ಹುಟ್ಟುಹಬ್ಬದ ದಿನದಂದೇ  ಸಾವನ್ನಪ್ಪಿದ ಬಾಲಕ ಪ್ರೀತಂ
ಮೈಸೂರು

ಹುಟ್ಟುಹಬ್ಬದ ದಿನದಂದೇ ಸಾವನ್ನಪ್ಪಿದ ಬಾಲಕ ಪ್ರೀತಂ

December 16, 2018

ಮೈಸೂರು: ತನ್ನ ಆರನೇ ವರ್ಷದ ಹುಟ್ಟುಹಬ್ಬ ಆಚರಿಸಿಕೊಳ್ಳಬೇಕಿದ್ದ ಬಾಲಕ ಹುಟ್ಟಿದ ಶುಕ್ರ ವಾರದಂದೇ ಸಾವನ್ನಪ್ಪಿದ ಮನಕಲುಕುವ ಘಟನೆ ನಿನ್ನೆ (ಡಿ.14) ನಡೆದಿದೆ. ಹನೂರು ತಾಲೂಕಿನ ಸುಳವಾಡಿ ಗ್ರಾಮದಲ್ಲಿ ಶುಕ್ರವಾರ ಸಂಭವಿಸಿದೆ.

ದೇವಸ್ಥಾನ ಗೋಪುರ ಉದ್ಘಾಟನೆ ವೇಳೆ ವಿತರಿಸಿದ ಪ್ರಸಾದ(ಅನ್ನಸಂತರ್ಪಣೆ) ತಿಂದು ಸಾವನ್ನಪ್ಪಿದ 11 ಮಂದಿ ಪೈಕಿ ಕೊಳ್ಳೇಗಾಲ ತಾಲೂಕಿನ ಬಿದರಳ್ಳಿ ಗ್ರಾಮದ ಷಣ್ಮುಗ ಅವರ ಮಗ ಪ್ರೀತಂ(6) ಸಹ ಒಬ್ಬ. ಘಟನೆ ಯಲ್ಲಿ ತೀವ್ರವಾಗಿ ಅಸ್ವಸ್ಥನಾಗಿ ಮೈಸೂರಿನ ಅಪೋಲೋ ಬಿಜಿಎಸ್ ಆಸ್ಪತ್ರೆಗೆ ದಾಖಲಾಗಿದ್ದ 6 ವರ್ಷದ ಬಾಲಕ ಶುಕ್ರವಾರ ರಾತ್ರಿಯೇ ಚಿಕಿತ್ಸೆ ಫಲಕಾರಿಯಾಗದೇ ಕೊನೆಯುಸಿರೆಳೆದ. ಕೂಲಿ ಮಾಡಿ ಜೀವನ ಸಾಗಿಸು ತ್ತಿರುವ ಷಣ್ಮುಗ ಅವರಿಗೆ ಇಬ್ಬರು ಗಂಡು ಮಕ್ಕಳು ಹಾಗೂ ಓರ್ವ ಪುತ್ರಿ ಇದ್ದು, 6 ವರ್ಷದ ಪ್ರೀತಂ ಹಿರಿಯ ಪುತ್ರನಾಗಿದ್ದ. ನಿನ್ನೆ(ಶುಕ್ರವಾರ)ಗೆ ಪ್ರೀತಂ ಜನಿಸಿ 6 ವರ್ಷ. ಅಂದು ಸಂಜೆ ಪುತ್ರನ ಜನ್ಮದಿನವನ್ನು ಕೇಕ್ ಕತ್ತರಿಸಿ ಸರಳವಾಗಿ ಆಚರಿಸಬೇಕೆಂದುಕೊಂಡು ಅವನಿಗೆ ಹೊಸ ಬಟ್ಟೆಯನ್ನೂ ತಂದಿದ್ದೆ.

ದೇವಸ್ಥಾನದಲ್ಲಿ ಪೂಜೆ ಇದ್ದ ಕಾರಣ ಜನ್ಮದಿನವೂ ಆಗಿದ್ದರಿಂದ ಪ್ರೀತಂನನ್ನು ಕಳುಹಿಸಿದ್ದೆವು. ರಾತ್ರಿ ವೇಳೆಗೆ ಆತ ಸಾವನ್ನಪ್ಪಿದ. ಇನ್ಯಾರಿಗೆ ಬರ್ತ್‍ಡೇ ಮಾಡಲಿ ಎಂದು ತಂದೆ ಷಣ್ಮುಗ ಅವರು ಬಿಕ್ಕಿಬಿಕ್ಕಿ ಅಳುತ್ತಿದ್ದ ದೃಶ್ಯ ಕರುಳು ಹಿಂಡು ವಂತಿತ್ತು. ಮೈಸೂರು ಮೆಡಿಕಲ್ ಕಾಲೇಜು ಮತ್ತು ಸಂಶೋಧನಾ ಸಂಸ್ಥೆ ಶವಾಗಾರದಲ್ಲಿ ಪ್ರೀತಂ ಮೃತ ದೇಹದ ಮರಣೋತ್ತರ ಪರೀಕ್ಷೆ ನಡೆಸುತ್ತಿದ್ದ ವೇಳೆ ಷಣ್ಮುಗ ತನ್ನ ಮಗನ ಸಾವಿನಿಂದ ತಮಗಾಗಿರುವ ಆಘಾತವನ್ನು ತೋಡಿಕೊಂಡು ರೋಧಿಸುತ್ತಿದ್ದರು. 6 ವರ್ಷದ ಹಿಂದೆ ಪ್ರೀತಂ ಹುಟ್ಟಿದ್ದು ಡಿ.14 ಶುಕ್ರವಾರ. ಈಗ ಸತ್ತಿದ್ದೂ ಡಿ.14 ಶುಕ್ರವಾರವೇ. ಜನ್ಮದಿನ ಆಚರಿಸಿಕೊಳ್ಳಬೇ ಕೆಂದಿದ್ದ ಸಮಯದಲ್ಲೇ ಆತನ ಮೃತದೇಹ ನೋಡುವಂತಾ ಯಿತಲ್ಲಾ, ಇನ್ನೆಲ್ಲಿ ನನ್ನ ಮಗ, ಇನ್ನೆಲ್ಲಿ ಅವನ ಹುಟ್ಟುಹಬ್ಬ ಎಂದು ಗೋಳಾಡುತ್ತಿದ್ದ ದೃಶ್ಯ ಮನಕಲುಕುವಂತಿತ್ತು.

Translate »