ಹಾಸನ: ಪ್ರೇಮಿಗಳಿಬ್ಬರು ವಿಷ ಕುಡಿದು ಆತ್ಮಹತ್ಯೆಗೆ ಯತ್ನಿಸಿದ ಪರಿ ಣಾಮ ಯುವಕ ಸಾವನ್ನಪ್ಪಿ, ಯುವತಿ ಸ್ಥಿತಿ ಗಂಭೀರವಾಗಿರುವ ಘಟನೆ ಜಿಲ್ಲೆಯ ಮೂಡಿಗೆರೆಯ ತಾಲೂಕಿನ ಎಸಗಲ್ ಗ್ರಾಮದ ತೋಟವೊಂದರಲ್ಲಿ ನಡೆದಿದೆ.
ಕೀರ್ತಿ (22) ವಿಷ ಕುಡಿದು ಮೃತಪಟ್ಟ ಯುವಕನಾಗಿದ್ದು, ಯುವತಿಯನ್ನು ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.
ಪ್ರೇಮಿಗಳಿಬ್ಬರು ಜಿಲ್ಲೆಯ ಕೊರಳ್ಳಿ-ಹೊಸೂರು ಗ್ರಾಮದವರಾಗಿದ್ದು, ಮೃತ ಕೀರ್ತಿ ಪಿಯುಸಿ ಓದಿ ಮೆಕಾನಿಕ್ ಕೆಲಸ ಮಾಡುತ್ತಿದ್ದನು. ಯುವತಿ ರಾಜೀವ್ ಕಾಲೇಜಿನಲ್ಲಿ ಅಂತಿಮ ವರ್ಷದ ಕಂಪ್ಯೂಟರ್ ಸೈನ್ಸ್ ವ್ಯಾಸಂಗ ಮಾಡುತ್ತಿದ್ದಳು. ಇಬ್ಬರು ಪರಸ್ಪರ ಪ್ರೀತಿಸುತ್ತಿದ್ದರು.
ತಮ್ಮ ಪ್ರೀತಿಯನ್ನು ಇಬ್ಬರು ತಮ್ಮ ಪೆÇೀಷಕರಿಗೆ ತಿಳಿಸಿದ್ದರು. ಈ ವೇಳೆ ಇಬ್ಬರ ಮನೆಯಲ್ಲೂ ವಿರೋಧ ವ್ಯಕ್ತಪಡಿಸಿದ್ದಾರೆ. ಅಲ್ಲದೇ ಹಾಸನ ಟೌನ್ ಎಕ್ಸ್‍ಟೆನ್‍ಷನ್ ಪೆÇಲೀಸ್ ಠಾಣೆಯಲ್ಲಿ ಇಬ್ಬರ ಸಂಬಂಧಿಕರು ರಾಜಿ ನಡೆಸಿ ಇಬ್ಬರೂ ಬೇರೆ ಬೇರೆ ಇರುವಂತೆ ತೀರ್ಮಾನ ಮಾಡಿದ್ದರು ಎನ್ನಲಾಗಿದೆ.
ಆದರೆ, ಗುರುವಾರ ರಾತ್ರಿ ಕೀರ್ತಿ ಮತ್ತು ಯುವತಿ ಹೊಂಡಾ ಬೈಕಿನಲ್ಲಿ ಮೂಡಿಗೆರೆ ಟೌನ್‍ನ ಎಸಗಲ್ ಗ್ರಾಮದ ಕಾಫಿ ತೋಟಕ್ಕೆ ತೆರಳಿ ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದಾರೆ. ಮುಂಜಾನೆ ತೋಟದ ಕೆಲಸಕ್ಕೆಂದು ಸ್ಥಳೀಯರು ಹೋದಾಗ ಇವರಿಬ್ಬರು ಪತ್ತೆಯಾಗಿದ್ದಾರೆ. ಬಳಿಕ ಪೆÇಲೀಸರಿಗೆ ಮಾಹಿತಿ ನೀಡಿ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲು ಮುಂದಾಗಿದ್ದಾರೆ. ಆದರೆ, ಕೀರ್ತಿ ಅದಾಗಲೇ ಮೃತಪಟ್ಟಿದ್ದು, ಸದ್ಯ ಹಾಸನದ ಜಿಲ್ಲಾಸ್ಪತ್ರೆಯಲ್ಲಿ ಯುವತಿಗೆ ಚಿಕಿತ್ಸೆ ನೀಡಲಾಗುತ್ತಿದೆ.
ಘಟನೆ ಕುರಿತು ಇಬ್ಬರ ಕುಟುಂಬಸ್ಥರಿಗೂ ಪೆÇಲೀಸರು ಮಾಹಿತಿ ನೀಡಿದ್ದು, ಮೂಡಿಗೆರೆ ಪೆÇಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ನಡೆಸಿದ್ದಾರೆ.