಟ್ ಪೂರ್ವಭಾವಿಗಳು ಅಗತ್ಯವಿಲ್ಲ, ಪುರಸಭೆಯಿಂದ ಸಾರ್ವಜನಿಕರಿಗೆ ಕಣ್ಣೊರೆಸುವ ಹುನ್ನಾರ ನಡೆಯುತ್ತಿದೆ ಎಂದು ಸಂಘಟನೆಗಳು ತೀವ್ರ ಆಕ್ರೋಶ ವ್ಯಕ್ತ ಪಡಿಸಿದ ಘಟನೆ ನಡೆದಿದೆ.

ಪಟ್ಟಣದ ಪುರಸಭಾ ವೇಲಾಪುರಿ ಸಭಾಂಗಣದಲ್ಲಿ 2019-20 ನೇ ಸಾಲಿನ ಅಯ-ವ್ಯಯ ತಯಾರಿಕೆ ಹಿನ್ನಲೆಯಲ್ಲಿ ಕರೆಯಲಾದ ಬಜೆಟ್ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದ ನೂರ್ ಅಹಮದ್ ಅವರು, ಬೇಲೂರು ವಿಶ್ವ ಪ್ರಸಿದ್ದಿ ತಾಣದಲ್ಲಿ ನಿವಾಸಿಗಳಿಗೆ ಅಗತ್ಯ ಸೌಲಭ್ಯಗಳನ್ನು ನೀಡುವಲ್ಲಿ ಪುರಸಭೆ ಸಂಪೂರ್ಣ ವಿಫಲವಾಗಿದೆ. 12ನೆ ವಾರ್ಡ್‍ನ ಸ್ಲಂ ಗೆ ಅಭಿವೃದ್ದಿ ಮರೀಚಿಕೆಯಾಗಿದೆ, ಜನರು ವಾಸವಿಲ್ಲದ 12 ನೇ ವಾರ್ಡ್‍ನಲ್ಲಿ ರಸ್ತೆ ಕಾಮಗಾರಿ ನಡೆಸುವ ಹಿಂದಿನ ಹುನ್ನಾರ ವೇನು ಎಂದು ಕೇಳಿದರು. ಇದಕ್ಕೆ ಧ್ವನಿ ಯಾದ ಹಿರಿಯ ನಾಗರೀಕ ಅಜೀತ್ ಕಳೆದ 8 ಬಜೆಟ್ ಪೂರ್ವಭಾವಿ ಸಭೆಯಲ್ಲಿ ಭಾಗವ ಹಿಸಿದ್ದು, ಯಾವ ಸಲಹೆಗಳು ಕಾರ್ಯಗತ ವಾಗಿಲ್ಲ ಎಂದು ಬೇಸರ ವ್ಯಕ್ತ ಪಡಿಸಿದರು.
ಕರವೇ ಅಧ್ಯಕ್ಷ ಚಂದ್ರಶೇಖರ್ ಮಾತ ನಾಡಿ, ಹಳೆ ಮಾರುಕಟ್ಟೆಯಲ್ಲಿ ಉತ್ತಮ ವಾದ ಶೌಚಾಲಯವನ್ನು ರಾಜಕೀಯ ಒತ್ತಡದಿಂದ ತೆರವು ಮಾಡಿ,ಮಹಡಿ ಮೇಲೆ ಸ್ಥಾಪನೆ ಮಾಡಿರುವ ಶೌಚಾಲಯ ಯಾರಿಗೂ ಉಪಯೋಗ ಆಗುತ್ತಿಲ್ಲ, ಪುನಃ ಆದೇ ಸ್ಥಾನಕ್ಕೆ ಶೌಚಾಲಯ ನಿರ್ಮಿಸುವ ತನಕ ಹೋರಾಟ ಆಚಲವೆಂದ ಅವರು ದೇಗುಲ ರಸ್ತೆ ಶೌಚಾಲಯ ನಿರ್ವಹಣೆ ಇಲ್ಲದೆ ಬಾಗಿಲು ಮುಚ್ಚಿದೆ, ಹೊಯ್ಸಳ ಲಾಂಛನ, ಕೆಲ ಮಾಹನ್ ಪುರುಷರ ಪ್ರತಿಮೆಗಳು ಮಳೆ ಬಿಸಿಲಿಗೆ ಹಾಳಾಗಿದ್ದು, ಸೂಕ್ತ ರಕ್ಷಣೆ ನೀಡಬೇಕು, ಬಜೆಟ್ ಪೂರ್ವ ಭಾವಿ ಸಭೆಗೆ ಪ್ರಚಾರದ ಕೊರತೆಯಿಂದ ಸಾರ್ವಜನಿಕರು ಆಗಮಿಸಿಲ್ಲ ಎಂದರು.

ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ತು ಅಧ್ಯಕ್ಷ ಬಿ.ಎಂ.ರವೀಶ್ ಮಾತನಾಡಿ, ಬಜೆಟ್ ಪೂರ್ವಭಾವಿ ಸಭೆಗಳಲ್ಲಿ ಹತ್ತಾರು ಭಾರಿ ವಿಶ್ವಪ್ರಸಿದ್ದ ಬೇಲೂರಿನ ಪ್ರಮುಖ ರಸ್ತೆಗಳಿಗೆ ಸ್ವಾಗತ ಕಾಮಾನು ಮಾಡುವಂತೆ ಮನವಿ ಮಾಡಿದರೂ ಕೂಡ ಪುರಸಭೆ ಸ್ಪಂದಿಸಿಲ್ಲ. ಬೇಲೂರಿನ ಶಿಲ್ಪಕಲೆಗಳು, ವಿಶೇಷವಾಗಿ ಪರಿಸರ ಕಾಳಜಿ ಬಗ್ಗೆ ಸರ್ಕಾರಿ ತಡೆಗೋಡೆ ಮೇಲೆ ಚಿತ್ರಗಳನ್ನು ಬಿಡಿಸಬೇಕಿದೆ ಎಂದು ಸಲಹೆ ನೀಡಿದರು.

ಪುರಸಭಾ ಅಧ್ಯಕ್ಷೆ ಡಿ.ಆರ್.ಭಾರತಿ ಮಾತ ನಾಡಿ, ದೇಗುಲದ ಸುತ್ತ ಸ್ವಚ್ಛ ಮಾಡುವ ಕೆಲಸವನ್ನು ದೇಗುಲವೇ ಮಾಡಬೇಕು, ಪಾರ್ಕಿಂಗ್ ಹಣವನ್ನು ಅವರು ಬಳಸಿ ಕೊಂಡು ನಾವು ಸ್ವಚ್ಛತೆ ಮಾಡುವಲ್ಲಿ ಅರ್ಥ ವಿಲ್ಲ, ಇನ್ನು ಸ್ವಾಗತ ಕಾಮಾನುಗಳಿಗೆ ರೂ 2 ಕೋಟಿ ಬೇಕು, ಆದರೆ ಪುರಸಭೆ ಅದಾಯ ರೂ 1.25 ಕೋಟಿ, ಹಂತ-ಹಂತವಾಗಿ ಕೆಲಸ ಮಾಡಲಾಗುತ್ತದೆ, ಸಾರ್ವಜನಿಕರು ಸಂಪೂರ್ಣ ಸಹಕಾರ ನೀಡಬೇಕು ಎಂದು ಮನವಿ ಮಾಡಿದರು.

ಬಜೆಟ್ ಪೂರ್ವಭಾವಿ ಸಭೆಯಲ್ಲಿ ಪ್ರಿಯಾಂಗ ಭಾಆಸೇ(ಪರೀಕ್ಷಾರ್ಥ), ಮುಖ್ಯಾ ಧಿಕಾರಿ ಮಂಜುನಾಥ್, ಸದಸ್ಯರಾದ ಬಿ.ಗಿರೀಶ್.ರವಿಅಣ್ಣೇಗೌಡ, ಜುಬೇರ್, ಗಾಯಿತ್ರಿ, ಸತೀಶ್, ನಾಮಿನಿ ಸದಸ್ಯ ರವಿ ಇನ್ನು ಮುಂತಾದವರು ಹಾಜರಿದ್ದರು.

Translate »