ಶ್ರೀ ಪುಷ್ಪದಂತ ಸಾಗರ ಮಹಾರಾಜರ ಜಯಂತಿ
ಹಾಸನ

ಶ್ರೀ ಪುಷ್ಪದಂತ ಸಾಗರ ಮಹಾರಾಜರ ಜಯಂತಿ

December 31, 2018

ಶ್ರವಣಬೆಳಗೊಳ, ಡಿ.30- 21ನೇ ಶತ ಮಾನದಲ್ಲಿಯೂ ಮುನಿಗಳಿಂದ ಪ್ರಾಚೀನ ಪರಂಪರೆಯಿಂದ ಧರ್ಮ ಪ್ರಭಾವನೆ ಮಾಡಲು ಸಾಧ್ಯವಿದೆ ಎಂದು ತೋರಿಸಿಕೊಟ್ಟ ವರು ಆಚಾರ್ಯ ಶ್ರೀ ಪುಷ್ಪದಂತ ಸಾಗರ ಮಹಾರಾಜರು ಎಂದು ಸ್ವಸ್ತಿಶ್ರೀ ಚಾರುಕೀರ್ತಿ ಭಟ್ಟಾರಕ ಸ್ವಾಮೀಜಿ ಹೇಳಿದರು.

ಜೈನಕಾಶಿ ಶ್ರವಣಬೆಳಗೊಳದ ಚಾವುಂಡ ರಾಯ ಸಭಾಮಂಟಪದಲ್ಲಿ ನಡೆದ ಆಚಾರ್ಯ ಶ್ರೀ ಪುಷ್ಪದಂತ ಸಾಗರ ಮಹಾರಾಜರ 65ನೇ ಜನ್ಮಜಯಂತಿ ಮಹೋತ್ಸವದಲ್ಲಿ ಮಾತನಾಡಿ, ಕ್ರಾಂತಿಕಾರಿ ಸಂತ ಮುನಿಶ್ರೀ ತರುಣ ಸಾಗರ ಮಹಾರಾಜರಂತಹ ಅನೇಕ ಮುನಿಗಳಿಗೆ ದೀಕ್ಷೆ ನೀಡಿ ಉತ್ತಮ ವಿದ್ಯಾ ಭ್ಯಾಸ, ಚಾರಿತ್ರ್ಯವನ್ನು ತುಂಬಿ ಸಮಾಜಕ್ಕೆ ನೀಡಿರುವ ಕೀರ್ತಿ ಇವರಿಗೆ ಸಲ್ಲುತ್ತದೆ.

ಆಚಾರ್ಯ ಶ್ರೀ ಪುಷ್ಪದಂತ ಸಾಗರ ಮಹಾರಾಜರ ಹೆಸರಿನಲ್ಲಿ ಮಧ್ಯಪ್ರದೇಶದ ಸೋನಕಚ್ಚದ ಪುಷ್ಪಗಿರಿ ಶ್ರೀ ಕ್ಷೇತ್ರದಲ್ಲಿ ಬಡವರಿಗಾಗಿ ಶಿಕ್ಷಣ ಸಂಸ್ಥೆ ಹಾಗೂ ಆರೋಗ್ಯ ಕೇಂದ್ರಗಳು ಕಾರ್ಯನಿರ್ವ ಹಿಸುತ್ತಿದ್ದು, ಇನ್ನೂ ಮುಂದೆಯೂ ಮುನಿಶ್ರೀ ತರುಣ ಸಾಗರ ಮಹಾರಾಜರು ಮತ್ತು ಮುನಿಶ್ರೀ ಪ್ರಜ್ಞಾಸಾಗರ ಮಹರಾಜ ರಂತಹ ಮುನಿ ಪರಂಪರೆಯನ್ನು ತಯಾರು ಮಾಡಿ ಸಮಾಜಕ್ಕೆ ನೀಡಿ ಸಮಾಜದಲ್ಲಿ ಧರ್ಮ ಪ್ರಭಾವನೆ ನಡೆಸುವಂತೆ ಕೋರಿದರು.

ಸದ್ಗುಣವಂತರು, ಧಾರ್ಮಿಕ ಚಿಂತಕರು, ಉತ್ತಮ ಪ್ರವಚನಕಾರರು ಹಾಗೂ ಮಹಾನ್ ವಾಗ್ಮಿಗಳಾದ ಇವರು ಆಧ್ಯಾತ್ಮಕತೆಯಲ್ಲಿ ಲೋಕಕಲ್ಯಾಣ ಮಾಡಬೇಕು ಎಂದು ಭಾರತದಾದ್ಯಂತ ಸಂಚರಿಸಿ ತಮ್ಮ ಪ್ರವಚನಗಳ ಮೂಲಕ ಪ್ರಭಾವ ಬೀರಿದ್ದಾರೆ. ಇವರ ತಪೋ ಬಲದಿಂದ ಜನ ಜಾಗೃತಿ, ಧರ್ಮ ಜಾಗೃತಿ ಮೂಡಿಸುತ್ತಿದ್ದಾರೆ. ತಮ್ಮ ಶಿಷ್ಯರ ಮೂಲಕ ಸಮಾಜದಲ್ಲಿ ಆಧುನಿಕತೆ ಯನ್ನು ಹೊಂದಿಸಿಕೊಂಡು ಆಧ್ಯಾತ್ಮಿಕ ಕ್ಷೇತ್ರದಲ್ಲಿ ಹೊಸ ಪರಿವರ್ತನೆ ಮಾಡಿದ ಕೀರ್ತಿ ಆಚಾರ್ಯ ಶ್ರೀ ಪುಷ್ಪದಂತ ಸಾಗರ ಮಹಾರಾಜರಿಗೆ ಸಲ್ಲುತ್ತದೆ ಎಂದು ಅವರು ತಿಳಿಸಿದರು.

ಆಚಾರ್ಯ ಶ್ರೀ ಪುಷ್ಪದಂತ ಸಾಗರ ಮಹಾರಾಜರು ಮಾತನಾಡಿ, ಸಮಾಜ ದಲ್ಲಿ ಶಾಂತಿ ನೆಲೆಸಿ ಅಭಿವೃದ್ಧಿಯಾಗಲು ಮೊದಲು ನಮ್ಮಲ್ಲಿರುವ ಸ್ವಾರ್ಥವನ್ನು ಹೋಗಲಾಡಿಸಿ ಪರಸ್ಪರ ಸಹಬಾಳ್ವೆ ಯಿಂದ ಬದುಕಿದಲ್ಲಿ ಮಾತ್ರ ಶಾಂತಿಯ ಜೀವನ ನಡೆಸಲು ಸಾಧ್ಯ, ಮನುಷ್ಯ ಎಲ್ಲವನ್ನೂ ದುಡ್ಡಿನಿಂದ ಪಡೆಯಲು ಸಾಧ್ಯ ವಿಲ್ಲ. ಹಣ, ಪದವಿ ಮತ್ತು ಪ್ರತಿಷ್ಠೆ ಗಳಿಂದಲೂ ಮಾನವನಿಗೆ ಕೆಡುಕುಗಳು ಆಗುತ್ತದೆ. ಆದ್ದರಿಂದ ನಾವುಗಳು ಪರೋ ಪಕಾರ, ನಿಸ್ವಾರ್ಥದಿಂದ ಜೀವನ ನಡೆಸ ಬೇಕು ಎಂದರು.

ಇಂದು ಕುಟುಂಬದಲ್ಲಿ ಅಶಾಂತಿ ನೆಲೆ ಸಿದ್ದು, ಇದಕ್ಕೆ ನಮ್ಮಲ್ಲಿರುವ ಅಹಂಕಾರ, ನಾನು ಎಂಬ ಮನೋಭಾವ, ಕಠೋರ ಮನಸ್ಸುಗಳೇ ಮುಖ್ಯ ಕಾರಣ. ಮೃದು ಮಾತುಗಳಿಂದ ಎಲ್ಲರ ಜೊತೆ ಉತ್ತಮ ಸಂಬಂಧವನ್ನು ಹೊಂದಿರಬೇಕು. ಉತ್ತಮ ಮಾತುಗಳಿಂದ ಎಲ್ಲರಿಗೂ ಚೈತನ್ಯವನ್ನು ನೀಡುವ ಶಕ್ತಿಯಿದೆ ಎಂದು ತಿಳಿಸಿದರು.

ನಂತರ ಹಾಸನ ದಿಗಂಬರ ಜೈನ ಸಮಾ ಜದ ಅಧ್ಯಕ್ಷ ಅಜಿತ್‍ಕುಮಾರ್ ಜೈನ್ ಸ್ವಾಗತಿಸಿದರು. ಪ್ರಮೋದ್ ಜೈನ್ ಪ್ರಾಸ್ತಾ ವಿಕ ನುಡಿಗಳನ್ನಾಡಿದರು, ಶೃತಿ ಧನುಷ್ ಜೈನ್ ಕಾರ್ಯಕ್ರಮವನ್ನು ನಿರೂಪಿಸಿದರು.

ನಂತರ ಹಾಸನ ದಿಗಂಬರ ಜೈನ ಸಮಾಜದ ವತಿಯಿಂದ ಶ್ರೀ ಭಗವಾನ್ ಬಾಹುಬಲಿ ಸ್ವಾಮಿಯ ಮೂರ್ತಿಯನ್ನು ನೆನಪಿನ ಕಾಣಿಕೆಯಾಗಿ ನೀಡಿ ಸುಮಾರು 65 ಬಗೆಯ ಪೂಜಾ ಸಾಮಗ್ರಿಗಳನ್ನು ಮಹಾರಾಜರಿಗೆ ಅರ್ಪಿಸಿ ಪಾದಪೂಜೆ ನೆರವೇರಿಸಿದರು.
ಈ ಸಂದರ್ಭದಲ್ಲಿ ಮುನಿಶ್ರೀ ಪ್ರಜ್ಞಾ ಸಾಗರ ಮಹಾರಾಜರು, ಮುನಿಶ್ರೀ ಅಮರ ಕೀರ್ತಿ ಸಾಗರ ಮಹಾರಾಜರು, ಮುನಿಶ್ರೀ ಅಮೋಘಕೀರ್ತಿ ಸಾಗರ ಮಹಾರಾ ಜರು, ಮಾತಾಜಿಯರು ಹಾಗೂ ಶ್ರಾವಕ ಶ್ರಾವಕಿಯರು ಭಾಗವಹಿಸಿದ್ದರು.

Translate »