ಚಿತ್ರದುರ್ಗದಿಂದ ಹಾಸನಕ್ಕೆ ಲಗ್ಗೆ ಇಟ್ಟ ಕುರಿಗಾಹಿಗಳು
ಹಾಸನ

ಚಿತ್ರದುರ್ಗದಿಂದ ಹಾಸನಕ್ಕೆ ಲಗ್ಗೆ ಇಟ್ಟ ಕುರಿಗಾಹಿಗಳು

December 31, 2018

ರಾಮನಾಥಪುರ, ಡಿ.30- ನಮ್ಮ ಪ್ರದೇಶದಲ್ಲಿ ಮಳೆ ಇಲ್ಲದೆ ಬೇಸಿಗೆ ರೀತಿ ಝಳಜಪಿಸುತ್ತಿರುವುದರಿಂದ ಚಿತ್ರದುರ್ಗ, ಹೊಸದುರ್ಗ, ಹುಳಿಯಾರು ಮುಂತಾದ ಕಡೆಗಳಿಂದ ಸಾವಿರಾರು ಕುರಿ ಮಂದೆ ಗಳನ್ನು ಈ ಭಾಗಕ್ಕೆ ತಂದು ಹತ್ತಾರು ಕಡೆ ಈ ಭಾಗದ ಗ್ರಾಮೀಣ ಪ್ರದೇಶಗಳಲ್ಲಿ ಬರುವ ಮುಂಗಾರುಮಳೆ ಬೀಳುವವ ರೆಗೂ ಕುರಿಗಳನ್ನು ಮೇಯಿಸುತ್ತೇವೆ ಎನ್ನುತ್ತಾರೆ ಕುರಿ ಮಂದೆಯವರು.

ನಮ್ಮ ರೈತರು ವ್ಯವಸಾಯದ ಜೊತೆಗೆ ಸಾಕು ಪ್ರಾಣಿಗಳ ಸಾಕುವ ಪೈಕಿ ಕುರಿ ಮುಖ್ಯವಾದ ಹಾಗೂ ಆದಾಯ ತಂದು ಕೊಡುವ ಪ್ರಾಣಿಯಾಗಿದೆ. ಕುರಿಗಳು ಹೆಚ್ಚಾಗಿ ಒಣ ಪ್ರದೇಶ, ಬಯಲು ಮತ್ತು ಕುರುಚಲು ಪ್ರದೇಶಗಳಲ್ಲಿ ಸಾಕುತ್ತೇವೆ. ಇದು ಸಾಂಪ್ರದಾಯಿಕ ತಳಿಗಳಿಗೆ ಹಾಸನ ಜಿಲ್ಲೆಯ ಗಡಿಭಾಗದ ರಾಮನಾಥಪುರ ಸುತ್ತಮುತ್ತ ಅಲ್ಪ- ಮಳೆ ಬಿದ್ದು, ಉತ್ತಮ ಹವಾಮಾನವಿರುವುದರಿಂದ ಇಲ್ಲಿ ಆಡು, ಕುರಿಗಳನ್ನು ಮೇಯಿಸಲು ತರುತ್ತೇವೆ. ಈ ಹವಾಗುಣಕ್ಕೂ ಹೊಂದಿಕೊಳ್ಳುವಂತೆ ತಳಿಗಳಿವೆ ಎಂದು ಕುರಿ ಮಂದೆ ರೈತ ಹುಳಿಯೂರು ಸಿದ್ದಪ್ಪನಾಯ್ಕ ಹಾಗೂ ರಾಜಯ್ಯ ಹೇಳಿದರು.

ಕಳೆದ ಮೂರು ವರ್ಷಗಳಿಂದ ಮಳೆ ಇಲ್ಲದೆ ಬರಗಾಲದಿಂದ ನರಳುತ್ತಿದ್ದೇವೆ. ಈ ವರ್ಷವೂ ರಾಜ್ಯದಲ್ಲಿ ಬಿತ್ತನೆಯಾಗಿದ್ದ ಬೆಳೆ ನೆಲಕಚ್ಚಿದೆ. ಮಳೆಯಾಗದೆ ಇರುವು ದರಿಂದ ಕೆರೆ ಕಟ್ಟೆಗಳೆಲ್ಲ ತುಂಬದೆ ಅಂತ ರ್ಜಲದ ಮಟ್ಟ ಕುಸಿದು ಕೊಳವೆ ಬಾವಿ ಗಳಲ್ಲೂ ನಮ್ಮಲ್ಲಿ ನೀರು ಕಡಿಮೆಯಾಗಿದೆ. ಈ ವರ್ಷದ ಮುಂಗಾರಿನ ಮಳೆ ಮೇಲೆ ಭಾರೀ ನಿರೀಕ್ಷೆಯಿಟ್ಟುಕೊಂಡಿದ್ದ ಕೃಷಿಕರು ಇದ್ದಬದ್ದ ಹಣ ಖರ್ಚು ಮಾಡಿ ಭೂಮಿ ಹಸನು ಕಾರ್ಯದಲ್ಲಿ ತೊಡಗಿದ್ದೆವು. ಬೆಳೆ ಯಲ್ಲಿ ಕಳೆ ತೆಗೆಯಲು, ಕುಂಟೆ ಹೊಡೆ ಯುವುದು ಸೇರಿದಂತೆ ಬಿತ್ತನೆ ಕಾರ್ಯ ಚುರುಕುಗೊಳಿಸಿದ್ದರು. ಆದರೆ, ಮಳೆ ಸರಿಯಾಗಿ ಬಾರದೆ ಇರುವುದರಿಂದ ರೈತರು ತೀವ್ರ ಕಂಗಾಲಾಗಿ ಈ ಬಾರಿ ಮಳೆ ಕೈಕೊಟ್ಟ ಕಾರಣ ನಾಟಿಗೆ ಹಿನ್ನಡೆ ಯಾಗಿ ಉತ್ಪಾದನೆ ಮೇಲೆ ಹೊಡೆತ ಬಿದ್ದಿದೆ ಎಂದರು.

ನಮ್ಮಲ್ಲಿ ಹಿಂಗಾರು ಮಳೆಯ ಅಭಾವ: ನಮ್ಮ ಭಾಗದಲ್ಲಿ ಮೂರು ವರ್ಷಗಳಿಂದ ಮಳೆ ಇಲ್ಲದೆ ಬರಗಾಲದಿಂದ ನರಳು ತ್ತಿದ್ದೇವೆ ಅದ್ದರಿಂದ ನಾವು ಹಾಸನ-ಕೊಡಗು ಜಿಲ್ಲೆಯ ಗಡಿಭಾಗದ ರಾಮನಾಥಪುರ, ಕೇರಳಾಪುರ, ರುದ್ರಪಟ್ಟಣ ಕಡೆ ಮುಂಗಾರು ಹಾಗೂ ಹಿಂಗಾರು ಮಳೆ ಬಿದ್ದಿದ್ದ ನೀರು ನಾಲೆಗಳಿಗೆ ಬಿಟ್ಟ ಪರಿ ಣಾಮ ಕೆರೆ ಕಟ್ಟೆಗಳ ಅಕ್ಕಪಕ್ಕದಲ್ಲಿ ಕುರಿ ಗಳಿಗೆ ಈ ಭಾಗದಲ್ಲಿ ಉತ್ತಮ ಮೇವಿದೆ. ಆದ್ದರಿಂದ ನಾವು ಇಲ್ಲಿ ಸುಧಾರಿತ ಕುರಿ ಗಳನ್ನು ಮೇಯಿಸುತ್ತಿದ್ದೇವೆ ಎಂದರು.

ಆದರೆ ಚಿತ್ರದುರ್ಗ, ಹೊಸದುರ್ಗ, ಹುಳಿಯಾರು ಮುಂತಾದ ಕಡೆಗಳಲ್ಲಿ ಮಳೆ ಹಾಗೂ ಬೆಳೆ ಇಲ್ಲದೆ ಈ ಭಾಗದ ಸುಮಾರು ಲಕ್ಷಾಂತರ ರೈತರು ತಲೆ ಮೇಲೆ ಬಟ್ಟೆ ಹಾಕಿಕೊಂಡು ಆಕಾಶದತ್ತ ಮುಖ ಮಾಡಿ, ಈ ಭಾಗಕ್ಕೆ ಬಂದಿದ್ದೇವೆ. ಈ ಬಾರಿ ಮುಂಗಾರಿನಲ್ಲಿ ಅಲ್ಪ ಮಳೆ ಯಾಗಿತ್ತು. ಹಿಂಗಾರು ಮಳೆ ಇಲ್ಲಿಯವ ರೆಗೂ ಮಳೆಯಾಗದೆ ಬೇಸಿಗೆಯ ದಿನಗಳನ್ನು ನೆನಪಿಸುವ ಬಿಸಿಲಿನ ಬಿಸಿ ಕಾಣಿಸಿಕೊಂಡು ಕೃಷಿಕ ಸಮುದಾಯದಲ್ಲಿ ಬರದ ಭೀತಿ ಆವರಿಸಿದೆ.

ಪ್ರಾಣಿಯ ವೈಶಿಷ್ಟ್ಯ: ಚಿಕ್ಕ ಕುರಿ ಮರಿಗಳನ್ನು ಶೆಡ್ ಸೂತ್ತಲೂ ಬಲವಾದ ಬೇಲಿ ನಿರ್ಮಿಸಿ, ಮರಿಗಳನ್ನು ತಾಯಿಯ ಜೊತೆ ಯಲ್ಲಿ ಬಿಡುವುದು ಉತ್ತಮ. ಕುರಿಗಳು ತಮ್ಮ ಮರಿಗಳನ್ನು ಸುಲಭವಾಗಿ ಗುರುತಿ ಸುತ್ತವೆ. ಇದು ಪ್ರಾಣಿಯ ವೈಶಿಷ್ಟ್ಯ. ಮುಂಗಾರು ಆರಂಭದಲ್ಲಿ ಅಲ್ಪ ಬಿದ್ದ ಮಳೆರಾಯ, ಹಿಂಗಾರಿನಲ್ಲಿ ಮುನಿಸಿಕೊಂಡು ದನ, ಕರು, ಆಡು, ಕುರಿ ಮುಂತಾದವುಗಳಿಗೆ ಮೇವು ಇಲ್ಲದೆ ನಾವು ಈ ಭಾಗಕ್ಕೆ ನೂರಾರು ಕಿ.ಮೀ. ದೂರ ಕುರಿ, ಆಡು ಮುಂತಾದ ಪ್ರಾಣಿಗಳ ಜೊತೆ ಮೇವು ಹುಡುಕಿಕೊಂಡು ಬಂದಿದ್ದೇವೆ. ಕೆಲವು ವೇಳೆ ಇತರ ಪ್ರಾಣಿಗಳಂತೆ ಕುರಿಗಳಿಗೆ ಸಾಂಕ್ರಾಮಿಕ ರೋಗ ಕಾಣಿಸಿಕೊಂಡು ಆರ್ಥಿಕ ನಷ್ಟ ಉಂಟು ಮಾಡುತ್ತದೆ ಎಂದರು.

ಆಹಾರ ಪದ್ಧತಿ: ದೇಹದ ಅವಶ್ಯಕತೆ ಪೂರೈಸಲು ಪ್ರತಿನಿತ್ಯವೂ ಸುಮಾರು 8ರಿಂದ 10 ಗಂಟೆಗಳ ಕಾಲ ಮೇಯಿಸ ಬೇಕು. ಮುಂಜಾನೆ ಸ್ವಲ್ಪ ತಡವಾಗಿ ಅಂದರೆ ಹುಲ್ಲಿಗಾವಲಿನ ಮೇಲೆ ಬಿಸಿಲು ಬಿದ್ದ ಮೇಲೆ ಮೇಯಿಸಲು ಸೂಕ್ತ. ಒಂದು ಕುರಿಗೆ ಪ್ರತಿನಿತ್ಯ 5ರಿಂದ 6 ಕಿ.ಗ್ರಾಂ.ನಷ್ಟು ಹಸಿರು ಮೇವಿನ ಅವಶ್ಯಕತೆ ಇದೆ. ಕುರಿ ಗಳನ್ನು ಹುಲ್ಲಿಗಾವಲಿನಲ್ಲಿ ಮೇಯಿಸು ವುದು ನಮ್ಮಲ್ಲಿರುವ ಸಾಮಾನ್ಯ ಪದ್ಧತಿ. ಆದ್ದರಿಂದ ಮೇವಿನ ಇಳುವರಿ ಕಡಿಮೆ ಯಾದಾಗ ನಾವು ಹಾಸನ ಮತ್ತು ಕೊಡಗು ಜಿಲ್ಲೆಯ ಭಾಗಗಳಿಗೆ ಬಂದು ಮುಂಗಾರು ಮಳೆ ಬೀಳುವವರೆಗೆ ಇಲ್ಲಿಯ ರೈತರು ತಮ್ಮ ತಮ್ಮ ಭೂಮಿಯ ಒಂದೊಂದು ರಾತ್ರಿ ಕೂಡಿಹಾಕಿ ಮುಂದೆ ಬಿಟ್ಟು ರೈತರ ಹತ್ತಿರ ಹಣ ಪಡೆದು ಜೀವನ ನಡೆಸು ತ್ತೇವೆ ಎನ್ನುತ್ತಾರೆ ಕುರಿ ಮಂದೆಯವರು. ಬೆಳೆಯುವ ಮರಿಗಳಿಗೆ ಹಾಗೂ ಬೀಜದ ಟಗರುಗಳಿಗೆ ಹುರುಳಿ, ನುಚ್ಚು ಹತ್ತಿಕಾಯಿ, ಇಲ್ಲವೆ ಹಿಂಡಿಯನ್ನೂ, ಎಳೆಯ ಕುರಿ ಮರಿಗಳಿಗೆ ಚಿಗುರು ಹುಲ್ಲು, ಕಳೆ, ಜಾಲಿ, ಬೇಲದಕಾಯಿ ಕೊಟ್ಟು ಅವುಗಳಿಂದ ಬರುವ ಉತ್ಪನ್ನಗಳನ್ನು ಹೆಚ್ಚಿಸುವುದಕ್ಕೆ ದಾಣಿ ಮಿಶ್ರಣ ಕೊಡುವುದು ಒಳ್ಳೆಯದು ಎನ್ನುತ್ತಾರೆ ಕುರಿ ಮಂದೆ ಮಾಲೀಕರು.

Translate »