ಮೈಸೂರಲ್ಲಿ ಶಂಕರ ನಾಮ ಜಪ ಸಂಕಲ್ಪ ಅಭಿಯಾನ
ಮೈಸೂರು

ಮೈಸೂರಲ್ಲಿ ಶಂಕರ ನಾಮ ಜಪ ಸಂಕಲ್ಪ ಅಭಿಯಾನ

August 10, 2018

ಮೈಸೂರು: ಮೈಸೂರಿನ ರಾಮಾನುಜ ರಸ್ತೆಯಲ್ಲಿರುವ ಶ್ರೀ ಶಂಕರನಾಮ ಜಪಯಜ್ಞ ಸೇವಾ ಸಮಿತಿಯ ಶತಕೋಟಿ ಶ್ರೀ ಶಂಕರನಾಮ ಜಪ ಯಜ್ಞದ ಅಂಗವಾಗಿ ಅಗ್ರಹಾರದ ಶೃಂಗೇರಿ ಶಂಕರ ಮಠದಲ್ಲಿ ಶಂಕರನಾಮ ಜಪದ ಸಂಕಲ್ಪ ಅಭಿಯಾನಕ್ಕೆ ಆರ್‍ಎಸ್‍ಎಸ್ ಮುಖಂಡರಾದ ಸೀತಾರಾಮ ಕೇದಿಲಾಯ ಅವರು ಚಾಲನೆ ನೀಡಿದರು.

ನಂತರ ಮಹರ್ಷಿ ಶಾಲೆಯ ಕಾರ್ಯ ದರ್ಶಿ ಭವಾನಿ ಶಂಕರ್ ಮಾತನಾಡಿ, ಮೈಸೂರಿನಲ್ಲಿ ಲಕ್ಷಾಂತರ ಮಂದಿಯಿಂದ ಯಶಸ್ವಿಯಾಗಿ ನೆರವೇರಿದ ಅತಿರುದ್ರ ಮಹಾಯಾಗ, ತೇರಾಕೋಟಿ ರಾಮಜಪ ಮತ್ತು ಶತಕೋಟಿ ಶಿವಪಂಚಾಕ್ಷರಿ ಯಾಗದ ನಂತರ ಶೃಂಗೇರಿ ಭಾರತಿ ತೀರ್ಥ ಮಹಾ ಸ್ವಾಮಿಗಳ ಅನುಗ್ರಹದಿಂದ ಮತ್ತು ಬೆಲ ಗೂರು ಅವಧೂತರಾದ ಬಿಂಧೂ ಮಾಧವ ಆಚಾರ್ಯರ ಆದೇಶದಂತೆ `ಶ್ರೀ ಶಂಕರಾ ಚಾರ್ಯ ಸದ್ಗುರುವೇ ನಮಃ’ ಎಂದು ಶತಕೋಟಿ ಶಂಕರನಾಮ ಜಪ ನೆರವೇರ ಬೇಕಾಗಿದ್ದು, ಯಾವುದೇ ಜಾತಿ ಭೇದ-ಭಾವವಿಲ್ಲದೆ ಪ್ರತಿಯೊಬ್ಬರು ಶಂಕರಾ ಚಾರ್ಯರ ನಾಮ ಜಪ ಮಾಡಬಹುದಾಗಿದೆ ಎಂದರು. ಸಹಸ್ರಮಾನಗಳ ಹಿಂದೆ ಭರತಖಂಡದಲ್ಲಿ ಜನಸಾಮಾನ್ಯರಿಗೆ ಭಗವಂತನ ಅಸ್ತಿತ್ವವನ್ನು ತಿಳಿಸಿಕೊಟ್ಟು ಉಪನಿಷತ್ತುಗಳು ಬ್ರಹ್ಮಸೂತ್ರ ಹಾಗೂ ಭಗವದ್ಗೀತೆಯನ್ನು ಮೊದಲಿಗೆ ಸಂಸ್ಕೃತ ದಲ್ಲಿ ರಚಿಸಿ ಸಾಮಾನ್ಯರು ಸುಲಭವಾಗಿ ಪಠಿಸುವಂತಹ ಗಣೇಶ, ಶಿವ, ವಿಷ್ಣು, ದೇವಿ, ನದಿ ಸೇರಿದಂತೆ ನೂರಾರು ಸ್ತೋತ್ರ ಗಳನ್ನು ರಚಿಸಿದ ಮಹಾನುಭಾವರೇ ಆದಿಶಂಕರಾಚಾರ್ಯ ಭಗವತ್ಪಾದರು.

ಕೇವಲ 32 ವರ್ಷಗಳ ಶಂಕರರ ಜೀವಿತಾ ವಧಿಯಲ್ಲಿ ಭಾರತ ದೇಶದುದ್ದಗಲಕ್ಕೂ ಸಂಚರಿಸಿ ಶೃಂಗೇರಿ, ಬದರಿ, ಪುರಿ ದ್ವಾರಕೆ ಚತುರಾಮ್ನಾಯ ಶಕ್ತಿಪೀಠವನ್ನು ಸ್ಥಾಪಿಸಿ ಅದರ ಗಡಿಗಳನ್ನು ಧರ್ಮದ ಮೂಲಕ ರಕ್ಷಿಸಿದರು. ಪಂಚಾಂಗದ ತಿಥಿ, ವಾರ, ನಕ್ಷತ್ರ, ರಾಶಿ ಫಲಗಳಿಗೆ ಅನುಗುಣವಾದ ಇಂಗ್ಲಿಷ್ ಕ್ಯಾಲೆಂಡರ್ ಇವತ್ತಿನ ಖಗೋಳ ಶಾಸ್ತ್ರಕ್ಕೆ ಶಂಕರಾಚಾರ್ಯರು ಅಂದೇ ಹಲವಾರು ಯೋಜನೆಗಳನ್ನು ಬರೆದಿ ದ್ದರು. ಅದಕ್ಕಾಗಿಯೇ ತತ್ವಜ್ಞಾನಿಗಳ ದಿನಾಚರಣೆಯನ್ನಾಗಿ ಆಚರಿಸಲ್ಪಡುತ್ತದೆ. ಹಾಗಾಗಿ `ಶ್ರೀ ಶಂಕರಾಚಾರ್ಯ ಸದ್ದು ರುವೇ ನಮಃ’ ಎಂದು ಪ್ರತಿಯೊಬ್ಬರೂ ಜಪಿಸಿದರೆ ಸಂಕಲ್ಪಿಸಿದ ಕಾರ್ಯ ನೆರವೇರುತ್ತದೆ. ವಿದ್ಯಾರ್ಥಿಗಳಿಗೆ ಜ್ಞಾನದ ಏಕಾಗ್ರತೆ, ಹಿರಿಯರಿಗೆ ಆರೋಗ್ಯ, ಮನಃಶಾಂತಿ ದೊರೆಯುತ್ತದೆ. ಶ್ರೀ ಶಂಕರನಾಮ ಜಪದ ಅಭಿಯಾನದಲ್ಲಿ ಭಾಗವಹಿಸುವವರು 9916564360 ಸಂಪರ್ಕಿಸಬಹುದು ಎಂದರು.

ಮಹಿಳಾ ಭಜನಾ ಮಂಡಳಿಗಳು ವಿಷ್ಣು ಸಹಸ್ರನಾಮ ಶಂಕರ ಅಷ್ಟೋತ್ತರ ನಾಮಾವಳಿ ಪಠಿಸಿದರು. ಶಂಕರನಾಮ ಜಪಯಜ್ಞ ಸಂಕಲ್ಪ ಚಾಲನೆಯ ಅಭಿಯಾನ ದಲ್ಲಿ ಶಂಕರ ಜಪ ಸಮಿತಿಯ ಸಂಚಾಲಕ ರಾದ ಎಸ್.ವಿ.ಶ್ರೀನಿವಾಸಮೂರ್ತಿ, ಮಹರ್ಷಿ ಶಾಲೆಯ ಕಾರ್ಯದರ್ಶಿ ಭವಾನಿ ಶಂಕರ್, ರವಿ ಹೊಯ್ಸಳ, ಪ್ರಸನ್ನ ಪ್ರಕಾಶ್, ಶಂಕರ್, ದಿನೇಶ್ ಉಪಾಧ್ಯಾಯ, ಚಿದಂಬರಂ, ಪ್ರಹಲ್ಲಾದ್ ರಾವ್, ಗಣೇಶ್ ರಾವ್, ಜೆ.ರಮೇಶ್, ತೇಜಸ್ ಶಂಕರ್, ಅಜಯ್ ಶಾಸ್ತ್ರಿ, ವಿಕ್ರಂ ಅಯ್ಯಂಗಾರ್, ಮಧುಕಿರಣ್, ಡಿ.ಕೆ.ನಾಗಭೂಷಣ್, ರಾ.ಕಿರಣ್, ಗಾಯತ್ರಿ ಶಂಕರ್, ಆಶಾಲತಾ, ಜ್ಯೋತಿ ಮುಂತಾದವರು ಭಾಗವಹಿಸಿದ್ದರು.

Translate »