ಇಂದು ಶಾರದಾ ಫೆಸ್ಟ್-2019
ಮೈಸೂರು

ಇಂದು ಶಾರದಾ ಫೆಸ್ಟ್-2019

February 25, 2019

ಮೈಸೂರು: ಮೈಸೂರಿನ ಶಾರದಾ ವಿಲಾಸ ಕಾಲೇಜಿನ ವಾಣಿಜ್ಯ ಶಾಸ್ತ್ರ ಮತ್ತು ವ್ಯವಹಾರ ಆಡಳಿತ ವಿಭಾಗ ಮತ್ತು ಸ್ನಾತಕೋತ್ತರ ಕೇಂದ್ರದ ಸಂಯುಕ್ತ ಆಶ್ರಯದಲ್ಲಿ ಫೆ.25ರಂದು ಕಾಲೇಜು ಆವರಣದಲ್ಲಿ ಶಾರದಾ ಫೆಸ್ಟ್-2019, ಅಂತರ ಕಾಲೇಜು ಕಾಮರ್ಸ್ ಮತ್ತು ಮ್ಯಾನೇಜ್‍ಮೆಂಟ್ ಫೆಸ್ಟ್ ಅನ್ನು ಆಯೋಜಿಸಲಾಗಿದೆ. ಅಂದು ಬೆಳಿಗ್ಗೆ 9.30 ಗಂಟೆಗೆ ಮೈಸೂರು ವಿವಿ ವಾಣಿಜ್ಯಶಾಸ್ತ್ರ ವಿಭಾಗದ ಮುಖ್ಯಸ್ಥ ಡಾ.ಎನ್.ನಾಗರಾಜ ಉದ್ಘಾಟಿಸುವರು. ವಾಣಿಜ್ಯ ಶಾಸ್ತ್ರ ಮತ್ತು ವ್ಯವಹಾರ ಆಡಳಿತ ವಿಭಾಗ ಡೀನ್ ಪ್ರೊ. ಸತ್ಯನಾರಾಯಣ ಅಧ್ಯಕ್ಷತೆ ವಹಿಸುವರು. ಗೌರವ ಅತಿಥಿಗಳಾಗಿ ಶಾರದಾ ವಿಲಾಸ ಶಿಕ್ಷಣ ಸಂಸ್ಥೆ ಅಧ್ಯಕ್ಷ ಬಿ.ಎಸ್. ಪಾರ್ಥಸಾರಥಿ, ಕಾರ್ಯದರ್ಶಿ ಹೆಚ್.ಕೆ.ಶ್ರೀನಾಥ್, ಶಾರದ ವಿಲಾಸ ಕಾಲೇಜು ಪ್ರಿನ್ಸಿಪಾಲ್ ಡಾ. ಎಂ. ಗೋವಿಂದ ರಾಜು, ಐಸಿಎಂಎ-ಮೈಸೂರು ಚಾಪ್ಟರ್ ಮಾಜಿ ಅಧ್ಯಕ್ಷ ಎಂ. ಅಶೋಕ್ ಕುಮಾರ್ ಭಾಗವಹಿಸುವರು. ಫೆಸ್ಟ್‍ನಲ್ಲಿ ಮ್ಯಾನೇಜ್‍ಮೆಂಟ್‍ನ ಪ್ರಮುಖ ಕ್ಷೇತ್ರಗಳಾದ ಫೈನಾನ್ಸ್, ಮಾರ್ಕೆಟಿಂಗ್, ಮಾನವ ಸಂಪನ್ಮೂಲ ನಿರ್ವಹಣೆ, ಸ್ಟಾಕ್ ಮಾರ್ಕೆಟ್ ಮತ್ತು ಅತ್ಯುತ್ತಮ ವಾಣಿಜ್ಯೋದ್ಯಮಿಯನ್ನು ಒಳಗೊಂಡಿರುತ್ತದೆ. ಅಲ್ಲದೆ, ಸಾಂಸ್ಕøತಿಕ ಕಾರ್ಯಕ್ರಮ, ಅಂತರ ಕಾಲೇಜು ಜಾನಪದ ನೃತ್ಯ ಸ್ಪರ್ಧೆ ಮತ್ತು ಗೀತ ಗಾಯನ ಸ್ಪರ್ಧೆಗಳು ಕಾಲೇ ಜಿನ ಶತಮಾನೋತ್ಸವದಲ್ಲಿ ನಡೆಯಲಿವೆ. ಮ್ಯಾನೇಜ್‍ಮೆಂಟ್ ಮತ್ತು ಸಾಂಸ್ಕøತಿಕ ಸ್ಪರ್ಧೆಗಳು ಪದವೀಧರ ಮತ್ತು ಸ್ನಾತಕೋತ್ತರ ವಿದ್ಯಾರ್ಥಿಗಳಿಗೆ ನಡೆಯಲಿದೆ.

Translate »