ಸಮಾಜದ ಕೊಳೆ ಕಿತ್ತೊಗೆಯಲು ಶ್ರಮಿಸಿದ ಅಂಬೇಡ್ಕರ್
ಹಾಸನ

ಸಮಾಜದ ಕೊಳೆ ಕಿತ್ತೊಗೆಯಲು ಶ್ರಮಿಸಿದ ಅಂಬೇಡ್ಕರ್

December 31, 2018

`ಭೀಮಕಾವ್ಯ ನಮನ’ ಕಾರ್ಯಕ್ರಮದಲ್ಲಿ ಲೇಖಕಿ ಧಾರವಾಡದ ಡಾ.ವಿನಯ ಒಕ್ಕುಂದ ಅಭಿಮತ
ಹಾಸನ: ಡಾ.ಬಿ.ಆರ್.ಅಂಬೇಡ್ಕರ್ ರವರು ದಲಿತರ ನಾಯಕರಲ್ಲ. ಪ್ರಾಚೀನ ಭಾರತದ ಸಮಾಜದ ಪಾಪದ ಕೊಳೆ ಯನ್ನು ಕಿತ್ತೊಗೆಯಲು ಶ್ರಮಿಸಿದ ನಾಯಕ ಎಂದು ಲೇಖಕಿ, ಕವಯತ್ರಿ ಧಾರವಾಡದ ಡಾ.ವಿನಯ ಒಕ್ಕುಂದ ಹೇಳಿದರು.

ನಗರದ ಅರಳೀಕಟ್ಟೆ ವೃತ್ತದ ಬಳಿ ಇರುವ ಸಂಸ್ಕøತ ಭವನದಲ್ಲಿ ಸಾವಿತ್ರಿ ಬಾಯಿ ಫುಲೆ ಸಾಂಸ್ಕತಿಕ ಮಹಿಳಾ ಸಂಘ, ಮಾಣಿಕ ಪ್ರಕಾಶನ, ನಾಗಭೂಮಿ ವಿವಿಧೋದ್ದೇಶ ಅಭಿವೃದ್ಧಿ ಸಂಸ್ಥೆ ಹಾಗೂ ಬಾಂಧವ್ಯ ಲೋಕ ಸಂಘಟನೆಗಳ ಸಂಯುಕ್ತಾಶ್ರಯದಲ್ಲಿ ಡಾ.ಬಿ.ಆರ್.ಅಂಬೇಡ್ಕರ್ ಪರಿನಿಬ್ಬಾಣ ನಿಮಿತ್ತ ಭಾನುವಾರ ನಡೆದ `ಭೀಮಕಾವ್ಯ ನಮನ’ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಅಂಬೇಡ್ಕರ್ ಅವರು ಕೇವಲ ದಲಿತ ನಾಯಕರು ಆಗಿರಲಿಲ್ಲ. ಪ್ರಾಚೀನ ಭಾರತದ ಸಮಾಜದ ಪಾಪದ ಕೊಳೆಯನ್ನು ತೊಲಗಿಸಲು ಶ್ರಮಿಸಿದಂತಹ ಅಪರೂಪದ ನಾಯಕ. ‘ನಾನು ಕುರುಡು ಜನತೆಯ ಕೋಲು’ ಎಂದು ಅಂಬೇಡ್ಕರ್ ಅವರೇ ಹೇಳಿ ಕೊಂಡಿದ್ದರು. ಅಂಬೇಡ್ಕರಲ್ಲಿ ಇದ್ದಂತಹ ಸತತ ಅಧ್ಯಯನವು ಸಂವಿಧಾನ ರಚನೆ ಮಾಡಲು ಸಾಧ್ಯವಾಯಿತು. ಇದನ್ನು ಅರ್ಥ ಮಾಡಿಕೊಳ್ಳಬೇಕಾಗಿದೆ. ಅನ್ಯಾಯಕ್ಕೆ ರಾಜೀ ಮಾಡಿಕೊಳ್ಳದೇ ನಿಷ್ಟುರತೆಯಿಂದ ಕಾಳಜಿ ಬೆಳೆದಿತ್ತು ಎಂದರು.

ಸಮಾಜದಲ್ಲಿ ಕೀಳು ಜಾತಿ ಪದ್ಧತಿ, ದಲಿತರು, ಬಡವರ ಮೇಲೆ ದೌರ್ಜನ್ಯ ಮತ್ತು ಮಹಿಳೆಯರ ಮಕ್ಕಳ ಮೇಲೆ ಅತ್ಯಾ ಚಾರಗಳು ಉಲ್ಫಣಗೊಂಡಿರುವಂತಹ ಕಾಲಘಟ್ಟದಲ್ಲಿ ಹಕ್ಕಿಗಾಗಿ ಹೋರಾಟ ಮಾಡಿ ದರು. ಸಮಾಜದಲ್ಲಿ ಹಿಂಸೆ ತಾಂಡವವಾಡು ತ್ತಿದ್ದು, ಅನುಮಾನದಿಂದ ವ್ಯಕ್ತಿಯನ್ನು ಸಾಯಿಸುವಂತಹ ಕಾಲಘಟ್ಟದಲ್ಲಿ ನಾವು ಕಾವ್ಯ, ಕವಿಗೋಷ್ಠಿ, ಸಾಹಿತ್ಯಗಳು ಏತ ಕ್ಕಾಗಿ ಬೇಕು ಎಂಬುದನ್ನು ಪ್ರತಿ ಯೊಬ್ಬರೂ ಆತ್ಮಾವಲೋಕನ ಮಾಡಿ ಕೊಳ್ಳಬೇಕಾದ ಅನಿವಾರ್ಯತೆ ಇದೆ ಎಂದು ಕಿವಿಮಾತು ಹೇಳಿದರು.

ಬಂಡವಾಳಶಾಹಿಗಳು, ರಾಜಕಾರಣಿ ಗಳು ಹಾಗೂ ಕೋಮುವಾದಿಗಳು ತಮ್ಮ ಪ್ರಭಾವದಿಂದ ಮಾಧ್ಯಮಗಳ ಮೂಲಕ ಯುವ ಮನಸ್ಸುಗಳನ್ನು ಒಡೆಯುವಂತಹ ಕೆಲಸಗಳು ನಡೆಯುತ್ತಿದೆ. ಯುದ್ಧವೇ ಘೋಷಣೆಯಾಗೋದಿಲ್ಲ. ಆದರೆ, ಒಳ ಗೊಳಗೆ ಅವಕಾಶವಾದಿಗಳು ಯುದ್ಧ ನಡೆಸುತ್ತಿದ್ದರೆ. ಇದರಿಂದ ಯುವ ಜನಾಂ ಗವು ಆದರ್ಶಗಳನ್ನು ಪ್ರೀತಿಸುವಂತಹ ಮನಸ್ಥಿತಿಯಲ್ಲಿ ಇಲ್ಲ. ಇಂತಹ ಕೋಮು ವಾದಿ ರಾಜಕಾರಣವನ್ನು ಎದುರಿಸು ವಂತಹ ಬಿಕ್ಕಟ್ಟಿನ ಸಂಗತಿ ಬಂದಿದೆ ಎಂದು ಆತಂಕ ವ್ಯಕ್ತಪಡಿಸಿದರು.

ಕಾರ್ಯಕ್ರಮದಲ್ಲಿ ಪ್ರೊ.ಕೆ.ಸುಮಿತ್ರಾ ಬಾಯಿ ಅವರ ‘ಸೊಲಾಡಿ ಬಂದೋ ತಿರುತಿರುಗೀ ಬಾಳ ಕಥನ’ ಕೃತಿ ಬಿಡುಗಡೆ ಯನ್ನು ಮಾಡಲಾಯಿತು. ನಂತರದಲ್ಲಿ ಹೆಸರಾಂತ ಕವಿಗಳಿಂದ ಕವನ ಓದ ಲಾಯಿತು. ಗ್ಯಾರಂಟಿ ರಾಮಣ್ಣ, ಕುಮಾರ್ ತಂಡದಿಂದ ಅಂಬೇಡ್ಕರ್ ಗೀತೆ ಪ್ರಸ್ತುತ ಪಡಿಸಲಾಯಿತು.

ಹಿರಿಯ ಕವಿ ಸುಬ್ಬು ಹೊಲೆಯಾರ್, ಚಿಂತಕ ಯಡೇಹಳ್ಳಿ ಮಂಜುನಾಥ್, ಕವಿ ಗಳಾದ ಚ.ಹ.ರಘುನಾಥ್, ಸಾವಿತ್ರಿ ಬಾಯಿ ಫುಲೆ ಸಾಂಸ್ಕತಿಕ ಮಹಿಳಾ ಸಂಘದ ಅಧಕ್ಷೆ ಭವ್ಯ ನಾಗರಾಜ್, ಸಾಹಿತಿ ಕೊಟ್ರೇಶ್ ಎಸ್.ಉಪ್ಪಾರ್, ಕಸಾಪ ತಾಲೂಕು ನಿಕಟ ಪೂರ್ಣ ಅಧ್ಯಕ್ಷ ಗಂಜಲಗೂಡು ಗೋಪಾಲೇ ಗೌಡ, ನಾಗಭೂಮಿ ವಿವಿದ್ಧೋದೇಶ ಅಭಿವೃದ್ಧಿ ಸಂಸ್ಥೆಯ ನಾಗರಾಜ್ ಹೆತ್ತೂರು, ಜಾವಗಲ್ ಪ್ರಸನ್ನ, ಪತಂಜಲಿ ಸಮಿತಿಯ ಹರಿಹರ ಪುರ ಶ್ರೀಧರ್ ಇತರರು ಉಪಸ್ಥಿತರಿದ್ದರು.

ಮೊದಲು ನಮ್ಮ ಮನಸ್ಸನ್ನು ಭ್ರಷ್ಟವಾಗದಂತೆ ನೋಡಿಕೊಂಡರೇ ಮಾತ್ರ ಸಮಾಜದಲ್ಲಿ ಉತ್ತಮ ವಾತಾವರಣ ಸೃಷ್ಟಿಸಲು ಸಾಧ್ಯ
-ಡಾ.ವಿನಯ ಒಕ್ಕುಂದ, ಲೇಖಕಿ

Translate »