ಮೈಸೂರಲ್ಲಿ ರಾಜ್ಯಮಟ್ಟದ ಪ್ರತಿಭಾ ಕಾರಂಜಿ, ಕಲೋತ್ಸವಕ್ಕೆ ಚಾಲನೆ
ಮೈಸೂರು

ಮೈಸೂರಲ್ಲಿ ರಾಜ್ಯಮಟ್ಟದ ಪ್ರತಿಭಾ ಕಾರಂಜಿ, ಕಲೋತ್ಸವಕ್ಕೆ ಚಾಲನೆ

December 16, 2018

ಮೈಸೂರು: ಮೈಸೂರಿನಲ್ಲಿ 3 ದಿನಗಳ 17ನೇ ರಾಜ್ಯ ಮಟ್ಟದ ಪ್ರತಿಭಾ ಕಾರಂಜಿ ಮತ್ತು ಕಲೋತ್ಸವ 2018 ಇಂದು ಆರಂಭವಾಯಿತು.

ಸಾರ್ವಜನಿಕ ಶಿಕ್ಷಣ ಇಲಾಖೆ, ಮೈಸೂರು ಜಿಲ್ಲಾಡಳಿತ, ಜಿಲ್ಲಾ ಪಂಚಾ ಯತ್ ಹಾಗೂ ಮೈಸೂರು ಜಿಲ್ಲಾ ಸಾರ್ವಜನಿಕ ಶಿಕ್ಷಣ ಉಪ ನಿರ್ದೇಶಕರ ಕಚೇರಿ ಸಂಯುಕ್ತಾಶ್ರಯದಲ್ಲಿ ಶನಿವಾರ ಮಾನಸ ಗಂಗೋತ್ರಿಯ ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯದ ಆವರಣದಲ್ಲಿ ಆರಂಭವಾದ ರಾಜ್ಯಮಟ್ಟದ ಪ್ರತಿಭಾ ಕಾರಂಜಿ ಮತ್ತು ಕಲೋತ್ಸವ ಸ್ಪರ್ಧೆಗಳನ್ನು ಜಿಲ್ಲಾ ಪಂಚಾಯ್ತಿ ಅಧ್ಯಕ್ಷೆ ನಯೀಮಾ ಸುಲ್ತಾನ ನಜೀರ್ ಅಹಮದ್ ಉದ್ಘಾಟಿಸಿದರು.

ಶಾಸಕ ಎಲ್.ನಾಗೇಂದ್ರ ಅವರು ಅಧ್ಯಕ್ಷತೆ ವಹಿಸಿದ್ದ ಸಮಾರಂಭದಲ್ಲಿ ಮೈಸೂರು ಜಿಲ್ಲೆಯ ಸರ್ಕಾರಿ ಶಾಲೆಗಳು ಕಳೆದ ಮಾರ್ಚ್ ಮಾಹೆಯ ಎಸ್‍ಎಸ್‍ಎಲ್‍ಸಿ ಪರೀಕ್ಷೆಯಲ್ಲಿ ಅತೀ ಹೆಚ್ಚು ಅಂಕ ಪಡೆದ 11 ವಿದ್ಯಾರ್ಥಿ ಗಳಿಗೆ ಸರ್ಕಾರದಿಂದ ನೀಡಿರುವ ಲ್ಯಾಪ್ ಟಾಪ್‍ಗಳನ್ನು ವಿತರಿಸಲಾಯಿತು.

ಈ ಸಂದರ್ಭ ಮಾತನಾಡಿದ ನಾಗೇಂದ್ರ ಅವರು, ಮಕ್ಕಳಲ್ಲಿ ಹುದುಗಿರುವ ಸುಪ್ತ ಕಲಾ ಪ್ರತಿಭೆ ಪ್ರದರ್ಶಿಸಲು ಸರ್ಕಾರ ಅವಕಾಶ ಕಲ್ಪಿಸಿದೆ, ಸ್ಪರ್ಧೆಯಲ್ಲಿ ಪಾಲ್ಗೊಂಡು ತಮ್ಮ ಸಾಮಥ್ರ್ಯ ಸಾದರಪಡಿಸಬೇಕು ಎಂದರು.

ಚಾಮರಾಜನಗರ ಜಿಲ್ಲೆಯ ಸುಳ ವಾಡಿಯ ದೇವಸ್ಥಾನದ ಗೋಪುರ ಉದ್ಘಾ ಟನೆ ವೇಳೆ ಪ್ರಸಾದ ಸೇವಿಸಿ ಸಾವನ್ನಪ್ಪಿದ ಘಟನೆಗೆ ವಿಷಾದ ವ್ಯಕ್ತಪಡಿಸಿದ ನಾಗೇಂದ್ರ, ಇದರಿಂದಾಗಿ ಪ್ರತಿಭಾ ಕಾರಂಜಿ ಕಾರ್ಯ ಕ್ರಮ ಕಳೆಗುಂದಿತು ಎಂದರು.

ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತ ನಾಡಿದ ಜಿಲ್ಲಾಧಿಕಾರಿ ಅಭಿರಾಮ್ ಜಿ. ಶಂಕರ್ ಅವರು, ಸಾಂಸ್ಕೃತಿಕ ನಗರಿಯಲ್ಲಿ ನಡೆಯುತ್ತಿರುವ ಪ್ರತಿಭಾ ಕಾರಂಜಿಯಲ್ಲಿ ಭಾಗವಹಿಸಿರುವ ವಿದ್ಯಾರ್ಥಿಗಳು 3 ದಿನಗಳ ಸುಂದರ ನೆನಪಿನೊಂದಿಗೆ ಹಿಂದಿರುಗಿ, ಪ್ರತಿಭೆ ಹಾಗೆಯೇ ಮುಂದು ವರಿಯಲಿ ಎಂದು ನುಡಿದರು.

ಜಿಲ್ಲಾ ಪಂಚಾಯ್ತಿ ಉಪಾಧ್ಯಕ್ಷ ಜಿ.ನಟ ರಾಜ್, ಸದಸ್ಯರಾದ ಮಂಗಳಾ ಸೋಮ ಶೇಖರ್, ಎಸ್.ಮಾದೇಗೌಡ, ಚಂದ್ರಿಕಾ ಸುರೇಶ್, ಜಿಪಂ ಸಿಇಓ ಕೆ.ಜ್ಯೋತಿ, ಸಾರ್ವ ಜನಿಕ ಶಿಕ್ಷಣ ಇಲಾಖೆ ಉಪ ನಿರ್ದೇಶಕಿ ಮಮತ, ಶಿಕ್ಷಣ ಇಲಾಖೆಯ ಬಿ.ಎಸ್. ಪ್ರಭುಸ್ವಾಮಿ, ಮಹದೇವಪ್ಪ, ಆರ್‍ಬಿಐ ನೋಟು ಮುದ್ರಣಾಲಯದ ಪ್ರಧಾನ ವ್ಯವ ಸ್ಥಾಪಕ ನಾರಾಯಣರಾವ್, ಮುರಳಿ, ಪ್ರದೀಪ್‍ಕುಮಾರ್ ಸೇರಿದಂತೆ ಹಲವರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

ಇದೇ ಸಂದರ್ಭ ಚಾಮರಾಜನಗರ ಜಿಲ್ಲೆ, ಸುಳವಾಡಿ ಘಟನೆಯಲ್ಲಿ ಮೃತಪಟ್ಟ ವರಿಗೆ ಒಂದು ನಿಮಿಷ ಮೌನಾಚರಣೆ ಮಾಡಿ ಸಂತಾಪ ಸೂಚಿಸಲಾಯಿತು. ಮುಕ್ತ ಗಂಗೋತ್ರಿಯ ಕಾವೇರಿ, ತುಂಗಭದ್ರ, ವಿಜ್ಞಾನ ಭವನದಲ್ಲಿ ವಿವಿಧ ಕಲಾ ಸ್ಪರ್ಧೆಗಳು ನಡೆಯುತ್ತಿದ್ದರೆ, ಸರಸ್ವತಿಪುರಂನ ರೋಟರಿ ಪಶ್ಚಿಮ ಶಾಲೆಯಲ್ಲಿ ನಾಟಕ ಸ್ಪರ್ಧೆಗೆ ವ್ಯವಸ್ಥೆ ಮಾಡಲಾಗಿದೆ.

ಪ್ರತಿಭಾ ಕಾರಂಜಿ ವಿಜೇತರ ಆಯ್ಕೆಗೆ ಕೋಡಿಂಗ್ ಬಳಕೆ

ಮೈಸೂರು: ಮೈಸೂರಿನಲ್ಲಿ ನಡೆಯುತ್ತಿರುವ ರಾಜ್ಯ ಮಟ್ಟದ ಪ್ರತಿಭಾ ಕಾರಂಜಿ ಮತ್ತು ಕಲೋತ್ಸವ ಸ್ಪರ್ಧೆಗಳಲ್ಲಿ ವಿಜೇತರನ್ನು ಆಯ್ಕೆ ಮಾಡಲು ಈ ಬಾರಿ ಕೋಡ್-ಡಿಕೋಡಿಂಗ್ ಪದ್ಧತಿಯನ್ನು ಬಳಸಿಕೊಳ್ಳಲಾಗಿದೆ. ತೀರ್ಪು ಗಾರರು ಪ್ರದರ್ಶನವನ್ನು ವೀಕ್ಷಿಸಿ ಫಲಿತಾಂಶವನ್ನು ಕೋಡ್ ಮತ್ತು ಡಿ-ಕೋಡ್ ಬಳಸಿ ಟೋಕನ್ ನಂಬರ್‍ಗಳ ಮೂಲಕ ನೀಡುವರು. ಯಾವುದೇ ಶಾಲೆ ಅಥವಾ ಟ್ರೂಪ್‍ಗಳ ಹೆಸರುಗಳನ್ನು ನಮೂದಿಸದೇ ತೀರ್ಪು ನೀಡುವ ಸಿಸ್ಟಂ ಅನ್ನು ಬಳಸಲಾಗಿದೆ. 8ರಿಂದ 10ನೇ ತರಗತಿ ವಿದ್ಯಾರ್ಥಿಗಳಿಗೆ(ಪ್ರತಿಭಾ ಕಾರಂಜಿ) 10 ಸಾವಿರ ರೂ ಪ್ರಥಮ ಬಹುಮಾನ, 5 ಸಾವಿರ ರೂ. ದ್ವಿತೀಯ ಹಾಗೂ 3 ಸಾವಿರ ರೂ. ತೃತೀಯ ಬಹುಮಾನ ನಿಗದಿಪಡಿಸಲಾಗಿದೆ. 9ರಿಂದ 12ನೇ ತರಗತಿವರೆಗೆ (ಕಲೋತ್ಸವ) ಸಮೂಹಕ್ಕೆ 60 ಸಾವಿರ ರೂ(ಪ್ರಥಮ), 30 ಸಾವಿರ ರೂ(ದ್ವಿತೀಯ) ಹಾಗೂ 18 ಸಾವಿರ ರೂ (ತೃತೀಯ)ಗಳನ್ನು ನಿಗದಿಗೊಳಿಸಲಾಗಿದ್ದು, ಇದೇ ಪ್ರಥಮ ಬಾರಿ ಬಹುಮಾನದ ಹಣವನ್ನು ವಿಜೇತರ ಬ್ಯಾಂಕ್ ಖಾತೆಗೆ ನೇರವಾಗಿ ವರ್ಗಾವಣೆ ಮಾಡಲಾಗುತ್ತಿದೆ. ರಾಜ್ಯದಾದ್ಯಂತ 33 ಶೈಕ್ಷಣಿಕ ಜಿಲ್ಲೆಗಳಲ್ಲಿ ಪ್ರತೀ ಜಿಲ್ಲೆಗಳಿಂದ 55 ವಿದ್ಯಾರ್ಥಿಗಳು ಹಾಗೂ ನಾಲ್ವರು ಶಿಕ್ಷಕರು ಪ್ರತಿಭಾ ಕಾರಂಜಿ ಸ್ಪರ್ಧೆಗಳಿಗೆ ಆಗಮಿಸಿದ್ದು, ಇಲ್ಲಿ ವಿಜೇತರಾದವರು ರಾಷ್ಟ್ರಮಟ್ಟದ ಸ್ಪರ್ಧೆಗಳಲ್ಲಿ ಭಾಗವಹಿಸಲು ಆಯ್ಕೆಯಾಗುವರು.

ಕಾರ್ಯಕ್ರಮಕ್ಕೆ ಸರ್ಕಾರ 65 ಲಕ್ಷ ರೂ ಅನುದಾನ ನೀಡಿದ್ದು, ಮೈಸೂರಿನ ಆರ್‍ಬಿಐ ನೋಟು ಮುದ್ರಣಾಲಯವು ಸುಮಾರು 3.25 ಲಕ್ಷ ರೂ.ಗಳ ಪ್ರಾಯೋಜನೆ ನೀಡಿದೆ. ಬಿಇಡಿ ಕಾಲೇಜಿನ 100 ಮಂದಿ ಸ್ವಯಂ ಸೇವಕರಾಗಿ ಕಾರ್ಯನಿರ್ವಹಿಸುತ್ತಿದ್ದು, ವಿದ್ಯಾರ್ಥಿ ಗಳಿಗೆ ಊಟ-ತಿಂಡಿ-ವಸತಿ ವ್ಯವಸ್ಥೆ ಮಾಡಲಾಗಿದೆ. ಬಸ್ ನಿಲ್ದಾಣ, ರೈಲ್ವೆ ಸ್ಟೇಷನ್‍ನಿಂದ ವಿದ್ಯಾರ್ಥಿಗಳನ್ನು ಕರೆತರಲು ವಾಹನ ವ್ಯವಸ್ಥೆ, ಟೂತ್‍ಪೇಸ್ಟ್, ಸೋಪು, ನ್ಯಾಪ್‍ಕಿನ್ಸ್ ಹೊಂದಿದ ಕಿಟ್ ಅನ್ನು ಸ್ಪರ್ಧಿಗಳಿಗೆ ವಿತರಿಸಲಾಗಿದ್ದು, ಮೂರು ದಿನಗಳ ಕಾಲ ವಾಸ್ತವ್ಯ ಹೂಡಲು ವಿವಿಧ ಶಾಲಾ-ಕಾಲೇಜುಗಳಲ್ಲಿ ವ್ಯವಸ್ಥೆ ಕಲ್ಪಿಸಲಾಗಿದೆ.

Translate »