ಭಾರತೀಯ ಸಂಸ್ಕೃತಿಗೆ ವೀರಶೈವ ಧರ್ಮದ ಕೊಡುಗೆ ಅನನ್ಯ
ಮೈಸೂರು

ಭಾರತೀಯ ಸಂಸ್ಕೃತಿಗೆ ವೀರಶೈವ ಧರ್ಮದ ಕೊಡುಗೆ ಅನನ್ಯ

December 31, 2018

ತಿ.ನರಸೀಪುರ. ಡಿ.30 (ಎಸ್‍ಕೆ)-ಭಾರತೀಯ ಸಂಸ್ಕೃತಿಗೆ ವೀರಶೈವ ಧರ್ಮ ಕೊಟ್ಟ ಧಾರ್ಮಿಕ ಸಂಪತ್ತು ಅನಘ್ರ್ಯ ಹಾಗೂ ಅನನ್ಯವಾಗಿದ್ದು, ಆದರ್ಶ ಮೌಲ್ಯ ಪ್ರತಿಪಾದನೆ ಮಾಡಿದ ಧರ್ಮ ಇಂದು ರಾಜಕೀಯ ಲಾಭಕ್ಕಾಗಿ ಬಳಕೆಯಾಗುತ್ತಿ ರುವುದು ವಿಷಾದನೀಯ ಎಂದು ಬಾಳೆ ಹೊನ್ನೂರು ರಂಭಾಪುರಿ ಪೀಠದ ಜಗದ್ಗುರು ಡಾ.ವೀರಸೋಮೇಶ್ವರ ರಾಜದೇಶೀ ಕೇಂದ್ರ ಶಿವಾಚಾರ್ಯ ಸ್ವಾಮೀಜಿ ಬೇಸರ ವ್ಯಕ್ತಪಡಿಸಿದರು.

ಮುಡುಕುತೊರೆಯ ತೋಪಿನಮಠ ದಲ್ಲಿ ಹಮ್ಮಿಕೊಳ್ಳಲಾಗಿದ್ದ ಶ್ರೀಮದ್ ರಂಭಾಪುರಿ ಜಗದ್ಗುರುಗಳ ಇಷ್ಟಲಿಂಗ ಪೂಜೆ ಮಹಾಲಿಂಗ ಶಿವಾಚಾರ್ಯ ಸ್ವಾಮಿ ಗಳ ಗುರುವಂದನಾ ಮಹೋತ್ಸವ ಮತ್ತು ಶ್ರೀ ಮಲ್ಲಿಕಾರ್ಜುನ ಶಿವಾಚಾರ್ಯ ಸ್ವಾಮಿಗಳ ರಜತಮಹೋತ್ಸವ ಹಾಗೂ ಜನಜಾಗೃತಿ -ಭಾವೈಕ್ಯ ಧರ್ಮ ಸಮಾರಂಭದ ಸಾನಿಧ್ಯ ವಹಿಸಿ ಅವರು ಮಾತನಾಡಿದರು.
ವೀರಶೈವ ಮತ್ತು ಲಿಂಗಾಯತ ಎರಡೂ ಒಂದೇ ಧರ್ಮದ ಪರ್ಯಾಯ ಪದಗಳಾ ಗಿದ್ದು, ಇತ್ತೀಚಿನ ದಿನಗಳಲ್ಲಿ ಕೆಲವರು ಸಮುದಾಯ ಧರ್ಮ ಒಡೆಯುವ ಕೆಲಸಕ್ಕೆ ಮುಂದಾಗಿದ್ದು, ರಾಜಕೀಯ ಲಾಭಕ್ಕಾಗಿ ಧರ್ಮ ಬಳಕೆಯಾಗುತ್ತಿರು ವುದು ವಿಷಾದದ ಸಂಗತಿ ಎಂದರು.

ಲಿಂಗಾಯತರೆಂದು ತಮ್ಮನ್ನು ತಾವು ಕರೆದುಕೊಂಡರೆ ಸಾಲದು. ಬಸವಣ್ಣರವರ ಆದರ್ಶ ತತ್ವಪಾಲನೆ, ಇಷ್ಟಲಿಂಗ ಪೂಜೆ ಮಾಡುವ ಜೊತೆಗೆ ವಿಭೂತಿ ಧರಿಸು ವಂತಾಗಬೇಕೆಂದರು. ಪ್ರಸಕ್ತ ಸನ್ನಿವೇಶ ದಲ್ಲಿ ಜಾತಿ ಹೆಸರಿನಲ್ಲಿ ಸಂಘರ್ಷ ನಡೆ ಯುತ್ತಿದ್ದು ಬಸವಣ್ಣನವರ ಸಪ್ತಸೂತ್ರಗಳ ಆಚರಣೆ ಅನುಕರಣೆ ಆದಲ್ಲಿ ಯಾವುದೇ ರೀತಿಯ ಸಂಘರ್ಷಕ್ಕೆ ದಾರಿಯಾಗದು ಎಂದು ಸಲಹೆ ನೀಡಿದರು.

ಶಾಸಕ ಅಶ್ವಿನ್ ಕುಮಾರ್ ಮಾತನಾಡಿ, ರಂಭಾಪುರಿ ಸ್ವಾಮಿಗಳು ನಮ್ಮ ಕ್ಷೇತ್ರಕ್ಕೆ ಭೇಟಿ ನೀಡಿ, ಜನತೆಗೆ ಆಶೀರ್ವಚನ ನೀಡುತ್ತಿ ರುವುದು ಹೆಮ್ಮೆ ವಿಷಯ. ಮಾನವ ಧರ್ಮಕ್ಕೆ ಜಯವಾಗಲಿ ಎಂಬ ಸ್ವಾಮಿಗಳ ಆಶಯ ಸಾಕಾರಗೊಳ್ಳಲಿ ಎಂದರು.
ಇದೇ ಸಂದರ್ಭದಲ್ಲಿ ರಂಭಾಪುರಿ ಸ್ವಾಮಿಗಳಿಂದ ಮಲ್ಲಿಕಾರ್ಜುನಸ್ವಾಮಿ ಗಳಿಗೆ ಧಾರ್ಮಿಕ ಸಂಪೆÇ್ರೀಕ್ಷಣ ಕಾರ್ಯ ಕ್ರಮದ ಜೊತೆಗೆ ಪಟ್ಟಾಧಿಕಾರ ರಜತ ಮಹೋತ್ಸವ ಹಾಗೂ ಜನಜಾಗೃತಿ-ಭಾವೈಕ್ಯ ಧರ್ಮ ಕಾರ್ಯಕ್ರಮ ನಡೆಯಿತು. ಮುಂಜಾನೆ ರಂಭಾಪುರಿ ಜಗದ್ಗುರು ಶ್ರೀಗಳೊಂದಿಗೆ ನೂರಾರು ಮಂದಿ ಭಕ್ತ ಸಮೂಹ ಇಷ್ಟಲಿಂಗ ಪೂಜೆ ನೆರವೇರಿಸಿದರು.

ಮರಳೇಗವಿಮಠದ ಮಮ್ಮುಡಿ ಶಿವರುದ್ರ ಸ್ವಾಮಿ, ತೋಪಿನಮಠದ ರೇಣುಕಾಚಾರ್ಯ ಸ್ವಾಮಿ, ವಾಟಾಳಿನ ಸಿದ್ಧಲಿಂಗ ಶಿವಾಚಾರ್ಯ ಸ್ವಾಮಿ, ಶಾಸಕ ನಿರಂಜನ್ ಕುಮಾರ್, ಮಾಜಿ ಶಾಸಕಿ ಪರಿಮಳಾ ನಾಗಪ್ಪ, ಪುರ ಸಭೆ ಸದಸ್ಯರಾದ ಎಸ್.ಕೆ.ಕಿರಣ್, ರೂಪ ಪರಮೇಶ್, ವೀರಶೈವ ಸಮಾಜ ಸೇವಾ ಸಮಿತಿ ಅಧ್ಯಕ್ಷ ಟಿ.ಎಸ್.ಶಾಂತರಾಜು, ಉಪಾಧ್ಯಕ್ಷ ಎನ್.ಶಿವಪ್ರಸಾದ್, ಕಾರ್ಯ ದರ್ಶಿ ತಾಯೂರು ವಿಠಲಮೂರ್ತಿ, ಪಪಂ ಮಾಜಿ ಅಧ್ಯಕ್ಷ ವೀರೇಶ್.ಎನ್. ಶೇಖರ್, ಕೆ.ಜೆ.ನಾಗೇಶ್, ಮೋಹನ್, ನೂತನ್, ನಂದೀಶ್ ಮತ್ತಿತರರಿದ್ದರು.

Translate »