ವಿವಿಧ ಸ್ಪರ್ಧೆಗಳಲ್ಲಿ ಉತ್ಸಾಹದಿಂದ ಪಾಲ್ಗೊಂಡು, ಸಾಹಸ ಮೆರೆದರು!
ಮೈಸೂರು

ವಿವಿಧ ಸ್ಪರ್ಧೆಗಳಲ್ಲಿ ಉತ್ಸಾಹದಿಂದ ಪಾಲ್ಗೊಂಡು, ಸಾಹಸ ಮೆರೆದರು!

September 7, 2018

ಮೈಸೂರು: ನಾವಿನ್ನೂ ಶಕ್ತಿವಂತರು.. ನಮ್ಮ ಶಕ್ತಿ ಕುಂದಿಲ್ಲ ಎಂಬು ದನ್ನು ಸಾಬೀತುಪಡಿಸಲು ಹಿರಿಯ ನಾಗ ರಿಕರು ಗುರುವಾರ ಮೈಸೂರಿನ ಜೆ.ಕೆ. ಮೈದಾನ ದಲ್ಲಿ ನಡೆದ ಮೈಸೂರು ಜಿಲ್ಲಾ ಮಟ್ಟದ ಹಿರಿಯ ನಾಗರಿಕರ ಕ್ರೀಡಾಕೂಟದಲ್ಲಿ ಉತ್ಸಾಹದಿಂದ ಪಾಲ್ಗೊಂಡು ಸಂಭ್ರಮಿಸಿದರು.

ವಿಶ್ವ ಹಿರಿಯ ನಾಗರಿಕರ ದಿನಾಚರಣೆ ಅಂಗವಾಗಿ ವಿಕಲಚೇತನರು ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆ, ಹಿರಿಯ ನಾಗರಿಕರ ಸಕಾಲ ಸೇವಾ ಕೇಂದ್ರ ಟ್ರಸ್ಟ್ ಜಂಟಿಯಾಗಿ ಆಯೋಜಿಸಿದ್ದ ವಿವಿಧ ಸ್ಪರ್ಧೆಗಳಲ್ಲಿ 60 ವರ್ಷ ಮೇಲ್ಪಟ್ಟು, 85 ವರ್ಷದವರೆಗಿನ ಹಿರಿಯ ನಾಗರಿಕರು ಸ್ಪರ್ಧೆಗಳಲ್ಲಿ ಉತ್ಸಾಹದಿಂದ ಪಾಲ್ಗೊಂಡಿ ದ್ದರು. ವೇಗದ ನಡಿಗೆ, ವೇಗದ ಓಟ, 3 ಕೆಜಿ ಗುಂಡು ಎಸೆತ, ಕ್ರಿಕೆಟ್ ಬಾಲ್ ಎಸೆತದಲ್ಲಿ ಸಾಮಥ್ರ್ಯ ಮೆರೆದರು.

ಈ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ಪಡೆದು ವಿಜೇತರಾದವರು ರಾಜ್ಯ ಮಟ್ಟದ ಹಿರಿಯ ನಾಗರಿಕರ ಕ್ರೀಡಾಕೂಟಕ್ಕೆ ಅರ್ಹತೆ ಪಡೆದಿ ದ್ದಾರೆ. ವಿವಿಧ ಸ್ಪರ್ಧೆಗಳ ವಿಜೇತರ ವಿವರ ಇಂತಿದೆ

ಪುರುಷರ ವಿಭಾಗ
60ರಿಂದ 70 ವರ್ಷದವರು: 100 ಮೀಟರ್ ಓಟ- ಬಿ.ಕೆ.ಸೋಮಶೇಖರ್ (ಪ್ರಥಮ), ಸಿ.ಎಸ್.ಮಾದಯ್ಯ (ದ್ವಿತೀಯ), ಗಣೇಶ್ ಶೆಟ್ಟಿ (ತೃತೀಯ). 3 ಕೆಜಿ ಗುಂಡು ಎಸೆತ- ಎ.ಬಿ.ಸುಬ್ಬಯ್ಯ (ಪ್ರಥಮ), ಸಿ.ಎಸ್. ಮಾದಯ್ಯ (ದ್ವಿತೀಯ), ಕೆ.ಸಿ.ಸೋಮ ಶೇಖರ್ (ತೃತೀಯ).
71ರಿಂದ 80 ವರ್ಷದವರು: 75 ಮೀ. ಓಟ- ಕೆ.ಗೋವಿಂದಯ್ಯ (ಪ್ರ), ಎಂ.ಆರ್. ಶ್ರೀನಿವಾಸ್ (ದ್ವಿ), ಎ.ಬಿ.ನಂಜಪ್ಪ (ತೃ). 3 ಕೆಜಿ ಗುಂಡು ಎಸೆತ- ಎ.ಬಿ.ನಂಜಪ್ಪ (ಪ್ರ), ಎಂ.ಬಿ.ಅಯ್ಯಪ್ಪ (ದ್ವಿ), ಎಂ.ಬಿ. ಅಂಕೇಗೌಡ (ತೃ).
80 ವರ್ಷಕ್ಕೆ ಮೇಲ್ಪಟ್ಟವರು: 200 ಮೀಟರ್ ನಡಿಗೆ- ಸಿ.ಚಾಮಶೆಟ್ಟಿ (ಪ್ರ), ಪಿ.ಎಸ್.ಸುಬ್ಬರಾಯಪ್ಪ (ದ್ವಿ), ಎನ್. ವೀರಯ್ಯ (ತೃ). ಕ್ರಿಕೆಟ್ ಚೆಂಡು ಎಸೆತ- ಎನ್.ವೀರಯ್ಯ (ಪ್ರ), ಎನ್.ರಾಮಯ್ಯ (ದ್ವಿ), ಸಿ.ಚಾಮಶೆಟ್ಟಿ (ತೃ).

ಮಹಿಳೆಯರ ವಿಭಾಗ
60ರಿಂದ 70 ವರ್ಷದವರು: 400 ಮೀ. ನಡಿಗೆ- ಬಿ.ಸಿ.ಪಾರ್ವತಿ (ಪ್ರ), ಕೆ.ಎಸ್.ರಮಾಮಣಿ (ದ್ವಿ), ಕೆ.ಎಸ್.ಲಕ್ಷ್ಮಿ (ತೃ). ಕ್ರಿಕೆಟ್ ಚೆಂಡು ಎಸೆತ- ಡಾ. ಬಿ.ನಿರ್ಮಲಾ (ಪ್ರ), ಬಿ.ಸಿ.ಪಾರ್ವತಿ (ದ್ವಿ), ಎನ್.ಕೆ.ರುಕ್ಮಿಣಿ (ತೃ).
71ರಿಂದ 80 ವರ್ಷದವರು: 200 ಮೀ. ನಡಿಗೆ- ಮನೋನ್ಮಣಿ (ಪ್ರ), ಕೆ.ಎಸ್. ಸೀತಮ್ಮ (ದ್ವಿ), ಭಾರತಿ ಎಸ್.ಕಾಮತ್ (ತೃ). ಕ್ರಿಕೆಟ್ ಚೆಂಡು ಎಸೆತ- ಭಾರತಿ ಎಸ್.ಕಾಮತ್ (ಪ್ರ), ಎಂ.ಕೆ.ಕಾಮಿನಿ (ದ್ವಿ), ಎಸ್.ಪದ್ಮಾ (ತೃ).
80 ವರ್ಷ ಮೇಲ್ಪಟ್ಟವರು: 100 ಮೀ. ನಡಿಗೆ ಮತ್ತು ಕ್ರಿಕೆಟ್ ಚೆಂಡು ಎಸೆತ ಎರಡೂ ಸ್ಪರ್ಧೆಯಲ್ಲಿ ಭಾಗವಹಿಸಿದ್ದ ಒಬ್ಬರೇ ಸ್ಪರ್ಧಿ ಲತಾ ಶರ್ಮ (ಪ್ರಥಮ) ಸ್ಥಾನ ಪಡೆದುಕೊಂಡರು)
ಇದಕ್ಕೂ ಮುನ್ನ ಮೈಸೂರು ಜಿಲ್ಲಾ ಮಹಿಳಾ ಮತ್ತು ಮಕ್ಕಳ ಕಲ್ಯಾಣಾಧಿಕಾರಿ ಕೆ.ರಾಧಾ ಕ್ರೀಡಾಕೂಟಕ್ಕೆ ಚಾಲನೆ ನೀಡಿ ದರು. ಮೈಸೂರು ಜಿಲ್ಲಾ ಅಂಗವಿಕಲರ ಕಲ್ಯಾಣಾಧಿಕಾರಿ ಅಭಿಕುಮಾರ್, ಹಿರಿಯ ನಾಗರಿಕರ ಹಗಲು ಯೋಗಕ್ಷೇಮ ಕೇಂದ್ರದ ಪಿ.ರಾಜಪ್ಪ ಇನ್ನಿತರರು ಭಾಗವಹಿಸಿದ್ದರು.

Translate »