ವಾಹನ ಚಾಲಕರ ಸಂಘದ ಅಧ್ಯಕ್ಷರಾಗಿ ಸಿ.ಕೆ.ಬೋಪಣ್ಣ
ಕೊಡಗು

ವಾಹನ ಚಾಲಕರ ಸಂಘದ ಅಧ್ಯಕ್ಷರಾಗಿ ಸಿ.ಕೆ.ಬೋಪಣ್ಣ

July 24, 2018

ಗೋಣಿಕೊಪ್ಪಲು: ಪ್ರತಿಷ್ಠಿತ ಗೋಣಿಕೊಪ್ಪಲುವಿನ ವಾಹನ ಚಾಲಕ,ಮಾಲೀಕರ ಸಂಘದ ಅಧ್ಯಕ್ಷರಾಗಿ 8ನೇ ಬಾರಿಗೆ ಗೋಣಿಕೊಪ್ಪಲಿನ ಜಿಲ್ಲಾ ಪಂಚಾಯ್ತಿ ಸದಸ್ಯರು ಹಾಗೂ ಇತರ ಸಂಘ ಸಂಸ್ಥೆಯಲ್ಲಿ ಸಕ್ರಿಯರಾಗಿರುವ ಚಿಯಕ್‍ಪೂವಂಡ ಬೋಪಣ್ಣ ಅವಿ ರೋಧವಾಗಿ ಆಯ್ಕೆಯಾಗಿದ್ದಾರೆ.

ಗೋಣಿಕೊಪ್ಪಲಿನ ಮಹಿಳಾ ಸಮಾಜದ ಸಭಾಂಗಣದಲ್ಲಿ ಆಯೋಜನೆ ಗೊಂಡಿದ್ದ 2017-18ನೇ ಸಾಲಿನ ವಾರ್ಷಿಕ ಮಹಾಸಭೆಯಲ್ಲಿ ಈ ಆಯ್ಕೆ ನಡೆಯಿತು. ಉಪಾಧ್ಯಕ್ಷರಾಗಿ ಪಿ.ಎಸ್.ಶರತ್ ಕಾಂತ್, ಕಾರ್ಯದರ್ಶಿಯಾಗಿ ಜಿ.ಆರ್.ಕೃಷ್ಣೇ ಗೌಡ, ಸಹಕಾರ್ಯದರ್ಶಿಯಾಗಿ ಕೆ.ಬಿ.ರೇಣು ಕುಮಾರ್, ಖಜಾಂಜಿಯಾಗಿ ಪಿ.ಎಂ.ರಫಿಕ್, ಆಯ್ಕೆಗೊಂಡರು.ನಿರ್ದೇಶಕರಾಗಿ ಯು.ಟಿ.ವೆಂಕಟೇಶ್, ಎಂ..ಎನ್.ಸುಬ್ರಮಣಿ, ವಿ.ಟಿ.ಕೃಷ್ಣ, ಸ್ಟಾನೀ ಪರ್ನಾಂಡಿಸ್, ಕೆ.ಪಿ. ಪ್ರವೀಣ್, ಎಂ.ಎಂ.ಅಖಿಲ್, ಆಂಥೋನಿ, ಸರ್ಪುದ್ದೀನ್, ಸುಬ್ರಮಣಿ, ಅಶೋಕ, ಸೋಮಪ್ಪ, ಅನೀಶ್, ವಿನೋದ್, ಸಂತೋಷ್, ಚೇತನ್ ಕುಮಾರ್, ಸಭೀಷ್, ಮಣಿ, ಅಪ್ಪಣ್ಣ, ಯೋಗೇಶ್,ಹಾಗೂ ಸುಬ್ರಮಣಿ ಆಯ್ಕೆಗೊಂಡರು.

ಮಹಾ ಸಭೆಯನ್ನು ಉದ್ದೇಶಿಸಿ ಮಾತ ನಾಡಿದ ಅಧ್ಯಕ್ಷರಾದ ಸಿ.ಕೆ.ಬೋಪಣ್ಣ ಸಂಘದ ಚಟುವಟಿಕೆಯಲ್ಲಿ ಎಲ್ಲರು ಕೈ ಜೋಡಿಸಬೇಕು. ಸಂಕಷ್ಟದಲ್ಲಿರುವವರಿಗೆ ಸಹಕರಿಸಬೇಕು. ವಾಹನ ಚಾಲನೆ ಸಂದರ್ಭದಲ್ಲಿ ಅತ್ಯಂತ ಎಚ್ಚರಿಕೆ ವಹಿಸುವು ದರೊಂದಿಗೆ ಸೂಕ್ತ ದಾಖಲಾತಿಗಳನ್ನು ಚಾಲಕರು ಇಟ್ಟುಕೊಳ್ಳಬೇಕು ಎಂದರು.

ಕಾರ್ಯಕ್ರಮದಲ್ಲಿ ಕಾರ್ಯದರ್ಶಿ ಕೃಷ್ಣೇಗೌಡ ವಾರ್ಷಿಕ ವರದಿ ಮಂಡಿಸಿ ದರು. ಖಜಾಂಜಿ ಪಿ.ಎಂ.ರಶೀದ್ ಲೆಕ್ಕಪತ್ರ ಮಂಡಿಸಿದರು. ಸಹ ಕಾರ್ಯದರ್ಶಿ ಕೆ.ಬಿ.ರೇಣುಕುಮಾರ್ ವಂದಿಸಿದರು.

Translate »