ಸಾರಿಗೆ ಅಧಿಕಾರಿಗಳ ಮೂಲಕ ಹಣ ಹಂಚಿಕೆ ಮಾಜಿ ಸಚಿವ ಹೆಚ್.ಡಿ. ರೇವಣ್ಣ ಆರೋಪ
ಹಾಸನ

ಸಾರಿಗೆ ಅಧಿಕಾರಿಗಳ ಮೂಲಕ ಹಣ ಹಂಚಿಕೆ ಮಾಜಿ ಸಚಿವ ಹೆಚ್.ಡಿ. ರೇವಣ್ಣ ಆರೋಪ

April 26, 2018

ಹಾಸನ: ಹೊಳೆನರಸೀಪುರ ವಿಧಾನಸಭಾ ಕ್ಷೇತ್ರದಲ್ಲಿ 7 ಮಂದಿ ಸಾರಿಗೆ ಇಲಾಖೆ ಅಧಿಕಾರಿಗಳಿಂದ ವ್ಯಾಪಕ ಹಣ ಹಂಚಿಕೆಯಾಗುತ್ತಿದೆ ಎಂದು ಮಾಜಿ ಸಚಿವ ಹೆಚ್.ಡಿ.ರೇವಣ್ಣ ಆರೋಪಿಸಿದರು.

ಹಾಸನದಲ್ಲಿ ನಡೆದ ಪತ್ರಿಕಾ ಗೋಷ್ಠಿಯಲ್ಲಿ ಮಾತನಾಡಿದ ಅವರು, ಕಾಂಗ್ರೆಸ್ ಅಭ್ಯರ್ಥಿ ಬಿ.ಪಿ.ಮಂಜೇಗೌಡ ಅವರ ಸಹೋದರ ಕೊಪ್ಪಳದಲ್ಲಿ ಸಾರಿಗೆ ಇಲಾಖೆ ಅಧಿಕಾರಿ ಆಗಿರುವ ಕೃಷ್ಣೇಗೌಡ ನೇತೃತ್ವದಲ್ಲಿ ಹಣವನ್ನು ಹಂಚಿಕೆ ಮಾಡು ತ್ತಿದ್ದಾರೆ ಎಂದು ಆರೋಪಿಸಿದರು.

ಹವಾಲಾ ಮೂಲಕ ಕ್ಷೇತ್ರದಲ್ಲಿ ಹಂಚಲು 10 ಕೋಟಿ ಹಣ ಕಳುಹಿಸಲಾಗುತ್ತಿದೆ. 7 ಮಂದಿ ಸಾರಿಗೆ ಇಲಾಖೆ ಅಧಿಕಾರಿ ಗಳು ಹಣ ಸಂಗ್ರಹಿಸುತ್ತಿದ್ದಾರೆ. ಕೊಪ್ಪಳ ದಲ್ಲಿ ಕೆಲಸ ಮಾಡುತ್ತಿರುವ ಸಾರಿಗೆ ಇಲಾಖೆ ಅಧಿಕಾರಿ ಹೊಳೆನರಸೀಪುರ ಕ್ಷೇತ್ರದಲ್ಲಿ ಬಂದು ಹಣ ಹಂಚಿಕೆ ಮಾಡುತ್ತಿದ್ದ. ಜಿಲ್ಲಾ ಚುನಾವಣಾಧಿ ಕಾರಿಗಳು ಈತನ ಮೇಲೆ ಕ್ರಿಮಿನಲ್ ಪ್ರಕ ರಣ ದಾಖಲಿಸಬೇಕು. ಇಲ್ಲದಿದ್ದರೆ ಅಧಿಕಾರಿಗಳು ಕಚೇರಿಯಲ್ಲಿ ಇದ್ದು ಹಾಜರಿ ಪುಸ್ತಕಕ್ಕೆ ಸಹಿ ಹಾಕುವಂತೆ ನೋಡಿಕೊಳ್ಳ ಬೇಕು ಎಂದು ಚುನಾವಣಾ ಆಯೋಗಕ್ಕೆ ಒತ್ತಾಯಿಸಿ ದೂರು ನೀಡಲಾಗಿದೆ ಎಂದು ತಿಳಿಸಿದರು. ಈ ಬಗ್ಗೆ ಕೂಲಂಕುಶ ತನಿಖೆ ಕೈಗೊಳ್ಳಲು ಕೂಡಲೇ ಆರ್‍ಟಿಓ ಅಧಿಕಾರಿ ಗಳನ್ನು ಸಿಬಿಐಗೆ ಕೊಟ್ಟರೆ ಪೂರ್ಣ ಬಣ್ಣ ಬಯಲು ಆಗುತ್ತದೆ ಎಂದು ಹೆಚ್.ಡಿ. ರೇವಣ್ಣ ಒತ್ತಾಯಿಸಿದರು.

ಹೊಳೆನರಸೀಪುರ ಕ್ಷೇತ್ರಕ್ಕೆ ಹಣವನ್ನು ಜಿಲ್ಲೆಯ ಎಲ್ಲಾ ತಾಲೂಕುಗಳಿಂದ ಹಣ ಸಂಗ್ರಹಿಸಿ ಕೊಡಲಾಗುತ್ತಿದೆ. ಸಾರಿಗೆ ಇಲಾಖೆಯ ಒಬ್ಬೊಬ್ಬ ಮೋಟರ್ ಇನ್ಸ್ ಪೆಕ್ಟರ್ 100 ಕೋಟಿ ರೂವರೆಗೂ ಹಣ ಸಂಗ್ರಹ ಮಾಡುತ್ತಿದ್ದಾರೆ. ಒಬ್ಬೊಬ್ಬ ಅಧಿಕಾರಿ ನೂರು ಕೋಟಿ ರೂ.ಗಳ ಆಸ್ತಿ ಅವರ ಬಳಿ ಇದೆ ಎಂದು ದೂರಿದರು.

ಚುನಾವಣೆ ವೇಳೆ ಮಂಜೇಗೌಡರೇ 13 ಕೋಟಿ ರೂ.ಗಳ ಆಸ್ತಿ ಲೆಕ್ಕ ತೋರಿಸಿದ್ದಾರೆ. ಇಂತಹ ಭ್ರಷ್ಟರಿಗೆ ಪ್ರೋತ್ಸಾಹ ಕೊಡುವ ಸರಕಾರ, ನನ್ನ ಕ್ಷೇತ್ರದಲ್ಲಿ ಹಣ, ಹೆಂಡ ವ್ಯಾಪಕವಾಗಿ ಹಂಚುತ್ತಿದ್ದಾರೆ ಎಂದರು.

ಚನ್ನರಾಯಪಟ್ಟಣದ ವೈನ್ಸ್ ಸ್ಟೋರ್ ವೊಂದಕ್ಕೆ 2 ಕೋಟಿ ರೂ. ನೀಡಿದ್ದು, ಇವರಿಗೆ ಮದ್ಯ ಹೇಗೆ ಸಿಗುತ್ತದೆ ಎಂದು ಪ್ರಶ್ನೆ ಮಾಡಿದರು. ಈಗಾಗಲೇ 2018ರ ಚುನಾವಣೆ ದಿನಾಂಕ ನಿಗದಿಯಾಗಿದೆ. ನಮ್ಮ ಅಭ್ಯರ್ಥಿಗಳು ನಾಮಪತ್ರ ಸಲ್ಲಿಸಿದ್ದಾರೆ. ಈ ಬಾರಿ ಹಾಸನ ಜಿಲ್ಲೆಯಲ್ಲಿ 7 ಕ್ಷೇತ್ರದಲ್ಲಿ 7 ಜೆಡಿಎಸ್ ಅಭ್ಯರ್ಥಿಗಳ ಗೆಲುವು ನಿಶ್ಚಿತ. ಜಿಲ್ಲೆಗೆ ಐಐಟಿ ತರಬೇಕೆಂದು ಮೊದಲು ನಾವುಗಳು ಹೇಳಿದ್ದು, ಆದರೆ ಇಂದಿನ ಸರಕಾರಗಳು ಅದನ್ನು ಕಡೆಗಣ ಸಿದೆ ಎಂದು ದೂರಿದರು.

ಜಿಲ್ಲೆಯಲ್ಲಿ ರೈತರು ಬೆಳೆ ಬೆಳೆದು ನಾಲ್ಕು ವರ್ಷಗಳಾಗಿದೆ. ಒಂದು ಕಡೆ ಬರಗಾಲ, ರೈತರು ಬೆಳೆ ನಷ್ಟವಾಗಿ ಸುಮಾರು 10 ಸಾವಿರ ಕೋಟಿ ರೂ. ನಷ್ಟವಾಗಿದೆ. ಇದಕ್ಕೆ ಕೇಂದ್ರ ಮತ್ತು ರಾಜ್ಯ ಸರಕಾರಗಳು ಪರಿಹಾರ ನೀಡದೆ ವಂಚಿಸಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು. ಕುಡಿಯುವ ನೀರಿಗೆ ಇನ್ನು 40 ಕೋಟಿ ರೂ ಬಾಕಿ ಇದೆ. ದುದ್ದ-ಶಾಂತಿ ಗ್ರಾಮದ ಕುಡಿಯುವ ನೀರಿಗಾಗಿ 159 ಕೋಟಿ ರೂ.ಗಳ ಕಾಮ ಗಾರಿ ತಡೆ ಮಾಡಿದರು. ಜೆಡಿಎಸ್ ಆಡಳಿತ ಬಂದರೆ ರಾಜ್ಯದ ಎಲ್ಲಾ ರೈತರ ಸಾಲಮನ್ನಾ ಮಾಡುವುದು ಮೊದಲ ಕೆಲಸ, ಹಾಗೆ ತೆಂಗು ಬೆಳೆಗಾರರಿಗೆ ಪರಿಹಾರ ಕೊಡಲಾ ಗುವುದು. ಜಿಲ್ಲೆಯಲ್ಲಿ ಉತ್ತಮ ಬಿತ್ತನೆ ಬೀಜ ಕೊಡಿಸಿ, ಕುಡಿಯುವ ನೀರಿಗೆ ಆದ್ಯತೆ ನೀಡುವುದಾಗಿ ಹೇಳಿದರು. ಹಾಸನದಲ್ಲಿ ಒಂದು ಮಹಿಳಾ ಯೂನಿವರ್ಸಿಟಿ ನಿರ್ಮಿಸುವ ಉದ್ದೇಶ ಹೊಂದಿರುವು ದಾಗಿ ಹೇಳಿದರು.

ರಾಜ್ಯದಲ್ಲಿ ನಿಷ್ಪಕ್ಷಪಾತವಾಗಿ ಚುನಾವಣೆ ನಡೆಯಲು ಕೂಡಲೇ ಸರ್ಕಾರದ ಮುಖ್ಯ ಕಾರ್ಯದರ್ಶಿ ಯನ್ನು ಬದಲಾಯಿಸಬೇಕು. ಮುಖ್ಯ ಕಾರ್ಯದರ್ಶಿ ಕಾಂಗ್ರೆಸ್ ಏಜೆಂಟ್ ರಂತೆ ಕೆಲಸ ಮಾಡುತ್ತಿದ್ದಾರೆ. ಜಿಲ್ಲೆಯಲ್ಲಿ 7ಕ್ಕೆ 7ಕ್ಷೇತ್ರದಲ್ಲಿ ಜೆಡಿಎಸ್ ಗೆಲುವು ನಿಶ್ಚಿತ. ರಾಜ್ಯದಲ್ಲಿ ಅಧಿಕಾರಕ್ಕೆ ಬಂದ ನಂತರ ಮೊದಲಿಗೆ ರೈತರ ಸಾಲ ಮನ್ನಾ ಮಾಡಲಾಗುವುದು ಎಂದರು.

Translate »