ಪತ್ರಕರ್ತರ ಕ್ರೀಡಾಕೂಟಕ್ಕೆ ಚಾಲನೆ
ಕೊಡಗು

ಪತ್ರಕರ್ತರ ಕ್ರೀಡಾಕೂಟಕ್ಕೆ ಚಾಲನೆ

July 24, 2018

ಸೋಮವಾರಪೇಟೆ: ತಾಲೂಕು ಪತ್ರಕರ್ತರ ಸಂಘದ 2ನೇ ವರ್ಷದ ಕ್ರೀಡಾಕೂಟಕ್ಕೆ ತಾಲೂಕು ಕನ್ನಡ ಸಾಹಿತ್ಯ ಪರಿಷತ್‍ನ ಕೋಶಾಧ್ಯಕ್ಷ ಎ.ಪಿ.ವೀರರಾಜು ಚಾಲನೆ ನೀಡಿದರು. ನಂತರ ಮಾತ ನಾಡಿದ ಅವರು, ಸದಾ ಒತ್ತಡದಲ್ಲೇ ಕಾರ್ಯ ನಿರ್ವಹಿಸುವ ಪತ್ರಕರ್ತರು ಕ್ರೀಡೆ ಮತ್ತು ಸಾಂಸ್ಕೃತಿಕ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು.

ಈ ಸಂದರ್ಭ ಪತ್ರಕರ್ತರ ಸಂಘದ ರಾಜ್ಯ ಸಮಿತಿ ಸದಸ್ಯ ಎಸ್.ಎ.ಮುರಳೀಧರ್, ತಾಲೂಕು ಪತ್ರಕರ್ತರ ಸಂಘದ ಅಧ್ಯಕ್ಷ ಕವನ್ ಕಾರ್ಯಪ್ಪ, ಪತ್ರಿಕಾ ಭವನ ಟ್ರಸ್ಟ್ ಅಧ್ಯಕ್ಷ ಎಸ್.ಮಹೇಶ್, ನಗರ ಪತ್ರಕರ್ತರ ಸಂಘದ ಅಧ್ಯಕ್ಷ ಲೋಕೇಶ್, ಶನಿವಾರ ಸಂತೆ ಪತ್ರಕರ್ತರ ಸಂಘದ ಅಧ್ಯಕ್ಷ ಹರೀಶ್ ಕುಮಾರ್, ಸುಂಟಿಕೊಪ್ಪ ಪತ್ರ ಕರ್ತರ ಸಂಘದ ಅಧ್ಯಕ್ಷ ಎಂ.ಬಿವಿನ್ಸೆಂಟ್, ತಾಲೂಕು ಪತ್ರಕರ್ತರ ಸಂಘದ ಪ್ರಧಾನ ಕಾರ್ಯ ದರ್ಶಿ ಬಿ.ಎ.ಭಾಸ್ಕರ್ ಮತ್ತಿತರರು ಇದ್ದರು.

ತಾಲೂಕಿನ ಕುಶಾಲನಗರ, ಶನಿವಾರ ಸಂತೆ, ಸುಂಟಿಕೊಪ್ಪ ಹಾಗೂ ಸೋಮ ವಾರಪೇಟೆ ನಗರ ಪತ್ರಕರ್ತರ ಸಂಘದ ಸದಸ್ಯರುಗಳು ಕೇರಂ, ಚೆಸ್ ಪಂದ್ಯಾಟ ಗಳಲ್ಲಿ ಪಾಲ್ಗೊಂಡಿದ್ದರು.

ಪಂದ್ಯಾಟಗಳ ವಿಜೇತರು: ಕೇರಂ ಸಿಂಗಲ್ಸ್‍ನಲ್ಲಿ ಕುಶಾಲನಗರದ ಜಯ ಪ್ರಕಾಶ್ ಅವರು ಪ್ರಥಮ, ಕುಂಬೂರು ವಿಶ್ವ ಅವರು ದ್ವಿತೀಯ ಸ್ಥಾನವನ್ನು ಪಡೆದರು. ಕೇರಂ ಡಬಲ್ಸ್‍ನಲ್ಲಿ ಸೋಮ ವಾರಪೇಟೆಯ ಡಿ.ಪಿ.ಲೋಕೇಶ್ ಮತ್ತು ಶನಿವಾರಸಂತೆಯ ಹರೀಶ್‍ಕುಮಾರ್ ತಂಡ ಪ್ರಥಮ, ಸುಂಟಿಕೊಪ್ಪದ ಶಶಿಕಾಂತ್‍ರೈ ಹಾಗೂ ಸೋಮವಾರ ಪೇಟೆಯ ವಿಜಯ್ ಹಾನಗಲ್ ತಂಡ ದ್ವಿತೀಯ ಸ್ಥಾನವನ್ನು ಪಡೆಯಿತು. ಚೆಸ್ ಪಂದ್ಯಾಟದಲ್ಲಿ ಸುಂಟಿ ಕೊಪ್ಪದ ಸುನಿಲ್ ಎಂ.ಎಸ್. ಪ್ರಥಮ ಹಾಗೂ ದ್ವಿತೀಯ ಸ್ಥಾನವನ್ನು ಸೋಮ ವಾರಪೇಟೆಯ ಡಿ.ಪಿ. ಲೋಕೇಶ್ ಪಡೆದು ಕೊಂಡರು. ಮೈಂಡ್ ಗೇಮ್‍ನಲ್ಲಿ ಕುಶಾಲ ನಗರದ ರಘು ಹೆಬ್ಬಾಲೆ ಅವರು ಪ್ರಥಮ ಸ್ಥಾನವನ್ನು ಪಡೆದರೆ, ಸೋಮವಾರ ಪೇಟೆಯ ವಿಜಯ್‍ಹಾನಗಲ್ ದ್ವಿತೀಯ ಹಾಗೂ ಡಿ.ಪಿ.ಲೋಕೇಶ್ ತೃತೀಯ ಸ್ಥಾನವನ್ನು ಪಡೆದುಕೊಂಡರು.

ಕ್ರೀಡಾಕೂಟದಲ್ಲಿ ವಿಜೇತರಾದವರಿಗೆ ತಾಲೂಕು ಪತ್ರಕರ್ತರ ಸಂಘದಿಂದ ಈ ತಿಂಗಳ ಅಂತ್ಯದಲ್ಲಿ ಆಯೋಜಿಸಲಾಗುವ ಪತ್ರಿಕಾ ದಿನಾಚರಣೆಯಲ್ಲಿ ವಿತರಿಸಲಾಗು ವುದು ಎಂದು ತಾಲೂಕು ಸಂಘದ ಅಧ್ಯಕ್ಷ ತೇಲಪಂಡ ಕವನ್ ಕಾರ್ಯಪ್ಪ ತಿಳಿಸಿದ್ದಾರೆ.

Translate »