ಮರಳು ಗಣಿಗಾರಿಕೆ ನಿಯಮ ಉಲ್ಲಂಘನೆ ವಿರುದ್ಧ ಕಠಿಣ ಕ್ರಮ
ಹಾಸನ

ಮರಳು ಗಣಿಗಾರಿಕೆ ನಿಯಮ ಉಲ್ಲಂಘನೆ ವಿರುದ್ಧ ಕಠಿಣ ಕ್ರಮ

July 5, 2019

9 ಗಣಿ ನಿಕ್ಷೇಪ ವಿರುದ್ಧ ಕ್ರಮ, 2 ಲಾರಿ ಪರವಾನಗಿ ರದ್ದು, ದಂಡ ವಸೂಲಿಗೆ ಡಿಸಿ ಸೂಚನೆ
ಹಾಸನ,ಜು.4- ಜಿಲ್ಲೆಯಲ್ಲಿ ನಿಯಮ ಉಲ್ಲಂಘಿಸಿರುವ ಮರಳು ಗಣಿ ಬ್ಲಾಕ್‍ಗಳ ಮಾಲೀಕರಿಗೆ ದಂಡ ವಿಧಿಸಿ, ಸಂಗ್ರಹಿಟ್ಟಿ ರುವ ಮರಳನ್ನು ವಿಲೇವಾರಿ ಮಾಡಿರಿ ಎಂದು ಜಿಲ್ಲಾಧಿಕಾರಿ ಅಕ್ರಂ ಪಾಷಾ ಕಟ್ಟುನಿಟ್ಟಿನ ಸೂಚನೆ ನೀಡಿದ್ದಾರೆ.

ಡಿಸಿ ಕಚೇರಿ ಸಭಾಂಗಣದಲ್ಲಿ ಗುರುವಾರ ಜಿಲ್ಲಾ ಟಾಸ್ಕ್‍ಫೋರ್ಸ್ ಸಮಿತಿ ಮತ್ತು ಕ್ರಷರ್ ಪರವಾನಗಿ ಮತ್ತು ನಿಯಂತ್ರಣಾ ಪ್ರಾಧಿಕಾರದ ಸಭೆಯಲ್ಲಿ ಜಿಲ್ಲೆಯಲ್ಲಿನ ಮರಳು ನಿಕ್ಷೇಪ ಹಾಗೂ ಮರಳು ವಿಲೇವಾರಿ ಕುರಿತ ಮಾಹಿತಿ ಪಡೆದುಕೊಂಡ ಅವರು, 9 ಗಣಿ ನಿಕ್ಷೇಪಗಳ ವಿರುದ್ಧ ಕ್ರಮ ಕೈಗೊಳ್ಳಿ. ಅಲ್ಲಿ ಸಂಗ್ರಹವಾಗಿ ರುವ ಮರಳನ್ನು ಸರ್ಕಾರ ಕಾಮಗಾರಿ ಹಾಗೂ ಸಾರ್ವಜನಿಕ ಕೆಲಸಗಳಿಗೆ ಹಂಚಿಕೆ ಮಾಡಿ ಎಂದು ಸೂಚನೆ ನೀಡಿದರು.

ಜಿಪಿಎಸ್ ಅಳವಡಿಸದೇ ನಿಯಮ ಉಲ್ಲಂ ಘಿಸಿರುವ ಪ್ರಕರಣಗಳಲ್ಲಿಯೂ ದಂಡ ವಸೂಲಿ ಮಾಡಿರಿ. ಅತಿ ಹೆಚ್ಚು ಬಾರಿ ತಪ್ಪೆಸ ಗಿರುವ 2 ಲಾರಿಗಳ ಪರವಾನಗಿಯನÀ್ನು ರದ್ದು ಪಡಿಸಿ ಎಂದೂ ನಿರ್ದೇಶನ ನೀಡಿದರು.

ಒಟ್ಟಾರೆ 56 ವಾಹನಗಳು ಜಿ.ಪಿ.ಎಸ್ ಟ್ಯಾಂಪರಿಂಗ್ ಪ್ರಕರಣಗಳನ್ನು ಗುರುತಿಸ ಲಾಗಿದ್ದು ಅದರ ಅದರಲ್ಲಿ 2 ವಾಹನಗಳು 3 ತಿಂಗಳಲ್ಲಿ 13 ಬಾರಿ ಇಂತಹ ತಪ್ಪು ಎಸ ಗಿವೆ ಉಳಿದ ಒಂದೆರಡು ಬಾರಿ ತಪ್ಪೆಸಗಿರು ವವರಿಗೆ ದಂಡ ವಿಧಿಸಿ ಎಚ್ಚರಿಕೆ ನೀಡು ವಂತೆ ಅಕ್ರಂ ಪಾಷ ಸೂಚನೆ ನೀಡಿದರು.

ಅಧಿಕಾರಿಗಳು ಕಾನೂನಿನ ಚೌಕಟ್ಟಿ ನೊಳಗೆ ಕಾರ್ಯ ನಿರ್ವಹಿಸುವಂತೆ ತಿಳಿಸಿದ ಅವರು ಯಾವುದೇ ಸರ್ಕಾರಿ ಯೋಜನೆ ಯಡಿ ಮರಳು ಹಾಗೂ ಕಲ್ಲು, ಜಲ್ಲಿ ಲಭ್ಯತೆ ಕೊರತೆಯಾಗದಂತೆ ಎಚ್ಚರ ವಹಿಸು ವಂತೆಯೂ ಅವರು ಹೇಳಿದರು.

ಎಡಿಸಿ ಎಂ.ಎಲ್.ವೈಶಾಲಿ, ಅರಣ್ಯ ಅಧಿ ಕಾರಿ ಶಿವರಾಂ ಬಾಬು, ಪಿಡಬ್ಲ್ಯುಡಿ ಇಇ ಮಂಜು, ಹಿರಿಯ ಭೂವಿಜ್ಞಾನಿ ಶ್ರೀನಿವಾಸ್, ಭೂ ವಿಜ್ಞಾನಿ ನಾಗರಾಜ್, ಡಿವೈಎಸ್‍ಪಿ ಕೃಷ್ಣೇಗೌಡ ಮತ್ತಿತರರಿದ್ದರು.

ಕರ್ತವ್ಯದಲ್ಲಿ ನಿರ್ಲಕ್ಷ್ಯ-ಕಠಿಣ ಕ್ರಮದ ಎಚ್ಚರಿಕೆ: ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಯೋಜನೆಯಲ್ಲಿ ಬಾಕಿಯಾಗಿರುವ ಅರ್ಜಿಗಳನ್ನು ಗಣಕೀಕೃತಗೊಳಿಸುವಲ್ಲಿ ವಿಳಂಬ ಸಲ್ಲ. ನಿರ್ಲಕ್ಷ್ಯ ತೋರುವ ಅಧಿಕಾರಿ, ಸಿಬ್ಬಂದಿ ವಿರುದ್ಧ ಕಠಿಣ ಕ್ರಮ ಖಂಡಿತ ಎಂದು ಡಿಸಿ ಎಚ್ಚರಿಕೆ ನೀಡಿದ್ದಾರೆ.

ಪಿಎಂಕೆಎಸ್‍ಎನ್ ಯೋಜನೆ ಸಂಬಂಧ ತಾಲೂಕು ಅಧಿಕಾರಿಗಳ ಜತೆ ವೀಡಿಯೊ ಸಂವಾದ ನಡೆಸಿದ ಅವರು, ಬಾಕಿ ಇರುವ ಅರ್ಜಿಗಳನ್ನು ತಕ್ಷಣ ಪೂರ್ಣಗೊಳಿಸಬೇಕು. ತಹಸೀಲ್ದಾರ್ ಕಚೇರಿ ನಿಯಂತ್ರಣಾ ಕೊಠಡಿ ಯಂತೆ ಕಾರ್ಯನಿರ್ವಹಿಸ ಬೇಕು. ಕೃಷಿ, ತೋಟಗಾರಿಕೆ, ನಗರಸಭೆ, ಪುರಸಭೆ, ಶಿಕ್ಷಣ ಮತ್ತಿತರ ಇಲಾಖೆಗಳು ಸಹಕರಿಸಬೇಕು. ಗ್ರಾಪಂಗಳಲ್ಲ್ಲಿ ಪಿಡಿಓಗಳು ಹೆಚ್ಚಿನ ಜವಾ ಬ್ದಾರಿ ತೆಗೆದುಕೊಳ್ಳಬೇಕು. ವಿಳಂಬವಾ ದರೆ ಇಓಗಳೇ ನೇರ ಹೊಣೆಯಾಗುತ್ತಾರೆ ಎಂದು ಖಡಕ್ ಸೂಚನೆ ನೀಡಿದರು.

Translate »