ಯುವಪೀಳಿಗೆಗೆ ಗಾಂಧಿ ವಿಚಾರಧಾರೆ ಅರ್ಥೈಸಿ
ಹಾಸನ

ಯುವಪೀಳಿಗೆಗೆ ಗಾಂಧಿ ವಿಚಾರಧಾರೆ ಅರ್ಥೈಸಿ

July 5, 2019

ಮೈಸೂರು ವಿವಿ ಕುಲಪತಿ ಪ್ರೊ.ಜಿ.ಹೇಮಂತ್ ಕುಮಾರ್ ಸಲಹೆ
ಹಾಸನ,ಜು.4- ಯುವ ಪೀಳಿಗೆಗೆ ಮಹಾತ್ಮ ಗಾಂಧಿ ಅವರ ತತ್ವ, ಸಿದ್ಧಾಂತ ಹಾಗೂ ವಿಚಾರಧಾರೆಯು ಸಂಸ್ಕಾರದ ರೀತಿಯಲ್ಲಿ ದೊರಕಿದರೆ ಯಶಸ್ಸು ಹೊಂದಲು ಸಾಧ್ಯ ಎಂದು ಮೈಸೂರು ವಿಶ್ವವಿದ್ಯಾನಿಲಯದ ಕುಲಪತಿ ಪೆÇ್ರ.ಜಿ.ಹೇಮಂತ್ ಕುಮಾರ್ ಹೇಳಿದರು.

ನಗರದ ಸರ್ಕಾರಿ ಗೃಹ ವಿe್ಞÁನ ಕಾಲೇಜಿನಲ್ಲಿ ಗುರುವಾರ ನಡೆದ ಗಾಂಧಿ ಅಧ್ಯಯನದ ಮೈಸೂರು ವಿಭಾಗದ 3ನೇ ಘಟಿಕೋತ್ಸವ ಉದ್ಘಾಟಿಸಿದ ಅವರು, ಗಾಂಧಿ ಅನ್ನೋ ಹೆಸರಿ ನಲ್ಲಿಯೇ ಶಕ್ತಿ ಇದೆ. ಅಂತಹ ಶಕ್ತಿ ನಮ್ಮ ದೇಶದಲ್ಲಿ ಜನ್ಮತಾಳಿದ್ದು ನಿಜವಾಗಿಯೂ ನಮ್ಮ ಆದೃಷ್ಟವೇ ಸರಿ. ಬ್ರಿಟಿಷರ ದಾಸ್ಯ ಪದ್ಧತಿ ವಿರೋಧಿಸಿಯೂ, ಅಹಿಂಸಾತ್ಮಕ ಮಾರ್ಗ ಅನುಸರಿಸಿ ದೇಶಕ್ಕೆ ಸ್ವಾತಂತ್ರ್ಯ ತಂದುಕೊಟ್ಟರು. ಅವರು ಅದ್ವೈತವಾದ ಶಕ್ತಿ ಹೊಂದಿದ್ದರು. ಬೇರೆಯವರಿಗೆ ಯಾರು ಹಿಂಸೆ ನೀಡುತ್ತಾರೋ ಅವರು ತಮ್ಮನ್ನು ತಾನು ಹಿಂಸಿಸಿಕೊಂಡಂ ತಾಗುತ್ತದೆ ಎಂದು ಗಾಂಧಿ ಹೇಳಿದ್ದರು. ಹೀಗಾಗಿ ಯುವಕರು ಅಹಿಂಸಾ ತತ್ವ ಅನುಸರಿಸಬೇಕು ಎಂದರು.

ಮೈಸೂರು ವಿವಿಯ ಹಳೆಯ ವಿದ್ಯಾರ್ಥಿಗಳ ಸಂಘದ ಅಧ್ಯಕ್ಷ ವಸಂತ್ ತಿಮ್ಕಾಪುರ್ ಮಾತನಾಡಿ, ಪ್ರಸ್ತುತ ಪ್ರೀತಿ, ಸಹನೆ ದೂರ ಮಾಡಿ ದ್ವೇಷ ಅಸೂಯೆ ಹುಟ್ಟು ಹಾಕುತ್ತಿರುವ ಸಂದರ್ಭದಲ್ಲಿ ಮುಂದಿನ ಪೀಳಿಗೆಗೆ ಗಾಂಧಿ ತತ್ವಗಳನ್ನು ಪ್ರವಹಿಸಬೇಕು. ಗಾಂಧಿ ವಿಶ್ವಕ್ಕೆ ಏನು ಅಂತ ಗೊತ್ತಿದೆ, ಆದರೆ ಅದನ್ನು ನಾವು ಅಳವಡಿಸಿಕೊಳ್ಳಬೇಕು ಎಂದರು.

ಗಾಂಧಿ ಸದಾ ಗ್ರಾಮಗಳ ಅಭಿವೃದ್ಧಿ, ರೈತರ ಹಿತಕ್ಕೆ ಆದ್ಯತೆ ನೀಡಿದ್ದರು. ರೈತರು ಇದ್ದರಷ್ಟೇ ನಾವು ಬದುಕಲು ಸಾಧ್ಯ, ಇತ್ತೀಚೆಗೆ ಗ್ರಾಮೀಣ ಯುವಕರು ಹಳ್ಳಿ ತೊರೆದು ನಗರ ಸೇರುತ್ತಿದ್ದಾರೆ. ಗಾಂಧಿ ಅವರ ಕನಸಿನಂತೆ ಯುವಕರು ಗ್ರಾಮೀಣಾಭಿವೃದ್ಧಿಗೆ ಆದ್ಯತೆ ನೀಡಬೇಕು. ಆಗ ಗಾಂಧಿ ಜಯಂತಿಗೆ ಹೆಚ್ಚು ಅರ್ಥ ಬರುತ್ತದೆ ಎಂದು ಹೇಳಿದರು.

ಮಂಡ್ಯ ಜಿಲ್ಲೆಯಲ್ಲಿನ 20 ಹಳ್ಳಿಗಳಲ್ಲಿ ಪುಷ್ಪ ಕ್ರಾಂತಿಯನ್ನು ಮಾಡಿz್ದÉೀವೆ. ಹಳ್ಳಿ ತೊರೆದಿದ್ದಂತಹ ಯುವಕರು ವಾಪಸ್ ಹಳ್ಳಿಗೆ ಬಂದು ಕೃಷಿಯಲ್ಲಿ ತೊಡಗಿ ಉತ್ತಮವಾದ ಬದುಕನ್ನು ಕಟ್ಟಿಕೊಂಡಿದ್ದಾರೆ ಎಂದು ಗಮನ ಸೆಳೆದರು.

ಎನ್‍ಎಸ್‍ಎಸ್ ಸಂಯೋಜಕ ಬಿ.ಚಂದ್ರಶೇಖರ್ ಮಾತನಾಡಿ, ಗಾಂಧಿ ಒಂದು ಪ್ರೇರಕ ಶಕ್ತಿ. ಈ ಬಗ್ಗೆ ಕೆಲವರು ತಪ್ಪು ತಿಳಿವ ಳಿಕೆ ಹೊಂದಿದ್ದಾರೆ. ಅದನ್ನು ಹೋಗಲಾಡಿಸಬೇಕು ಎಂದರು.ಸರ್ಕಾರಿ ಗೃಹ ವಿe್ಞÁನ ಕಾಲೇಜು ಪ್ರಾಂಶುಪಾಲ ಕೆ.ಟಿ.ಕೃಷ್ಣೇಗೌಡ ಅಧ್ಯಕ್ಷತೆ ವಹಿಸಿದ್ದರು.

ಪದಕ ವಿತರಣೆ: ಗಾಂಧಿ ವಿಚಾರ ಸಂಸ್ಕಾರ ಪರೀಕ್ಷೆಯಲ್ಲಿ ಚಿನ್ನದ ಪದಕ ಪಡೆದ ಮೈಸೂರು, ಹಾಸನ, ಮಂಡ್ಯ, ದಕ್ಷಿಣ ಕನ್ನಡ, ಕೊಡಗು ಜಿಲ್ಲೆಗಳ ಶಾಲಾ-ಕಾಲೇಜು ವಿದ್ಯಾರ್ಥಿಗಳಿಗೆ ತಿಮ್ಕಾಪುರ್ ಪದಕ ವಿತರಿಸಿದರು.

ಮಹಾರಾಷ್ಟ್ರದ ಗಾಂಧಿ ಸಂಶೋಧನಾ ಸಂಸ್ಥೆಯ ಕಾರ್ಯ ನಿರ್ವಹಣಾಧಿಕಾರಿ ಬಿ.ಆರ್.ಬೊಬಡೆ, ಸರ್ಕಾರಿ ವಿe್ಞÁನ ಕಾಲೇಜಿನ ಪ್ರಾಂಶುಪಾಲ ಎಸ್.ಹೆಚ್.ಗಂಗೇಗೌಡ, ಅರಸೀಕೆರೆಯ ಕಸ್ತೂರಿಬಾ ಗಾಂಧಿ ಮೆಮೋರಿಯಲ್ ಟ್ರಸ್ಟ್‍ನ ಟ್ರಸ್ಟಿ ಪೆÇ್ರ.ಜಿ.ಬಿ. ಶಿವರಾಜು, ಜಿವಿಎಸ್‍ಪಿ ರಾಜ್ಯ ಸಂಚಾಲಕಿ ಅಬಿದಾ ಬೇಗಂ, ಜಿಲ್ಲಾ ಸಂಚಾಲಕ ಪೆÇ್ರ.ಸಿ.ಎಸ್.ಮೋಹನ್ ಮತ್ತು ಎನ್.ಸಿ.ರವಿ, ಅಧ್ಯಾಪಕಿ ವಿಜಯ ಪಾಟೀಲ್ ಕಾರ್ಯಕ್ರಮದಲ್ಲಿದ್ದರು.

Translate »