ರಾಜೀನಾಮೆ ಮಾತಿಗೆ ಈಗಲೂ ಬದ್ಧ  4 ದಿನ ಕಾದು ನೋಡಿ: ರಮೇಶ್ ಜಾರಕಿಹೊಳಿ
ಮೈಸೂರು

ರಾಜೀನಾಮೆ ಮಾತಿಗೆ ಈಗಲೂ ಬದ್ಧ 4 ದಿನ ಕಾದು ನೋಡಿ: ರಮೇಶ್ ಜಾರಕಿಹೊಳಿ

December 25, 2018

ಬೆಂಗಳೂರು:  ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡುವ ಮಾತಿಗೆ ನಾನು ಈಗಲೂ ಬದ್ಧ. ಆದರೆ ನನಗೆ ನಾಲ್ಕು ದಿನ ಸಮಯ ಕೊಡಿ. ನಾಲ್ಕು ದಿನದಲ್ಲಿ ನನ್ನ ನಿರ್ಧಾರ ಪ್ರಕಟಿಸುತ್ತೇನೆ ಎಂದು ಸಚಿವ ಸ್ಥಾನ ಕಳೆದುಕೊಂಡ ಹಿರಿಯ ಕಾಂಗ್ರೆಸ್ ನಾಯಕ ರಮೇಶ್ ಜಾರಕಿಹೊಳಿ ಸೋಮವಾರ ಹೇಳಿದ್ದಾರೆ.

ಇಂದು ನಗರದಲ್ಲಿ ಸುದ್ದಿಗಾರ ರೊಂದಿಗೆ ಮಾತನಾಡಿದ ಮಾಜಿ ಸಚಿವ, ಕಳೆದ ಒಂದು ವಾರದಲ್ಲಿ ಮಾಧ್ಯಮಗಳು ಹೀರೋನ ವಿಲನ್ ಮಾಡಿವೆ. ವಿಲನ್‍ನ ಹೀರೋ ಮಾಡಿವೆ. ವಿಲನ್ ಯಾರು? ಹೀರೋ ಯಾರು? ಅನ್ನೋದನ್ನು ಮುಂದೆ ಹೇಳುತ್ತೇನೆ ಎಂದರು.

ರಾಜ್ಯ ಕಾಂಗ್ರೆಸ್ ಉಸ್ತುವಾರಿ ಕೆ.ಸಿ. ವೇಣುಗೋಪಾಲ್ ಸೇರಿದಂತೆ ಪಕ್ಷದ ಯಾವ ಮುಖಂಡರನ್ನೂ ನಾನು ಭೇಟಿ ಯಾಗಲ್ಲ ಎಂದು ರಮೇಶ್ ಜಾರಕಿ ಹೊಳಿ ಹೇಳಿದ್ದಾರೆ.ಇದೇ ವೇಳೆ ನೀವು ಬಿಜೆಪಿಗೆ ಹೋಗು ತ್ತೀರಾ? ನಿಮ್ಮ ಜತೆ ಎಷ್ಟು ಶಾಸಕರಿದ್ದಾರೆ ಎಂಬ ವರದಿಗಾರರ ಪ್ರಶ್ನೆಗೆ ಪ್ರತಿಕ್ರಿಯಿ ಸಿದ ಜಾರಕಿಹೊಳಿ, ನನ್ನ ಜೊತೆ ಎಷ್ಟು ಶಾಸಕರು ಇದ್ದಾರೆ ಅನ್ನೋದನ್ನು ನಿಮ ಗ್ಯಾಕೆ ಹೇಳ್ಬೇಕು. ಎಷ್ಟು ಜನ ಇದ್ದಾರೆ ಅನ್ನೋದನ್ನು ಮುಂದಿನ ದಿನದಲ್ಲಿ ಬಹಿರಂಗಪಡಿಸುತ್ತೇನೆ ಎಂದರು.

Translate »