ವಾಲ್ಮೀಕಿ ಜಾತ್ರೆ ಪೂರ್ವಭಾವಿ ಸಭೆಯಲ್ಲಿ ಶ್ರೀ ಪ್ರಸನ್ನಾನಂದ ಸ್ವಾಮೀಜಿ ಬೇಸರ
ಹಾಸನ: ಜಾತಿ ಜನಗಣತಿ ಪೂರ್ಣಗೊಂಡಿದ್ದರೂ ಸರಕಾರ ಅದರ ವರದಿ ಬಿಡುಗಡೆ ಮಾಡುತ್ತಿಲ್ಲ ಎಂದು ಮಹರ್ಷಿ ವಾಲ್ಮೀಕಿ ಜಾತ್ರೆ ಪೂರ್ವಭಾವಿ ಸಭೆಯಲ್ಲಿ ಶ್ರೀ ಪ್ರಸನ್ನಾನಂದ ಸ್ವಾಮೀಜಿ ಯವರು ಬೇಸರವ್ಯಕ್ತಪಡಿಸಿದರು.
ನಗರದ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಭವನದಲ್ಲಿ ಶ್ರೀ ಮಹರ್ಷಿ ವಾಲ್ಮೀಕಿ ನಾಯಕ ಜನಾಂಗ ಕ್ಷೇಮಾಭಿವೃದ್ಧಿ ಹಾಗೂ ಜನಪದ ಕಲಾ ಸಂಘ ಇವರ ಸಂಯು ಕ್ತಾಶ್ರಯದಲ್ಲಿ ಶುಕ್ರವಾರ ಮದ್ಯಾಹ್ನ ಹಮ್ಮಿಕೊಳ್ಳಲಾಗಿದ್ದ 2019 ಫೆಬ್ರವರಿ 8 ಮತ್ತು 9ನೇ ಶ್ರೀ ವಾಲ್ಮೀಕಿ ಜಾತ್ರಾ ಮಹೋ ತ್ಸವದ ಅಂಗವಾಗಿ ವಾಲ್ಮೀಕಿ ಸಮಾಜದ ಮುಖಂಡರ ಪೂರ್ವಭಾವಿ ಸಭೆಯಲ್ಲಿ ಉದ್ಘಾಟಕರಾಗಿ ಮಾತನಾಡಿದ ಅವರು, ಜಾತಿ ಜನಗಣತಿಯಾಗಿ ಇಷ್ಟು ವರ್ಷಗಳಾ ದರೂ ಸರಕಾರ ಆಯಾ ವರ್ಗದ ಪಟ್ಟಿ ಬಿಡುಗಡೆ ಮಾಡುತ್ತಿಲ್ಲ. ಪಟ್ಟಿ ಬಿಡುಗಡೆ ಮಾಡಿದರೇ ನಾವು ಕೂಡ ಅಲ್ಪ ಸಂಖ್ಯಾತರ ಗುಂಪಿಗೆ ಸೇರುತ್ತೇವೆ ಎಂದು ಹಿಂದೇಟು ಹಾಕಲಾಗುತ್ತಿದೆ ಎಂದು ದೂರಿದರು.
ನಮ್ಮ ಜನಾಂಗ ಶೇಕಡ 24 ರಷ್ಟು ಇದ್ದು, ನಾವು ಕೂಡ ಮುಖ್ಯ ವಾಹಿನಿಗೆ ಬರುವ ಸಾಧ್ಯತೆ ಇದೆ. ಜೀವನದಲ್ಲಿ ಬದ ಲಾವಣೆ, ಪರಿವರ್ತನೆ ಆಗಿರುವವರಲ್ಲಿ ಆದಿಕವಿ ಮಹರ್ಷಿ ವಾಲ್ಮೀಕಿ ಒಬ್ಬರು. ಪ್ರಾಣಿಗಳನ್ನು ಭೇಟಿ ಮಾಡುತ್ತಿದ್ದ ಈತನಿಗೆ ಆಧ್ಯಾತ್ಮಿಕ ಬಗ್ಗೆ ಏನು ಅರಿವು ಇರಲಿಲ್ಲ. ಭೇಟಿ ಮಾಡಿ ಜೀವನ ಸಾಗಿಸಬೇಕು ಎಂಬುದಷ್ಟೆ ತಿಳಿದಿತ್ತು.
ಗುರುವಿನ ಅನುಗ್ರಹ ದಿಂದ ದೇವರಲ್ಲಿ ಸ್ಮರಣೆ ಮಾಡಲಾಗುತ್ತದೆ ಎಂದರು. ಸಂಸಾರ ಎಂಬ ಗಾಳಿಯಂತೆ ದೀಪವನ್ನು ಮನೆಯಲ್ಲಿ ಹಚ್ಚಬಹುದೇ ಹೊರತು ಹೊರಗಡೆ ಹಚ್ಚಲು ಸಾಧ್ಯವಿಲ್ಲ. ಅದರಂತೆ ಜೀವನ ಎಂಬುದು ಗಾಳಿ ಇದ್ದಂತೆ. ಈ ದೇಹದಲ್ಲಿ ಜೀವ ಎನ್ನುವ ದೀಪ ಊರಿಯುತ್ತಿದ್ದು, ಯಾವಾಗ ಬೇಕಾದರೂ ಹಾರಿ ಹೋಗಬಹುದು ಎಂದು ಕಿವಿ ಮಾತು ಹೇಳಿದ ಅವರು, ದೀಪ ಹಾರಿ ಹೋಗುವ ಒಳಗೆ ಜೀವನವನ್ನು ಸಾರ್ಥಕ ಪಡೆಸಿಕೊಳ್ಳಬೇಕು. ಬದುಕಿದ್ದಾಗ ಭಗವಂತನ ಸ್ಮರಣೆ ಮಾಡಬೇಕು ಎಂದು ಸಲಹೆ ನೀಡಿ ದರು. ವಿವಿಧ ಜನಾಂಗದ ಜಾತ್ರಾ ಮಹೋ ತ್ಸವ ನಡೆದಂತೆ ವಾಲ್ಮೀಕಿ ಜನಾಂಗದ ಜಾತ್ರೆ ಮಾಡಲು ನಮ್ಮ ಸಮಾಜ ನಿರ್ಧರಿ ಸಿದೆ. ಪರಿಶಿಷ್ಟ ಪಂಗಡಕ್ಕೆ ಸೇರಿರುವ ನಾವು ಜನಾಂಗಕ್ಕೆ ಮೀಸಲಾತಿ ಹೆಚ್ಚು ಕೊಡ ಬೇಕು ಎಂದು ಜಾತ್ರಾ ಸಂದರ್ಭದಲ್ಲಿ ನಮ್ಮ ಜನಾಂಗದ ಪ್ರಮುಖ ಬೇಡಿಕೆಗಳನ್ನು ಮುಖ್ಯಮಂತ್ರಿ ಮತ್ತು ಪ್ರಧಾನ ಮಂತ್ರಿಯಲ್ಲಿ ಒತ್ತಾಯ ಮಾಡಲಾಗುವುದು ಎಂದು ತಮ್ಮ ಉದ್ದೇಶವನ್ನು ತಿಳಿಸಿದರು.
ಶ್ರೀ ವಾಲ್ಮೀಕಿ ಜಾತ್ರಾ ಮಹೋತ್ಸವದ ಪ್ರಚಾರದ ಪೋಸ್ಟರನ್ನು ಬಿಡುಗಡೆಗೊಳಿಸ ಲಾಯಿತು. ಈಸಂದರ್ಭದಲ್ಲಿ ಕ್ಷೇಮಾಭಿ ವೃದ್ಧಿ ಸಂಘದ ಅಧ್ಯಕ್ಷ ಹಾಗೂ ಕಸಾಪ ತಾಲೂಕು ಅಧ್ಯಕ್ಷ ಜಿ.ಓ. ಮಹಾಂತಪ್ಪ ರವರನ್ನು ಸನ್ಮಾನಿಸಿ ಗೌರವಿಸಲಾಯಿತು.
ಹಾಸನ ಜಿಲ್ಲೆಯ ಎಲ್ಲಾ ತಾಲೂಕುಗಳ ಅಧ್ಯಕ್ಷರನ್ನು ನೇಮಕ ಮಾಡಿ ಜಾತ್ರಾ ಮಹೋತ್ಸವದ ಜವಬ್ಧಾರಿಯನ್ನು ನೀಡಲಾ ಯಿತು. ಹಾಸನ ತಾಲೂಕು ಅಧ್ಯಕ್ಷರಾಗಿ ಶಿವಪ್ಪ ನಾಯಕ್ ಬ್ರಹ್ಮದೇವರಹಳ್ಳಿ, ಅರಸೀಕೆರೆ ತಾಲೂಕು ಅಧ್ಯಕ್ಷರಾಗಿ ಬಾಯಲರ್ ಕುಮಾರ್, ಆಲೂರು ತಾಲೂಕು ಅಧ್ಯಕ್ಷರಾಗಿ ರಾಜ ನಾಯಕ ಪಟ್ನ, ಅರಕಲಗೂಡು ತಾಲೂಕು ಅಧ್ಯಕ್ಷರಾಗಿ ಎಂ.ಆರ್. ತಿಮ್ಮರಾಜು, ಹೊಳೆನರಸೀಪುರ ತಾಲೂಕು ಅಧ್ಯಕ್ಷರಾಗಿ ವೆಂಕಟೇಶ್ ಶ್ರವಣೂರು, ಚನ್ನರಾಯ ಪಟ್ಟಣ ತಾಲೂಕು ಅಧ್ಯಕ್ಷರಾಗಿ ಗಣೇಶ್, ಬೇಲೂರು ತಾಲೂಕು ಅಧ್ಯಕ್ಷರಾಗಿ ಸುನೀಲ್ ಇವರನ್ನು ಆಯ್ಕೆ ಮಾಡಿ ಜಾತ್ರೆಯ ಜವಬ್ಧಾರಿಯನ್ನು ವಹಿಸಿದರು. ಇದಕ್ಕೆ ಮೊದಲು ಕಳೆದ ತಿಂಗಳಷ್ಟೆ ಸಾವನಪ್ಪಿದ ಜನಂಗದ ಜಿಲ್ಲಾಧ್ಯಕ್ಷ ಬಿ.ಆರ್. ಪ್ರಕಾಶ್ ರವರಿಗೆ ಒಂದು ನಿಮಿಷ ಮೌನ ಆಚರಿಸು ವುದರ ಮೂಲಕ ಶ್ರದ್ಧಾಂಜಲಿ ಅರ್ಪಿಸಿದರು.
ಈ ಸಂದರ್ಭದಲ್ಲಿ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷ ಹಾಗೂ ಕಸಾಪ ತಾಲೂಕು ಅಧ್ಯಕ್ಷ ಜಿ.ಓ. ಮಹಾಂತಪ್ಪ, ಆರ್.ಸಿ. ಬೈರಪ್ಪ, ರಾಜಶೇಖರ್, ಅರಣ್ಯ ಇಲಾಖೆಯ ಶಿವರಾಂ, ಎಂ.ಟಿ. ಶ್ರೀನಿವಾಸ್, ಧರ್ಮಪ್ಪ ನಾಯಕ್, ಪ್ರಭಾಕರ್ ನಾಯಕ್, ಟ್ರಸ್ಟಿ ಮಹೇಶ್, ಬಸವರಾಜು ತಿರುಪತಿ, ರಂಗ ನಾಥ್, ರಾಜಶೇಖರ್, ರಾಮಚಂದ್ರ, ಚೆಲುವನಹಳ್ಳಿ ಶೇಖರಪ್ಪ, ರಂಗನಾಯಕ್, ಜಯಣ್ಣ, ರಾಜಣ್ಣ, ರಾಜನಾಯಕ್, ಸತೀಶ್, ರಂಗಸ್ವಾಮಿ ಇತರರು ಪಾಲ್ಗೊಂಡಿದ್ದರು.