ಡ್ರಾಪ್ ಕೊಡುವ ನೆಪದಲ್ಲಿ ಹಣ ದೋಚುತ್ತಿದ್ದ ದರೋಡೆಕೋರರ ಬಂಧನ
ಹಾಸನ

ಡ್ರಾಪ್ ಕೊಡುವ ನೆಪದಲ್ಲಿ ಹಣ ದೋಚುತ್ತಿದ್ದ ದರೋಡೆಕೋರರ ಬಂಧನ

February 25, 2019

ಹಾಸನ: ಡ್ರಾಪ್ ಕೊಡುವ ನೆಪ ದಲ್ಲಿ ಕಾರಿಗೆ ಹತ್ತಿಸಿಕೊಂಡು ಮಾರ್ಗ ಮಧ್ಯೆ ಹಲ್ಲೆ ನಡೆಸಿ ಹಣ ದೋಚುತ್ತಿದ್ದ ಇಬ್ಬರು ದರೋಡೆಕೋರರನ್ನು ಬಡಾವಣೆ ಠಾಣೆ ಪೆÇಲೀಸರು ಬಂಧಿಸಿದ್ದು, 9 ಸಾವಿರ ರೂ. ನಗದು, 100 ಗ್ರಾಂ ಬೆಳ್ಳಿ ಸಾಮಗ್ರಿ ಹಾಗೂ 2 ಮೊಬೈಲ್ ವಶಪಡಿಸಿಕೊಂಡಿದ್ದಾರೆ.

ತಾಲೂಕಿನ ಗೊರೂರು ನಿವಾಸಿ ಇನಾ ಯತ್ (26), ಮಂಡ್ಯ ತಾಲೂಕು ಡಣಾಯ ಕನಪುರದ ಶ್ರೀನಿವಾಸ್ (33) ಬಂಧಿತ ಆರೋಪಿಗಳಾಗಿದ್ದು, ಆಲೂರಿನ ಇಮ್ರಾನ್ ಎಂಬಾತ ನಾಪತ್ತೆಯಾಗಿದ್ದಾನೆ ಎಂದು ಬಡಾವಣೆ ಠಾಣೆ ಪಿಎಸ್‍ಐ ಪಿ.ಸುರೇಶ್ ಸುದ್ದಿಗೋಷ್ಠಿಯಲ್ಲಿ ಭಾನುವಾರ ತಿಳಿಸಿದರು.

ಪ್ರಕರಣ ಹಿನ್ನೆಲೆ: ಫೆ.15 ರಂದು ನಗರದ ಶ್ರೀನಿವಾಸ್ ಎಂಬ ವ್ಯಕ್ತಿ ಮಡಿಕೇರಿಗೆ ಹೋಗು ವುದಕ್ಕಾಗಿ ಹೊಸ ಬಸ್ ನಿಲ್ದಾಣ ಸಮೀಪ ಹೋಗುತ್ತಿದ್ದಾಗ ಓಮ್ನಿಯಲ್ಲಿ ಬಂದ ಆರೋಪಿ ಇನಾಯತ್, ತಾನೂ ಮಡಿಕೇರಿಗೆ ಹೋಗು ತ್ತಿದ್ದು, ಬಸ್ ಟಿಕೆಟ್ ಹಣವನ್ನೇ ಪಡೆದು ಡ್ರಾಪ್ ನೀಡುವುದಾಗಿ ಹೇಳಿದ್ದ. ಇನಾ ಯತ್‍ನ ಮಾತು ಕೇಳಿ ಕಾರು ಹತ್ತಿದ ಶ್ರೀನಿವಾಸ್ ಅವರಿಗೆ ನಗರ ಹೊರವಲಯದ ಕೈಗಾರಿಕಾ ಪ್ರದೇಶ ತಲುಪುತ್ತಿದ್ದಂತೆ ತಾನು ದರೋಡೆಕೋರನ ವಾಹನ ಹತ್ತಿರುವುದು ಅರಿವಿಗೆ ಬಂದಿತ್ತು. ವಾಹನ ನಿಲ್ಲಿಸಿದ ಇನಾ ಯತ್, ಶ್ರೀನಿವಾಸ್ ಅವರ ಶರ್ಟ್ ಜೇಬಿನ ಲ್ಲಿದ್ದ ಹಣ ಹಾಗೂ ಚಿನ್ನಾಭರಣ ಕಿತ್ತುಕೊಂಡು ಹಲ್ಲೆ ನಡೆಸಿದ್ದ. ಇದರಿಂದ ಆಘಾತಕ್ಕೊಳ ಗಾದ ಶ್ರೀನಿವಾಸ್ ಜೀವ ಉಳಿಸಿಕೊಳ್ಳಲು ತಮ್ಮ ಬಳಿಯಿದ್ದ ಎಲ್ಲ ವಸ್ತುಗಳನ್ನು ಅಲ್ಲಿಯೇ ಬಿಟ್ಟು ಮುಖ್ಯರಸ್ತೆಗೆ ಓಡಿ ಬಂದು ಅಲ್ಲಿಂದ ಬಡಾವಣೆ ಠಾಣೆಗೆ ತೆರಳಿ ದೂರು ನೀಡಿದ್ದರು.

ಮತ್ತೊಂದು ಪ್ರಕರಣದಲ್ಲಿ ಬೆಂಗಳೂರಿ ನಲ್ಲಿ ವಾಸವಿರುವ ಬೇಲೂರು ಮೂಲದ ವೀರಭದ್ರಪ್ಪ ಎಂಬುವರು ಹೊಸಕೊಪ್ಪಲಿ ನಲ್ಲಿರುವ ತಮ್ಮ ಮಗಳ ಮನೆಯಿಂದ ಬೆಂಗಳೂರಿಗೆ ಹೋಗುವುದಕ್ಕಾಗಿ ಬಸ್ ನಿಲ್ದಾಣ ಕಡೆಗೆ ಹೋಗುತ್ತಿದ್ದರು. ಚನ್ನ ಪಟ್ಟಣ ರೈಲ್ವೆ ಗೇಟ್ ದಾಟುತ್ತಿದ್ದಂತೆ ಎದು ರಿಗೆ ಬಂದ ಇನಾಯತ್ ಹಾಗೂ ಶ್ರೀನಿ ವಾಸ್, ಪರಿಚಯದವರಂತೆ ಮಾತಾಡಿಸಿ ತಾವೂ ಬೆಂಗಳೂರಿಗೆ ಹೋಗುತ್ತಿರುವು ದಾಗಿ ಹೇಳಿದ್ದಾರೆ.

ಅವರಿಗೂ ಬಸ್ ಟಿಕೆಟ್ ದರ ಪಡೆದು ಡ್ರಾಪ್ ನೀಡುವುದಾಗಿ ಹೇಳಿ ವಾಹನದಲ್ಲಿ ಕೂರಿಸಿಕೊಂಡಿದ್ದರು. ತಾಲೂ ಕಿನ ಪೆರುಮನಹಳ್ಳಿ ಸಮೀಪ ಹೋಗು ತ್ತಿದ್ದಂತೆ ವಾಹನ ನಿಲ್ಲಿಸಿ ಕಬ್ಬಿಣದ ರಾಡ್ ನಿಂದ ತಲೆ ಹಾಗೂ ಕಾಲಿಗೆ ಬಲವಾಗಿ ಹೊಡೆದು ಗಾಯಗೊಳಿಸಿ, ವೀರಭದ್ರಪ್ಪ ಅವರ ಜೇಬಿನಲ್ಲಿದ್ದ 20 ಸಾವಿರ ರೂ. ನಗದು ಹಾಗೂ ರೇಷನ್ ಕಾರ್ಡ್ ಕಿತ್ತು ಕೊಂಡು ಅವರನ್ನು ಅಲ್ಲಿಯೇ ಬಿಟ್ಟು ಪರಾರಿ ಯಾಗಿದ್ದರು. ವೀರಭದ್ರಪ್ಪ ಅವರಿಗೆ ಗಂಭೀರ ಗಾಯಗಳಾಗಿದ್ದು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಮತ್ತೊಂದು ಪ್ರಕರಣ ದಲ್ಲಿ ನಗರದ ಸಂತೆಪೇಟೆಯಲ್ಲಿ ರಾಮಕೃಷ್ಣ ಎಂಬುವರನ್ನು ಅಡ್ಡಗಟ್ಟಿದ್ದ ಆರೋಪಿ ಗಳು, ಕೊಲೆ ಬೆದರಿಕೆ ಹಾಕಿದ್ದರು ಎಂದು ಪಿಎಸ್‍ಐ ಸುರೇಶ್ ಮಾಹಿತಿ ನೀಡಿದರು.

ರೈಲ್ವೆ ನಿಲ್ದಾಣದಲ್ಲಿ ಸಿಕ್ಕಿಬಿದ್ದರು. ಗ್ರಾಮಾಂ ತರ ಹಾಗೂ ಬಡಾವಣೆ ಠಾಣೆಯಲ್ಲಿ ದಾಖ ಲಾದ ಇದೇ ರೀತಿಯ ಪ್ರಕರಣಗಳನ್ನು ಪರಿಶೀಲಿಸಿದ ಪೆÇಲೀಸರು ಆರೋಪಿ ಗಳನ್ನು ಸೆರೆ ಹಿಡಿಯಲು ತನಿಖಾ ತಂಡ ರಚಿಸಿದರು. ನಗರದ ರೈಲ್ವೆ ನಿಲ್ದಾಣದಲ್ಲಿ ಅಪರಿಚಿತರನ್ನು ತೀರಾ ಪರಿಚಯದವರಂತೆ ಮಾತನಾಡಿಸುತ್ತಿದ್ದ ಅನುಮಾನದ ಮೇಲೆ ಇಬ್ಬರೂ ಆರೋಪಿಗಳನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ಬೆಳಕಿಗೆ ಬಂದಿದೆ.

ಇನಾಯತ್ ವಿರುದ್ಧ ಈ ಮೊದಲು ಗೊರೂರು ಠಾಣೆಯಲ್ಲಿ ಕಳ್ಳತನ ಪ್ರಕರಣ ದಾಖಲಾಗಿದೆ. ಕೃತ್ಯಕ್ಕೆ ಬಳಸಿಕೊಂಡಿರುವ ಓಮ್ನಿ ಕಾರನ್ನು ಮೂರು ತಿಂಗಳ ಹಿಂದೆ ಕಳವು ಮಾಡಲಾಗಿದೆ. ಮಂಡ್ಯ ಮೂಲದ ಶ್ರೀನಿವಾಸ್, ನಗರದ ಬಟ್ಟೆ ಫ್ಯಾಕ್ಟರಿಯೊಂದ ರಲ್ಲಿ ಕೆಲಸ ಮಾಡಿಕೊಂಡಿದ್ದ. ಕಳೆದ ಆರು ತಿಂಗಳಿಂದ ಆ ಕೆಲಸವನ್ನೂ ಬಿಟ್ಟು ಇದೇ ವೃತ್ತಿಯಲ್ಲಿ ಸಂಪೂರ್ಣವಾಗಿ ತೊಡಗಿಸಿ ಕೊಂಡಿದ್ದ. ಬಂಧಿತರಿಂದ 9 ಸಾವಿರ ರೂ. ನಗದು, 100 ಗ್ರಾಂ ಬೆಳ್ಳಿ, ಓಮ್ನಿ ಕಾರು ಹಾಗೂ ಕೃತ್ಯಕ್ಕೆ ಬಳಸುತ್ತಿದ್ದ ಕಬ್ಬಿಣದ ರಾಡ್ ವಶಪಡಿಸಿಕೊಳ್ಳಲಾಗಿದೆ ಎಂದರು.

ಸುದ್ದಿಗೋಷ್ಠಿಯಲ್ಲಿ ಡಿವೈಎಸ್‍ಪಿ ಪುಟ್ಟಸ್ವಾಮಿ ಗೌಡ, ಪೇದೆಗಳಾದ ಕೇಶವಪ್ರಸಾದ್, ರಘು, ಪ್ರದೀಪ್, ಲೋಹಿತ್, ಮಹೇಶ್ ಇದ್ದರು.

Translate »