ತೆರಕಣಾಂಬಿಯಲ್ಲಿ ಶ್ರೀಲಕ್ಷ್ಮಿ ವರದರಾಜಸ್ವಾಮಿ ರಥೋತ್ಸವ
ಚಾಮರಾಜನಗರ

ತೆರಕಣಾಂಬಿಯಲ್ಲಿ ಶ್ರೀಲಕ್ಷ್ಮಿ ವರದರಾಜಸ್ವಾಮಿ ರಥೋತ್ಸವ

February 19, 2019

ಗುಂಡ್ಲುಪೇಟೆ: ತಾಲೂಕಿನ ತೆರಕಣಾಂಬಿ ಗ್ರಾಮದಲ್ಲಿರುವ ಪುರಾಣ ಪ್ರಸಿದ್ದ ಶ್ರೀ ಲಕ್ಷ್ಮೀವರದರಾಜ ಸ್ವಾಮಿ ದೇವಸ್ಥಾನದಲ್ಲಿ ಹತ್ತನೇ ವರ್ಷದ ರಥೋತ್ಸವವು ಸಾವಿರಾರು ಭಕ್ತರ ಜಯಘೋಷದೊಂದಿಗೆ ವಿಜೃಂಭಣೆ ಯಿಂದ ನೆರವೇರಿತು.

ಶುದ್ಧ ಪೌರ್ಣಮಿಯ ಮಂಗಳವಾರ ಮಧ್ಯಾಹ್ನ 12 ಗಂಟೆಗೆÉ ತಹಶೀಲ್ದಾರ್ ಹಾಗೂ ಮುಜರಾಯಿ ಅಧಿಕಾರಿ ನಂಜುಂ ಡಯ್ಯ ರಥಕ್ಕೆ ಪೂಜೆ ಸಲ್ಲಿಸುವ ಮೂಲಕ ಚಾಲನೆ ನೀಡಿದರು. ಪುರುಷರಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಮಹಿಳೆಯರೇ ರಥವನ್ನು ಎಳೆಯುವುದು ಈ ರಥೋ ತ್ಸವದ ವಿಶೇಷವಾಗಿದೆ.

ತಳಿರು ತೋರಣ ಮತ್ತು ಧ್ವಜಪತಾಕೆ ಗಳಿಂದ ಸಿಂಗಾರಗೊಂಡು ಲಕ್ಷ್ಮೀ ವರದ ರಾಜಸ್ವಾಮಿಯ ಉತ್ಸವ ಮೂರ್ತಿಯನ್ನು ಹೊತ್ತು ಹೊರಟ ರಥವನ್ನು ಸಹಸ್ರಾರು ಭಕ್ತರು ಮುಖ್ಯ ರಸ್ತೆಯಿಂದ ಎಳೆದು ಶ್ರೀ ಆಂಜನೇಯಸ್ವಾಮಿ ದೇವಸ್ಥಾನದ ಸುತ್ತಲೂ ಪ್ರದಕ್ಷಿಣೆ ಹಾಕಿಸಿ ಸ್ವಸ್ಥಾನವನ್ನು ಸೇರಿಸಿದರು.

ರಥೋತ್ಸವದ ಹಿನ್ನೆಲೆಯಲ್ಲಿ ಕಳೆದ ಮೂರು ದಿನಗಳಿಂದ ಗ್ರಾಮದ ಪ್ರಮುಖ ಬೀದಿಗಳಲ್ಲಿ ಧ್ವನಿವರ್ಧಕಗಳನ್ನು ಅಳವ ಡಿಸಿ ದೇವಸ್ಥಾನದಲ್ಲಿ ನಡೆಯುವ ಪೂಜಾ ಕೈಂಕರ್ಯಗಳು ಎಲ್ಲರಿಗೂ ತಿಳಿಯುವ ವ್ಯವಸ್ಥೆ ಮಾಡಲಾಗಿತ್ತು. ರಸ್ತೆಯ ಇಕ್ಕೆಲೆ ಗಳಲ್ಲಿಯೂ ವಿದ್ಯುತ್ ದೀಪಾಲಂಕಾರ, ತಳಿರು ತೋರಣಗಳನ್ನು ಕಟ್ಟಿ ಇಡೀ ಗ್ರಾಮವೇ ನವ ವಧುವಿನಂತೆ ಸಿಂಗಾರಗೊಂಡಿತ್ತು.

ಸರದಿ ಸಾಲಿನಲ್ಲಿ ನಿಂತ ಸಾವಿರಾರು ಭಕ್ತರು ಶ್ರೀಲಕ್ಷ್ಮಿ ವರದರಾಜಸ್ವಾಮಿ ದೇವಾ ಲಯಕ್ಕೆ ಭೇಟಿ ನೀಡಿ ದರ್ಶನ ಪಡೆದು ಪೂಜೆ ಸಲ್ಲಿಸಿದರು. ಜಿಲ್ಲಾ ಸಂಪರ್ಕ ರಸ್ತೆ ಯಲ್ಲಿ ಸಂಚರಿಸಬೇಕಾಗಿದ್ದ ಎಲ್ಲಾ ವಾಹನ ಗಳನ್ನೂ ಪೆÇಲೀಸರು ಬದಲಿ ರಸ್ತೆಯಲ್ಲಿ ಸಂಚರಿಸುವಂತೆ ಮಾಡಿದ್ದರಿಂದ ಯಾವುದೇ ಅಡ್ಡಿ ಇಲ್ಲದೆ ರಥೋತ್ಸವ ಜರುಗಿತು.

ಮೆರವಣಿಗೆ ಯುದ್ದಕ್ಕೂ ಜಾನಪದ ಕಲಾತಂಡಗಳು, ಮಂಗಳವಾದ್ಯ, ಬ್ಯಾಂಡ್ ವಾದನ, ಛತ್ರಿ-ಚಾಮರಗಳು, ಗೊರವರ ಕುಣಿತ, ಗಾರುಡಿಗೊಂಬೆ, ದೊಣ್ಣೆವರಸೆ ಮುಂತಾದ ತಂಡಗಳ ಜೊತೆಯಲ್ಲಿ ಮುಖ್ಯ ರಸ್ತೆಯಲ್ಲಿ ಸಾಗಿದ ಮಾರ್ಗದಲ್ಲಿ ಅಂಗಡಿ ಮುಂಗಟ್ಟುಗಳನ್ನು ಮುಚ್ಚಿ ರಥೋತ್ಸವದಲ್ಲಿ ಪಾಲ್ಗೊಂಡರು. ಬಿಸಿಲಿನ ಬೇಗೆಯಿಂದ ರಸ್ತೆ ಕಾಯುವುದು ಹಾಗೂ ಧೂಳೇಳಿವು ದನ್ನು ತಪ್ಪಿಸಲು ರಸ್ತೆಯಲ್ಲಿ ನೀರು ಹರಿಸ ಲಾಗಿತ್ತು. ಅಂಗಡಿಗಳ ಮಾಲೀಕರು ಹಾಗೂ ಗ್ರಾಮದ ನಿವಾಸಿಗಳು ರಥಕ್ಕೆ ಪೂಜೆ ಸಲ್ಲಿಸಿ ತಮ್ಮ ಭಕ್ತಿ ಭಾವ ಮೆರೆದರು. ನವ ದಂಪತಿ ಗಳು ಹಣ್ಣು ಧವನ ಎಸೆದು ಕೃತಾರ್ಥರಾದರು.

Translate »