ಗೆಂಡೇಹಳ್ಳಿ ರಸ್ತೆ ವಿಸ್ತರಣೆ ಕಾಮಗಾರಿಗೆ ರೇವಣ್ಣ ಚಾಲನೆ
ಹಾಸನ

ಗೆಂಡೇಹಳ್ಳಿ ರಸ್ತೆ ವಿಸ್ತರಣೆ ಕಾಮಗಾರಿಗೆ ರೇವಣ್ಣ ಚಾಲನೆ

February 25, 2019

ಬೇಲೂರು: ಗೆಂಡೇಹಳ್ಳಿ ಯಿಂದ ಬೇಲೂರಿಗೆ ತೆರಳುವ ಲೋಕೋ ಪಯೋಗಿ ರಸ್ತೆ ವಿಸ್ತರಣೆ ಕಾಮಗಾರಿ ಗುದ್ದಲಿಪೂಜೆ ಹಾಗೂ ಸರ್ಕಾರಿ ಪಿಯು ಕಾಲೇಜು ಕಟ್ಟಡದ ಉದ್ಘಾಟನೆಯನ್ನು ಲೋಕೋಪಯೋಗಿ ಸಚಿವ ಹೆಚ್.ಡಿ. ರೇವಣ್ಣ ನೆರವೇರಿಸಿದರು.

ಬಳಿಕ ಮಾತನಾಡಿದ ಅವರು, ಗ್ರಾಮೀಣ ಪ್ರದೇಶದಲ್ಲಿ ರಸ್ತೆ, ಸೇತುವೆಗಳ ನಿರ್ಮಾಣದ ಅಗತ್ಯವಿದೆ. ಜಾವಗಲ್ ಹೋಬಳಿಯ ರಸ್ತೆ, ಸೇತುವೆ ಕಾಮಗಾರಿಗೆ 58 ಕೋಟಿ ರೂ.ಗಳ ಅನುದಾನಕ್ಕೆ ಮಂಜೂರಾತಿ ನೀಡ ಲಾಗುತ್ತಿದೆ. ಈ ಹೋಬಳಿಯಲ್ಲಿ 5 ಸೇತುವೆ ನಿರ್ಮಿಸುವ ಉದ್ದೇಶವಿದೆ. ಗೆಂಡೇಹಳ್ಳಿ ಬಳಿ ಇರುವ ಪಿರಂಗಹಳ್ಳ ಸೇತುವೆಗೂ ಅನುದಾನ ನೀಡಲಾಗುವುದು ಎಂದರು.

ತಾಲೂಕಿನಲ್ಲಿ 4 ರಿಂದ 5 ಪಬ್ಲಿಕ್‍ಶಾಲೆ ಆರಂಭಿಸಲಾಗುವುದು. ಬೇಲೂರಿನಲ್ಲಿ ಸಾಕಷ್ಟು ಕೆಲಸ ಬಾಕಿ ಇದ್ದು, ಹಂತ ಹಂತ ವಾಗಿ ಮಾಡಿಸಲಾಗುವುದು. ರಾಜ್ಯದಲ್ಲಿ 1 ಸಾವಿರ ಪ್ರಾಥಮಿಕ ಆಂಗ್ಲ ಮಾಧ್ಯಮ ಶಾಲೆ ಆರಂಭಿಸಲು ಮುಖ್ಯಮಂತ್ರಿ ನಿರ್ಧರಿಸಿದ್ದಾರೆ ಎಂದು ತಿಳಿಸಿದರು.

ಶಾಸಕ ಕೆ.ಎಸ್.ಲಿಂಗೇಶ್ ಮಾತನಾಡಿ, ಇದೇ ತಿಂಗಳ 26 ರಂದು ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಹಳೇಬೀಡಿಗೆ ಆಗಮಿಸಲಿದ್ದು, 162 ಕೋಟಿ ರೂ. ಯೋಜನೆಯ ರಣಘಟ್ಟ ನೀರಾವರಿ ಕಾಮಗಾರಿಗೆ ಶಂಕುಸ್ಥಾಪನೆ ನೆರವೇರಿಸು ವರು. ಈಗಾಗಲೇ ಬಜೆಟ್‍ನಲ್ಲಿ 100 ಕೋಟಿ ರೂ. ಮೀಸಲಿಡಲಾಗಿದ್ದು ಉಳಿಕೆ ಹಣ ಹಂತ ಹಂತವಾಗಿ ನೀಡಲು ನಿರ್ಧ ರಿಸಲಾಗಿದೆ ಎಂದರು.

ತಾಲೂಕಿನ ಹೆಬ್ಬಾಳು, ಅರೇಹಳ್ಳಿ, ಬಿಕ್ಕೋಡು, ಗೆಂಡೇಹಳ್ಳಿಗೆ ಕರ್ನಾಟಕ ಪಬ್ಲಿಕ್ ಶಾಲೆ ಆರಂಭಿಸಬೇಕು ಎಂದು ಮನವಿ ಮಾಡಿದರಲ್ಲದೆ. ರಣಘಟ್ಟ ಚೆÀಕ್ ಡ್ಯಾಂ ಕಾಮಗಾರಿ ಶಂಕುಸ್ಥಾಪನೆಗೆ ಆಗ ಮಿಸುವ ಮುಖ್ಯಮಂತ್ರಿ ಹಾಗೂ ಸಂಸದ ಹೆಚ್.ಡಿ.ದೇವೇಗೌಡ ಇತರರನ್ನು ಸನ್ಮಾನಿ ಸಲಾಗುವುದು ಎಂದು ತಿಳಿಸಿದರು. ಇದೇ ವೇಳೆ ಹೆಚ್.ಡಿ.ರೇವಣ್ಣ ಹಾಗೂ ಶಾಸಕ ಕೆ.ಎಸ್.ಲಿಂಗೇಶ್ ಅವರನ್ನು ಸನ್ಮಾನಿಸಲಾಯಿತು.

ಜೆಡಿಎಸ್ ತಾಲೂಕು ಅಧ್ಯಕ್ಷ ತೊ.ಚ. ಅನಂತಸುಬ್ಬರಾಯ, ಕಾರ್ಯಾಧ್ಯಕ್ಷ ಬಿ.ಸಿ.ಮಂಜುನಾಥ್, ಜಿಪಂ ಮಾಜಿ ಸದಸ್ಯ ಸಿ.ಎಸ್.ಪ್ರಕಾಶ್, ತಾಪಂ ಉಪಾಧ್ಯಕ್ಷೆ ಕಮಲ ಚಿಕ್ಕಣ್ಣ, ಮಾಜಿ ಅಧ್ಯಕ್ಷ ಅಶ್ವಥ್, ಹೆಚ್‍ಡಿ ಸಿಸಿ ಬ್ಯಾಂಕ್ ಉಪಾಧ್ಯಕ್ಷ ನಾಗ ರಾಜ್, ಪ್ರಾಂಶುಪಾಲ ಗಣೇಶ್, ಗ್ರಾಮ ಪಂಚಾ ಯಿತಿ ಸದಸ್ಯ ಪ್ರೇಮ್ ಇತರರು ಇದ್ದರು.

Translate »